• search
  • Live TV
keyboard_backspace

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ನವದೆಹಲಿ, ಸೆಪ್ಟೆಂಬರ್ 3: ಚೀನಾದೊಂದಿಗಿನ ವಾಸ್ತವ ಗಡಿ ರೇಖೆಯಲ್ಲಿ ಭಾರತೀಯ ಸೇನೆ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದೆ. ಪ್ಯಾಂಗೊಂಗ್ ತ್ಸೊದ ದಕ್ಷಿಣ ಭಾಗದಲ್ಲಿ ಶನಿವಾರ ರಾತ್ರಿ ನಡೆದ ಕಾರ್ಯಾಚರಣೆಯಿಂದ ಭಾರತದ 'ಎಸ್ಟಾಬ್ಲಿಷ್‌ಮೆಂಟ್ 22'ದ ಚಟುವಟಿಕೆ ಬೆಳಕಿಗೆ ಬಂದಿದೆ. ಚೀನೀ ಸೈನಿಕರ ಕುತಂತ್ರಗಳಿಗೆ ತೀಕ್ಷ್ಣ ಪ್ರತ್ಯುತ್ತರ ನೀಡಲು ಪೂರ್ವ ಲಡಾಖ್‌ನಲ್ಲಿ ನಿಯೋಜನೆಗೊಂಡಿರುವುದು 'ಎಸ್ಟಾಬ್ಲಿಷ್‌ಮೆಂಟ್ 22'.

ಈ ಗೋಪ್ಯ ದಳಕ್ಕೆ 'ಸ್ಪೆಷಲ್ ಫ್ರಂಟಿಯರ್ ಫೋರ್ಸ್' ಎಂಬ ಹೆಸರೂ ಇದೆ. ಇದು ಸಂಪುಟ ಕಾರ್ಯದರ್ಶಿ ಮತ್ತು ಪ್ರಧಾನಿ ಕಚೇರಿಯ ಆಡಳಿತ ನಿಯಂತ್ರಣದಲ್ಲಿದೆ.

ವಿಶೇಷ ಮುಂಚೂಣಿ ಘಟಕವು ಪೂರ್ವ ಲಡಾಖ್‌ನಲ್ಲಿ ಇರುವ ಬಗ್ಗೆ ಹಿರಿಯ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಸೇನೆಯ ಜತೆಗೆ ಅದು ಹೆಚ್ಚು ಸಂವಹನ ನೀಡಿಲ್ಲ.

1962 ಭಾರತ-ಚೀನಾ ಯುದ್ಧದ ಅಂತ್ಯದ ಬಳಿಕ ಎಸ್ಎಫ್‌ಎಫ್ ಕಮಾಂಡೋಗಳನ್ನು ಭಾರತದಲ್ಲಿ ನೆಲೆಸಿರುವ ಟಿಬೆಟಿಯನ್ ನಿರಾಶ್ರಿತರಿಂದ ಆಯ್ದುಕೊಳ್ಳಲಾಗಿತ್ತು. ಅವರನ್ನು ಶತ್ರುಗಳ ಗಡಿಯಲ್ಲಿ ಕಾರ್ಯಾಚರಣೆಗಳನ್ನು ನಡೆಸುವಂತೆ ಆರಂಭದಲ್ಲಿ ಇಂಟೆಲಿಜೆನ್ಸ್ ಬ್ಯೂರೋ, ರಾ ಮತ್ತು ಸಿಐಎ ದಿಂದ ತರಬೇತುಗೊಳಿಸಲಾಗಿತ್ತು. ಸ್ಥಾಪನೆಯಾದ ಎರಡು ಕೆಲವು ದಶಕಗಳಲ್ಲಿ ಈ ಪಡೆಯು ಪರಮಾಣು ಸಿಡಿತಲೆಗಳನ್ನು ನಿಯೋಜಿಸುವ ಚೀನೀ ಯೋಜನೆಗಳ ಮೇಲೆ ಕಣ್ಣಿಡಲು ಬಳಸಲಾಗುತ್ತಿತ್ತು. ಮುಂದೆ ಓದಿ.

