ಜನವರಿ 18ರ ಶುಕ್ರವಾರದ ದ್ವಾದಶ ರಾಶಿಗಳ ದಿನ ಭವಿಷ್ಯ


Daily Astrology 15/01/2019 : 12 ರಾಶಿಚಕ್ರಗಳ ದಿನ ಭವಿಷ್ಯ | Oneindia Kannada

ನಮ್ಮ ಪಾಲಿಗೆ ದಿನ ಶುರುವಾಗೋದು ಮೊಬೈಲ್ ನಲ್ಲಿ ಬಂದ ವಾಟ್ಸ್ ಆಪ್ ಮೆಸೇಜುಗಳನ್ನು ನೋಡುವುದರ ಮೂಲಕ ಅನ್ನೋರು ಇರುವ ಹಾಗೆಯೇ ದಿನ ಭವಿಷ್ಯ ತಿಳಿದುಕೊಂಡ ಮೇಲೆ ಮುಂದಿನ ಕೆಲಸ ಅಂತ ಹೇಳುವವರೂ ಇದ್ದಾರೆ. ಯಾವತ್ತೂ ಗಾಡಿ ಓಡಿಸ್ತಾ ಬಿದ್ದಿರಲಿಲ್ಲ, ಇವತ್ತು ಬಿದ್ದುಬಿಟ್ಟೆ. ಅದೇನು ಗ್ರಹಚಾರವೋ ಎಂದು ಹಳಿಯುವುದು ಬೇಡ.

ಅದ್ಯಾವ ಸಮಯದಲ್ಲಿ ಮನೆ ಬಿಟ್ಟೆನೋ ಎಲ್ಲ ಕೆಲಸ ಸಲೀಸಾಗಿ ಆಯಿತು ಎಂದು ಪ್ರತಿ ದಿನವೂ ನೀವು ಖುಷಿ ಪಡುವಂತಾಗಬೇಕು. ಆದ್ದರಿಂದಲೇ ಒನ್ಇಂಡಿಯಾ ಕನ್ನಡದಲ್ಲಿ ಬರುವ ದಿನ ಭವಿಷ್ಯದ ಮೇಲೆ ಒಮ್ಮೆ ಕಣ್ಣಾಡಿಸಿ. ಹ್ಞಾಂ, ಜತೆಗೆ ರಾಹುಕಾಲ, ಗುಳಿಕ ಕಾಲ, ಯಮಕಂಟಕ ಕಾಲ ಯಾವುದು ಅಂತಲೂ ತಿಳಿದುಕೊಳ್ಳಿ..

ಜ್ಯೋತಿಷ್ಯ: ಗ್ರಹಗಳು ನಿಮ್ಮ ಜೀವನದಲ್ಲಿ ಒಳಿತು-ಕೆಡುಕು ಮಾಡೋದು ಹೇಗೆ?

ಮನೆ ಬಿಡುವಾಗ ಒಂದೈದು ನಿಮಿಷ ಮುಂಚಿತವಾಗಿ ಹೊರಡಬಹುದು ಅಥವಾ ಅಶುಭ ಕಾಲ ಮುಗಿದ ಒಂದೈದು ನಿಮಿಷದ ನಂತರ ಹೊರಡಲು ಯೋಚಿಸಬಹುದಲ್ಲವೆ? ಇವೆಲ್ಲ ಮೂಢನಂಬಿಕೆ ಕಣ್ರೀ, ಅದೆಲ್ಲ ಹೇಳೋಕೆ ಬರಬೇಡಿ ಅನ್ನುವವರಿಗೆ ನಮ್ಮ ಯಾವುದೇ ಒತ್ತಾಯ ಇಲ್ಲ. ಆದರೆ ಇವನ್ನೆಲ್ಲ ಅನುಸರಿಸಿದರೆ ಒಳಿತಾಗುತ್ತದೆ ಎಂದು ನಂಬುವವರಿಗಂತೂ ಇದರಿಂದ ಸಹಾಯ ಆಗೇ ಆಗುತ್ತದೆ ಎಂಬ ಬಲವಾದ ನಂಬಿಕೆ ನಮ್ಮದು.

