ಜನ್ಮದಿನಾಂಕದ ಪ್ರಕಾರ ನಿಮ್ಮ ಗುಣ-ಸ್ವಭಾವ ಹೇಗೆ?


ಹಸ್ತರೇಖೆ ನೋಡಿ, ಮುಖ ನೋಡಿ, ಜಾತಕ ನೋಡಿ ಭವಿಷ್ಯ ಹೇಳುವುದು ಮಾಮೂಲು. ಆದರೆ ನಮ್ಮ ಜನ್ಮದಿನಾಂಕವನ್ನಷ್ಟೇ ನೋಡಿ ಗುಣ-ಸ್ವಭಾವವನ್ನೂ ಹೇಳಬಹುದು ಎಂಮದರೆ ಅಚ್ಚರಿಯಾಗಬಹುದು. ಆದರೆ ಸಂಖ್ಯಾಶಾಸ್ತ್ರದಲ್ಲಿ ಅದು ಸಾಧ್ಯವಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಹುಟ್ಟಿದ ದಿನದ ಸಂಖ್ಯೆಯನ್ನು ಆಧರಿಸಿಯೇ ಆತನ ಗುಣ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದು.

1 ನೇ ದಿನಾಂಕದಂದು ಹುಟ್ಟಿದವರಲ್ಲಿ ಅತ್ಯುತ್ತಮವಾದ ನಾಯಕತ್ವದ ಗುಣ, 2 ನೇ ತಾರೀಖಿನಂದು ಹುಟ್ಟಿದವರು ಸಾಕಷ್ಟು ಭಾವುಕ ಜೀವಗಳು, ಸದಾ ತಮ್ಮ ಬದುಕಿನಲ್ಲಿ ಹುರುಪನ್ನು ಉಳಿಸಿಕೊಳ್ಳುವವರೆಂದರೆ 3 ನೇ ತಾರೀಖಿನಿಂದು ಜನಿಸಿದವರು, ನಾಲ್ಕನೇ ತಾರೀಖಿನಂದು ಹುಟ್ಟಿದವರಲ್ಲಿ ಉತ್ತಮ ಮುಂದಾಳುವಾಗಬಲ್ಲ ಶಕ್ತಿ ಇರುತ್ತದೆ...

ಹೆಸರಿನ ಮೊದಲ ಅಕ್ಷರದ ಪ್ರಕಾರ ನಿಮ್ಮ ಸ್ವಭಾವ ಏನು?

ಹೀಗೆ 1 ರಿಂದ 31 ನೇ ದಿನಾಂಕದವರೆಗೆ ಯಾವ ದಿನದಂದು ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬ ಮಾಹಿತಿ ಇಲ್ಲಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಸಿಕ್ಕ ಮಾಹಿತಿ ಇದು. ಎಲ್ಲರಿಗೂ ಈ ಗುಣ ಸ್ವಭಾವಗಳು ಹೊಂದಿಕೆಯಾಗದಿರಬಹುದು. ಆದರೆ ಸಂಖ್ಯಾಶಾಸ್ತ್ರಜ್ಞರು ಹೇಳುವ ಪ್ರಕಾರ ನೀವು ಹುಟ್ಟಿದ ದಿನಾಂಕದ ಪ್ರಕಾರ ನಿಮ್ಮ ಗುಣ ಸ್ವಭಾವ ಹೇಗಿರುತ್ತೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಅತ್ಯುತ್ತಮವಾದ ನಾಯಕತ್ವದ ಗುಣ

1 ನೇ ದಿನಾಂಕದಂದು ಹುಟ್ಟಿದವರಲ್ಲಿ ಅತ್ಯುತ್ತಮವಾದ ನಾಯಕತ್ವದ ಗುಣ ಇರುತ್ತದೆ. ಅತ್ಯದ್ಭುತ ಮನೋಬಲ ಮತ್ತು ಆತ್ಮವಿಶ್ವಾಸ ಇವರ ಬಲ. ನೀವು ಬಹಳ ಸೂಕ್ಷ್ಮವಾಗಿರುತ್ತೀರಿ. ಆದರೆ ನೀವು ನಿಮ್ಮ ಭಾವನೆಗಳನ್ನು ಎಂದಿಗೂ ಮನಸ್ಸಿನಲ್ಲೇ ಇಟ್ಟುಕೊಂಡಿರುತ್ತೀರಿ.

