Weekly Horoscope: ಏಪ್ರಿಲ್ 26ರಿಂದ ಮೇ. 2ರವರೆಗೆ ದ್ವಾದಶ ರಾಶಿಗಳ ವಾರ ಭವಿಷ್ಯ


ಯಾವುದೇ ಕಾರಣಕ್ಕೂ ಹಿರಿಯರ ಮಾತುಗಳನ್ನು ಅಲಕ್ಷಿಸಿ ಬೇಡಿ, ಅವರು ಆಚರಿಸುವ ಪದ್ಧತಿಗಳನ್ನು ನಿರ್ಲಕ್ಷಿಸಬೇಡಿ, ಇವುಗಳು ನಮ್ಮ ಜೀವನದ ಅಭ್ಯುದಯಕ್ಕೆ ಪ್ರೇರಕ ವಾಗಿರುತ್ತದೆ ಎಂಬುದನ್ನು ನೆನಪಿಡಿ.

ನಿಯಮ ಮೀರಿ ಶಾಪಿಂಗ್ ಮಾಡಿದ್ರೆ ಟ್ಯಾಕ್ಸ್ | Airport | Dutyfree | Tax | Oneindia Kannada

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತಿರುವವನು ಇಂಥ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದು ಜ್ಯೋತಿಷ್ಯ ಶಾಸ್ತ್ರ. ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಸಮಾಲೋಚನೆ ಕರೆ ಮಾಡಿ. ಏಪ್ರಿಲ್ 26ರಿಂದ ಮೇ 2ರ ತನಕ ದ್ವಾದಶ ರಾಶಿ ಭವಿಷ್ಯ ಇಲ್ಲಿದೆ...

ಖರ್ಚಿನ ಪ್ರಮಾಣದಲ್ಲಿ ಹೆಚ್ಚಾಗಲಿದೆ

ಮನೆ ನಿರ್ಮಾಣದಲ್ಲಿ ತೊಡಗಿರುವವರಿಗೆ ಖರ್ಚಿನ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಸಾಲ ಪಡೆಯುವುದಕ್ಕಾಗಿ ಪ್ರಯತ್ನ ತೀವ್ರವಾಗಿ ನಡೆಸಲಿದ್ದೀರಿ. ಟ್ರಾವೆಲ್ಸ್ ವ್ಯವಹಾರ ನಡೆಸುತ್ತಿರುವವರು ಹೊಸ ಒಪ್ಪಂದಕ್ಕಾಗಿ ಯತ್ನಿಸಲಿದ್ದೀರಿ. ಇತರರು ನಿಮ್ಮ ಬಳಿ ರಹಸ್ಯ ಎಂದು ಹೇಳಿದ ಸಂಗತಿಗಳನ್ನು ಹೊರಗಿನವರೊಂದಿಗೆ ಹಂಚಿಕೊಳ್ಳದಿರಿ. ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳಲಿದ್ದೀರಿ. ಈ ಕಾರಣಕ್ಕೆ ದೊಡ್ಡ ತಪ್ಪುಗಳಾಗಬಹುದು. ಆ ಕಡೆಗೆ ಹೆಚ್ಚಿನ ಗಮನ ನೀಡಿ. ಗ್ಯಾಜೆಟ್ ಗಳು, ಕ್ಯಾಮೆರಾ ಅಥವಾ ಲ್ಯಾಪ್ ಟಾಪ್ ಖರೀದಿ ಮಾಡುವ ಸಾಧ್ಯತೆ ಇದೆ. ಖರ್ಚು ಮಾಡುವುದಿದ್ದಲ್ಲಿ ಹೆಚ್ಚಿನ ಸಾಲ ಬೇಡ.

ವೃಷಭ

ನಿಮ್ಮ ಮೇಲೆ ಕಳಂಕ ಹೊರೆಸುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಕೆಲಸ ಮಾಡುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಭೂಮಿ ವ್ಯವಹಾರ ನಡೆಸುವವರಿಗೆ ಕಮಿಷನ್ ಪ್ರಮಾಣ ಹೆಚ್ಚಾಗಲಿದೆ. ಅನಿರೀಕ್ಷಿತವಾಗಿ ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು. ಚರ್ಮದ ಆರೋಗ್ಯ ಸಮಸ್ಯೆ ಇರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿಯಾಗಿ. ಯಾರ ಮೇಲೂ ದ್ವೇಷ ಸಾಧಿಸದಿರಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಸವಾಲಿನ ಸಮಯ ಇದು. ಇತರರ ತಪ್ಪನ್ನು ಮುಚ್ಚಿಕೊಳ್ಳಲು ನಿಮ್ಮನ್ನು ಬಲಿಪಶುವಾಗಿ ಮಾಡುವ ಸಾಧ್ಯತೆ ಇರುವುದರಿಂದ ಜಾಗ್ರತೆಯಿಂದ ಇರಬೇಕು.

