ಸೆಟ್ಲ್ ಮೆಂಟ್ ಡೀಲ್ ಗೆ ಜೇಟ್ಲಿ ಒಪ್ಪಿರಲಿಲ್ಲ: ಮಲ್ಯ


ಲಂಡನ್, ಸೆಪ್ಟೆಂಬರ್ 12: ಹತ್ತಾರು ಬ್ಯಾಂಕುಗಳಿಂದ ಸಾವಿರಾರು ಕೋಟಿ ರು ಸಾಲ ಮಾಡಿ ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡಿರುವ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಕುರಿತಂತೆ ಒಂದಷ್ಟು ಅಪ್ಡೇಟ್ಸ್ ಇಲ್ಲಿವೆ..

Advertisement

ನಾನು ಭಾರತವನ್ನು ತೊರೆಯುವುದಕ್ಕೂ ಮುನ್ನ ಅಂದಿನ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದೆ. ಒಂದೇ ಬಾರಿಗೆ ಎಲ್ಲಾ ಮೊತ್ತವನ್ನು ಸೆಟ್ಲ್ ಮೆಂಟ್ ಮಾಡುವಂಥ ವ್ಯವಸ್ಥೆ ಕಲ್ಪಿಸುವಂತೆ ಕೋರಿದ್ದೆ ಎಂದು ಮಲ್ಯ ಅವರು ಕೋರ್ಟಿನಿಂದ ಹೊರ ಬಂದ ಬಳಿಕ ಹೇಳಿದರು.

Advertisement

ಭಾರತಕ್ಕೆ ಮಲ್ಯ ಹಸ್ತಾಂತರ: ಸೆ. 18ಕ್ಕೆ ವಿಚಾರಣೆ ಮುಂದೂಡಿಕೆ

ಲಂಡನ್ನಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಇಂದು ವಿಚಾರಣೆಗೆ ಹಾಜರಾದ ಮಲ್ಯ ಅವರು, ಮುಂಬೈನ ಆರ್ಥರ್ ರೋಡ್ ಜೈಲಿನ ವಿಡಿಯೋವನ್ನು ವೀಕ್ಷಿಸಿದರು.

62 ವರ್ಷವಯಸ್ಸಿನ ಮಲ್ಯ ಅವರು ಜೈಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯ್ ಮಲ್ಯಗಾಗಿ ಸಿದ್ಧಪಡಿಸಿರುವ ಮುಂಬೈನ ಆರ್ಥರ್​ ರೋಡ್​ ಜೈಲಿನ ಕೊಠಡಿಯ ವಿಡಿಯೋವನ್ನು ಲಂಡನ್​ನ ವೆಸ್ಟ್​ಮಿನಿಸ್ಟರ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ ಇಂದು ಪರಿಶೀಲಿಸಲಾಯಿತು.

ಓವಲ್ ನಲ್ಲಿ 'Enough is Engough' ಎಂದ ಉದ್ಯಮಿ ಮಲ್ಯ

ಕೋರ್ಟ್ ಹೊರಗಡೆ ನಿಂತು ಮಲ್ಯ ಹೇಳಿದ್ದೇನು?

ಲಂಡನ್ನಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ವಿಚಾರಣೆಗೆ ಹಾಜರಾದ ಬಳಿಕ ಮಲ್ಯ ಅವರು ಸುದ್ದಿಗಾರರ ಜತೆ ಮಾತನಾಡುತ್ತಾ, ಜೇಟ್ಲಿ ಅವರನ್ನು ಭೇಟಿ ಮಾಡಿದ್ದು, ಒನ್ ಟೈಮ್ ಸೆಟ್ಲ್ ಮೆಂಟ್ ಆಫರ್ ನೀಡಿದ್ದು, ಅದಕ್ಕೆ ಮೋದಿ ಸರ್ಕಾರ ಒಪ್ಪಿಗೆ ನೀಡದೆ ಇದ್ದದ್ದು ಎಲ್ಲವನ್ನು ಚುಟುಕಾಗಿ ಹೇಳಿದರು.

