ಮಾಜಿ ಪ್ರೇಯಸಿಯನ್ನು ಬೆದರಿಸಿ ರೇಪ್ ಮಾಡಿದ ಸಾಫ್ಟ್ ವೇರ್ ಎಂಜಿನಿಯರ್


ಬೆಂಗಳೂರು, ಸೆಪ್ಟೆಂಬರ್ 12: ತನ್ನ ಮಾಜಿ ಪ್ರೇಯಸಿಯನ್ನು ಚಾಕು ತೋರಿಸಿ ಜೀವ ಭಯವೊಡ್ಡಿ ಅತ್ಯಾಚಾರ ಎಸಗಿದ ದ 25 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಪೊಲೀಸರ ಬಲೆಗೆ ಸಿಲುಕಿದ್ದಾರೆ.

ಎಚ್‌ಎಎಲ್ ಬಳಿ ಇರುವ ದೊಡ್ಡ ನೆಕ್ಕುಂದಿಯ ತನ್ನ ಮನೆಗೆ ಆರೋಪಿ ಪ್ರವೀಣ್ ಬಾಲಾ 25 ವರ್ಷದ ಮಾಜಿ ಪ್ರೇಯಸಿಯನ್ನು ಕರೆಸಿಕೊಂಡು ಆತ್ಯಾಚಾರ ನಡೆಸಿದ್ದಾರೆ. ಆಕೆಯ ಹೆಸರಿನಲ್ಲಿ ಪಾರ್ಸಲ್ ಬಂದಿದ್ದು ಅದನ್ನು ತೆಗೆದುಕೊಂಡು ಹೋಗುವಂತೆ ಮೊಬೈಲ್ ಕರೆ ಮಾಡಿ, ಮನೆಗೆ ಕರೆಸಿಕೊಂಡಿದ್ದ ಎಂದು ಎಚ್‌ಎಎಲ್ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಸೈಬರ್ ಕೆಫೆಯಲ್ಲಿ 10ರೂ.ಗಾಗಿ ನಡೆಯಿತು ಟೆಕ್ಕಿಯ ಹತ್ಯೆ

ದೆಹಲಿ ಸಮೀಪದ ಗುರುಗ್ರಾಮ ಮೂಲದ ಯುವತಿ 2017ರಲ್ಲಿ ಪ್ರಮುಖ ಸಾಫ್ಟ್ ವೇರ್ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿದ್ದಳು. ಈ ವೇಳೆ ಕೇರಳ ಮೂಲದ ಪ್ರವೀಣ್ ಬಾಲಾ ಜತೆ ಸ್ನೇಹ ಬೆಳೆದಿತ್ತು ಮಾತ್ರವಲ್ಲ, ಇಬ್ಬರೂ ಒಟ್ಟಿಗೆ ವಾಸಿಸಲು ಆರಂಭಿಸಿದ್ದರು.

ನಂತರ ಇಬ್ಬರೂ ದೊಡ್ಡನೆಕ್ಕುಂದಿ ಬಳಿ ಇರುವ ಮತ್ತೊಂದು ಕಂಪನಿಗೆ ಕೆಲಸ ಬದಲಾಯಿಸಿದ್ದರು. ಇತ್ತೀಚೆಗೆ ಆರು ತಿಂಗಳ ಹಿಂದೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಪ್ರತ್ಯೇಕವಾಗಿ ನೆಲೆಸಲು ನಿರ್ಧರಿಸಿದ್ದರು.

ಬೆಂಗಳೂರಲ್ಲಿ ಟೆಕ್ಕಿ ವಿಜಯಲಕ್ಷ್ಮೀ ಹತ್ಯೆ, ದೆಹಲಿಯಲ್ಲಿ ಆರೋಪಿ ಬಂಧನ

ಯುವತಿ ಪಿಜಿಯೊಂದಕ್ಕೆ ತನ್ನ ವಾಸಸ್ಥಳ ಬದಲಿಸಿದ ಬಳಿಕವೂ ಇಬ್ಬರ ನಡುವೆ ಸ್ನೇಹ ಮುಂದುವರಿದಿತ್ತು. ಆದರೆ ಕಳೆದ ಶುಕ್ರವಾರ ಪಾರ್ಸಲ್ ನೆಪದಲ್ಲಿ ಪ್ರವೀಣ್ ತನ್ನ ಹಳೆಯ ಗೆಳತಿಯನ್ನು ಕರೆಸಿಕೊಂಡ. ಅವಳು ಬರುತ್ತಲೇ ಪ್ರವೀಣ್ ಸುಳ್ಳು ಹೇಳಿರುವುದು ಗೊತ್ತಾಯಿತು. ಆಗ ಯುವತಿ ತನ್ನನ್ನು ಪಿಜಿಗೆ ಡ್ರಾಪ್ ಮಾಡುವಂತೆ ಕೋರಿದಳು.

ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ಉಸಿರುಗಟ್ಟಿಸಿ ಹತ್ಯೆ

ಆಗ ಬೆಳಗ್ಗೆ ಸಮಯ 11.30 ಆಗಿತ್ತು. ಪ್ರವೀಣ್ ಇನ್ನೂ ಸ್ವಲ್ಪ ಹೊತ್ತು ಇರುವಂತೆ ಒತ್ತಾಯ ಮಾಡಿದ. ಅವಳು ಹೋಗಲು ಅಣಿಯಾದಾಗ ಬೆಡ್ ರೂಮ್‌ಗೆ ಕರೆದೊಯ್ದು, ಚಾಕು ತೋರಿಸಿ ಅತ್ಯಾಚಾರ ಎಸಗಿದ ಎಂದು ಯುವತಿ ಎಚ್‌ಎಎಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಐಪಿಸಿ ಸೆಕ್ಷನ್ 376 ಹಾಗೂ 506 ಅಡಿ ಪ್ರಕರಣ ದಾಖಲಾಗಿದೆ.

Have a great day!
Read more...

English Summary

A software engineer from Kerala who is living in Bengaluru has allegedly raped his ex girl friend at his residence on Friday morning. HAL police have registered a case under IPC section 376 and 506