ನೀವು ಹುಟ್ಟಿದ ದಿನ ಹೇಳಿ, ನಿಮ್ಮ ಸ್ವಭಾವ ನಾವ್ ಹೇಳ್ತೀವಿ!


ಮುಂದುವರಿದ ಭಾಗ....

ಹುಟ್ಟಿದ ದಿನಾಂಕವನ್ನು ನೋಡಿ ವ್ಯಕ್ತಿಯ ಸ್ವಭಾವ ಹೇಳುವ ಸಂಖ್ಯಾಶಾಸ್ತ್ರದ ಕುರಿತ ಲೇಖನದ ಮುಂದುವರಿದ ಭಾಗ ಇದು.

ಹಿಂದಿನ ಲೇಖನದಲ್ಲಿ 1ರಿಂದ 15 ನೇ ತಾರೀಖಿನವರೆಗೆ ಹುಟ್ಟಿದ ವ್ಯಕ್ತಿಗಳ ಗುಣ ಸ್ವಭಾವದ ಬಗ್ಗೆ ಹೇಳಲಾಗಿತ್ತು. ಈ ಲೇಖನ 16-31 ನೇ ತಾರೀಖಿನವರೆಗೆ ಹುಟ್ಟಿದ ವ್ಯಕ್ತಿಗಳ ಗುಣ ಸ್ವಭಾವವನ್ನು ವಿವರಿಸಲಿದೆ.

ಜನ್ಮದಿನಾಂಕದ ಪ್ರಕಾರ ನಿಮ್ಮ ಗುಣ-ಸ್ವಭಾವ ಹೇಗೆ?

ಹಸ್ತರೇಖೆ ನೋಡಿ, ಮುಖ ನೋಡಿ, ಜಾತಕ ನೋಡಿ ಭವಿಷ್ಯ ಹೇಳುವುದು ಮಾಮೂಲು. ಆದರೆ ನಮ್ಮ ಜನ್ಮದಿನಾಂಕವನ್ನಷ್ಟೇ ನೋಡಿ ಗುಣ-ಸ್ವಭಾವವನ್ನೂ ಹೇಳಬಹುದು ಎಂದರೆ ಅಚ್ಚರಿಯಾಗಬಹುದು. ಆದರೆ ಸಂಖ್ಯಾಶಾಸ್ತ್ರದಲ್ಲಿ ಅದು ಸಾಧ್ಯವಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿದ ದಿನದ ಸಂಖ್ಯೆಯನ್ನು ಆಧರಿಸಿಯೇ ಆತನ ಗುಣ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದು.

ಹೆಸರಿನ ಮೊದಲ ಅಕ್ಷರದ ಪ್ರಕಾರ ನಿಮ್ಮ ಸ್ವಭಾವ ಏನು?

ಎಲ್ಲರಿಗೂ ಈ ಗುಣ ಸ್ವಭಾವಗಳು ಹೊಂದಿಕೆಯಾಗದಿರಬಹುದು. ಆದರೆ ಸಂಖ್ಯಾಶಾಸ್ತ್ರಜ್ಞರು ಹೇಳುವ ಪ್ರಕಾರ ಆಯಾ ದಿನಾಂಕದಂದು ಹುಟ್ಟಿದ ವ್ಯಕ್ತಿಗಳ ಗುಣಸ್ವಭಾವ ಹೀಗಿರುತ್ತದೆ....

ಒಂಟಿತನವಂದ್ರೆ ಇಷ್ಟ

16ನೇ ತಾರೀಖಿನಂದು ಹುಟ್ಟಿದವರು ಸದಾ ಒಂಟಿಯಾಗಿರಲು ಬಯಸುತ್ತಾರೆ. ಅವರಿಗೆ ಏಕಾಂಗಿತನವೆಂದರೆ ಇಷ್ಟ. ಯಾವುದೇ ಕೆಲಸವನ್ನಾದರೂ ಒಬ್ಬರೇ ಮಾಡುವುದರಲ್ಲಿ ಅವರಿಗೆ ಹೆಚ್ಚು ಆಸಕ್ತಿ. ಯಾವ ವಿಷಯದಲ್ಲೂ ಮತ್ತೊಬ್ಬರ ಮೇಲೆ ಅವಲಂಬಿತರಾಗಿರುವುದು ನಿಮಗೆ ಇಷ್ಟವಿಲ್ಲ. ನಿಮ್ಮ ಅತಿಯಾದ ಸ್ವಾಭಿಮಾನವೇ ಒಮ್ಮೊಮ್ಮೆ ನಿಮಗೆ ಮುಳುವಾಗಬಹುದು. ಯಾವ ಸಂಬಂಧವನ್ನೂ ಹೆಚ್ಚು ದಿನ ಕಾಯ್ದುಕೊಳ್ಳುವುದಕ್ಕೆ ನಿಮಗೆ ಸಾಧ್ಯವಿಲ್ಲ.

