ಪ್ಲಾಸ್ಟಿಕ್ ಮುಕ್ತ ಬೆಂಗಳೂರಿಗಾಗಿ ಪ್ಲಾಗ್ ರನ್, ನೀವೂ ಭಾಗವಹಿಸಿ


ಬೆಂಗಳೂರು, ಸೆಪ್ಟೆಂಬರ್ 12: ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕಾಗಿ ಸಮಾನ ಮನಸ್ಕ ಸಂಸ್ಥೆಗಳೆಲ್ಲಾ ಸೇರಿಕೊಂಡು 'ಪ್ಲಾಗ್ ರನ್' ಎಂಬ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದೆ.

ಅಕ್ಟೋಬರ್ 2ರಂದು ನಡೆಯುವ ಓಟದ ಜೊತೆಗೆ ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಈ ಅಭಿಯಾನದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಆದರೆ ಸಣ್ಣ ನಿಯಮಗಳನ್ನು ಪಾಲಿಸಬೇಕು.

ಶೂ ಮತ್ತು ಒಂದು ಚೀಲವೊಂದನ್ನು ಹಿಡಿದು ಬಂದರೆ ಸಾಕು. ಓಡುತ್ತಾ- ಓಡುತ್ತಾ ದಾರಿಯಲ್ಲಿ ಕಂಡ ಪ್ಲಾಸ್ಟಿಕ್‌ ಅನ್ನೆಲ್ಲಾ ಚೀಲದಲ್ಲಿ ಹಾಕಿಕೊಂಡರೆ ಮುಗಿಯಿತು. ಓಟದ ಕೊನೆಗೆ ಪ್ಲಾಸ್ಟಿಕ್ ತುಂಬಿದ ಚೀಲವನ್ನು ಆಯೋಜಕರು ಗುರುತು ಮಾಡಿದ ಜಾಗದಲ್ಲಿ ಇಟ್ಟರೆ ಮುಗಿಯಿತು.

ನಗರದ ಬಹುತೇಕ ಎಲ್ಲ ಪ್ರಮುಖ ಸ್ಥಳಗಳಲ್ಲಿ ಈ 'ಪ್ಲಾಗ್ ರನ್' ಆಯೋಜಿಸಲಾಗಿದೆ. ಈಗಾಗಲೇ 5000 ಕ್ಕೂ ಹೆಚ್ಚು ಜನ ಆನ್‌ಲೈನ್‌ ಮೂಲಕ ಓಟದಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿಕೊಂಡಿದ್ದಾರೆ.

ಬಸವ ಅಂಬರ, ಹಸಿರು ಸೇನೆ, ಜಸ್ಟ್‌ ಬುಕ್ಸ್‌, ಬೆಂಗಳೂರು ಮೌಂಟೇನ್ ಫೆಸ್ಟಿವಲ್, ಗ್ರೀನ್ ಹೌಸ್, ಜನಷ್ಟು, ಲಯನ್ಸ್‌ ಸಂಸ್ಥೆಗಳು ಒಟ್ಟಾಗಿ ಈ ಸದುದ್ದೇಶದ ಓಟದ ಅಭಿಯಾನವನ್ನು ಆಯೋಜನೆ ಮಾಡಿದೆ. ಈ ಓಟದಲ್ಲಿ ಸ್ವಯಂ ಕಾರ್ಯಕರ್ತರಾಗಲು ಆನ್‌ಲೈನ್‌ ಮೂಲಕ ನೊಂದಾಯಿಸಿಕೊಳ್ಳಬಹುದು.

Have a great day!
Read more...

English Summary

'Plog run' organized for plastic free Bengaluru on October 2nd. More than 5000 plogers already registered through online.