ವಾರದ ಅಂತ್ಯಕ್ಕೆ ಸರಿಯುತ್ತಾ ನಿಮ್ಮ ವಿರೋಧಿಗಳಿಗೆ ತಕ್ಕ ಉತ್ತರ ನೀಡುವಲ್ಲಿ ಸಫಲರಾಗುತ್ತೀರಿ. ಇದರ ಜತೆಗೆ ಕುಟುಂಬ ಸದಸ್ಯರ ಜತೆಗೆ ಒಗ್ಗಟ್ಟು ಹಾಗೂ ಬಾಂಧವ್ಯ ಬೆಸೆಯಲು ನಿಮ್ಮಿಂದ ಸಾಧ್ಯವಾಗುತ್ತದೆ. ವಾರದ ಅಂತ್ಯಕ್ಕೆ ನಿಮ್ಮ ಪಾಲಿಗೆ ಅದೃಷ್ಟ ಇರುತ್ತದೆ. ನೀವಂದುಕೊಂಡಂತೆಯೇ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ತೀರ್ಥ ಕ್ಷೇತ್ರಗಳಿಗೆ ತೆರಳಲು ಆಸಕ್ತಿ ಮೂಡುತ್ತದೆ.

ಮಿಥುನ

ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಈ ಹಿಂದಿನ ಆರೋಗ್ಯ ಸಮಸ್ಯೆ ಇದ್ದಲ್ಲಿ ಉಲ್ಬಣಿಸಬಹುದು. ಯಾವುದಾದರೂ ಸಮಸ್ಯೆಗೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಲ್ಲಿ ಔಷಧೋಪಚಾರದ ಕಡೆಗೆ ಹೆಚ್ಚಿನ ನಿಗಾ ವಹಿಸಿ. ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಕೆಲ ಅಡೆತಡೆಗಳು ಎದುರಾಗಬಹುದು. ದೂರ ಪ್ರಯಾಣ ಮಾಡಬೇಕು ಎಂದಿರುವವರು ಮುಂದೂಡುವುದು ಉತ್ತಮ. ನಿಮ್ಮ ಆತ್ಮಾಭಿಮಾನಕ್ಕೆ ಪೆಟ್ಟು ಬೀಳುವ ಮಾತು ಕೇಳಬೇಕಾಗುತ್ತದೆ. ಉದ್ಯೋಗ ಬದಲಾವಣೆ ಮಾಡಬೇಕು ಎಂದಿದ್ದಲ್ಲಿ ಆತುರದ ನಿರ್ಧಾರ ಮಾಡದಿರಿ. ಇತರರ ವೈಯಕ್ತಿಕ ವಿಚಾರಗಳಿಗೆ ಮೂಗು ತೂರಿಸಬೇಡಿ.

ಕರ್ಕಾಟಕ

ನಿಮಗೆ ಗೊತ್ತಿರುವುದೆಲ್ಲ ನಿಜ, ಸರಿ ಎಂಬ ಮನೋಭಾವ ಸರಿಯಲ್ಲ. ಬ್ಯಾಂಕಿಂಗ್ ಉದ್ಯೋಗದಲ್ಲಿ ಇರುವವರಿಗೆ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ವಾಹನ ಖರೀದಿ ಮಾಡಬೇಕು ಎಂದಿರುವವರಿಗೆ ದುಡ್ಡು ಹೊಂದಿಸಲು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ತುಂಬ ನಾಜೂಕಾಗಿ ಇತರರಿಂದ ಕೆಲಸ- ಕಾರ್ಯಗಳನ್ನು ಮಾಡಿಸಿಕೊಳ್ಳಲಿದ್ದೀರಿ. ಸಂಗಾತಿಯ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಉದ್ಯೋಗ ಬದಲಾವಣೆಗೆ ಯತ್ನಿಸುತ್ತಿದ್ದಲ್ಲಿ ಅವಕಾಶ ದೊರೆಯಲಿದೆ. ಆದರೆ ನಿಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ಏನು ಮಾತನಾಡುತ್ತೀರೋ ಅದಕ್ಕೆ ಬದ್ಧರಾಗಿರಿ.