ನಿಮಗೆ ತಂತ್ರಜ್ಞಾನ ವಿಜ್ಞಾನಗಳಲ್ಲಿ ಆಸಕ್ತಿ, ಆ ಕ್ಷೇತ್ರದಲ್ಲಿ ಹೆಚ್ಚು ಜ್ಞಾನ ಬೆಳೆಸಿಕೊಳ್ಳುತ್ತೀರಿ. ಆದರೆ ಸದಾ ಒಂಟಿಯಾಗಿರುವ ನಿಮ್ಮ ಸ್ವಭಾವದಿಂದ ಕೆಲವೊಮ್ಮೆ ನಿಮಗೆ ದುಃಖ ಹಚ್ಚಿಕೊಳ್ಳುವುದಕ್ಕೂ ಯಾರೂ ಇಲ್ಲ ಅನ್ನಿಸಬಹುದು.

ಹಣಕಾಸಿನ ವಿಷಯದಲ್ಲಿ ಅದೃಷ್ಟವಂತರು

17ನೇ ತಾರೀಖು ಹುಟ್ಟಿದವರು ಹಣಕಾಸಿವ ವಿಷಯದಲ್ಲಿ ತುಂಬಾನೇ ಅದೃಷ್ಟವಂತರು. ಈ ತಾರೀಖಿನಂದು ಹುಟ್ತಿದವರಿಗೆ ಅತಿಯಾದ ವ್ಯವಹಾರ ಜ್ಞಾನವಿರುತ್ತದೆ. ವ್ಯಾವಹಾರಿಕ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸುಗಳಿಸುತ್ತಾರೆ. ನೀವು ಎಷ್ಟೇ ವ್ಯಾವಹಾರಿಕ ಸ್ವಭಾವದವರಾದರೂ ಪ್ರಾಮಾನಿಕತೆಗೆ ಮತ್ತು ನೈತಿಕತೆಗೆ ಸಾಕಷ್ಟು ಬೆಲೆ ನೀಡುತ್ತೀರಿ. ಅದೂ ಅಲ್ಲದೆ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳನ್ನು ಲೀಲಾಜಾಲವಾಗಿ ಮುಗಿಸಬಲ್ಲ ತಾಕತ್ತು ನಿಮಗಿರುತ್ತದೆ.

ನೀವು ಬಹಳ ಮಹತ್ವಾಕಾಂಕ್ಷಿಗಳು. ಮಾತ್ರವಲ್ಲ ಒಂದು ಗುರಿಯನ್ನಿಟ್ಟುಕೊಂದು ಅದರ ಸಾಧನೆಯ ಕುರಿತೇ ಯೋಚಿಸುವಂಥವರು. ನೀವು ಯಾರೊಂದಿಗೂ ಹೆಚ್ಚು ಬೆರೆಯುವುದಿಲ್ಲ. ನಿಮ್ಮ ಈ ಸ್ವಭಾವದಿಂದಾಗಿ ಹೆಚ್ಚು ಸ್ನೇಹಿತರನ್ನು ಗಳಿಸಿಕೊಳ್ಳುವುದು ಕಷ್ಟವಾಗಬ ಹುದು.

Mನಿಂದ Yಅಕ್ಷರದವರೆಗೆ ನಿಮ್ಮ ಹೆಸರು ಏನನ್ನು ಸೂಚಿಸುತ್ತದೆ?

ಅಸ್ತಿತ್ವದ ಬಗ್ಗೆ ಚಿಂತಿಸುವವರು

18 ನೇ ತಾರೀಖಿನಂದು ಹುಟ್ಟಿದವರು ಗುಂಪಿನಲ್ಲಿ ಕೆಲಸ ಮಾಡುವವರಾದರೂ, ತಮ್ಮದೇ ಆದ ಅಸ್ತಿತ್ವ ಗುರುತಿಸಿಕೊಳ್ಳಲು ಹೆಣಗುವವರು. ನಿಮ್ಮಲ್ಲಿ ಅತ್ಯುತ್ತಮ ವ್ಯವಸ್ಥಾಪಕರ ಗುಣವಿದೆ. ನೀವೊಬ್ಬ ಸಂಘಟಕರು. ನೀವು ಬಹಳ ವಿಶಾಲ ಮನೋಭಾವದವರು ಮತ್ತು ಶನಾಮಯಿ. ಜೊತೆಗೆ ಹೆಚ್ಚು ಹೆಚ್ಚು ಜನರೊಂದಿಗೆ ಬೆರೆಯುವವರು.

