ದಾವಣಗೆರೆಯಲ್ಲಿ ರೇಷ್ಮೆ ಸೀರೆಗಾಗಿ ಗೌರಿಯರ ಗುದ್ದಾಟ


ದಾವಣಗೆರೆ, ಸೆಪ್ಟೆಂಬರ್ 12: ದಾವಣಗೆರೆಯಲ್ಲಿ ಗೌರಿ-ಗಣೇಶ ಹಬ್ಬದ ಅಂಗವಾಗಿ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆಯನ್ನು ನೀಡುತ್ತೇವೆ ಎಂದು ಮೋಸ ಮಾಡಿದ ಕೆಎಸ್ ಐಸಿ ಮಳಿಗೆಯ ವಿರುದ್ಧ ಮಹಿಳೆಯರು ಗಲಾಟೆ ಆರಂಭಿಸಿದ್ದಾರೆ.

ಗೌರಿ-ಗಣೇಶ ಹಬ್ಬದ ಅಂಗವಾಗಿ ರೇಷ್ಮೆ 500 ರೇಷ್ಮೆ ಸೀರೆಗಳ ಮೇಲೆ ಬಂಪರ್ ಆಫರ್ ಗಳನ್ನು ನೀಡಿತ್ತು ಆದರೆ, ಆಫರ್ ನೀಡದೆ ಮೋಸ ಮಾಡಿರುವ ಕೆಎಸ್ ಐಸಿ ಮಳಿಗೆಯ ವಿರುದ್ಧ ಮಹಿಳೆಯರು ಆಕ್ರೋಶಗೊಂಡಿದ್ದು, ಬೇಕೇ ಬೇಕು ರೇಷ್ಮೆ ಸೀರೆ ಬೇಕು ಎಂದು ಪ್ರತಿಭಟನೆ ಆರಂಭಿಸಿದ್ದಾರೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ತಪ್ಪಿದ ರೇಷ್ಮೆ ಸೀರೆ, ಗೌರಿ ಗಣೇಶ ಹಬ್ಬಕ್ಕೆ!

ಮಳಿಗೆಯಲ್ಲಿ ಭಾರಿ ಗೋಲ್ ಮಾಲ್ ನಡೆದಿದ್ದು 500 ಸೇರಿಗಳಿಗೆ ಆಫರ್ ಘೋಷಿಸಲಾಗಿತ್ತಾದರೂ ಕೇವಲ 127 ಸೀರೆಗಳನ್ನು ಮಾತ್ರ ನೀಡಲಾಗಿದೆ. ಇನ್ನು ಮೈಸೂರಿನಲ್ಲೂ ಕೂಡ ರಿಯಾಯಿತಿ ದರದ ಸೀರೆ ಪಡೆಯಲು ಮಹಿಳೆಯರು ನಾಮುಂದು ತಾಮುಂದು ಎಂದು ಸರತಿಯಲ್ಲಿ ನಿಂತಿದ್ದರು, ಕೊನೆಗೆ ಸೀರೆಗಳನ್ನು ಲಾಟರಿ ಮೂಲಕ ನೀಡುತ್ತೇವೆ ಎಂದು ಹೇಳಿದಾಗ ಕೋಪಗೊಂಡ ಮಹಿಳೆಯರು ಜಗಳವನ್ನೇ ಆರಂಭಿಸಿದ್ದರು.

ವರಮಹಾಲಕ್ಮಿ ಹಬ್ಬಕ್ಕೂ ರೇಷ್ಮೆ ಸೀರೆ ಡಿಸ್ಕೌಂಟ್ ಆಫರ್ ಇಲ್ಲ

ಮೈಸೂರಿನಲ್ಲಿ ರಿಯಾಯಿತಿ ದರದ ಸೀರೆ ಪಡೆಯಬೇಕಿದ್ದರೆ ಆಧಾರ್ ಸಂಖ್ಯೆಯನ್ನು ಕೊಟ್ಟು ನೋಂದಣಿ ಮಾಡಿಸಬೇಕು, ಗಣೇಶ ಚತುರ್ಥಿ ದಿನ ಮಧ್ಯಾಹ್ನ ನಡೆಯುವ ಕಾರ್ಯಕ್ರಮದಲ್ಲಿ ಲಾಟರಿ ಮೂಲಕ ಹೆಸರನ್ನು ಪಡೆದು ಅವರಿಗೆ ಮಾತ್ರ ಸೀರೆಯನ್ನು ನೀಡಲಾಗುತ್ತಿದೆ.

Have a great day!
Read more...

English Summary

Hundreds of women agitated against Karnataka Silk Industry Corporation in Davanagere alleging officials have made misappropriation in distribution of silk sarees as only distributed instead of 500 silk sarees as the state government was announced earlier.