ಈ ಮುದ್ದು ಮಗುವಿನ ಸ್ಥಿತಿ ನೋಡಿದರೆ ಹೃದಯವೇ ಕಿತ್ತುಬರುತ್ತದೆ


ರೆಸ್ಟೋರೆಂಟ್ ಒಂದರಲ್ಲಿ ಮಾಣಿಯಾಗಿ ದುಡಿಯುತ್ತಿರುವ ವ್ಯಕ್ತಿಯ ಒಂದು ತಿಂಗಳ ಮಗುವಿಗೆ ಹೃದಯನಾಳ ಕಟ್ಟಿಕೊಂಡಿದ್ದರಿಂದ ತೀವ್ರವಾಗಿ ಬಳಲುತ್ತಿದ್ದು ಬದುಕಲು ಈ ಮಗುವಿಗೆ ತ್ವರಿತವಾಗಿ ಆಪರೇಷನ್‌ನ ಅಗತ್ಯವಿದೆ. ನಾಮಕರಣದ ಮುನ್ನವೇ ಈ ಮಗು ಹೃದಯ ಕಾಯಿಲೆಯಿಂದ ಬಳಲುತ್ತಿದ್ದು ತುರ್ತಾಗಿ ಆಪರೇಷನ್ ಮಾಡಿ ಮಗುವನ್ನು ಬದುಕಿಸಿಕೊಳ್ಳಬೇಕಾಗಿದೆ.

ಗಾಳಿಯಲ್ಲಿ ಆಡುತ್ತಾ ತನ್ನ ಕೈ ಕಾಲುಗಳನ್ನು ಆಡಿಸುತ್ತಿರುವ ತನ್ನ ಮಗುವಿನ ಮುದ್ದು ಮುಖ ನೋಡಿದರೆ ಹೃದಯವೇ ಕಿತ್ತುಬಂದಂತಾಗುತ್ತದೆ ಎಂದು ಆ ಮಗುವಿನ ತಾಯಿ ಶಾಲಿನಿ ಪ್ರಲಾಪಿಸುತ್ತಾರೆ.

ಶಾಲಿನಿ ಮತ್ತು ಆಕೆಯ ಪತಿ ತಮ್ಮ ಕಂದಮ್ಮನನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದರು. ಮಗುವಿನ ಆಟಪಾಟ, ಭವಿಷ್ಯ ಕುರಿತು ಹಲವಾರು ಕನಸುಗಳನ್ನು ಹೊತ್ತಿದ್ದರು. ಮಗುವಿಗೆ ಬಟ್ಟೆ ಮತ್ತು ಆಟಿಕೆಗಳನ್ನು ಖರೀದಿಸಿ ತಮ್ಮ ಮನೆಯ ಇತರ ಸದಸ್ಯರಿಗೆ ಮಗುವನ್ನು ತೋರಿಸುವ ಖುಷಿಯಲ್ಲಿ ಅಪ್ಪಅಮ್ಮಂದಿರಿಬ್ಬರು ಆಕಾಶದಲ್ಲಿ ತೇಲಾಡುತ್ತಿದ್ದರು.

ಕೇಕೆ ಹಾಕಿ ನಗುವಾಗ ಆನಂದದಿಂದ ನನ್ನ ಮನ ಖುಷಿಯಿಂದ ತೇಲುತ್ತಿತ್ತು. ಕೊನೆಗೂ ನಾವು ಮಗುವನ್ನು ಮನೆಗೆ ಕರೆತಂದೆವು. ಅವನು ಪ್ರತಿಬಾರಿ ನಗುವಾಗ ಮನೆಯಲ್ಲಿ ಆನಂದದ ಕಡಲು ಉಕ್ಕಿದಂತಾಗುತ್ತಿತ್ತು. ಅವನು ನಿದ್ರಿಸುವಾಗ ನಾವೆಲ್ಲರೂ ಅವರ ಮುಖಾರವಿಂದವನ್ನು ನೋಡುವುದೇ ಕೆಲಸವಾಗಿತ್ತು. ಎದ್ದ ಕೂಡಲೇ ಮಗುವಿನೊಂದಿಗೆ ಆಡುವುದರೊಂದಿಗೆ ನಮ್ಮ ಕಾಲ ಕಳೆಯುತ್ತಿತ್ತು. ಅವನ ಮುಗ್ಧ ನಗು ನಮಗೆ ಹಬ್ಬವಾಗಿತ್ತು ಎಂದು ತಾಯಿ ಹಳೆಯದನ್ನು ನೆನಪಿಸಿಕೊಳ್ಳುತ್ತಾರೆ.