ಸ್ನೇಹಜೀವಿ. ಎಲ್ಲರೊಂದಿಗೂ ಸುಲಭವಾಗಿ ಬೆರೆಯುವ ಸ್ವಭಾವ ನಿಮ್ಮದು. ಎಷ್ಟೇ ಶ್ರೀಮಂತಿಕೆಯಿದ್ದರೂ ಗರ್ವಪಡದೆ, ತೀರಾ ಸರಳ ವ್ಯಕ್ತಿಯಂತೆ ಬದುಕುವುದಕ್ಕೆ ಇಷ್ಟಪಡುವವರು ನೀವು. ಹಣದ ಹಿಂದೆ ಓಡುವುದು ನಿಮಗೆ ಇಷ್ಟವಿಲ್ಲದ ಕೆಲಸ. ಬದುಕಿನಲ್ಲಿ ನೆಮ್ಮದಿ ಮುಖ್ಯ ಎಂಬುದು ನಿಮ್ಮ ನಿಲುವು.

Mನಿಂದ Yಅಕ್ಷರದವರೆಗೆ ನಿಮ್ಮ ಹೆಸರು ಏನನ್ನು ಸೂಚಿಸುತ್ತದೆ?

ಸಾಕಷ್ಟು ಭಾವುಕ ಜೀವಿಗಳು

2 ನೇ ತಾರೀಖಿನಂದು ಹುಟ್ಟಿದವರು ಸಾಕಷ್ಟು ಭಾವುಕ ಜೀವಿಗಳು. ಅವರ ಮನಸ್ಸು ತುಂಬಾ ಸೂಕ್ಷ್ಮ. ಜೊತೆಗೆ ಮೃದು ಹೃದಯಿಗಳು. ಇವರ ಮೇಲೆ ಯಾರಾದರೂ ಅಕ್ಕರೆ ತೋರಿದರೆ ಕರಗಿಬಿಡುತ್ತಾರೆ. ಜೊತೆಗೆ ಹೆಚ್ಚು ಹೆಚ್ಚು ಸ್ನೇಹಿತರನ್ನು ಮಾಡಿಕೊಳ್ಳುವುದಂದ್ರೆ ಇವರಿಗೆ ಸಖತ್ ಇಷ್ಟ.

ಮೋಸ ಹೋಗುವ ಸಂಭವವೂ ಹೆಚ್ಚು. ಮತ್ತೊಬ್ಬರನ್ನು ಬಹುಬೇಗನೇ ನಂಬುವ ನಿಮ್ಮ ಸ್ವಭಾವವನೇ ಬೇರೆಯವರಿಗೆ ನಿಮ್ಮ ದೌರ್ಬಲ್ಯವಾಗಿ ಕಾಣಬಹುದು. ಸಣ್ಣ-ಪುಟ್ಟ ವಿಷಯವನ್ನೂಭಾವನಾತ್ಮಕವಾಗಿ ಯೋಚಿಸುವ ನಿಮ್ಮ ಸ್ವಭಾವದಿಂದ ಕೆಲವು ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಿಮಗೆ ಕಷ್ಟವೆನ್ನಿಸಬಹುದು.

ಸಂಖ್ಯೆ 3 ವ್ಯಕ್ತಿಗಳು: ಖುಷಿ-ನಗು ಕಾಂಬೋ, ಚಟುವಟಿಕೆ ಜಂಬೋ ಪ್ಯಾಕ್

ಬದುಕಿನಲ್ಲಿ ಹುರುಪನ್ನು ಉಳಿಸಿಕೊಳ್ಳುವವರು

ಸದಾ ತಮ್ಮ ಬದುಕಿನಲ್ಲಿ ಹುರುಪನ್ನು ಉಳಿಸಿಕೊಳ್ಳುವವರೆಂದರೆ 3 ನೇ ತಾರೀಖಿನಿಂದು ಜನಿಸಿದವರು. ದೈಹಿಕ ಮತ್ತು ಮಾನಸಿಕ ದೌರ್ಬಲ್ಯಗಳಿಂದ ಬಹುಬೇಗನೇ ಚೇತರಿಸಿಕೊಳ್ಳುವ ತಾಕತ್ತಿರುವವರು ಇವರು. ಯಾವಾಗಲೂ ಅವಿಶ್ರಾಂತವಾಗಿ ದುಡಿಯುವ ಇವರು, ಸುಲಭವಾಗಿ ಪರಿಹರಿಸಿಕೊಳ್ಳುವಂಥದ್ದನ್ನೂ ಸಂಕೀರ್ಣಗೊಳಿಸಿಕೊಳ್ಳಬಲ್ಲರು.

