keyboard_backspace

'ನೋಡುತ್ತಿರಿ, ಚೀನಾ ಖಂಡಿತವಾಗಿ ತಾಲಿಬಾನ್‌ ಜೊತೆ ಹೊಂದಾಣಿಕೆ ಮಾಡುತ್ತೆ'

Google Oneindia Kannada News

ವಾಷಿಂಗ್ಟನ್‌, ಸೆಪ್ಟೆಂಬರ್‌ 08: "ಆಗಸ್ಟ್‌ 15 ರಂದು ಅಫ್ಘಾನಿಸ್ತಾನವನ್ನು ತಾಲಿಬಾನ್‌ ತನ್ನ ವಶಕ್ಕೆ ಪಡೆದುಕೊಂಡ ನಂತರ ಚೀನಾ ತಾಲಿಬಾನ್‌ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ," ಎಂದು ಯುಎಸ್‌ ಅಧ್ಯಕ್ಷ ಜೋ ಬೈಡೆನ್‌ ಮಂಗಳವಾರ ಹೇಳಿದ್ದಾರೆ.

ಚೀನಾವು ತಾಲಿಬಾನ್‌ಗೆ ಮುಂದೆ ಸರ್ಕಾರ ಸ್ಥಾಪನೆ ಬಳಿಕ ಧನ ಸಹಾಯ ಮಾಡಲಿದೆ ಎಂಬ ಆತಂಕವನ್ನು ಹೊಂದಿದ್ದೀರಿಯೇ ಎಂದು ಮಾಧ್ಯಮಗಳು ಈ ಸಂದರ್ಭದಲ್ಲೇ ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಯುಎಸ್‌ ಅಧ್ಯಕ್ಷ ಜೋ ಬೈಡೆನ್‌, "ತಾಲಿಬಾನ್ ಉಗ್ರರಿಂದಾಗಿ ಚೀನಾ ದೇಶಕ್ಕೆ ನಿಜವಾದ ಸಮಸ್ಯೆ ಮುಂದಿನ ದಿನಗಳಲ್ಲಿ ಉಂಟಾಗಲಿದೆ. ಈ ಕಾರಣದಿಂದಾಗಿ ತಾಲಿಬಾನ್‌ ಜೊತೆ ಕೆಲವು ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನವನ್ನು ಚೀನಾ ಮಾಡುತ್ತದೆ. ಅದು ನನಗೆ ಖಚಿತವಾಗಿ ತಿಳಿದಿದೆ," ಎಂದಿದ್ದಾರೆ.

'ಭಾರತದ ವಿರುದ್ದ ಪಾಕಿಸ್ತಾನವನ್ನು ಚೀನಾ ಬಳಸಬಹುದು''ಭಾರತದ ವಿರುದ್ದ ಪಾಕಿಸ್ತಾನವನ್ನು ಚೀನಾ ಬಳಸಬಹುದು'

"ಪಾಕಿಸ್ತಾನ, ರಷ್ಯಾ, ಇರಾನ್‌ ಮಾಡಿಕೊಂಡಂತೆ ಚೀನಾ ತಾಲಿಬಾನ್‌ ಜೊತೆಯಲ್ಲಿ ಹೊಂದಾಣಿಕೆ ಅಥವಾ ಒಪ್ಪಂದವನ್ನು ಮಾಡಲು ಖಂಡಿತವಾಗಿ ಪ್ರಯತ್ನಿಸುತ್ತದೆ. ಈ ಎಲ್ಲಾ ದೇಶಗಳು ಈಗ ಏನು ಮಾಡುವುದು ಎಂಬ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ," ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅಭಿಪ್ರಾಯಿಸಿದರು.