ನೀವು ಮತ್ತೊಬ್ಬರಿಗೆ ಆದರ್ಶವಾಗಬಲ್ಲ ಶಕ್ತಿ ಇರುವವರು. ಆದರೆ ನಿಮ್ಮ ಕೆಲವು ಭಾವನೆಗಳನ್ನು ಯಾರಿಗೂ ಹೇಳದೆ ಮನಸ್ಸಿನಲ್ಲೇ ಇಟ್ಟುಕೊಳ್ಳುತ್ತೀರಿ. ಜೊತೆಗೆ ನಿಮ್ಮ ವ್ಯಕ್ತಿತ್ವವೇನೋ ಅದೇ ಬೇರೆ ಮತ್ತು ನೀವು ಜನರಿಗೆ ತೋರಿಸಿಕೊಳ್ಳುವುದೇ ಬೇರೆ. ಕೆಲವೊಮ್ಮೆ ನಾಟಕೀಯವೆನ್ನಿಸಬಹುದು.

ಅದಮ್ಯ ಮನೋಬಲ

19 ನೇ ತಾರೀಖಿನಿಂದ ಹುಟ್ಟಿದವರಲ್ಲಿ ಅದಮ್ಯ ಮನೋಬಲವಿರುತ್ತದೆ. ಆತ್ಮವಿಶ್ವಾಸವೂ ಹೆಚ್ಚು. ಆದರೆ ಕೆಲವೊಮ್ಮೆ ಸ್ವಾರ್ಥಿಗಳಾಗಿ ಯೋಚಿಸುವುದೂ ಹೆಚ್ಚು. ನಿಮ್ಮದು ಬಹಳ ಸೂಕ್ಷ್ಮ ಮನಸ್ಸು. ಅಂತೆಯೇ ನಿಮ್ಮ ಭಾವನೆಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಲಾರಿರಿ.

ಕೆಲವೊಮ್ಮೆ ನೀವು ಮತ್ತೊಬ್ಬರ ಮೇಲೆ ದಬ್ಬಾಳಿಕೆ ಮಾಡುತ್ತೀರಿ ಎಂಬ ಭಾವನೆ ಹುಟ್ಟುವಂತೆ ವರ್ತಿಸುತ್ತೀರಿ. ನೀವು ಸಂಪ್ರದಾಯಗಳನ್ನು ಪಾಲಿಸಲಾರಿರಿ. ಬೇರೆಯವರ ಸಲಹೆಗೂ ಹೆಚ್ಚು ಬೆಲೆ ನೀಡಲಾರಿರಿ. ನಿಮ್ಮ ಅನುಭವದಿಂದಲೇ ಕಲಿಯುವ ಪಾಠದ ಬಗ್ಗೆ ನಿಮಗೆ ಹೆಚ್ಚು ಆಸ್ಥೆ. ಮದುವೆಯ ನಂತರವೂ ನಿಮ್ಮಲ್ಲಿ ಕೊಂಚ ಒಂಟಿತನದ ಭಾವ ಕಾಡುತ್ತಿರುತ್ತದೆ. ಬಹುಬೇಗನೇ ಕೋಪಗೊಳ್ಳುವ ಮತ್ತು ಬೇಸರಗೊಳ್ಳುವ ಸ್ವಭಾವದವರು ನೀವು.

ಸಂಖ್ಯೆ 3 ವ್ಯಕ್ತಿಗಳು: ಖುಷಿ-ನಗು ಕಾಂಬೋ, ಚಟುವಟಿಕೆ ಜಂಬೋ ಪ್ಯಾಕ್

ಸಾಮಾಜಿಕ ಜೀವಿಗಳು

20 ನೇ ತಾರೀಖಿನಂದು ಹುಟ್ಟಿದವರು ಬಹಳ ಭಾವನಾತ್ಮಕ ಮನಸ್ಥಿತಿಯವರು, ಬಹಳ ಸೂಕ್ಷ್ಮಮತಿಗಳು ಜೊತೆಗೆ ಓದುವುದರಲ್ಲಿ ಎಲ್ಲಿಲ್ಲದ ಆಸಕ್ತಿ. ಸದಾ ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯಲು ಬಯಸುವವರು. ಆದರೆ ತಮ್ಮಲ್ಲೇ ಕೆಲವು ಕಟ್ಟುಪಾಡುಗಳನ್ನು ಹಾಕಿಕೊಂಡಿರುವವರು. ಸ್ವಲ್ಪ ನರ್ವಸ್ ಆಗುವ ಸ್ವಭಾವವಿದ್ದರೂ, ದೊಡ್ಡ ದೊಡ್ಡ ಜನರನ್ನು ಎದುರಿಸುವ ಆತ್ಮವಿಶ್ವಾಸ ನಿಮ್ಮಲ್ಲಿದೆ.