ಸಿಂಹ

ನೀವು ಬಹಳ ನಂಬುವ ವ್ಯಕ್ತಿಗಳೇ ಉಲ್ಟಾ ಹೊಡೆಯಲಿದ್ದಾರೆ. ಇತರರ ಮೇಲೆ ಭರವಸೆ ಇಟ್ಟು, ಕೈಗೊಂಡ ಕೆಲಸಗಳು ಅಂದುಕೊಂಡ ವೇಗದಲ್ಲಿ ಸಾಗುವುದಿಲ್ಲ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿದ್ದಲ್ಲಿ ಲಾಭದ ಪ್ರಮಾಣ ಇಳಿಕೆ ಆಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬಡ್ತಿ ಅಥವಾ ವರ್ಗಾವಣೆ ನಿರೀಕ್ಷೆ ಮಾಡುತ್ತಿದ್ದಲ್ಲಿ ಅದು ಪೂರ್ಣ ಪ್ರಮಾಣದಲ್ಲಿ ಈಡೇರದೆ ಅರ್ಧಂಬರ್ಧ ಆಗಲಿದೆ. ಸುಖಾಸುಮ್ಮನೆ ಯಾರನ್ನೂ ಎದುರು ಹಾಕಿಕೊಳ್ಳದಿರಿ. ಈ ವಾರ ನಿಮ್ಮೊಳಗೆ ಅಹಂಕಾರ ಹೆಚ್ಚಾಗುವ ಅಪಾಯ ಇದೆ.

ಕನ್ಯಾ

ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಬಹುದು. ಅಥವಾ ಸಣ್ಣ- ಪುಟ್ಟ ಮನಸ್ತಾಪ ಆಗಿ ಮಾತು ಬಿಡುವಂಥ ಸಾಧ್ಯತೆಗಳಿವೆ. ಯಾವುದೇ ಕಾರಣಕ್ಕೂ ಕುಟುಂಬದೊಳಗೆ ಘರ್ಷಣೆಗೆ ಅವಕಾಶ ಮಾಡಿಕೊಡದಿರಿ. ಎಲ್ಲ ಕಾಲಕ್ಕೂ ಸಲ್ಲುವಂಥ ವ್ಯಕ್ತಿ ಆಗುವುದಕ್ಕೆ ಪ್ರಯತ್ನಿಸಿ. ನೀವು ನಂಬಿಕೊಂಡು ಬಂದಿರುವಂಥ ಸಿದ್ಧಾಂತಗಳಲ್ಲಿ ಬದಲಾವಣೆ ಆಗಬಹುದು. ಅದನ್ನು ಸ್ವೀಕರಿಸುವ ಮನಸ್ಥಿತಿ ಇರಲಿ. ಮನೆಯಲ್ಲಿ ದೇವತಾ ಕಾರ್ಯಗಳು ನೆರವೇರಲಿವೆ. ಸೂರ್ಯ ನಮಸ್ಕಾರದಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು. ಈ ವಾರ ನಿಮ್ಮನ್ನು ಸ್ವಲ್ಪ ಮಟ್ಟಿಗೆ ಆಲಸ್ಯ ಕಾಡಲಿದೆ.

Advertisement
Advertisement
ತುಲಾ

ಸ್ನೇಹಿತರ ಜತೆಗೆ ಎಷ್ಟು ಸಲುಗೆಯೋ ಅಷ್ಟಿದ್ದರೆ ಸರಿ. ಅದನ್ನು ಮೀರಿದರೆ ಸ್ನೇಹಕ್ಕೇ ಅಪಾಯ. ಈ ವಾರ ಆ ಕಡೆಗೆ ಗಮನ ನೀಡಿ. ಲೇವಾದೇವಿ ವ್ಯವಹಾರ ಮಾಡುವವರಿಗೆ ಬರಬೇಕಾದ ಹಣದಲ್ಲಿ ತಡ ಆಗಬಹುದು ಅಥವಾ ಸ್ವಲ್ಪ ಮಟ್ಟಿಗೆ ಹಣ ಬಾರದೇ ಹೋಗಬಹುದು. ವಾಸ್ತುಶಿಲ್ಪಿಗಳಿಗೆ ದೊಡ್ಡ ಅವಕಾಶಗಳು ಹುಡುಕಿಕೊಂಡು ಬರಬಹುದು. ಹೊಸ ಸವಾಲುಗಳನ್ನು ನೀವೇ ಹುಡುಕಿಕೊಂಡು ಹೋಗಲಿದ್ದೀರಿ. ನವ ದಂಪತಿಗೆ ಕೆಲವರಿಗೆ ಚುಚ್ಚು ಮಾತುಗಳನ್ನು ಕೇಳುವ ಯೋಗ ಇದೆ. ಆದರೆ ಇದನ್ನು ಮನಸ್ಸಿಗೆ ಹಚ್ಚಿಕೊಂಡು ಬೇಸರ ಆಗಬೇಡಿ.