ಸಾರ್ವಜನಿಕವಾಗಿ ಯಾರನ್ನೆ ಆದರೂ ಇಂಪ್ರೆಸ್ ಮಾಡಬಲ್ಲ ಶಕ್ತಿ ಇರುವವರು. ಬರವಣಿಗೆ, ಹಾಡುಗಾರಿಕೆಗಳಲ್ಲಿ ನಿಮ್ಮದು ಎತ್ತಿದ ಕೈ. ಉತ್ತಮ ವಾಗ್ಮಿಯೂ ಹೌದು. ಆದರೆ ಕೆಲವೊಮ್ಮೆ ನೀವು ತುಂಬಾ ಸೂಕ್ಷ್ಮವಾಗಿ ವರ್ತಿಸುತ್ತೀರಿ. ಎಲ್ಲಾ ವಿಷಯಗಳ ಬಗ್ಗೆಯೂ ಅದಮ್ಯ ಉತ್ಸಾಹ ನಿಮ್ಮನ್ನು ಸದಾ ಚಲನಶೀಲವಾಗಿಡುತ್ತದೆ ಮತ್ತು ನಾಲ್ಕು ಜನರೆದುರು ಗುರುತಿಸಿಕೊಳ್ಳುವಂತೆ ಮಾಡುತ್ತದೆ.

ಉತ್ತಮ ಮುಂದಾಳು

ಈ ದಿನ ಹುಟ್ಟಿದವರಿಗೆ ಉತ್ತಮ ಮುಂದಾಳುವಾಗಬಲ್ಲ ಶಕ್ತಿ ಇರುತ್ತದೆ. ಬಹಳ ಶಿಸ್ತಿನ ಮನುಷ್ಯರು. ಜೊತೆಗೆ ಜವಾಬ್ದಾರಿಯುತವಾಗಿ ಕೆಲಸ ಮಾಡುವವರು. ನೀವು ಗಂಭೀರ ಮತ್ತು ಅತೀ ಹೆಚ್ಚು ಕೆಲಸ ಮಾಡುವವರು. ನಿಮ್ಮ ಎಷ್ಟೋ ಭಾವನೆಗಳನ್ನು ಮನಸ್ಸಿನಲ್ಲೇ ಇಟ್ಟುಕೊಡಿರುತ್ತೀರಿ.

ತೀರಾ ಆತ್ಮಿಯರೆದುರು ಮಾತ್ರವೇ ನಿಮ್ಮ ಮನಸ್ಸನ್ನು ಖಾಲಿ ಮಾಡಿಕೊಳ್ಳಲು ಬಯಸುತ್ತೀರಿ. ಮುಂಗೋಪಿಯಾದರೂ ಬಹುಬೇಗನೇ ನಿಮ್ಮನ್ನು ತಪ್ಪಿಗೆ ಪಶ್ಚಾತ್ತಾಪ ಪಡುವ ಸ್ವಭಾವ ನಿಮ್ಮದು. ಅದಕ್ಕಾಗಿ ತಕ್ಷಣವೇ ಕ್ಷಮೆ ಕೇಳುವ ಉದಾರತೆಯನ್ನೂ ತೋರಿಸುತ್ತೀರಿ.

ಸಾಮಾಜಿಕ ಜೀವಿ

ಐದನೇ ತಾರೀಖಿನಂದು ಹುಟ್ಟಿದವರು ಜನರೊಂದಿಗೆ ಬೆರೆಯುವುದು ಹೇಗೆ ಮತ್ತು ಸಾಮಾಜಿಕ ಜೀವಿಯಾಗಿ ಬದುಕುವುದು ಹೇಗೆ ಎಂಬುದನ್ನು ಕರಗತ ಮಾಡಿಕೊಂಡವರು. ಇವರು ಆಲ್ ರೌಂಡರ್ ಸಹ. ಅತ್ಯುತ್ತಮ ಬುದ್ಧಿಮತ್ತೆ ಅವರಿಗೆ ಸಂದ ವರ. ಸದಾ ಓಡಾಟ, ಪ್ರವಾಸದಲ್ಲಿರುವುದೆಂದರೆ ಅಚ್ಚುಮೆಚ್ಚು. ಬೇಗನೇ ಹೊಂದಿಕೊಳ್ಳುವ ಸ್ವಭಾವ ಇವರದು.