ನಿಮ್ಮ ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವುದು ಹೇಗೆ?

ಒಳ್ಳೆಯದು ಎಲ್ಲರಿಗೂ ಆಗಲಿ. ಸರ್ವೇ ಜನಾಃ ಸುಖಿನೋ ಭವಂತು ಎಂಬುದು ಭಾರತೀಯ ಪರಂಪರೆಯಲ್ಲಿನ ಆಶಯ. ಈ ದಿನದ ಪಂಚಾಂಗದ ಮುಖ್ಯ ವಿವರ, ನಿಮ್ಮ್ ಹಾಗೂ ನಿಮಗೆ ಬೇಕಾದವರ ದಿನದ ಭವಿಷ್ಯವನ್ನು ಓದಿಕೊಳ್ಳಿ.

ಶ್ರೀವಿಳಂಬಿ ನಾಮ ಸಂವತ್ಸರ

ಉತ್ತರಾಯಣ

ಹಿಮಂತ ಋತು

ಪೌಷ ಮಾಸ

ಶುಕ್ಲ ಪಕ್ಷ

ದ್ವಾದಶಿ

ಶುಕ್ರವಾರ

‌ರೋಹಿಣಿ ನಕ್ಷತ್ರ

ಬ್ರಹ್ಮ ನಾಮ ಯೋಗ

ಬಾಲವ ಕರಣ

ರಾಹುಕಾಲ ಬೆ 11.06 ಗಂ. 10-30 ರಿಂದ 12.23

ಯಮಗಂಡ ಕಾಲ ಮ ಗಂ 3.23 ರಿಂದ 4.49

ಸೂರ್ಯೋದಯ: ಬೆಳಗ್ಗೆ 6.49 ಸೂರ್ಯಾಸ್ತ: ಸಂಜೆ 6.09

ಮೇಷ:ಕುಟುಂಬದಲ್ಲಿ ನೆಮ್ಮದಿ ವಾತಾವರಣ

ಈ ದಿನ ಶುಭದಾಯಕ. ಒಳ್ಳೆ ಫಲವನ್ನು ಅನುಭವಿಸುವಂಥ ದಿನ. ಕೃಷಿಕರಿಗೆ ಉತ್ತಮವಾದ ಲಾಭ. ಕೃಷಿ ಚಟುವಟಿಕೆಗಳಲ್ಲಿ ಅಭಿವೃದ್ಧಿ. ಧನ ಲಾಭ ಆಗುತ್ತದೆ. ಕುಟುಂಬದಲ್ಲಿ ನೆಮ್ಮದಿ ವಾತಾವರಣ ಇರುತ್ತದೆ. ಪುಣ್ಯಕ್ಷೇತ್ರಗಳ ದರ್ಶನ ಯೋಗವಿದೆ. ವಿದ್ಯಾರ್ಥಿಗಳಿಗೆ ಅತ್ಯಂತ ಶುಭ ದಿನವಿದು. ಆರೋಗ್ಯದಲ್ಲಿ ವೃದ್ಧಿ ಇದೆ.