ವೃಶ್ಚಿಕ

ಸೋದರ- ಸೋದರಿಯರಿಗಾಗಿ ಹೆಚ್ಚಿನ ಖರ್ಚಾಗಲಿದೆ. ಕಾನೂನು ಸಮಸ್ಯೆಗಳಾಗದಂತೆ ನೋಡಿಕೊಳ್ಳಿ. ಹೇಗಾದರೂ ಲಾಭ ಮಾಡಿಕೊಂಡು ಬಿಡಬೇಕು ಎಂಬ ಧೋರಣೆ ಸರಿಯಲ್ಲ. ಉದ್ಯೋಗ ಸ್ಥಳದಲ್ಲಿ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ಸಹಾಯ ಕೇಳಿಕೊಂಡು ಬರಬಹುದು. ನಿಮ್ಮಿಂದ ನೆರವು ನೀಡಲು ಸಾಧ್ಯವಿದ್ದಲ್ಲಿ ಮಾಡಿ, ಇಲ್ಲದಿದ್ದಲ್ಲಿ ಹಂಗಿಸಬೇಡಿ. ವಿದೇಶದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಇಂಥ ಕೆಲವು ನಡವಳಿಕೆಗಳೇ ಅಡೆತಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಈ ಹಿಂದೆ ನೀವು ಮಾಡಿದ್ದ ಸಹಾಯದ ಫಲವನ್ನು ಪಡೆಯುವ ಕಾಲ ಇದು.

ಧನುಸ್ಸು

ನಿಮಗೆ ಬರಬೇಕಾದ ಹಣಕ್ಕೆ ಏಕಾಏಕಿ ತಡೆ ಬೀಳುತ್ತದೆ. ನಿಮ್ಮ ಮಾತಿಗೆ ನಾನಾ ಅರ್ಥ ಕಲ್ಪಿಸಿ, ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ನಿಮಗೆ ಇಷ್ಟವಿಲ್ಲದವರಿಂದ ಸಾಲ ಪಡೆದು, ಬಡ್ಡಿಯ ಸುಳಿಗೆ ಸಿಲುಕಿಕೊಳ್ಳುವ ಯೋಗ ಇದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಯಾರ ಮೇಲೂ ದ್ವೇಷ ಸಾಧಿಸಬೇಡಿ. ನಿಮಗೆ ಅವಮಾನ ಮಾಡಿದರು ಎಂದು ಭಾವಿಸಿ, ಒಂದಕ್ಕೆರಡರಂತೆ ಬಡ್ಡಿಗೆ ಹಣ ತಂದು, ಅದನ್ನು ತೀರಿಸಲು ಸಾಧ್ಯವಾಗದೆ ಅವಮಾನದ ಪಾಲಾಗುವ ಸಾಧ್ಯತೆ ಇದೆ. ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧ ಹುಡುಕಿಕೊಂಡು ಬರುವ ಸಾಧ್ಯತೆ ಇದೆ.