ಯಶವಂತ್ ಸಿನ್ಹಾರ ಪ್ರತಿಕ್ರಿಯೆ

ಯಶವಂತ್ ಸಿನ್ಹಾರ ಪ್ರತಿಕ್ರಿಯೆಗೆ ಸುಜಯ್ ಅವರ ಪ್ರತಿಕ್ರಿಯೆ, ಮಲ್ಯ ರಾಜ್ಯಸಭಾ ಸದಸ್ಯರಾಗಿದ್ದರು. ಜೇಟ್ಲಿ ಭೇಟಿ ಮಾಡಲು ಯಾವ ಪಕ್ಷದ ಪ್ರತಿನಿಧಿಯಾಗಿ ಹೋಗಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.

ಆರ್ಥಿಕ ವಂಚಕರು ಹಾಗೂ ಬಿಜೆಪಿ

ಆರ್ಥಿಕ ವಂಚಕರು ಹಾಗೂ ಬಿಜೆಪಿ ನಡುವಿನ ಸಖ್ಯದ ಬಗ್ಗೆ ಕಾಂಗ್ರೆಸ್ ಹೇಳುತ್ತಾ ಬಂದಿದೆ. ಅದಕ್ಕೆ ಈಗ ಸಾಕ್ಷಿ ಸಿಕ್ಕಿದೆ ಎಂದ ಕಾಂಗ್ರೆಸ್ ನಾಯಕರು.

ಸೆಟ್ಲ್ ಮೆಂಟ್ ಗೆ ಎಸ್ ಬಿಐ ಒಪ್ಪಲಿಲ್ಲ

ನಾನು ಹಲವು ಬಾರಿ ಮನವಿ ಮಾಡಿದರೂ ಸರ್ಕಾರಿ ಸ್ವಾಮ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಲಿಲ್ಲ. 4400 ಕೋಟಿ ರು ನೀಡಿ ಒಂದೇ ಸಲಕ್ಕೆ ಸೆಟ್ಲ್ ಮೆಂಟ್ ಮಾಡಿಕೊಳ್ಳುವ ಇರಾದೆ ಇತ್ತು. ಆದರೆ, ನಮ್ಮ ಆಫರ್ ಗೆ ಬೆಲೆ ನೀಡಬೇಕಿತ್ತು. ಈ ಸೆಟ್ಲ್ ಮೆಂಟ್ ಮಾಡಿಕೊಂಡಿದ್ದರೆ ನಮಗೆ 8400 ಕೋಟಿ ರು ನಷ್ಟವಾಗುತ್ತಿತ್ತು. ಆದರೆ, ಸಾಲ ತೀರುತ್ತಿತ್ತು. ಆಗ ಇದ್ದ ಯುಪಿಎ ಸರ್ಕಾರ ಇದಕ್ಕೆ ಆಸ್ಪದ ನೀಡಲಿಲ್ಲ. ಈಗ ನಿಮ್ಮ ಸರ್ಕಾರದಿಂದ ನನಗೆ ಅವಕಾಶ ನೀಡಿದರೆ, ನಾನು ಸೆಟ್ಲ್ ಮೆಂಟ್ ಗೆ ಸಿದ್ಧ ಎಂದು 9 ಸಾವಿರ ಕೋಟಿ ಸಾಲ ಹೊತ್ತುಕೊಂಡಿರುವ ಮಾರ್ಚ್ 2016ರಿಂದ ಭಾರತದಿಂದ ಪರಾರಿಯಾಗಿರುವ ಮಲ್ಯ ಅವರು ಮಾಧ್ಯಮಗಳ ಮುಂದೆ ಹೇಳಿದ್ದರು. ಅದನ್ನೇ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

English Summary

Fugitive liquor baron Vijay Mallya on Wednesday said that he had met Finance Minister Arun Jaitley to settle matters before leaving India.