ನೀವು ಸ್ವಭಾವತಃ ಕಠಿಣವಿಲ್ಲ. ಆದರೆ ಹೊರಗಿನವರಿಗೆ ನೀವು ತುಂಬಾ ಸ್ಟ್ರಿಕ್ಟ್ ಎಂಬಂತೆ ತೋರಿಸಿಕೊಳ್ಳುತ್ತೀರಿ. ಕುಟುಂಬದ ಬಗ್ಗೆ ಸಾಕಷ್ಟು ಕಾಳಜಿ ತೋರುತ್ತೀರಿ. ಎಷ್ಟು ಬೇಗ ಕೋಪ ತಾಳುತ್ತೀರೋ ಅಷ್ಟೇ ಬೇಗ ಅದನ್ನು ಮರೆತು ನಗುವ ಕಲೆ ನಿಮಗೆ ಕರಗತವಾಗಿದೆ. ನಿಮ್ಮ ಬೈಗುಳವೇನಿದ್ದರೂ ನಾಲಿಗೆಯ ಮೇಲಿನದೇ ಹೊರತು ಹೃದಯದಿಂದ ಬರುವಂಥದ್ದಲ್ಲ.

ಫಿನಿಕ್ಸ್ ನಂತೆ ಎದ್ದುಲಿನಿಲ್ಲುವವರು

21ನೇ ತಾರೀಖಿನಂದು ಹುಟ್ಟಿದವರು ಯಾವುದೇ ಅಡೆತಡೆಗಳನ್ನು ಮೀರಿ ಫಿನಿಕ್ಸ್ ನಂತೆ ಎದ್ದುನಿಲ್ಲುವ ತಾಕತ್ತಿರುವವರು. ದೈಹಿಕವಾಗಿಯೂ, ಮಾನಸಿಕವಾಗಿಯೂ ನೀವು ಬಹಳ ಗಟ್ಟಿ. ನಿಮ್ಮ ಸ್ವಭಾವದಲ್ಲಿ ತಾಳ್ಮೆಯೆಂಬುದೇ ಇಲ್ಲ. ಎಷ್ಟೋ ಸಣ್ಣ ಪುಟ್ಟ ವಿಷಯಗಳನ್ನೂ ಮನಸ್ಸಿಗೆ ಹಚ್ಚಿಕೊಳ್ಳುತ್ತೀರಿ. ಸುಲಭವಾಗಿ ಬಗೆಹರಿಸಿಕೊಳ್ಳುವ ಸಮಸ್ಯೆಯನ್ನೂ ಸಂಕೀರ್ಣವಾಗಿ ನೋಡುತ್ತೀರಿ. ಆದರೆ ಎಷ್ಟೇ ಕಷ್ಟಗಳು ಬಂದರೂ ಅವನ್ನೆಲ್ಲ ಎದುರಿಸಿ, ಸೋಲನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ನಿಮಗಿದೆ.

ನಿಮಗೆ ಜೀವನದ ಪ್ರತಿಯೊಂದು ವಿಷಯಗಳಲ್ಲೂ ಆಸಕ್ತಿ, ಕುತೂಹಲ. ಹೊಸದನ್ನು ತಿಳಿದುಕೊಳ್ಳಲು ಸದಾ ಸಿದ್ಧ ನೀವು. ಉತ್ತಮ ಮಾತುಗಾರಿಕೆ, ಕಾಲ್ಪನಿಕ ಶಕ್ತಿಯಿಂದಾಗಿ ನೀವು ಸಾಕಷ್ಟು ಜನರ ಸ್ನೇಹ ಗಳಿಸುತ್ತೀರಿ.