ಕಲ್ಪನಾಶಕ್ತಿಯ ಮೂಲಕ ಹೊಸ ಹೊಸ ಆಲೋಚನೆಗಳಿಗೆ ಮುನ್ನುಡಿ ಬರೆಯುವವರು. ಸದಾ ಅವಿಶ್ರಾಂತವಾಗಿರುವ ನಿಮ್ಮ ಸ್ವಭಾವ ಕೆಲವೊಮ್ಮೆ ತಾಳ್ಮೆಯಿಲ್ಲದವರು ಎನ್ನಿಸಬಹುದು. ಪ್ರತಿದಿನವೂ ಒಂದೇ ಕೆಲಸ ಮಾಡುವುದೆಂದರೆ ನಿಮಗೆ ಬೋರು. ಆದ್ದರಿಂದ ಒಂದು ಕಡೆ ಬಹಳ ಹೊತ್ತು ನಿಲ್ಲುವುದು ನಿಮಗೆ ಸಾಧ್ಯವಿಲ್ಲ, ನಿಮ್ಮ ಈ ಸ್ವಭಾವ ಚಂಚಲಚಿತ್ತ ಎಂದು ಹಲವರಿಗೆ ಅನ್ನಿಸಿರಲಿಕ್ಕೆ ಸಾಕು!

ಜವಾಬ್ದಾರಿ ಹೊತ್ತವರು

ಆರನೇ ತಾರೀಖಿನಂದು ಹುಟ್ಟಿದವರು ಸಾಕಷ್ಟು ಜವಾಬ್ದಾರಿಯನ್ನು ಹೊತ್ತವರು. ನೆರವು ನೀಡುವುದರಲ್ಲಿ ಎತ್ತಿದ ಕೈ. ಮತ್ತೊಬ್ಬರನ್ನು ಬಹುಬೇಗನೇ ಅರ್ಥಮಾಡಿಕೊಳ್ಳುವ ಸೂಕ್ಷ್ಮಮತಿಗಳು. ಈ ದಿನಾಂಕದಂದು ಹುಟ್ಟಿದವರು ತಮ್ಮ ಕುಟುಂಬ, ಸ್ನೇಹಿತರು ಮತ್ತು ಎಲ್ಲರೊಂದಿಗೂ ತುಂಬಾ ಪ್ರಾಮಾಣಿಕವಾಗಿರುತ್ತಾರೆ.

ತಮ್ಮ ಕುಟುಂಬದ ಬಗ್ಗೆ ಅತಿಯಾದ ಕಾಳಜಿ ಇವರಿಗೆ. ಪ್ರತಿಭೆ ಸಾಕಷ್ಟಿದ್ದರೂ ಅದನ್ನು ಬಳಸಿಕೊಳ್ಳುವಲ್ಲಿ ಸೋಮಾರಿತನ. ಜೀವನ ತಾವಂದುಕೊಂಡಂತೆ, ಯಾವ ತಾಪತ್ರಯವಿಲ್ಲದೆ ಸಾಗಬೇಕು ಎಂಬ ಪ್ರವೃತ್ತಿಯವರು. ಅಂದುಕೊಂಡಿದ್ದನ್ನು ಮಾಡಲೇ ಬೇಕು ಎಂಬ ಸ್ವಭಾವ. ನಿಮ್ಮ ಸಾಮರ್ಥ್ಯದ ಮೇಲೆ ಸಾಕಷ್ಟು ಆತ್ಮವಿಶ್ವಾಸ. ಸ್ವಲ್ಪಮಟ್ಟಿನ ಅಹಂ ನಿಮ್ಮನ್ನು ಹಲವು ಸಂಬಂಧಗಳಿಂದ ವಂಚಿತಗೊಳಿಸರಬಹುದು.

ಪರಿಪೂರ್ಣತೆ ಬಯಸುವವರು

ಏಳನೇ ತಾರೀಖಿನಂದು ಜನಿಸಿದವರು ಸದಾ ಪರಿಪೂರ್ಣತೆ ಬಯಸುವವರು. ಹೆಚ್ಚಾಗಿ ಖಾಸಗೀತನ ಬಯಸುವವರು. ಯಾವಾಗಲೂ ವಿವೇಚನೆಯಿಂದ ಯೋಚಿಸುವವರು ಮತ್ತು ಅಂತರ್ಮುಖಿಗಳಾಗಿ ಇರಲು ಇಷ್ಟಪಡುವವರು. ನೀವು ಎಂದಿಗೂ ನಿಮ್ಮ ಮನಸ್ಸಿಗೆ ಏನನ್ನಿಸುತ್ತದೆಯೋ ಅದನ್ನೇ ಮಾಡುತ್ತೀರಿ. ನಿಮಗೆ ಒಂಟಿಯಾಗಿ ಕೆಲಸ ಮಾಡುವುದೆಂದರೆ ಇಷ್ಟ.