 ಮಾನವ, ಮಹಿಳಾ ಹಕ್ಕು ಗೌರವಿಸಿದರೆ ತಾಲಿಬಾನ್‌ ಸರ್ಕಾರಕ್ಕೆ ಧನ ಸಹಾಯ

ಮಾನವ, ಮಹಿಳಾ ಹಕ್ಕು ಗೌರವಿಸಿದರೆ ತಾಲಿಬಾನ್‌ ಸರ್ಕಾರಕ್ಕೆ ಧನ ಸಹಾಯ

ಅಮೆರಿಕ ಹಾಗೂ ಅದರ ಏಳು ಮಿತ್ರ ರಾಷ್ಟ್ರಗಳು ತಾಲಿಬಾನ್‌ ವಿಚಾರದಲ್ಲಿ ಏನೇ ಇದ್ದರೂ ಜೊತೆ ಸೇರಿ ಪ್ರತಿಕ್ರಿಯೆ ನೀಡುವ ತೀರ್ಮಾನಕ್ಕೆ ಬಂದಿದೆ. ಹಾಗೆಯೇ ವಾಷಿಂಗ್ಟನ್‌ ಅಫ್ಘಾನಿಸ್ತಾನದ ಸಂಪತ್ತನ್ನು ತಾಲಿಬಾನ್‌ ಕೈಗೆ ಧಕ್ಕದಂತೆ ಮಾಡಿದೆ. ಅಫ್ಘಾನಿಸ್ತಾನದ ಅಧಿಕ ಸಂಪತ್ತು ನ್ಯೂಯಾರ್ಕ್ ಫೆಡರಲ್‌ ರಿಸರ್ವ್ ಅಡಿಯಲ್ಲಿ ಇದೆ ಎಂದು ವರದಿ ಹೇಳಿದೆ. ಅಂತಾರಾಷ್ಟ್ರೀಯ ಕಾನೂನು ಪಾಲಿಸುವ ಹಾಗೂ ಮಹಿಳೆಯರಿಗೆ ಗೌರವವನ್ನು ನೀಡುವಂತಹ ನಿಲುವನ್ನು ತಾಲಿಬಾನ್‌ ಹೊಂದುವವರೆಗೂ ತಾಲಿಬಾನ್‌ಗೆ ಈ ಸಂಪತ್ತು ಧಕ್ಕದು ಎಂದು ಹೇಳಲಾಗಿದೆ.

 ತಾಲಿಬಾನ್‌ ಸರ್ಕಾರಕ್ಕೆ ಚೀನಾ, ರಷ್ಯಾ ಧನ ಸಹಾಯ ಮಾಡಿದರೆ?

ತಾಲಿಬಾನ್‌ ಸರ್ಕಾರಕ್ಕೆ ಚೀನಾ, ರಷ್ಯಾ ಧನ ಸಹಾಯ ಮಾಡಿದರೆ?

ಅಫ್ಘಾನಿಸ್ತಾನದ ಆರ್ಥಿಕ ಹತೋಟಿಯನ್ನು ಸದ್ಯಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕ ಏಳು ಮಿತ್ರ ರಾಷ್ಟ್ರಗಳ ಜೊತೆ ಸೇರಿ ಮಾಡುತ್ತಿದೆಯಾದರೂ, ಚೀನಾ, ರಷ್ಯಾ ಹಾಗೂ ಬೇರೆ ಯಾವುದಾದರೂ ರಾಷ್ಟ್ರಗಳು ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರಕ್ಕೆ ಧನ ಸಹಾಯ ಮಾಡಿದರೆ, ಈ ಆರ್ಥಿಕ ಹತೋಟಿಯು ವ್ಯರ್ಥವಾಗಲಿದೆ ಎಂದು ತಜ್ಞರು ಹೇಳುತ್ತಾರೆ.

ಕಾಬೂಲ್‌ನಲ್ಲಿ ಪಾಕ್‌ ವಿರುದ್ದ ಪ್ರತಿಭಟನೆಗೆ ಮಹಿಳೆಯರು ಭಾಗಿ: ತಾಲಿಬಾನ್‌ನಿಂದ ಗಾಳಿಯಲ್ಲಿ ಗುಂಡುಕಾಬೂಲ್‌ನಲ್ಲಿ ಪಾಕ್‌ ವಿರುದ್ದ ಪ್ರತಿಭಟನೆಗೆ ಮಹಿಳೆಯರು ಭಾಗಿ: ತಾಲಿಬಾನ್‌ನಿಂದ ಗಾಳಿಯಲ್ಲಿ ಗುಂಡು

 ಜಿ-20 ಗುಂಪಿನಲ್ಲಿ ಭಿನ್ನಾಭಿಪ್ರಾಯದ ಸುಳಿವು

ಜಿ-20 ಗುಂಪಿನಲ್ಲಿ ಭಿನ್ನಾಭಿಪ್ರಾಯದ ಸುಳಿವು

ಜಿ-20 ಗುಂಪಿನ ಆರ್ಥಿಕ ಚರ್ಚೆಗೆ ಪ್ರಸ್ತುತ ಅಧ್ಯಕ್ಷತೆಯನ್ನು ಇಟಲಿ ವಹಿಸಿಕೊಂಡಿದೆ. ಈ ಗುಂಪಿನಲ್ಲಿ ಚೀನಾ ಹಾಗೂ ರಷ್ಯಾ ದೇಶವೂ ಕೂಡಾ ಇದೆ. ಇಟಲಿ ಪ್ರಸ್ತುತ ವರ್ಚುವಲ್‌ ಮೂಲಕ ಜಿ-20 ಗುಂಪಿನ ಸಭೆಯನ್ನು ನಡೆಸಲು ಪ್ರಯತ್ನ ಮಾಡುತ್ತಿದೆ. ಆದರೆ ಈವರೆಗೂ ಯಾವುದೇ ದಿನಾಂಕವನ್ನು ಗೊತ್ತು ಮಾಡಿಲ್ಲ. ಇದು ಈ ಗುಂಪಿನಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬುವುದಕ್ಕೆ ಸ್ಪಷ್ಟವಾದ ಸುಳಿವನ್ನು ಕೂಡಾ ನೀಡುತ್ತಿದೆ. ಎಲ್ಲರಿಗೂ ತಿಳಿದಂತೆ ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದುಕೊಂಡ ಬಳಿಕ ಚೀನಾ ಹಾಗೂ ರಷ್ಯಾ ತಾಲಿಬಾನ್‌ ಪರವಾಗಿಯೇ ಹೇಳಿಕೆಗಳನ್ನು ನೀಡಿದೆ. ಈ ಕಾರಣದಿಂದಾಗಿ ಈ ಜಿ-20 ಗುಂಪಿನಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆಯೇ ಎಂಬ ಊಹಾಪೋಹಗಳು ಸೃಷ್ಟಿಯಾಗಿದೆ.