ಆದರೆ, ಮಗು ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿತು, ಉಸಿರಾಡಿಸಲು ಕಷ್ಟಪಡುತ್ತಿತ್ತು. ಇತರ ಕಂದಮ್ಮನಿಗೆ ಮಾಡುವ ಚಿಕಿತ್ಸೆಗಳನ್ನು ತಮ್ಮ ಮಗುವಿಗೂ ಮಾಡಿಸಿದೆವು. ಅದರಿಂದ ಏನೂ ಪ್ರಯೋಜನವಾಗಲಿಲ್ಲ, ಮಗುವಿನ ನೋವು, ಅಳು ನಿಲ್ಲಲಿಲ್ಲ. ನಮ್ಮ ಊರಾದ ಪೆರಂಬಲೂರ್‌ನಿಂದ ಚೆನ್ನೈಗೆ ತೆರಳುವಂತೆ ಪೋಷಕರಿಗೆ ವೈದ್ಯರು ಸೂಚಿಸಿದರು. ಮಗುವನ್ನು ತೋರಿಸಲು ಅವರು 7 ಗಂಟೆಗಳ ಕಾಲ ಪ್ರಯಾಣ ಮಾಡಿ ಚೆನ್ನೈ ತಲುಪಿದರು. ತಮ್ಮ ಮಗುವಿನ ಆರೋಗ್ಯದ ಸಲುವಾಗಿ ಅವರು ಚೆನ್ನೈಯನ್ನು ತಲುಪಿದರು.

ಮಗುವನ್ನು ವೈದ್ಯರಿಗೆ ತೋರಿಸಿದ ಸಂದರ್ಭದಲ್ಲಿ ಮಗುವಿಗೆ ಏನೋ ತೊಂದರೆ ಇರುವುದು ವೈದ್ಯರ ಗಮನಕ್ಕೆ ಬಂದಿದೆ. ಬೇರೆ ಬೇರೆ ಪರೀಕ್ಷೆಗಳನ್ನು ಮಗುವಿನ ಮೇಲೆ ವೈದ್ಯರು ನಡೆಸಿದರು. ಬೇಗ ಬೇಗ ಮಗುವಿಗೆ ಚಿಕಿತ್ಸೆ ಮಾಡಿಸಿ ಮಗುವನ್ನು ಮನೆಗೆ ಕರೆದೊಯ್ಯುವ ಆತುರ ತಾಯಿ ಶಾಲಿನಿಯದಾಗಿತ್ತು. ಅದಾಗ್ಯೂ ಮಗುವಿಗೆ ಪುರ್ಣ ಚಿಕಿತ್ಸೆಗಳನ್ನು ಮಾಡಿಸುವ ನಿರ್ಧಾರವನ್ನು ಅವರು ಕೈಗೊಂಡರು.

ವೈದ್ಯರು ಮಗುವು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದೆ ಎಂದು ವೈದ್ಯರು ತಾಯಿಗೆ ತಿಳಿಸಿದಾಗ ಆಕೆಗೆ ಜಂಘಾಬಲವೇ ಉಡುಗಿಹೋದಂತಾಗಿತ್ತು, ಆಕಾಶವೇ ಕಳಚಿಬಿದ್ದಂತಾಗಿತ್ತು, ಸಂತಸದಲ್ಲಿ ತೇಲಾಡುತ್ತಿದ್ದ ಮನ ಶೋಕಸಾಗರದಲ್ಲಿ ಮುಳುಗಿತ್ತು. ಅವರ ಸಂತೋಷವನ್ನು ಕಿತ್ತಸೆಯುವಂತೆ ಮಗುವಿನ ಹೃದಯದ ಕಾಯಿಲೆ ಅವರನ್ನು ಕಂಗೆಡಿಸಿದೆ.