ಮೇಲಧಿಕಾರಿಯಾಗುವ ಎಲ್ಲಾ ಗುಣಗಳೂ ನಿಮ್ಮಲ್ಲಿವೆ. ಆದರೆ ಜನರೊಂದಿಗೆ ಹೆಚ್ಚು ಬೆರೆಯಲು ಇಷ್ಟಪಡದೆ, ಅಂತರ್ಮುಖಿಯಾಗಿರುವುದರಿಂದ ಕೆಲವೊಮ್ಮೆ ನಿಮ್ಮ ಮೇಲೆಯೇ ನಿಮಗೆ ಬೇಸರ ಬರಬಹುದು. ಮನಸ್ಸು ಖಿನ್ನವಾಗಿ ಯೋಚಿಸಬಹುದು. ಆದರೆ ಆನೆ ನಡೆದಿದ್ದೇ ಹಾದಿ ಎಂಬಂತೆ, ನಿಮ್ಮದೇ ಒಂದು ಹಾದಿಯನ್ನು ನಿರ್ಮಿಸಲು ನಿಮ್ಮ ಬಳಿ ಸಾಮರ್ಥ್ಯವಿದೆ.

ಉದ್ಯಮಿಗಳಾಗುವ ಸಾಮರ್ಥ್ಯವಿರುವವರು

8 ನೇ ತಾರೀಖಿನಂದು ಹುಟ್ಟಿದವರು ಉದ್ಯಮಿಗಳಾಗುವ ಸಾಮರ್ಥ್ಯವಿರುವವರು. ಯಾವುದೇ ಕೆಲಸ ಮಾಡುವುದಕ್ಕೆ ಹೋದರೂ ಆದನ್ನು ದೊಡ್ಡ ಮಟ್ಟದಲ್ಲಿ ಮಾಡಿಯೇ ಮುಗಿಸಬೇಕು ಎಂಬುದು ನಿಮ್ಮ ಇಂಗಿತ. ಹಣದ ವಿಷಯ ಬಂದಾಗ ನೀವು ಬಹಳ ಜಾಗರೂಕರಾಗಿ ವರ್ತಿಸುತ್ತೀರಿ.

ನಿಮಗೆ ಸ್ವಂತ ಪರಿಶ್ರಮದ ಮೇಲೆ ಸಾಕಷ್ಟು ಆತ್ಮವಿಶ್ವಾಸ. ನೀವು ಯಾವುದೇ ಕೆಲಸವನ್ನು ಮಾಡುವುದಕ್ಕೆ ಹೋದರೂ ಅದರಿಂದ ಏನು ಉಪಯೋಗ ಎಂದು ಯೋಚಿಸುತ್ತೀರಿ. ಉಪಯೋಗವಿಲ್ಲದಂಥ ಕೆಲಸಗಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು, ಜ್ಞಾನ ಹೆಚ್ಚಿಸಿಕೊಳ್ಳಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲ ದಿನವೂ ಮಾಡುತ್ತೀರಿ. ಸಾಕಷ್ಟು ಶ್ರಮಜೀವಿ ನೀವು.

ಮಾನವತಾವಾದಿಗಳು

ಒಂಬತ್ತನೇ ತಾರೀಖಿನಂದು ಹುಟ್ಟಿದವರು ಒಂದು ಸಿದ್ಧಾಂತವನ್ನು ನಂಬಿ ಬದುಕುವವರು ಮತ್ತು ಮಾನವತಾವಾದಿಗಳು. ಉದಾರ ಮನೋಭಾವ ಮತ್ತು ತಾಳ್ಮೆಯ ನಿಮ್ಮ ವ್ಯಕ್ತಿತ್ವದಿಂದಾಗಿ ನಿಮಗೆ ಸಾಕಷ್ಟು ಜನರು ಪರಿಚಿತರು. ಬಹಳ ಸರಳ ಮತ್ತು ಮತ್ತೊಬ್ಬರ ವಿಷಯದಲ್ಲಿ ಹೆಚ್ಚು ತಲೆಹಾಕದ ಸ್ವಭಾವದವರು.

ತೀರಾ ಪ್ರಬುದ್ಧವಾಗಿ ಯೋಚಿಸುವ ನಿಮ್ಮ ಸ್ವಭಾವದಿಂದಾಗ ಸಾಕಷ್ಟು ಜನರ ಗೌರವ ಗಳಿಸುತ್ತೀರಿ. ಕಷ್ಟದಲ್ಲಿರುವವರನ್ನು ನೋಡಿ ಅನುಕಂಪ ಪಡುವುದಷ್ಟೇ ಅಲ್ಲ, ಅವರಿಗೆ ನೆರವಾಗುವುದಕ್ಕೆ ಮೊದಲುಮಾಡುವ ಸ್ವಭಾವದವರು ನೀವು. ಮತ್ತೊಬ್ಬರನ್ನು ಸಂತೈಸುವುದರಲ್ಲಿಯೂ ನಿಮ್ಮದು ಎತ್ತಿದ ಕೈ.