ಶ್ರಮಜೀವಿಗಳು ಇವರು

22ನೇ ತಾರೀಖಿನಂದು ಹುಟ್ಟಿದವರು ಶ್ರಮಜೀವಿಗಳು. ಎಂದಿಗೂ ದೊಡ್ಡ ದೊಡ್ಡ ಕೆಲಸಕ್ಕೇ ಕೈಹಾಕುವವರು. ಬದುಕಿನಲ್ಲಿ ರಿಸ್ಕ್ ತೆಗೆದುಕೊಳ್ಳಬೇಕು ಎಂದು ಬಯಸುವವರು. ಆದರೆ ತಮ್ಮ ಮಹತ್ವಾಕಾಂಕ್ಷೆಗಳನ್ನು ಯಾರಿಗೂ ಹೇಳುವವರಲ್ಲ. ತಮ್ಮ ಗುರಿಯನ್ನು ಮನಸ್ಸಿನಲ್ಲೇ ಇಟ್ಟುಕೊಂಡಿರುವವರು. ಆದರ್ಶವಾದಿಗಳು.

ಯಾವುದೇ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ನಿಮ್ಮಲ್ಲಿರುತ್ತದೆ, ಯಾವುದನ್ನೂ ಕಾಟಾಚಾರಕ್ಕಾಗಿ ಮಾಡುವವರು ನೀವಲ್ಲ. ಒಂಥರಾ ಪರಿಪೂರ್ಣತೆ ಬಯಸುವವರು. ದೊಡ್ಡ ದೊಡ್ಡ ಕೆಲಸವನ್ನು ಒಪ್ಪಿಕೊಳ್ಳುವುದರಿಂದಾಗಿ ನಿಮಗೆ ಕೆಲವೊಮ್ಮೆ ಟೆನ್ಷನ್ ಕಾಡಬಹುದು.

ಜನರೆಂದರೆ ಪ್ರೀತಿ

23ನೇ ತಾರೀಖು ಹುಟ್ಟಿದವರು ಸದಾ ಜನರೊಂದಿಗೇ ಇರಲು ಬಯಸುವವರು. ಅವರಿಗೆ ಒಂಟಿಯಾಗಿರುವುದು ಇಷ್ಟವಿಲ್ಲ. ಬಹಳ ಪ್ರತಿಭಾನ್ವಿತರು. ಆದ್ದರಿಂದ ಜನರನ್ನು ಬಹುಬೇಗನೇ ಇಂಪ್ರೆಸ್ ಮಾಡಬಲ್ಲ ಇವರು, ಸದಾ ಹೊಸ ಹೊಸ ಕೆಲಸಕ್ಕೆ ಕೈಹಾಕುವವರು.

ಪ್ರವಾಸ ಅಂದ್ರೆ ಎಲ್ಲಿಲ್ಲದ ಇಷ್ಟ. ಅತ್ಯುತ್ತಮ ಕಾಲ್ಪನಿಕ ಶಕ್ತಿ ನಿಮಗೆ ಸಂದ ವರ. ಯಾವುದೇ ಸನ್ನಿವೇಶವನ್ನು ಬಹುಬೇಗನೇ ಅರ್ಥಮಾಡಿಕೊಂದು, ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುವುದರಲ್ಲಿ ನೀವು ನಿಸ್ಸೀಮರು. ಕೆಲವೊಮ್ಮೆ ನಿಮ್ಮ ಸ್ವಭಾವ ತೀರಾ ಅವಸರ ಎನ್ನಿಸಬಹುದು. ಸದಾ ಜನರೊಂದಿಗೆ ಇರಲು ಬಯಸುವ ನಿಮಗೆ ಕೆಲವು ಸಂದರ್ಭದಲ್ಲಿ ಒಂಟಿಯಾಗಿರಬೇಕಾದಾಗ ಜೀವನವೇ ಬೇಸರ ಅನ್ನಿಸಬಹುದು.

ಸೌಹಾರ್ದತೆ ಬಯಸುವವರು

24 ನೇ ತಾರೀಖಿನಂದು ಹುಟ್ಟಿದವರು ತಮ್ಮವರ ಬಗ್ಗೆ ತೀರಾ ಕಾಳಜಿ ತೋರುವವರು. ಜೊತೆಗೆ ಸದಾ ಎಲ್ಲರೊಂದಿಗೆ ಒಡನಾಡಲು ಬಯಸುವವರು. ಇವರಿಗೆ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವುದಂದ್ರೆ ಇಷ್ಟವಿಲ್ಲ. ಎಲ್ಲವೂ ಸುಲಭವಾಗಿ ನಡೆದುಬಿಡಬೇಕು ಎಂಬ ಪ್ರವೃತ್ತಿ. ಆದರೆ ಬಹಳ ಶಿಸ್ತಿನ ಮನುಷ್ಯರು.