ಆಪರೇಷನ್‌ ಮಾತ್ರವೇ ಮಗುವನ್ನು ಉಳಿಸಬಹುದು

ಮಗುವನ್ನು ಉಳಿಸಿಕೊಳ್ಳಬೇಕು ಎಂದಾದಲ್ಲಿ ಮಗುವಿಗೆ ಹೃದಯದ ಆಪರೇಷನ್ ಮಾಡದೆ ವಿಧಿಯೇ ಇಲ್ಲ. ಆದರೆ ಮಗುವಿಗೆ ಚಿಕಿತ್ಸೆಗೆ 4 ಲಕ್ಷ ಖರ್ಚಾಗಲಿದೆ. ಶಾಲಿನಿಯ ಪತಿ ಹೋಟೆಲ್ ಒಂದರಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದು ಅವರ ತಿಂಗಳ ಸಂಬಳ ಹತ್ತು ಸಾವಿರವಾಗಿದೆ. ಈಗ ಇದ್ದ ಹಣವೆಲ್ಲಾ ಇಷ್ಟರವರೆಗೆ ನಡೆದ ಚಿಕಿತ್ಸೆಗೆ ಮತ್ತು ಪ್ರಯಾಣಕ್ಕೆ ಖರ್ಚಾಗಿದೆ. ಅವರ ಬಳಿ ಇದ್ದ ಮೌಲ್ಯಯುತ ವಸ್ತುಗಳನ್ನು ಮಾರಿ ಮಗುವಿಗೆ ಚಿಕಿತ್ಸೆಯನ್ನು ಕೊಡಿಸಿದ್ದಾರೆ.

ನನ್ನ ಮಗು ತುಂಬಾ ಚಿಕ್ಕದಾಗಿದ್ದರೂ ಅವನು ಧೈರ್ಯವಂತ. ನೋವನ್ನು ಸಹಿಸಿಕೊಳ್ಳುತ್ತಾನೆ. ಆದರೆ ಮಗುವನ್ನು ಉಳಿಸಿಕೊಳ್ಳಬೇಕು ನಾವು ಏನು ಮಾಡಲೂ ತಯಾರಿದ್ದೇವೆ ಎಂಬುದು ಮಗುವಿನ ತಾಯಿ ಶಾಲಿನಿಯ ಮಾತು.

ನೀವು ಹೇಗೆ ಸಹಾಯ ಮಾಡಬಹುದು

ಶಾಲಿನಿಯ ಒಂದು ತಿಂಗಳ ಮಗುವಿಗೆ ತುರ್ತು ಹೃದಯದ ಆಪರೇಶನ್ ಅಗತ್ಯವಿದ್ದು, ಇದಕ್ಕಾಗಿ ಸಾಕಷ್ಟು ಹಣವನ್ನು ಭರಿಸಬೇಕಾಗಿದೆ. ಈಗಾಗಲೇ ದಂಪತಿಗಳು ನೆರೆಹೊರೆಯವರಿಂದ ದುಡ್ಡನ್ನು ಸಂಗ್ರಹಿಸಿದ್ದು ಅದೂ ಸಾಕಾಗುತ್ತಿಲ್ಲ. ದಂಪತಿಗಳು ಹಳ್ಳಿಯಿಂದ ಬಂದವರಾಗಿದ್ದು ಬಡತನದಲ್ಲಿದ್ದಾರೆ. ಶಾಲಿನಿಯ ಪತಿ ರೆಸ್ಟೋರೆಂಟ್ ಒಂದರಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದು ಅವರ ಸಂಬಳ ಮನೆ ಖರ್ಚಿಗೆ ಸರಿಹೋಗುತ್ತಿದೆ.

ಆದರೆ ಮಗುವಿನ ಈ ಹಠಾತ್ ಕಾಯಿಲೆಯಿಂದ ಅವರಿಗೆ ದಿಕ್ಕು ತೋಚದಂತಾಗಿದೆ. ತಮ್ಮ ಮಗುವನ್ನು ಉಳಿಸುವ ನಿಟ್ಟಿನಲ್ಲಿ ಶಾಲಿನಿ ದಂಪತಿ ಸಹೃದಯ ಓದುಗರಲ್ಲಿ ನೆರವಿನ ಹಸ್ತವನ್ನು ಚಾಚುತ್ತಿದ್ದು ಒನ್ಇಂಡಿಯಾ ಕನ್ನಡ ಮತ್ತು ಬೋಲ್ಡ್ ಸ್ಕೈ ಓದುಗರು ತಮ್ಮ ಕೈಲಾದ ಸಹಾಯವನ್ನು ಮಾಡಿ ಶಾಲಿನಿಯ ಮಗುವನ್ನು ಉಳಿಸುವಲ್ಲಿ ನೆರವಾಗಬಹುದಾಗಿದೆ. ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ ಇವರ ಕಥೆಯನ್ನು ನೀವು ಹಂಚಿಕೊಂಡು ನಿಮಗೆಷ್ಟಾಗುತ್ತದೋ ಅಷ್ಟು ಸಹಾಯವನ್ನು ನೀವು ಮಾಡಬಹುದಾಗಿದೆ.

Have a great day!
Read more...

English Summary

A Month Old Baby Struggles To Breathe Due To Heart Disease. Please help save the child by donating and sharing our story with others who can help on WhatsApp and Facebook.