ಎನ್‌ಪಿಸಿಐಎಲ್‌ನಲ್ಲಿ ಉದ್ಯೋಗ, ಐಟಿಐ ಆದವರು ಅರ್ಜಿ ಹಾಕಿ


ಬೆಂಗಳೂರು, ಸೆಪ್ಟೆಂಬರ್ 11 : ಎನ್‌ಪಿಸಿಐಎಲ್ 90 ಅಪ್ರೆಂಟೀಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 10, 2018 ಕೊನೆಯ ದಿನವಾಗಿದೆ.

ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ಟ್ರೇಡ್ ಅಪ್ರೆಂಟೀಸ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದವರು ಮಹಾರಾಷ್ಟ್ರದಲ್ಲಿ ಕೆಲಸ ಮಾಡಬೇಕು.

ಐಓಸಿಎಲ್‌ನಲ್ಲಿ 344 ಹುದ್ದೆ : ಐಟಿಐ/ಡಿಪ್ಲೊಮಾದವರು ಅರ್ಜಿ ಹಾಕಿ

ಫಿಟ್ಟರ್ 18, ಟರ್ನರ್ 4, ಎಲೆಕ್ಟ್ರಿಷಿಯನ್ 16, ವೆಲ್ಡರ್ 10, ಕಾರ್ಪೆಂಟರ್ 9, ಪ್ಲಂಬರ್ 9, ವೈರ್‌ ಮೆನ್ 9, ಪೈಂಟರ್ 9 ಸೇರಿದಂತೆ 90 ಹುದ್ದೆಗಳಿವೆ.

ಕೆಪಿಎಸ್‌ಸಿ ನೇಮಕಾತಿ : ಬಿಎಸ್‌ಸಿ ಪದವೀಧರರು ಅರ್ಜಿ ಹಾಕಿ

ಮಾನ್ಯತೆ ಪಡೆದ ಸಂಸ್ಥೆಯಿಂದ ನಿಗದಿಪಡಿಸಿದ ಟ್ರೇಡ್‌ನಲ್ಲಿ ಐಟಿಐ ಪೂರ್ಣಗೊಳಿಸಿದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 16 ವರ್ಷಗಳು, ಗರಿಷ್ಠ ವಯೋಮಿತಿ 24 ವರ್ಷಗಳು. ಎಸ್‌ಸಿ/ಎಸ್‌ಟಿ 5, ಓಬಿಸಿ 3, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷದ ವಯೋಮಿತಿ ಸಡಿಲಿಕೆ ಇದೆ.

ಯುಪಿಎಸ್ ಸಿ : 10 ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಸಕ್ತ ಅಭ್ಯರ್ಥಿಗಳು ವೆಬ್‌ ಸೈಟ್ ಮೂಲಕ ನೋಂದಣಿ ಮಾಡಿಸಿ ಬಳಿಕ ಅರ್ಜಿಗಳನ್ನು ಸೂಕ್ತ ದಾಖಲೆಗಳ ಜೊತೆ ಸಲ್ಲಿಸಬೇಕು. ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 10, 2018 ಕೊನೆಯ ದಿನವಾಗಿದೆ.

ಅರ್ಜಿಗಳನ್ನು ಸಲ್ಲಿಸಲು ವಿಳಾಸ

Manager (HRM), Nuclear Power Corporation of India Limited Tarapur Maharashtra Site, Tarapur Atomic Power Station 1 to 4 PO: TAPP, Via: Boisar (W/Rly) Tal. & Dist: Palghar PIN: 401504, Maharashtra

Have a great day!
Read more...

English Summary

Nuclear Power Corporation of India Limited (NPCIL) has released a new recruitment notification for the 90 posts of Trade Apprentices. The application process will close on 10th October 2018.