ವೃಷಭ: ಫೈನಾನ್ಸ್ ವ್ಯವಹಾರಗಳಲ್ಲಿ ನಷ್ಟ ಸಾಧ್ಯತೆ

ಅಶುಭದಾಯಕ ದಿನ. ನಕಾರಾತ್ಮಕ ಪ್ರಭಾವಗಳು ಆಗುತ್ತವೆ. ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಆರೋಗ್ಯದಲ್ಲಿ ಸಣ್ಣ-ಪುಟ್ಟ ವ್ಯತ್ಯಾಸಗಳು ಆಗಲಿವೆ. ಕಫ ಪ್ರಕೃತಿ ಇರುವಂಥವರಿಗೆ ಆರೋಗ್ಯ ಸಮಸ್ಯೆ ಜಾಸ್ತಿಯೇ ಆಗುತ್ತದೆ. ಪರಮೇಶ್ವರನ ಆರಾಧನೆ ಮಾಡಿ. ಷೇರು, ಫೈನಾನ್ಸ್ ವ್ಯವಹಾರಗಳಲ್ಲಿ ನಷ್ಟ ಸಾಧ್ಯತೆ ಇದೆ. ರಾಹು ಕಾಲದಲ್ಲಿ ದುರ್ಗಾ ದೇವಿ ದೇವಸ್ಥಾನದಲ್ಲಿ ನಿಂಬೆ ಹಣ್ಣಿನ ದೀಪವನ್ನೂ ಹಚ್ಚಿ.

ವೃಷಭ ವರ್ಷಭವಿಷ್ಯ : ಪಲಾವ್ ಇಲ್ಲದಿದ್ದರೂ ಚಿತ್ರಾನ್ನಕ್ಕೆ ಕೊರತೆಯಿಲ್ಲ

ಮಿಥುನ: ಹಲವು ಅವಕಾಶಗಳು ಬರಲಿವೆ

ಈ ದಿನ ಲಾಭದಾಯಕವಾಗಿದೆ. ಉದ್ಯೋಗ ವಿಚಾರದಲ್ಲಿ ಹಲವು ಅವಕಾಶಗಳು ನಿಮ್ಮ ಪಾಲಿಗೆ ಬರಲಿವೆ. ಅವುಗಳನ್ನು ಸರಿಯಾಗಿ ಬಳಸಿಕೊಂಡರೆ ಜೀವನದಲ್ಲಿ ಉತ್ತಮವಾದ ಪ್ರಗತಿ ಆಗಲಿದೆ. ವಿದೇಶಕ್ಕೆ ಹೋಗುವ ಅವಕಾಶಗಳು ಹಾಗೂ ಆ ಬಗ್ಗೆ ಮುನ್ಸೂಚನೆ ದೊರೆಯುತ್ತದೆ. ಧನ ಲಾಭ ಇದೆ. ಒಟ್ಟಾರೆಯಾಗಿ ಉತ್ತಮ ಫಲವನ್ನು ಅನುಭವಿಸಲಿದ್ದೀರಿ.

ಮಿಥುನ ವರ್ಷಭವಿಷ್ಯ: ಏರಿಳಿತವಿಲ್ಲದ ಸರಳರೇಖೆಯಂತೆ ಬದುಕು

ಕರ್ಕಾಟಕ: ಮಹತ್ವವಾದ ತೀರ್ಮಾನ ಮಾಡುತ್ತೀರಿ

ಇಂದು ಶುಭದಾಯಕವಾದ ದಿನ. ಮುಂದಿನ ಜೀವನದ ಬಗ್ಗೆ ಮಹತ್ವವಾದ ತೀರ್ಮಾನವನ್ನು ಕೈಗೊಳ್ಳುತ್ತೀರಿ. ಆಸ್ತಿ ವೃದ್ಧಿ ಸಾಧ್ಯತೆ ಇದೆ. ಅಂದರೆ ಆಸ್ತಿ ಖರೀದಿ ಅವಕಾಶಗಳಿವೆ. ಮನಸಿನ ಅಳುಕು ನಿವಾರಣೆಯಾಗಿ ಧೈರ್ಯ ಮೂಡುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವಂಥ ಸಾಧ್ಯತೆ ಇರುತ್ತದೆ.