ಮಕರ

ದುಃಖ, ಅವಮಾನ ಹಾಗೂ ಅನಾರೋಗ್ಯ ಹೀಗೆ ನಾನಾ ಬಗೆಯ ಸಮಸ್ಯೆಗಳನ್ನು ಎದುರಿಸಲಿದ್ದೀರಿ. ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ಕಾಣದ ಕಾರಣಕ್ಕೆ ಆತ್ಮಸ್ಥೈರ್ಯವೇ ಕುಗ್ಗಿಹೋಗುವ ಸಾಧ್ಯತೆ ಇದೆ. ಹಾಗೆ ಆಗದಂತೆ ನೋಡಿಕೊಳ್ಳಿ. ಸ್ಥೂಲಕಾಯದ ಸಮಸ್ಯೆ ಇರುವರು ಅದನ್ನು ನಿರ್ವಹಿಸುವ ಕಡೆಗೆ ಗಮನ ನೀಡಿ. ಸಹಾಯ ದೊರೆಯುತ್ತದೆ ಎಂಬ ಕಾರಣಕ್ಕೆ ಅತಿಯಾದ ಅವಲಂಬನೆ ಒಳ್ಳೆಯದಲ್ಲ. ಸಂಗಾತಿ- ಮಕ್ಕಳ ಜತೆಗೆ ಸಣ್ಣ- ಪುಟ್ಟ ಮನಸ್ತಾಪ ಆಗುವ ಸಾಧ್ಯತೆ ಇದೆ. ಸರ್ಕಾರಿ ನೌಕರರು, ವಕೀಲರಿಗೆ ಬಿಡುವಿಲ್ಲದಂಥ ಕೆಲಸ- ಕಾರ್ಯಗಳು ಇರುತ್ತವೆ.

ಕುಂಭ

ನಿಮ್ಮಿಂದ ನಿರ್ವಹಿಸಲು ಸಾಧ್ಯವಾಗದಂಥ ಖರ್ಚುಗಳು ಕಾಣಿಸಿಕೊಳ್ಳುತ್ತವೆ. ಇದರ ಜತೆಗೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಅವಮಾನಗಳನ್ನು ಮಾಡಿದವರ ಜತೆಗೆ ರಾಜೀ- ಸಂಧಾನ ಮಾಡಿಕೊಳ್ಳಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಸ್ವಂತ ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂದಿದ್ದಲ್ಲಿ ಕಾಗದ- ಪತ್ರಗಳನ್ನು ಜೋಪಾನವಾಗಿ ನೋಡಿ, ಮುಂದುವರಿಯಿರಿ. ನಗುನಗುತ್ತಾ ಮಾತನಾಡಿದರು ಎಂಬ ಕಾರಣಕ್ಕೆ ಎಲ್ಲರ ಮೇಲೂ ನಂಬಿಕೆ ಇರಿಸಿದರೆ ಆ ನಂತರ ಪರಿತಪಿಸುವಂತಾಗುತ್ತದೆ. ಉನ್ನತ ಶಿಕ್ಷಣಕ್ಕೆ ನಾನಾ ಬಗೆಯಲ್ಲಿ ಅಡೆತಡೆಗಳು ಎದುರಾಗಬಹುದು. ಗುರುವಿನ ಆರಾಧನೆ ಮಾಡಿ.

ಮೀನ

ವ್ಯಾಪಾರ ವಿಸ್ತರಣೆಗಾಗಿ ಆಲೋಚಿಸುತ್ತಿರುವವರು ಲಾಭ- ನಷ್ಟದ ಪ್ರಮಾಣ ಮತ್ತೊಮ್ಮೆ ಅಳೆದು- ತೂಗಿ ನೋಡಿ. ಕನಿಷ್ಠ ಶ್ರಮ ಹಾಕಿ, ಗರಿಷ್ಠ ಲಾಭ ಮಾಡುವುದು ಹೇಗೆ ಎಂಬ ಕಡೆಗೆ ನಿಮ್ಮ ಗಮನ ಇರಲಿದೆ. ಅಧಿಕಾರ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬದಲಾವಣೆಯ ಬಗ್ಗೆ ಮುನ್ಸೂಚನೆ ದೊರೆಯಲಿದೆ. ಈ ಹಿಂದೆಂದೋ ಮಾಡಿದ್ದ ಪ್ರಯತ್ನಗಳು ಈಗ ಫಲ ನೀಡುವುದಕ್ಕೆ ಆರಂಭಿಸುತ್ತವೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ನಿಮ್ಮಲ್ಲಿ ಉತ್ಸಾಹ ಹೆಚ್ಚಾಗಲಿದೆ. ವ್ಯವಹಾರ ನಿಮಿತ್ತವಾಗಿ ದೂರ ಪ್ರಯಾಣ ಮಾಡುವ ಯೋಗ ಇದೆ. ಡೇರಿ ವ್ಯಾಪಾರ ಮಾಡುವವರಿಗೆ ಪ್ರಭಾವಿಗಳ ಪರಿಚಯ ಆಗಲಿದೆ.

Read more...

English Summary

Weekly Rashi Bhavishya in Kannada (26 Apr to 2 May 2021): Get your weekly horoscope in Kannada based on your zodiac signs.