ಸ್ವತಂತ್ರವಾಗಿ ಬದುಕುವವರು

ಹತ್ತನೇ ದಿನಾಂಕದಂದು ಹುಟ್ಟಿದವರು ಎಂದಿಗೂ ಸ್ವತಂತ್ರವಾಗಿ ಬದುಕುವವರು ಮತ್ತು ತಮ್ಮ ಬದುಕಿನ ಹಾದಿಯನ್ನು ತಾವೇ ಕಂಡುಕೊಳ್ಳುವಂಥವರು. ಈ ದಿನಾಂಕದಂದು ಹುಟ್ಟಿದವರಿಗೆ ಸಾಕಷ್ಟು ಮನೋಬಲ ಮತ್ತು ಆತ್ಮವಿಶ್ವಾಸ. ನೀವು ಬಹಳ ಸೂಕ್ಷ್ಮ.

ಆದರೆ ನಿಮ್ಮ ಭಾವನೆಗಳು ಮತ್ತೊಬ್ಬರಿಗೆ ಗೊತ್ತಾಗದಂತೆ ಮನಸ್ಸಿನಲ್ಲೇ ಇಟ್ಟುಕೊಳ್ಳುತ್ತೀರಿ. ಯಾವುದೇ ಕೆಲಸವನ್ನೇ ಆದರೂ ನಾನು ಮಾಡಿಯೇ ತೀರಬಲ್ಲೆ ಎಂಬ ನಿಮ್ಮ ಆತ್ಮವಿಶ್ವಾಸ ನಿಮಗೆ ಹಲವು ವಿಷಯಗಳಲ್ಲಿ ಗೆಲುವು ತಂದುಕೊಟ್ಟಿದೆ. ಆದರೆ ಕೆಲವೊಮ್ಮೆ ಇದೇ ಅತಿಯಾದ ಆತ್ಮವಿಶ್ವಾಸವಾಗಿ ನಿಮಗೆ ತೊಂದರೆನ್ನೂ ತಂದೊಡ್ಡಬಹುದು.

ಕನಸುಗಾರರು

ಹನ್ನೊಂದನೇ ತಾರೀಖಿನಂದು ಹುಟ್ಟಿದವರು ಕನಸುಗಾರರು. ಜೊತೆಗೆ ಆದರ್ಶವಾದಿಗಳು. ಜನರೊಂದಿಗೆ ಬಹಳ ಸುಲಭವಾಗಿ ಬೆರೆಯುವಂಥವರು. ನಿಮ್ಮೊಳಗೆ ಅತೀವವಾದ ಅಧ್ಯಾತ್ಮ ಸೆಳೆತವಿದೆ. ನೀವು ಮುಂಗೋಪಿಯಾದರೂ ಮನಸ್ಸು ಮೃದು ಮತ್ತು ಸೂಕ್ಷ್ಮ.

ವ್ಯಾವಹಾರಿಕ ಜಗತ್ತಿನಲ್ಲಿ ನಿಮ್ಮ ಚಾಕಚಕ್ಯತೆ ಕಡಿಮೆ. ನೀವು ಬಹಳ ಸೃಜನಶೀಲ ಮನಸ್ಥಿತಿಯವರು. ವಾಸ್ತವಕ್ಕಿಂತ, ಕನಸನ್ನೇ ಹೆಚ್ಚು ಇಷ್ಟಪಡುವವರು. ವ್ಯಾವಹಾರಿಕ ಜಗತ್ತಿಗೆ ಬೇಕಾದ ಕುತಂತ್ರಗಳು ನಿಮಗೆ ಗೊತ್ತಿಲ್ಲ. ಪ್ರತಿಯೊಬ್ಬರಲ್ಲೂ ಒಳ್ಳೆಯದನ್ನೇ ನೋಡುವ ನಿಮ್ಮ ಸ್ವಭಾವವೇ ನಿಮಗೆ ಮುಳುವಾಗಬಹುದು. ಬಹಳ ಬೇಗನೇ ಜನರನ್ನು ನಂಬಿ ತೊಂದರೆಗೆ ಸಿಲುಕಿಕೊಳ್ಳಬಹುದು.

