ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ರೈತರ ಸಾವಿಗೆ ಕಾರಣವೇನು? ಇಲ್ಲಿದೆ ಉತ್ತರ

By Mahesh
|
Google Oneindia Kannada News

ಬೆಳಗಾವಿ, ಜೂ.29: ಡಿಸೆಂಬರ್ ನಲ್ಲಿ ಚಳಿ ಜಾಸ್ತಿ ಎನ್ನುವ ಕಾರಣಕ್ಕೋ ಏನೋ ಬೆಳಗಾವಿಯಲ್ಲಿ ಮುಂಗಾರು ಮಳೆ ಸುರಿವ ಸಮಯಕ್ಕೆ ಮೊದಲ ಬಾರಿಗೆ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಲಾಗುತ್ತಿದೆ.

ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ರೈತರ ಸಾವಿಗೆ ಸಾಲದ ಸಮಸ್ಯೆಯೇ ಕಾರಣವಲ್ಲ ಎಂಬ ಸರ್ಕಾರದ ಮಾತು ಒಪ್ಪಿದರೂ ಸಾಲದಿಂದಲೇ ಬೇರೆ ಎಲ್ಲಾ ಸಮಸ್ಯೆ ಹುಟ್ಟಿಕೊಳ್ಳುತ್ತದೆ ಎಂಬ ಕನಿಷ್ಠ ಪ್ರಜ್ಞೆ ಸರ್ಕಾರಕ್ಕೆ ಇಲ್ಲದ್ದಂತಾಗಿದೆ.

ಸಮಸ್ಯೆ ಬರೀ ಕಬ್ಬಿಗೆ ಬೆಂಬಲ ಘೋಷಣೆ ಮಾತ್ರವಲ್ಲ. ಭತ್ತ, ಜೋಳ, ರಾಗಿ, ಅರಿಶಿಣ ಮುಂತಾದ ಬೆಳೆಗಳಿಗೂ ವೈಜ್ಞಾನಿಕ ಬೆಲೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಮಹಾರಾಷ್ಟ್ರರಾಜ್ಯದಲ್ಲಿ ಪ್ರತಿ ಟನ್ ಕಬ್ಬಿಗೆ 3,500 ರೂ ನೀಡಲಾಗುತ್ತಿದೆ. [ರೈತನ ಸಾವಿನ ಮನೆಯಲ್ಲೂ ಬಿಡದ ರಾಜಕೀಯ ಮೇಲಾಟ]

ಇಳುವರಿ ಆಧಾರದಲ್ಲಿ ಪಂಜಾಬ್ ನಲ್ಲಿ 3,500 ರೂ., ಹರ್ಯಾಣದಲ್ಲಿ 3,000 ರೂ. ವನ್ನು ನಿಗದಿ ಮಾಡಲಾಗಿದೆ. ಇಲ್ಲಿ ಹೇಗೆ ಜಗ್ಗಿದ್ದರೂ 3,000 ರೂ ಮುಟ್ಟುವುದೇ ಇಲ್ಲ. ಅದು ರೈತರ ಕೈ ಸೇರುವ ಹೊತ್ತಿಗೆ ಅನಾಹುತ, ಅಪಘಾತ, ಆಘಾತಗಳಾಗಿರುತ್ತವೆ. ಈಗ ಪ್ರತಿ ಟನ್ ಕಬ್ಬಿಗೆ 3,500 ರು. ಬೆಂಬಲ ಬೆಲೆ ನೀಡುವಂತೆ ರೈತರು ಆಗ್ರಹಿಸಿದ್ದಾರೆ.

ಕರ್ನಾಟಕ ಕಬ್ಬುಬೆಳೆಗಾರರ (ಮಾರಾಟ ನಿಯಂತ್ರಣ ಹಾಗೂ ಪೂರೈಕೆ) ಕಾಯ್ದೆ 2013 ಜಾರಿಗೊಂಡರೆ ಬೆಳೆ ಮಾರಾಟವಾದ 14 ದಿನದೊಳಗೆ ರೈತರಿಗೆ ಕಾರ್ಖಾನೆ ಯಿಂದ ಹಣ ಸಂದಾಯವಾಗಬೇಕು. ಅದರೆ, ಲಭ್ಯ ಮಾಹಿತಿ ಪ್ರಕಾರ 1,200 ಕೋಟಿ ರು ಇನ್ನೂ ಬಾಕಿ ಉಳಿದಿದೆ. ದೇಶದಲ್ಲಿ ಕಬ್ಬು ಉತ್ಪಾದಿಸುವ ಮೂರನೇ ಅತಿದೊಡ್ಡ ರಾಜ್ಯ ಕರ್ನಾಟಕ. ದೇಶದ ವಾರ್ಷಿಕ ಉತ್ಪನ್ನದಲ್ಲಿ ಶೇ 13 ರಷ್ಟು ಪಾಲು ಕರ್ನಾಟಕ ಹೊಂದಿದೆ.

ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬೆಲೆ ನಿಗದಿ

ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬೆಲೆ ನಿಗದಿ

ದಕ್ಷಿಣ ಕರ್ನಾಟಕ ಭಾಗದ ರೈತರು ಬೆಳೆಯುವ ಟನ್ ಕಬ್ಬಿಗೆ 2,600 ರು ಹಾಗೂ ಉತ್ತರ ಕರ್ನಾಟಕ ಭಾಗದ ರೈತರು ಬೆಳೆಯುವ ಕಬ್ಬಿಗೆ 2,500 ರು ದರ ನಿಗದಿಪಡಿಸಲು ಸಿದ್ದರಾಮಯ್ಯ ಸರ್ಕಾರ ನಿರ್ಧರಿಸಿ ಒಂದೂವರೆ ವರ್ಷ ಕಳೆದಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ 16 ಸಕ್ಕರೆ ಕಾರ್ಖಾನೆಗಳಿದ್ದು, ಕಬ್ಬಿನ ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ರೈತರೇ ಭರಿಸಬೇಕಾಗುತ್ತದೆ. ಆದರೆ, ಉತ್ತರ ಕರ್ನಾಟಕ ಭಾಗದ ರೈತರು ಬೆಳೆಯುವ ಕಬ್ಬಿನ ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಆಯಾ ಕಾರ್ಖಾನೆಗಳು ಭರಿಸಲಿವೆ. ಈ ಭಾಗದಲ್ಲಿ 45 ಸಕ್ಕರೆ ಕಾರ್ಖಾನೆಗಳಿವೆ.

ಕಾನೂನಿಗೆ ಬೆಲೆ ಇಲ್ಲ, ಕಾರ್ಖಾನೆ ಒಡೆಯರಿಗೆ ಶ್ರೀರಕ್ಷೆ

ಕಾನೂನಿಗೆ ಬೆಲೆ ಇಲ್ಲ, ಕಾರ್ಖಾನೆ ಒಡೆಯರಿಗೆ ಶ್ರೀರಕ್ಷೆ

ಕರ್ನಾಟಕ ಕಬ್ಬುಬೆಳೆಗಾರರ (ಮಾರಾಟ ನಿಯಂತ್ರಣ ಹಾಗೂ ಪೂರೈಕೆ) ಕಾಯ್ದೆ 2013 ಜಾರಿಗೊಂಡರೆ ಬೆಳೆ ಮಾರಾಟವಾದ 14 ದಿನದೊಳಗೆ ರೈತರಿಗೆ ಕಾರ್ಖಾನೆ ಯಿಂದ ಹಣ ಸಂದಾಯವಾಗಬೇಕು. ಅದರೆ, ಲಭ್ಯ ಮಾಹಿತಿ ಪ್ರಕಾರ 1,200 ಕೋಟಿ ರು ಇನ್ನೂ ಬಾಕಿ ಉಳಿದಿದೆ. ದೇಶದಲ್ಲಿ ಕಬ್ಬು ಉತ್ಪಾದಿಸುವ ಮೂರನೇ ಅತಿದೊಡ್ಡ ರಾಜ್ಯ ಕರ್ನಾಟಕ. ದೇಶದ ವಾರ್ಷಿಕ ಉತ್ಪನ್ನದಲ್ಲಿ ಶೇ 13 ರಷ್ಟು ಪಾಲು ಕರ್ನಾಟಕ ಹೊಂದಿದೆ.

ಸಮಿತಿ, ಶಿಫಾರಸು ಗಣನೆಗೆ ತೆಗೆದುಕೊಂಡಿಲ್ಲ

ಸಮಿತಿ, ಶಿಫಾರಸು ಗಣನೆಗೆ ತೆಗೆದುಕೊಂಡಿಲ್ಲ

ಕೇಂದ್ರ ಸರ್ಕಾರ ರಚಿಸಿದ್ದ ರಂಗರಾ­ಜನ್ ಸಮಿತಿಯ ವರದಿ ಪ್ರಕಾರ ಶೇ 9.5ರಷ್ಟು ಇಳುವರಿಗೆ 2,445 ರು ದರ ನಿಗದಿ ಮಾಡಬೇಕಾಗುತ್ತದೆ. ಅದೇ ರೀತಿ ಶೇ 1ರಷ್ಟು ಹೆಚ್ಚುವರಿ ಇಳುವರಿಗೆ 220 ರು ರೂಪಾಯಿ ಹೆಚ್ಚಿಗೆ ನೀಡಬೇಕಾ­ಗುತ್ತದೆ. ಶೇ 11.5ರಷ್ಟು ಇಳುವರಿ ಬಂದರೆ ಟನ್ ಕಬ್ಬಿಗೆ 2894 ರು ನೀಡಬೇಕಾಗುತ್ತದೆ. ಆದರೆ ಸರ್ಕಾರ ಇದನ್ನು ಗಣನೆಗೆ ತೆಗೆದುಕೊಂಡಿಲ್ಲ.