ಸಿಂಹ: ಬೆಲೆ ಬಾಳುವ ವಸ್ತುಗಳ ಬಗ್ಗೆ ನಿಗಾ ಇರಲಿ

ಸಾಧಾರಣ ಫಲದಾಯಕವಾದ ದಿನ. ಬಂಡವಾಳ ಹೂಡಿಕೆಗೆ ಈ ದಿನ ಶುಭವಲ್ಲ. ಸ್ವಲ್ಪ ಎಚ್ಚರಿಕೆಯನ್ನು ವಹಿಸುವುದು ಒಳ್ಳೆಯದು. ರಾಜಕೀಯವಾಗಿ, ಧಾರ್ಮಿಕವಾಗಿ ಅಥವಾ ವ್ಯಾವಹಾರಿಕವಾಗಿ ಈ ದಿನ ನಿಮಗೆ ಶತ್ರುಗಳು ಹೆಚ್ಚಾಗುವ ಸಾಧ್ಯತೆ ಇದೆ. ಆ ಬಗ್ಗೆ ಹೆಚ್ಚು ಗಮನ ನೀಡಿ. ಬೆಲೆ ಬಾಳುವ ವಸ್ತುಗಳ ಬಗ್ಗೆ ನಿಗಾ ವಹಿಸಿ. ಕೆಂಪು ಪುಷ್ಪಗಳಿಂದ ಶಕ್ತಿ ದೇವತೆಗೆ ಅರ್ಚನೆ ಮಾಡಿಸಿ.

ವರ್ಷ ಭವಿಷ್ಯ: ವ್ಯವಹಾರದಲ್ಲಿ ಹುಷಾರಾದರೆ ಜೀವನ ಸೂಪರ್

ಕನ್ಯಾ: ವ್ಯಾಪಾರ-ವ್ಯವಹಾರಗಳಲ್ಲಿ ಅಭಿವೃದ್ಧಿ

ಅತ್ಯಂತ ಶುಭದಾಯಕವಾದ ದಿನ. ಬಹಳ ಅತ್ಯಂತ ಅತಿಶಯ ಶುಭ ಫಲ ದೊರೆಯುವ ದಿನವಿದು. ಆಸ್ತಿ ಖರೀದಿಗೆ ಮನಸು ಮಾಡುತ್ತೀರಿ. ಅನಿರೀಕ್ಷಿತವಾಗಿ ಧನಲಾಭ ಇದೆ. ಬರಬೇಕಿರುವ ಸಾಲ ಬಾಕಿ ಹಿಂತಿರುಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ದೊರೆಯುವ ಅವಕಾಶಗಳಿವೆ. ವ್ಯಾಪಾರ-ವ್ಯವಹಾರ, ವಹಿವಾಟಿನಲ್ಲೂ ಅಭಿವೃದ್ಧಿ ಇದೆ. ಇಂದು ಯಾವ ಕಾರಣಕ್ಕೂ ಹೊಸ ಕೆಲಸ ಆರಂಭಿಸಬೇಡಿ.

ಕನ್ಯಾ ರಾಶಿ ವರ್ಷ ಭವಿಷ್ಯ: ಘಟ ಇದ್ದರಷ್ಟೇ ಮಠ, ಆರೋಗ್ಯ ಜೋಪಾನ

ತುಲಾ: ಹೊಸ ವ್ಯಕ್ತಿಗಳ ಪರಿಚಯದಿಂದ ಲಾಭ

ಶುಭದಾಯಕವಾದ ದಿನವಿದು. ಆರೋಗ್ಯದಲ್ಲಿ ವೃದ್ಧಿ ಆಗುತ್ತದೆ. ಅದೃಷ್ಟದ ದಿನ. ನೂತನ ವಾಹನ ಖರೀದಿಸಲು ಮನಸು ಮಾಡುತ್ತೀರಿ. ಹೊಸ ವ್ಯಕ್ತಿಗಳ ಪರಿಚಯದಿಂದ ಧನ ಲಾಭ ಇದೆ. ಸ್ನೇಹ ವೃದ್ಧಿ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಉನ್ನತ ಸ್ಥಾನಮಾನ, ಪ್ರಶಂಸೆ ಕೇಳಿಬರುತ್ತದೆ. ಹೋಟೆಲ್ ಉದ್ಯಮಿಗಳಿಗೆ-ವ್ಯಾಪಾರಸ್ಥರಿಗೆ ಅಧಿಕ ಲಾಭ ಇದೆ.