ಎಸ್ಟಾಬ್ಲಿಷ್‌ಮೆಂಟ್ 22

ಎಸ್ಟಾಬ್ಲಿಷ್‌ಮೆಂಟ್ 22

ಯೂರೋಪ್‌ನಲ್ಲಿ ಎರಡನೆಯ ಮಹಾಯುದ್ಧದ ವೇಳೆ ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ 22ನೇ ಮೌಂಟೇನ್ ರೆಜಿಮೆಂಟ್‌ನ ಸಂಸ್ಥಾಪಕ ಮುಖ್ಯಸ್ಥ ಸುಜನ್ ಸಿಂಗ್ ಅರ್ಬನ್ ನೇತೃತ್ವವಹಿಸಿದ್ದರು. ಅದರ ಬಳಿಕ ಎಸ್‌ಎಫ್ಎಫ್‌ಗೆ 'ಎಸ್ಟಾಬ್ಲಿಷ್‌ಮೆಂಟ್ 22' ಎಂಬ ಅಡ್ಡ ಹೆಸರು ಬಂದಿತು. ಉತ್ತರಾಖಂಡದ ಚಕ್ರಾತಾದಲ್ಲಿ ಕೇಂದ್ರ ಕಚೇರಿಯಿದ್ದು, ಪರ್ವತ ಪ್ರದೇಶಗಳಲ್ಲಿ ಯುದ್ಧೋಪಾದಿ ಚಟುವಟಿಕೆಗಳಿಗೆ ತರಬೇತಿ ಪಡೆದ ಉನ್ನತ ಪ್ಯಾರಾಟ್ರೂಪರ್‌ಗಳನ್ನು ಒಳಗೊಂಡ ಕನಿಷ್ಠ ಐದು ಬೆಟಾಲಿಯನ್ ಅಥವಾ ಸುಮಾರು 5,000 ಕಮಾಂಡೋಗಳನ್ನು ಹೊಂದಿದೆ.

ಶನಿವಾರ ರಾತ್ರಿ ನಡೆದ ಎಸ್‌ಎಫ್ಎಫ್ ಕಾರ್ಯಾಚರಣೆಯಲ್ಲಿ ಸೇನೆಯಲ್ಲಿರುವ ಅಥವಾ ನಿವೃತ್ತರಾಗಿರುವ ಯಾವುದೇ ಅಧಿಕಾರಿ ಭಾಗಿಯಾಗಿರಲಿಲ್ಲ. ಆದರೆ ಅವರೆಲ್ಲರಿಗೂ ಲಡಾಖ್ ಮತ್ತು ಇತರೆ ಸ್ಥಳಗಳಲ್ಲಿ ಎಸ್‌ಎಫ್‌ಎಫ್ ಬಟಾಲಿಯನ್‌ಗಳ ಬಗ್ಗೆ ಮಾಹಿತಿ ತಿಳಿದಿತ್ತು.

ಅಧಿಕಾರಿಗಳ ಅನುಭವಗಳು

ಅಧಿಕಾರಿಗಳ ಅನುಭವಗಳು

'ಲಡಾಖ್‌ನಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ನನ್ನೊಂದಿಗೆ ವಿಕಾಸ್ ಘಟಕವನ್ನು ಹೊಂದಿದ್ದೆ. 16,000 ಅಡಿ ಎತ್ತರದಲ್ಲಿ ಅವರು ವಾಲಿಬಾಲ್ ಆಡುವುದನ್ನು ನೋಡಿದ್ದೆ. ಅತಿ ಎತ್ತರದ ಪ್ರದೇಶಗಳಲ್ಲಿಯೂ ಅವರು ಸಹಜವಾಗಿ ಇರಬಲ್ಲರು. ಇದು ಅವರ ಕಾರ್ಯಾಚರಣೆಗೆ ಅನುಕೂಲಕಾರಿಯಾಗಿದೆ' ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಸಯ್ಯದ್ ಅಟಾ ಹಸ್ನೈನ್ ತಿಳಿಸಿದ್ದಾರೆ.

'ನಮಗೆ ಅವರ ಬಗ್ಗೆ ಗೊತ್ತು. ಆದರೆ ಅವರ ಹಾಜರಾತಿ ಮುಚ್ಚಿದ ಪುಸ್ತಕದಂತೆ. ನಮ್ಮಲ್ಲಿ ಕೆಲವರಿಗೆ ನಿಯಮಗಳ ಅಡಿ ಪ್ರತಿಜ್ಞೆ ಕೈಗೊಂಡು ಅವರ ಜತೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು' ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಒಬ್ಬರು ತಿಳಿಸಿದರು.

ಭಾರತದ ಬಗ್ಗೆ ಪ್ರೀತಿ, ಗೌರವ, ಆದರೆ..

ಭಾರತದ ಬಗ್ಗೆ ಪ್ರೀತಿ, ಗೌರವ, ಆದರೆ..

ಟಿಬೆಟ್‌ನಲ್ಲಿ ಚೀನೀಯರ ಉಪಟಳ ಹೆಚ್ಚಾದ ಸಂದರ್ಭದಲ್ಲಿ ಟಿಬೆಟ್‌ನಿಂದ ಅನೇಕ ಮಂದಿ ನಿರಾಶ್ರಿತರಾಗಿ ಭಾರತಕ್ಕೆ ಬಂದರು. 1959ರಲ್ಲಿ ದಲೈಲಾಮ ಭಾರತದಲ್ಲಿ ಆಶ್ರಯ ಪಡೆದಾಗಿನಿಂದ ಭಾರತಕ್ಕೆ ಬಂದವರಲ್ಲಿ ಅನೇಕರು ಭಾರತದ ಪ್ರಜೆಗಳೇ ಆಗಿದ್ದಾರೆ. ಚೀನಾ ಯುದ್ಧದ ಬಳಿಕ ಟಿಬೆಟಿಯನ್ ನಿರಾಶ್ರಿತರನ್ನೇ ಹೆಚ್ಚಾಗಿ ಈ ಪಡೆಗೆ ಆಯ್ದುಕೊಳ್ಳಲಾಗಿದೆ.

