ಚಾಮರಾಜನಗರದಲ್ಲಿ ಗಣೇಶನಿಗೆ ದೇವಾಲಯ ಕಟ್ಟಿದ ಮುಸ್ಲಿಂ ವ್ಯಕ್ತಿ


ಚಾಮರಾಜನಗರ, ಸೆಪ್ಟೆಂಬರ್ 12: ಗಣೇಶ ಚತುರ್ಥಿ ಕೋಮು ಸೌಹಾರ್ದದ ಸಂಕೇತವೂ ಆಗಲಿ ಎಂಬ ಸಂದೇಶದೊಂದಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಟಿ ರಹಮಾನ್ ಎಂಬ ವ್ಯಕ್ತಿಯೊಬ್ಬರು ಗಣೇಶ ದೇವಾಲಯ ಕಟ್ಟಿದ್ದಾರೆ.

61 ವರ್ಷ ವಯಸ್ಸಿನ ರಹಮಾನ್ ನೀರಾವರಿ ಇಲಾಖೆಯ ನಿವೃತ್ತ ಅಧಿಕಾರಿ. ಕಳೆದ ವರ್ಷ ಇಲ್ಲಿನ ಚಿಕ್ಖೊಳೆ ಪ್ರದೇಶದಲ್ಲಿ ಗಣೇಶನ ವಿಗ್ರಹವೇ ಕಾಣೆಯಾದ ಘತನೆ ನಡೆದಿತ್ತು. ಇದರಿಂದ ಬೇಸರಗೊಂಡ ರಹಮಾನ್ ಗಣೇಶನಿಗಾಗಿ ದೇವಾಲಯವನ್ನೇ ಕಟ್ಟುವ ಯೋಚನೆ ಮಾಡಿ, ಅದನ್ನು ಕಾರ್ಯಗತಗೊಳಿಸುತ್ತಿದ್ದಾರೆ.

ಭಕುತಿಯಿಂದ ಪೂಜಿಸಿದ ಗಣಪನ ಫೋಟೋ ನಮಗೆ ಕಳಿಸಿಕೊಡಿ

ಗಣೇಶ ಚತುರ್ಥಿಗೂ ಮುನ್ನವೇ ಈ ದೇವಾಲಯವನ್ನು ಉದ್ಘಾಟಿಸಬೇಕು ಎಂಬ ಇಂಗಿತ ಇವರದಾಗಿತ್ತಾದರೂ, ಇನ್ನೂ ಸಂಪೂರ್ಣ ಕಾರ್ಯ ಮುಗಿಯದ ಕಾರಣ ಈ ವರ್ಷದ ಚೌತಿಯಂದು ಈ ದೇವಾಲಯ ತೆರೆಯುತ್ತಿಲ್ಲ.

ಆದರೇನಂತೆ, ಎಂದಾದರೂ ಈ ದೇವಾಲಯ ತೆರೆದು, ಸಹಸ್ರಾರು ಭಕ್ತರ ಪ್ರಾರ್ಥನೆಯ ನೆಲೆಯಾಗಲಿದೆ.

ಗಣೇಶ ಮೂರ್ತಿ ಕೂರಿಸಿದರೆ ಸಿಸಿಟಿವಿ ಕ್ಯಾಮರಾ ಅಳವಡಿಸಲೇಬೇಕು

ಕೋಮು ಸೌಹಾರ್ದದ ಸಂದೇಶ ಬಿತ್ತಲು ಇಂಥದೊಂದು ಮಹೋನ್ನತ ಕಾರ್ಯಕ್ಕೆ ಕೈಹಾಕಿರುವ ರಹಮಾನ್ ಅವರಿಗೆ ನಮ್ಮ ಸಲಾಂ!

Have a great day!
Read more...

English Summary

Ganesh Chaturthi special: Here is a story of a muslim man from Chamarajanagar district is building a temple for lord Ganesha.