ತುಲಾ ವರ್ಷ ಭವಿಷ್ಯ: ಸಿಕ್ಕಾಪಟ್ಟೆ ಪರೀಕ್ಷೆಗಳು ಮುಂದಿವೆ, ಸಾಹಸ ಬೇಡ

ವೃಶ್ಚಿಕ: ಹೊಸ ವಸ್ತುಗಳ ಖರೀದಿ ಯೋಗವಿದೆ

ತೃಪ್ತಿದಾಯಕವಾದ ದಿನ. ಹಿರಿಯರ ಆಶೀರ್ವಾದದಿಂದ ಮನಸಿಗೆ ನೆಮ್ಮದಿ ದೊರೆಯುತ್ತದೆ. ಜತೆಗೆ ಸಹಾಯ ಕೂಡ ದೊರೆಯುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವಂಥ ಸಾಧ್ಯತೆಗಳಿವೆ. ರೈತರಿಗೆ ಉತ್ತಮವಾದ ಫಲ ಇದೆ. ಕೃಷಿ ಚಟುವಟಿಕೆಗಳು ಅಭಿವೃದ್ಧಿ ಆಗುತ್ತವೆ. ಸಣ್ಣ ವ್ಯಾಪಾರಿಗಳಿಗೆ ಅಭಿವೃದ್ಧಿ ಇದೆ. ಅಲಂಕಾರದ ಬಗ್ಗೆ ಅದು ನಿಮ್ಮ ಅಲಂಕಾರ ಅಥವಾ ಗೃಹಾಲಂಕಾರದ ಬಗ್ಗೆ ಮನಸು ನೀಡುತ್ತೀರಿ. ಹೊಸ ವಸ್ತುಗಳ ಖರೀದಿ ಯೋಗವಿದೆ.

ವೃಶ್ಚಿಕ ವರ್ಷ ಭವಿಷ್ಯ: ಕಂಡ ಕನಸುಗಳೆಲ್ಲ ಕೈಗೂಡಿ, ಸಂಭ್ರಮ

ಧನುಸ್ಸು: ಆಲಸ್ಯ ಹೆಚ್ಚಾಗುತ್ತದೆ

ಅಶುಭದಾಯಕವಾದ ದಿನ. ಆಲಸ್ಯ ಹೆಚ್ಚಾಗುತ್ತದೆ. ಕೆಲಸ-ಕಾರ್ಯಗಳನ್ನು ನಿಧಾನವಾಗಿ ಮಾಡುತ್ತೀರಿ. ಸ್ವಲ್ಪ ಎಚ್ಚರಿಕೆ ವಹಿಸುವುದು ಒಳ್ಳೆಯದು. ಮಧ್ಯಾಹ್ನದ ನಂತರ ಸ್ವಲ್ಪ ಚಟುವಟಿಕೆಯಿಂದ ಇರುತ್ತೀರಿ. ಲವಲವಿಕೆ ಜಾಸ್ತಿ ಆಗುತ್ತದೆ. ಉತ್ತಮ ಫಲ ದೊರೆಯುತ್ತದೆ. ಕಲಹ-ಜಗಳಗಳನ್ನು ನೀವು ನಿವಾರಣೆ ಮಾಡಿಕೊಳ್ಳುತ್ತೀರಿ. ದೇವಿ ದುರ್ಗಾ ಖಡ್ಗಮಾಲಾ ಶ್ಲೋಕ ಪಠಣ ಅಥವಾ ಶ್ರವಣ ಮಾಡಿ.