ಆಲ್ ರೌಂಡರ್ ಗಳು

ಈ ದಿನಾಂಕದಂದು ಹುಟ್ಟಿರುವವರು ಆಲ್ ರೌಡರ್ ಗಳು. ಎಷ್ಟೇ ಕಷ್ಟಗಳು ಬಂದರೂ ತಕ್ಷಣವೇ ಸಾವರಿಸಿಕೊಂಡು ಫಿನಿಕ್ಸ್ ನಂತೆ ಎದ್ದುನಿಲ್ಲುವ ಸಾಮರ್ಥ್ಯವಿರುವವರು. ಸಾರ್ವಜನಿಕವಾಗಿ ಯಾರನ್ನಾದರೂ ಸುಲಭವಾಗಿ ಇಂಪ್ರೆಸ್ ಮಾಡಬಲ್ಲ ತಾಕತ್ತಿರುವವರು.

ಮಾತನಾಡುವುದರಲ್ಲಿ, ಬರೆಯುವುದರಲ್ಲಿ ನಿಮ್ಮದು ಎತ್ತಿದ ಕೈ. ಕೆಲವೊಮ್ಮೆ ಮೂಢನಂಬಿಕೆಯನ್ನೂ ನಂಬುವಂಥವರು. ಅಕ್ಕರೆ ಮತ್ತು ಕಾಳಜಿ ತುಂಬಿದ ಮನಸ್ಸು ನಿಮ್ಮದು. ಅಷ್ಟೇ ಸೂಕ್ಷ್ಮಮತಿಗಳು ಕೂಡ. ತೀರಾ ಪ್ರಾಕ್ಟಿಕಲ್ ಅನ್ನಿಸಿದರೂ ಕೆಲವೊಮ್ಮೆ ಮೂಢನಂಬಿಕೆಗಳೂ ಸತ್ಯವೇನೋ ಅನ್ನಿಸುವ ಗೊಂದಲ ನಿಮ್ಮಲ್ಲಿ ಶುರುವಾಗುತ್ತದೆ.

ಮುಂದಾಳತ್ವದ ಸ್ವಭಾವ

ಹದಿಮೂರನೇ ತಾರೀಖಿನಂದು ಹುಟ್ಟಿದವರಿಗೆ ಉತ್ತಮ ಮುಂದಾಳತ್ವದ ಗುಣವಿದ್ದರೂ ಮತ್ತೊಬ್ಬರ ಮೇಲೆ ದಬ್ಬಾಳಿಕೆ ಮಾಡುವ ಸ್ವಭಾವ ಮುಳುವಾಗಬಹುದು. ಬಹಳ ಜವಾಬ್ದಾರಿಯುತವಾಗಿ ಕೆಲಸ ಮಾಡುವವರು ಮತ್ತು ಶಿಸ್ತಿನ ವ್ಯಕ್ತಿ.

ಪ್ರಾಮಾಣಿಕರಾಗಿರುವ ನೀವು ಅವಿಶ್ರಾಂತ ಕೆಲಸಗಾರರು. ನಿಮ್ಮ ಭಾವನೆಗಳನ್ನು ಕೆಲವೊಮ್ಮೆ ಮನಸ್ಸಿನಲ್ಲೇ ಇಟ್ಟುಕೊಳ್ಳುತ್ತೀರಿ. ನಿಮ್ಮ ಅಸಹನೆ ಕೆಲವೊಮ್ಮೆ ಬೇರೆಯವರಿಗೆ ಕಿರಿಕಿರಿಯನ್ನುಂಟುಮಾಡಬಹುದು. ಎಲ್ಲರೂ ನಿಮಗೇ ಆದ್ಯತೆ ನೀಡಬೇಕು ಎಂಬ ಸ್ವಭಾವ ನಿಮ್ಮದು. ಬಹುಬೇಗನೇ ಕಷ್ಟಗಳಿಂದ ಹೊರಬಂದು ವರ್ತಮಾನದ ಬದುಕನ್ನು ಸ್ವೀಕರಿಸುವವರು.

ಜನರೊಂದಿಗೆ ಬೆರೆಯುವ ಸ್ವಭಾವ

ಹದಿನಾಲ್ಕನೇ ತಾರೀಖಿನಂದು ಹುಟ್ಟಿದವರು ಸದಾ ಜನರೊಂದಿಗೆ ಬೆರೆಯುವ ಸ್ವಭಾವದವರು. ಪ್ರತಿಭಾನ್ವಿತರು ಮತ್ತು ಎಲ್ಲಾ ವಿಷಯಗಳಲ್ಲೂ ಪರಿಣಿತಿ ಸಾಧಿಸಿದವರು. ನಿಮ್ಮ ಭಾವನೆಗಳನ್ನು, ಯೋಚನೆಗಳನ್ನು ಉತ್ತಮವಾಗಿ ವ್ಯಕ್ತಪಡಿಸುವ ತಾಕತ್ತಿರುವವರು.

