ಐಓಸಿಎಲ್‌ನಲ್ಲಿ 344 ಹುದ್ದೆ : ಐಟಿಐ/ಡಿಪ್ಲೊಮಾದವರು ಅರ್ಜಿ ಹಾಕಿ


ಬೆಂಗಳೂರು, ಸೆಪ್ಟೆಂಬರ್ 11 : ಐಓಸಿಎಲ್ 344 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಸೆಪ್ಟೆಂಬರ್ 21, 2018 ಕೊನೆಯ ದಿನವಾಗಿದೆ.

ಭಾರತೀಯ ತೈಲ ನಿಗಮ ನಿಯಮಿತ (ಐಓಸಿಎಲ್) ಟ್ರೇಡ್ ಅಪ್ರೆಂಟೀಸ್ 150, ಟೆಕ್ನಿಶಿಯನ್ ಅಪ್ರೆಂಟೀಸ್ 194 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ಕೆಪಿಎಸ್‌ಸಿ ನೇಮಕಾತಿ : ಬಿಎಸ್‌ಸಿ ಪದವೀಧರರು ಅರ್ಜಿ ಹಾಕಿ

ಟ್ರೇಡ್ ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರಿಕ್ಯೂಲೇಷನ್ ಮತ್ತು ಐಟಿಐ (ರಿಲೆವೆಂಟ್ ಟ್ರೇಡ್‌) ವಿದ್ಯಾರ್ಹತೆ ಹೊಂದಿರಬೇಕು. ಟೆಕ್ನಿಕಲ್ ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಡಿಪ್ಲೊಮಾ ಪದವಿ ಪಡೆದಿರಬೇಕು.

ಯುಪಿಎಸ್ ಸಿ : 10 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 24 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಸೆಪ್ಟೆಂಬರ್ 21, 2018ಕ್ಕೆ ಅನ್ವಯವಾಗುವಂತೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ.

21 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ನೈಋತ್ಯ ರೈಲ್ವೆ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Have a great day!
Read more...

English Summary

Indian Oil Corporation Limited (IOCL) recruitment 2018-19. Notification has been released on official website for the recruitment of Trade & Technician Apprentice vacancies. Candidate can apply before 21st September 2018.