ಸಮಯಕ್ಕೆ ಬಹಳ ಬೆಲೆ ನೀಡುವವರು. ಒಂದೇ ಕೆಲಸವನ್ನು ಪದೇ ಪದೇ ಮಾಡುವುದು ನಿಮಗೆ ಇಷ್ಟವಿಲ್ಲ. ಜೀವನದಲ್ಲಿ ಆಗಾಗ ಬದಲಾವಣೆ ಬೇಕು ಎಂದು ಹಪಹಪಿಸುತ್ತೀರಿ. ಈ ಹಪಾಹಪಿಯ ನಡುವಲ್ಲಿ ವರ್ತಮಾನವನ್ನು ಅನುಭವಿಸುವುದು ನಿಮಗೆ ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಿಮ್ಮ ಜೊತೆ ಇರುವವರಿಗೆ ಕಿರಿಕಿರಿಯಾಗಬಹುದು.

ತಾರ್ಕಿಕ ನಿರ್ಧಾರ ತೆಗೆದುಕೊಳ್ಳುವವರು

25 ನೇ ತಾರೀಖಿನಂದು ಹುಟ್ಟಿದವರು ಸದಾ ತಾರ್ಕಿಕ ನಿರ್ಧಾರ ತೆಗೆದುಕೊಳ್ಳುವವರು. ತಂತ್ರಜ್ಞಾನ, ವಿಜ್ಞಾನ ಇಇನ್ನಿತರ ಎಲ್ಲಾ ಕ್ಷೇತ್ರಗಳಲ್ಲೂ ನಿಮಗೆ ಸಾಕಷ್ಟು ಜ್ಞಾನವಿದೆ. ನಿಮ್ಮಲ್ಲಿ ಆಳವಾದ ಜ್ಞಾನವಿದೆ. ಆದರೆ ಅನ್ನು ಮತ್ತೊಬ್ಬರಿಗೆ ತೋರಿಸಿಕೊಳ್ಳುವವರು ನೀವಲ್ಲ. ನಿಮಗೆ ತೋರ್ಗಾಣಿಕೆ ಇಷ್ಟವಿಲ್ಲ. ಸರಳ ಬದುಕನ್ನು ಬಯಸುವವರು.

ಎಲ್ಲಾ ಸಂದರ್ಭಗಳಿಗೂ ಹೊಂದಿಕೊಳ್ಳುವ ಸ್ವಭಾವದವರು ನೀವಲ್ಲ. ನಿಮಗೆ ನೀವಂದುಕೊಂಡಂತೇ ಆಗಬೇಕು ಎಂಬ ಹಠವಿದೆ. ಸ್ನೇಹಿತರನ್ನು ಮಾಡಿಕೊಳ್ಳುವಾಗಲೂ ನೀವು ಕೆಲವರನ್ನಷ್ಟೇ ಆಯ್ದುಕೊಳ್ಳುತ್ತೀರಿ.

ಉತ್ತಮ ಕೆಲಸಗಾರರು

26 ನೇ ತಾರೀಖಿನಂದು ಹುಟ್ಟಿದವರು ಯಾವುದೇ ಕೆಲಸವನ್ನಾದರೂ ಪರಿಪೂರ್ಣವಾಗಿ ಮಾಡುವವರು. ಮಾಡುವ ಕೆಲಸ ಮುಗಿಸುವವರೆಗೂ ನೆಮ್ಮದಿಯಲ್ಲ ಇವರಿಗೆ. ಉದ್ಯಮ ರಂಗದಲ್ಲಿ ಅತ್ಯುತ್ತಮ ಯಶಸ್ಸು ಗಳಿಸಬಲ್ಲವರು.

ಕೆಲಸ ಮಾಡುವುದಕ್ಕೆ ಸೋಮಾರಿತನವಿಲ್ಲವೇ ಇಲ್ಲ. ಯಾವುದೇ ಕೆಲಸವಿರಲಿ ಅದನ್ನು ಇಷ್ಟಪಟ್ಟು ಮಾಡುತ್ತೀರಿ. ನಿಮ್ಮ ವೈಯಕ್ತಿಕ ಬದುಕಿಗಿಂತ ಹೆಚ್ಚು ಮಹತ್ವವನ್ನು ವೃತ್ತಿ ಬದುಕಿಗೆ ಕೊಡುತ್ತೀರಿ. ತೀರಾ ಕಷ್ಟಪಟ್ಟು ಮುಂದೆಬಂದವರು ನೀವು. ಆದ್ದರಿಂದ ಜೀವನ ನಿಮಗೆ ಅರ್ಥವಾಗಿದೆ. ಮತ್ತೊಬ್ಬರ ಕಷ್ಟವನ್ನೂ ಅಷ್ಟೇ ಬೇಗ ಅರ್ಥಮಾಡಿಕೊಳ್ಳಬಲ್ಲಿರಿ.

