ಬೆಂಗಳೂರು: ಕಾರು-ಬಿಎಂಟಿಸಿ ನಡುವೆ ಡಿಕ್ಕಿ 3 ಸಾವು, ಇಬ್ಬರು ಗಂಭೀರ


ಬೆಂಗಳೂರು, ಸೆಪ್ಟೆಂಬರ್ 12: ನಗರದ ಮಾರುತ್‌ ಹಳ್ಳಿ ಬಳಿ ಬಿಎಂಟಿಸಿ ಬಸ್ಸು ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂರು ಜನ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮಾರುತಹಳ್ಳಿ ಸಮೀಪದ ರಿಂಗ್ ರೋಡ್‌ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಕಿಲ್ಲರ್ ಬಿಎಂಟಿಸಿ ಅನ್ವರ್ಥದಂತೆ ಬಿಎಂಟಿಸಿ ನಗರದಲ್ಲಿ ಇಂದು ಮತ್ತೆ ಮೂರು ಜೀವಗಳ ಬಲಿ ಪಡೆದಿದೆ. ಸ್ಥಳದಲ್ಲಿದ್ದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ..

ತೆಲಂಗಾಣದಲ್ಲಿ ಭೀಕರ ಅಪಘಾತ: ಬಸ್ಸಿನಲ್ಲಿದ್ದ 45 ಮಂದಿ ದುರ್ಮರಣ

ಎಚ್‌ಎಎಲ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಎಚ್‌ಎಎಲ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದಾಗಿ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.

ಆನೆಗಳ ಸಾವಿಗೆ ಅಂಕುಶ: ರೈಲ್ವೆ ಇಲಾಖೆಯ 'ದುಂಬಿ ಯೋಜನೆ' ಯಶಸ್ವಿ

ಎಚ್‌ಎಎಲ್‌ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಾಯಗೊಂಡ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

Have a great day!
Read more...

English Summary

seriously between car and BMTC 3 people dead and 2 were seriously injured. HAL police registered complaint.