'ತಾಲಿಬಾನ್‌ ಹೇಳಿಕೆ ಸುಳ್ಳು, ಪಂಜ್‌ಶೀರ್‌ನಲ್ಲಿ ಸಂಘರ್ಷ ಮುಂದುವರಿದಿದೆ' ಎಂದ ವಿರೋಧಿ ಪಡೆ'ತಾಲಿಬಾನ್‌ ಹೇಳಿಕೆ ಸುಳ್ಳು, ಪಂಜ್‌ಶೀರ್‌ನಲ್ಲಿ ಸಂಘರ್ಷ ಮುಂದುವರಿದಿದೆ' ಎಂದ ವಿರೋಧಿ ಪಡೆ

 ಚೀನಾ ತಾಲಿಬಾನ್‌ಗೆ ಆರ್ಥಿಕ ಸಹಕಾರ ನೀಡಲಿದೆಯೇ?

ಚೀನಾ ತಾಲಿಬಾನ್‌ಗೆ ಆರ್ಥಿಕ ಸಹಕಾರ ನೀಡಲಿದೆಯೇ?

ತಾಲಿಬಾನ್‌ ಜೊತೆ ಅಂತಾರಾಷ್ಟ್ರೀಯ ಸಮುದಾಯವು ಇರಬೇಕು ಹಾಗೂ ಧನಾತ್ಮಕವಾಗಿ ಉತ್ತಮ ಮಾರ್ಗದರ್ಶಿಯನ್ನು ನೀಡಬೇಕು ಎಂದು ಈ ಹಿಂದೆ ಚೀನಾದ ರಾಜ್ಯ ಕೌನ್ಸಿಲರ್ ಮತ್ತು ವಿದೇಶಾಂಗ ಸಚಿವ ವಾಂಗ್ ಯಿ ಟಿ, ಯುಎಸ್ ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಜೊತೆ ಫೋನ್‌ ಕರೆಯ ಸಂದರ್ಭದಲ್ಲಿ ಆಗಸ್ಟ್‌ 29 ರಂದು ಹೇಳಿದ್ದರು. ಚೀನಾವು ಅಧಿಕೃತವಾಗಿ ಅಫ್ಘಾನಿಸ್ತಾನದ ಹೊಸ ಆಡಳಿತವು ತಾಲಿಬಾನ್‌ದು ಎಂದು ಗುರುತಿಸಿಕೊಂಡಿಲ್ಲ. ಆದರೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಟಿ ತಾಲಿಬಾನ್‌ ಸರ್ಕಾರದ ಹಂಗಾಮಿ ಉಪ ಪ್ರಧಾನಮಂತ್ರಿ ಎಂದು ನೇಮಕವಾಗಿರುವ ಮುಲ್ಲಾ ಬರದಾರ್‌ರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ "ವಿಶ್ವವು ಅಫ್ಘಾನಿಸ್ತಾನಕ್ಕೆ ಬೆಂಬಲ ಹಾಗೂ ಸಲಹೆಯನ್ನು ನೀಡಬೇಕು. ಒಂದು ಹೊಸ ಸರ್ಕಾರ ಆ ದೇಶದಲ್ಲಿ ಬರುತ್ತಿರುವ ಸಂದರ್ಭದಲ್ಲಿ ನಾವು ಇನ್ನಷ್ಟು ಒತ್ತಡವನ್ನು ಹೇರುವ ಬದಲಾಗಿ ಸಲಹೆ ಹಾಗೂ ಬೆಂಬಲ ನೀಡುವುದು ಒಳಿತು," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಎಲ್ಲಾ ಹೇಳಿಕೆಗಳನ್ನು ಗಮನಿಸಿದಾಗ ಚೀನಾವು ತಾಲಿಬಾನ್ ಸರ್ಕಾರಕ್ಕೆ ಎಲ್ಲಾ ಸಹಕಾರ ನೀಡಲಿದೆ ಎಂಬುವುದು ಭಾಗಶಃ ದೃಢಪಟ್ಟಂತೆಯೇ ಸರಿ.

(ಒನ್‌ ಇಂಡಿಯಾ ಸುದ್ದಿ)

English summary
U.S. President Joe Biden said China would try to work out an arrangement with the Taliban.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X