ನಿಸ್ವಾರ್ಥಿಗಳು

27 ನೇ ತಾರೀಖಿನಂದು ಹುಟ್ಟಿದವರು ನಿಸ್ವಾರ್ಥಿಗಳು, ಎಂದಿಗೂ ಮತ್ತೊಬ್ಬರಿಗೆ ನೆರವು ನೀಡುವ ಸ್ವಭಾವದವರು. ಇದೇ ಕೆಲವು ಬಾರಿ ನಿಮ್ಮ ದೌರ್ಬಲ್ಯವಾಗಬಹುದು. ನೀವು ಉದಾರ ಮನಸ್ಸಿನವರು ಮತ್ತು ತಾಳ್ಮೆಯುಳ್ಳವರು. ಕೆಲವೊಮ್ಮೆ ನಿಮಗೆ ಇಷ್ಟವಿಲ್ಲದ ಕೆಲಸ ಮಾಡಲು ನಿಮಗೆ ಒತ್ತಡ ಬರಬಹುದು. ಇದರಿಂದ ನಿಮ್ಮ ಮನಸ್ಸಿಗೆ ನೋವಾಗಬಹುದು.

ನಿಮ್ಮ ಮೃದು ಸ್ವಭಾವವನ್ನೇ ಕೆಲವರು 'ಟೇಕನ್ ಫಾರ್ ಗ್ರಾಂಟೆಡ್' ಎನ್ನುವಂತೆ ನೋಡಬಹುದು. ಇದರಿಂದ ನಿಮ್ಮ ಮನಸ್ಸಿಗೆ ಘಾಸಿಯಾಗುತ್ತದೆ. ಅಂಥ ಸಂದರ್ಭಕ್ಕೆ ಅವಕಾಶ ಕೊಡಬಾರದು ಎಂದ ನೀವು ಹೆಣಗುತ್ತೀರಿ, ಬದಲಾಗಲು ಬಹಳ ಪ್ರಯತ್ನಿಸುತ್ತೀರಿ, ತಕ್ಕ ಪಟ್ಟಿಗೆ ಯಶಸ್ವಿಯೂ ಆಗುತ್ತೀರಿ.

ಸ್ವತಂತ್ರ ಬದುಕು ಬಯಸುವವರು

28ನೇ ತಾರೀಖಿನಂದು ಹುಟ್ಟಿದವರು ಸ್ವತಂತ್ರ ಬದುಕು ಬಯಸುವವರು. ನಿಮ್ಮಲ್ಲಿ ಅತ್ಯುತ್ತಮವಾದ ನಾಯಕತ್ವದ ಗುಣವಿದೆ. ಅದು ನಿಮಗೆ ಸಾಕಷ್ಟು ಜನಮನ್ನಣೆ ತಂದುಕೊಡುತ್ತದೆ. ಯಾವುದೇ ಕೆಲಸವನ್ನು ಹಿಡಿದರೆ ಅದು ಮುಗಿಯುವವರೆಗೂ ಪಟ್ಟುಬಿಡದೆ ಮಾಡುವ ಮನಸ್ಥಿತಿ ನಿಮ್ಮದು.

ಆದರ್ಶ ನಂಬಿ ನಡೆವವರು

29 ನೇ ತಾರೀಖಿನಂದು ಹುಟ್ಟಿದವರು ಆದರ್ಶ ನಂಬಿ ನಡೆವವರು. ಇವರಿಗೆ ಜಗತ್ತಿನಲ್ಲಿ ಯಾರು ಏನಂದುಕೊಳ್ಳುತ್ತಾರೋ ಎಂಬ ಭಯವಿಲ್ಲ. ತಾವು ನಂಬಿದ್ದ ಆದರ್ಶವನ್ನಷ್ಟೇ ಅನುಸರಿಸುವವರು. ಉದ್ಯಮ ಜಗತ್ತಿನಲ್ಲಿ ಇವರಿಗೆ ಯಾವುದೇ ಯಶಸ್ಸು ಸಿಗುವುದು ಕಷ್ಟ. ಅತ್ಯುತ್ತಮ ಪ್ರತಿಭಾನ್ವಿತರಾದರೂ ಉದ್ಯಮ ರಂಗದಲ್ಲಿ ಕೈಸುಟ್ಟುಕೊಳ್ಳಬೇಕಾಗಬಹುದು.