ಧನು ವರ್ಷ ಭವಿಷ್ಯ: ಆಲಸ್ಯ ಅಡ್ಡವಾಗಲಿದೆ, ಅದೇ ಖೆಡ್ಡಾ ಆಗದಿರಲಿ

ಮಕರ: ಭೂಮಿ ಖರೀದಿಗೆ ಪ್ರಶಸ್ತವಾದ ದಿನ

ದೊಡ್ಡ ಕೈಗಾರಿಕೋದ್ಯಮಿಗಳಿಗೆ, ವ್ಯಾಪಾರಿಗಳಿಗೆ ಅತಿ ಹೆಚ್ಚು ಲಾಭ ಸಿಗುವ ದಿನ. ದೊಡ್ಡ ಬಂಡವಾಳ ಹೂಡಿಕೆ ಮಾಡುವವರಿಗೆ ಕೂಡ ಶುಭ ಫಲ. ಭೂಮಿ ಮಾರಾಟ ಹಾಗೂ ಹೊಸದಾಗಿ ಭೂಮಿ ಖರೀದಿ ಮಾಡುವುದಕ್ಕೆ ಈ ದಿನ ಪ್ರಶಸ್ತವಾಗಿರುತ್ತದೆ. ಫೈನಾನ್ಸ್ ಮಾಡುವವರಿಗೆ ಒಳ್ಳೆ ದಿನ. ಆರೋಗ್ಯದಲ್ಲಿ ವೃದ್ಧಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ.

ಮಕರ ವರ್ಷ ಭವಿಷ್ಯ: ಸಮಸ್ಯೆಗಳೆಲ್ಲ ಸರಾಗವಾಗಿ ಸರಿದು, ಬದುಕು ಬೊಂಬಾಟ್

ಕುಂಭ: ಬಂಧುಗಳ ಆಗಮನದಿಂದಾಗಿ ಸಂತೋಷ

ಲಾಭದಾಯಕವಾದ ದಿನ ಇದು. ಅನಿರೀಕ್ಷಿತವಾಗಿ ಧನ ಲಾಭ ಪ್ರಾಪ್ತಿ ಇದೆ. ಬಂಧುಗಳ ಆಗಮನದಿಂದ ಮನಸಿಗೆ ಸಂತೋಷ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸೂಕ್ತ ದಿನ. ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ತೀರ್ಮಾನ ಕೈಗೊಳ್ಳಲು ಸಹ ಉತ್ತಮವಾದ ದಿನವಿದು. ಯಾವುದೇ ಆಗಿರಲಿ, ಹೆಚ್ಚಿನ ಶ್ರಮವನ್ನು ಹಾಕಿ.

ಕುಂಭ ವರ್ಷ ಭವಿಷ್ಯ: ಸಣ್ಣ ಗಾಯವೇ ಘಾಸಿ ತಂದೀತು ಎಚ್ಚರ!

ಮೀನ: ಫೈನಾನ್ಸ್ ವಿಚಾರದಲ್ಲಿ ಅಧಿಕ ಲಾಭವಿದೆ

ತೃಪ್ತಿದಾಯಕವಾದ ದಿನ ಇದು. ಹೊಸ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತೀರಾ. ಹೊಸ ಅವಕಾಶಗಳು ನಿಮ್ಮ ಪಾಲಿಗೆ ಬರಲಿವೆ. ಫೈನಾನ್ಸ್ ವಿಚಾರದಲ್ಲಿ ಅಧಿಕ ಲಾಭ ಇದೆ. ಹೊಸ ಉದ್ಯೋಗದ ನಿರೀಕ್ಷೆಯಲ್ಲಿ ಇದ್ದರೆ ಜಯ ಪ್ರಾಪ್ತಿ ಯೋಗ ಇದೆ. ನಿರ್ಧಾರ ತೆಗೆದುಕೊಳ್ಳುವಾಗ ಚಂಚಲತೆ ಕಾಡುತ್ತದೆ. ದೃಢವಾದ ಸಂಕಲ್ಪ, ನಿರ್ಧಾರ ಮಾಡುವುದು ಬಹಳ ಮುಖ್ಯ.

ಮೀನ ವರ್ಷಭವಿಷ್ಯ : ದೈವಾನುಗ್ರಹದಿಂದ ಬದುಕು ಸುಂದರ

Have a great day!
Read more...

English Summary

Daily forecast for your zodiac signs. Get astrological predictions for the day, in Kannada Language by Well known Astrologer Harish Guruji.