ಸದಾ ಪ್ರವಾಸ ಮಾಡಲು ಇಷ್ಟಪಡುವವರು. ನಿಮ್ಮ ಅವಸರದ ಸ್ವಭಾವ ಕೆಲವೊಮ್ಮೆ ಕಿರಿಕಿರಿಯನ್ನುಂಟುಮಾಡಬಹುದು. ಪ್ರಗತಿಪರರು ಮತ್ತು ಬಹುಬೇಗನೆ ಬದಲಾವಣೆಯನ್ನು ಸ್ವೀಕರಿಸುವವರು. ಏಕತಾನತೆ ಎಂದರೆ ನಿಮಗೆ ಬೋರು. ಆಗಾಗ ಅದರ ವಿರುದ್ಧ ನೀವು ದಂಗೆ ಏಳುತ್ತೀರಿ ಸಹ. ಒಂದು ಕ್ಷಣ ಕೂರದಷ್ಟು ಚಲನಶೀಲ ಸ್ವಭಾವದವರು. ಯಾರಿಗೂ ಕ್ಯಾರೇ ಎನ್ನದ ನಿಮ್ಮ ನೇರ ಸ್ವಭಾವ ಕೆಲವು ಬಾರಿ ಶ್ಲಾಘನೆಗೊಳಗಾದರೂ, ಹಲವು ಭಾರಿ ನಿಮಗೇ ಮುಳುವಾಗಬಹುದು.

ಕುಟುಂಬದೊಂದಿಗೆ ಭಾವನಾತ್ಮಕ ನಂಟು

ಹದಿನೈದನೇ ದಿನಾಂಕದಂದು ಹುಟ್ಟಿದವರು ಕುಟುಂಬದೊಂದಿಗೆ ಸಾಕಷ್ಟು ಭಾವನಾತ್ಮಕ ನಂಟು ಹೊಂದಿರುತ್ತೀರಿ. ಮನೆಯನ್ನು ಬಿಟ್ಟು ಇರುವುದಂದ್ರೆ ನಿಮಗೆ ಸಾಧ್ಯವಿಲ್ಲದ ಮಾತು. ನೀವು ಒಬ್ಬ ಅತ್ಯುತ್ತಮ ಪಾಲಕರು ಮತ್ತು ಶಿಕ್ಷಕರಾಗಬಲ್ಲಿರಿ. ನೀವು ಸಾಕಷ್ಟು ಜವಾಬ್ದಾರಿ ಹೊಂದಿರುವವರು ಮತ್ತು ಸಾಕಷ್ಟು ಸಾಮರ್ಥ್ಯವುಳ್ಳವರು.

ನೀವು ಇರುವೆಡೆಯಲ್ಲಿ ಸೌಹಾರ್ದದ ವಾತಾವರಣ ಇರಬೇಕು ಎಂದು ಬಯಸುವ ನೀವು, ಅದನ್ನು ನಿಭಾಯಿಸಲು ಹೆಣಗುತ್ತೀರಿ. ನೀವು ಓದಿ, ಅಧ್ಯಯನ ಮಾಡಿದ್ದನ್ನು ನಂಬುವುದಕ್ಕಿಂತ ನಿಮ್ಮ ಅನುಭವಕ್ಕೆ ಬಂದಿದ್ದನ್ನು ನಂಬುತ್ತೀರಿ. ತೀರಾ ಭಾವುಕ ಜೀವಿಯಾಗಿರುವುದರಿಂದಲೇ ನೀವು ಕೆಲವೊಮ್ಮೆ ಖಿನ್ನತೆ ಅನುಭವಿಸುವಂತಾಗಬಹುದು. ನಿಮ್ಮದೇ ಸರಿ ಎಂಬ ನಿಮ್ಮ ಸ್ವಭಾವದಿಂದಾಗಿ ನೀವು ತೀರಾ ಆತ್ಮೀಯರೊಂದಿಗೂ ಮನಸ್ತಾಪ ಉಂಟುಮಾಡಬಹುದು.

ಮುಂದುವರಿಯುವುದು...

Have a great day!
Read more...

English Summary

How is your nature according to your date of birth? Here is a story based on numerology which shows your nature by studying your date of birth.