ನೀವು ಸದಾ ಜನರಿಂದ ಹೊಗಳಿಕೆಗೆ ಒಳಗಾಗುತ್ತೀರಿ. ಈ ಹೊಗಳಿಕೆಯಿಂದ ಉಬ್ಬುತ್ತೀರಿ. ಕೆಲವೊಮ್ಮೆ ನಿಮ್ಮ ಈ ಸ್ವಭಾವ ತಿಳಿದು, ನಿಮಿಂದ ಕೆಲಸವಾಗಬೇಕು ಎಂಬ ಕಾರಣಕ್ಕೆ ನಿಮ್ಮನ್ನು ಜನರು ಹೊಗಳುವುದನ್ನೂ ಆರಂಭಿಸಬಹುದು. ಇದು ನಿಮಗೆ ಕ್ರಮೇಣ ಅರಿವಿಗೆ ಬರುತ್ತದೆ.

ನಿರೀಕ್ಷೆಗಳು ಜಾಸ್ತಿ

30ನೇ ತಾರೀಖಿನಂದು ಹುಟ್ಟಿದವರಿಗೆ ನಿರೀಕ್ಷೆಗಳು ಜಾಸ್ತಿ. ಮತ್ತೊಬ್ಬರು ತಮ್ಮ ಮೇಲಿನ ಪ್ರೀತಿಯನ್ನು ತೋರಿಸಲಿ ಎಂದು ಬಯಸುವವರು. ಜೊತೆಗೆ ತಮ್ಮ ಭಾವನೆಗಳನ್ನೂ ಅತ್ಯಂತ ಸೂಕ್ತವಾಗಿ ವ್ಯಕ್ತಪಡಿಸಬಲ್ಲಂಥವರು. ಕೆಲವೊಮ್ಮೆ ನಿಮ್ಮ ವರ್ತನೆ ನಾಟಕೀಯ ಅನ್ನಿಸಬಹುದು. ಅತ್ಯುತ್ತಮ ಕಥೆಗಾರರೂ ಹೌದು.

ಆನೆ ನಡೆದಿದ್ದೇ ಹಾದಿ ಎಂಬ ಮಾತಿದೆ. ನೀವೂ ಹಾಗೆಯೇ. ನಿಮ್ಮದೇ ಹೊಸ ಪಥ ಹುಡುಕಿಕೊಳ್ಳುವ ಸಾಮರ್ಥ್ಯ ಇರುವವರು. ಯಾವ ವಿಷಯದಲ್ಲೂ ಮತ್ತೊಬ್ಬರ ನೆರವಿನ ಅಗತ್ಯ ನಿಮಗಿಲ್ಲ, ಸ್ವಸಾಮರ್ಥ್ಯದ ಬಗ್ಗೆ ನಂಬಿಕೆ ಉಳ್ಳವರು.

ಅತ್ಯುತ್ತಮ ಸಂಘಟಕರು

31 ನೇ ತಾರೀಖಿನಂದು ಹುಟ್ಟಿದವರು ಅತ್ಯುತ್ತಮ ಸಮಘಟಕರು. ಉದ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಯಶಸ್ಸು ಗಳಿಸಬಲ್ಲವರು. ಬಹಳ ಶಾಂತ ಮತ್ತು ತಾಳ್ಮೆಯ ಸ್ವಭಾವ ನಿಮ್ಮ ಬಲವೂ ಹೌದು, ಕೆಲವೊಮ್ಮೆ ದೌರ್ಬಲ್ಯವೂ ಹೌದು! ನೀವು ಯಾವ ವಿಷಯವನ್ನೂ ನಿಖರ ಮಾಹಿತಿ ಇಲ್ಲದೆ ನಂಬಲಾರಿರಿ.

ಆದರೆ ನೀವು ಪ್ರಾಮಾಣಿಕರು. ನಿಮಗೆ ಮತ್ತೊಬ್ಬರನ್ನು ಇಂಪ್ರೆಸ್ ಮಾಡುವ ಅಗತ್ಯವಿಲ್ಲ. ಆದರೆ ನಿಮಮ್ ಪ್ರಾಮಾಣಿಕ ಮಾತೂ ಕೆಲವೊಮ್ಮೆ ನಾಟಕೀಯ ಅನ್ನಿಸಿ ಪೇಚಿಗೆ ಸಲುಕಿಕೊಳ್ಳಬಹುದು.

Have a great day!
Read more...

English Summary

How is your nature according to your date of birth? Here is a story based on numerology which shows your nature by studying your date of birth. Tell us your date of birth, we will decode your nature,