'ನಮಗೆ ಆಸರೆ ನೀಡಿದ ಭಾರತದ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಇದೆ. ಆದರೆ ಎಸ್‌ಎಫ್‌ಎಫ್‌ನಲ್ಲಿ ಅತ್ಯಂತ ಮಹತ್ವದ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಯೋಧರಿಗೆ ರಾಷ್ಟ್ರಮಟ್ಟದಲ್ಲಿ ಈಗ ಗುರುತು ಸಿಗಬೇಕಾಗಿದೆ' ಎಂದು ಟೆಬೆಟ್ ಸಂಸತ್‌ನ ಸಂಸದರಾಗಿ ಗಡಿಪಾರಾಗಿರುವ 34 ವರ್ಷದ ಲ್ಹಾಗ್ಯಾರಿ ನಂಗಿಯಾಲ್ ದೋಲ್ಕರ್.

ಕಾರ್ಗಿಲ್, ಬಾಂಗ್ಲಾ ವಿಮೋಚನೆ

ಕಾರ್ಗಿಲ್, ಬಾಂಗ್ಲಾ ವಿಮೋಚನೆ

'ಭಾರತದ ಸೈನಿಕರು ಮೃತಪಟ್ಟರೆ ಅವರನ್ನು ಹುತಾತ್ಮರೆಂದು ದೇಶ ಘೋಷಿಸುತ್ತದೆ. ಸರ್ಕಾರ ಅವರಿಗೆ ದೊಡ್ಡಮಟ್ಟದಲ್ಲಿ ಗೌರವ ಸಲ್ಲಿಸುತ್ತದೆ. ಆದರೆ ಟಿಬೆಟಿಯನ್ ನಿರಾಶ್ರಿತರಿಗೂ ಆ ಗೌರವ ಏಕೆ ಸಿಗುತ್ತಿಲ್ಲ?' ಎಂದು ಅವರು ಪ್ರಶ್ನಿಸಿದ್ದಾರೆ. ದೋಲ್ಕರ್ ಅವರ ಚಿಕ್ಕಪ್ಪ 1999ರ ಪಾಕಿಸ್ತಾನದೊಂದಿಗಿನ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯಲ್ಲಿ ಹೋರಾಡಿದ್ದರು. 1971ರಲ್ಲಿ ಬಾಂಗ್ಲಾದೇಶ ಸೃಷ್ಟಿಯ ವೇಳೆ ನಡೆದ ಭಾರತ-ಪಾಕಿಸ್ತಾನ ಸಮರದಲ್ಲಿ ಎಸ್ಎಫ್ಎಫ್ ಪ್ರಮುಖ ಪಾತ್ರ ವಹಿಸಿತ್ತು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿಯೂ ಎತ್ತರದ ಪ್ರದೇಶಗಳಲ್ಲಿ ಎಸ್ಎಫ್ಎಫ್ ಪಾತ್ರ ನಿರ್ಣಾಯಕವಾಗಿತ್ತು.

ಈ ಕಮಾಂಡೋಗಳಿಗಿಲ್ಲ 'ಹುತಾತ್ಮ' ಭಾಗ್ಯ

ಈ ಕಮಾಂಡೋಗಳಿಗಿಲ್ಲ 'ಹುತಾತ್ಮ' ಭಾಗ್ಯ

ಇತ್ತೀಚೆಗೆ ಪಶ್ಚಿಮ ಹಿಮಾಲಯದ ಪ್ಯಾಂಗೊಂಗ್ ತ್ಸೊ ಸರೋವರದ ಸಮೀಪ ನಡೆದ ಸ್ಫೋಟದಲ್ಲಿ ತೆಂಜಿನ್ ನ್ಯಿಮಾ (53) ಮೃತಪಟ್ಟರೆ ಮತ್ತೊಬ್ಬ ಕಮಾಂಡೊ ತೀವ್ರವಾಗಿ ಗಾಯಗೊಂಡಿದ್ದಾರೆ. ಆದರೆ ಅವರಿಗೆ ತೆಂಜಿನ್ ಅವರಿಗೆ ಹುತಾತ್ಮರ ಗೌರವ ಸಿಕ್ಕಿಲ್ಲ. ಇದನ್ನು ನೇರವಾಗಿ ಸರ್ಕಾರವನ್ನು ಪ್ರಶ್ನಿಸುವ ಧೈರ್ಯ ಅವರ ಕುಟುಂಬದವರಿಗಿಲ್ಲ. ಭಾರತ ಸರ್ಕಾರ ತಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು ಎಂಬ ಸಲುವಾಗಿ ಧೈರ್ಯವಾಗಿ ಇದನ್ನು ಹೇಳಲು ಅವರು ಮುಂದಾಗುತ್ತಿಲ್ಲ ಎಂದು ವರದಿಯಾಗಿದೆ.

English summary
Establishment 22, a Special Frontier Force is working secretly along with China border. Here All you need to know about SFF.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X