ಬೇರೆ ಬೇರೆ ಭಾಗಕ್ಕೆ ಬೆಲೆ ವ್ಯತ್ಯಾಸ ಏಕೆ ಬೇಕು

ಬೇರೆ ಬೇರೆ ಭಾಗಕ್ಕೆ ಬೆಲೆ ವ್ಯತ್ಯಾಸ ಏಕೆ ಬೇಕು

ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿ ನುರಿಸಿದ ಕಬ್ಬಿನ ಇಳುವರಿ ಜಾಸ್ತಿ ಇರುವುದರಿಂದ ಏಕರೂಪ ಬೆಂಬಲ ನೀಡುವುದು ಸಮಂಜಸವಲ್ಲ. ರೈತರು ಆತ್ಮಹತ್ಯೆಗೆ ಶರಣಾಗುವುದನ್ನು ತಪ್ಪಿಸಲು ಬೆಳೆ ವಿಮೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳು ಭರಿಸಬೇಕು. ಕಾಕಂಬಿಯಂತಹ ಉಪಉತ್ಪನ್ನಗಳ ಮೂಲಕ ಗಳಿಸುವ ಆದಾಯವನ್ನೂ ಸರ್ಕಾರ ಪರಿಗಣಿಸಬೇಕು ಎಂದು ಕೃಷಿ ವೆಚ್ಚ ಮತ್ತು ಬೆಲೆ ನಿಗದಿ ಆಯೋಗ ತಿಳಿಸಿದೆ.

ಪ್ರಭಾವಿಗಳ ಕೈಲಿದೆ ಸಕ್ಕರೆ ಕಾರ್ಖಾನೆಗಳು

ಪ್ರಭಾವಿಗಳ ಕೈಲಿದೆ ಸಕ್ಕರೆ ಕಾರ್ಖಾನೆಗಳು

ಉತ್ತರ ಕರ್ನಾಟಕದಲ್ಲಿ ಪ್ರಕಾಶ್ ಹುಕ್ಕೇರಿ, ಎಂ.ಬಿ.ಪಾಟೀಲ್, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ಸಿದ್ದು ನ್ಯಾಮಗೌಡ ರಂತಹ ಪ್ರಭಾವಶಾಲಿ ಸಕ್ಕರೆ ಕಾರ್ಖಾನೆಗಳ ಒಡೆಯರು ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸರಕಾರವನ್ನು ನಿಯಂತ್ರಿಸುತ್ತಾ ಬಂದಿದ್ದಾರೆ. ಇನ್ನು ದಕ್ಷಿಣದಲ್ಲಿ ಮಂಡ್ಯದ ರಾಜಕಾರಣಿಗಳ ಕೈಹಿಡಿತ ಇನ್ನೂ ಜೊರಾಗಿದೆ.

ಈ ಬಾರಿ ಕೂಡ ತಾವು ಜನರ ಪ್ರತಿನಿಧಿಗಳೆಂಬುದನ್ನು ಮರೆತು ತಮ್ಮ ಕಾರ್ಖಾನೆಗಳ ಹಿತಾಸಕ್ತಿಗಾಗಿ ಅವರು ಪಟ್ಟು ಹಿಡಿದ ಪರಿಣಾಮವಾಗಿ ರೈತರ ಬೇಡಿಕೆಗಳನ್ನು ಈಡೇರಿಸಲು ಸರಕಾರದಿಂದ ಸಾಧ್ಯವಾಗಿಲ್ಲ.

ಸಕ್ಕರೆ ಕಾರ್ಖಾನೆಗಳ ಲೆಕ್ಕಾಚಾರ

ಸಕ್ಕರೆ ಕಾರ್ಖಾನೆಗಳ ಲೆಕ್ಕಾಚಾರ

ರಾಜ್ಯದಲ್ಲಿ 65 ಸಕ್ಕರೆ ಕಾರ್ಖಾನೆ ರಾಜ್ಯದಲ್ಲಿ 65 ಸಕ್ಕರೆ ಕಾರ್ಖಾನೆಗಳಿದ್ದು 58 ಕಾರ್ಯ ನಿರ್ವಹಿಸುತ್ತಿವೆ. ಸಹಕಾರಿ ಕ್ಷೇತ್ರದ ವ್ಯಾಪ್ತಿಗೆ 22 ಕಾರ್ಖಾನೆ ಬರಲಿದ್ದು, ಸರ್ಕಾರದ ಹಿಡಿತದಲ್ಲಿ ಕೇವಲ ಕಾರ್ಖಾನೆಗಳಿವೆ. 34 ಖಾಸಗಿ ಒಡೆತನದಲ್ಲಿದ್ದು ಇದರಲ್ಲಿ 33 ಕಾರ್ಖಾನೆಗಳು ರಾಜಕೀಯ ಮುಖಂಡರ ಒಡೆತನ ಹೊಂದಿವೆ. ರಾಜ್ಯದ ಶೇ 35ರಷ್ಟು ಕಬ್ಬು ಬೆಳೆಯುವ ಮೂಲಕ ಬೆಳಗಾವಿ ಜಿಲ್ಲೆ ಅಗ್ರಸ್ಥಾನ ಹೊಂದಿದ್ದು, 13 ಮಿಲಿಯನ್ ಟನ್ ಕಬ್ಬು ಉತ್ಪಾದನೆಗೊಳ್ಳುತ್ತದೆ.

ಉತ್ಪಾದನೆಗೆ ತಕ್ಕ ವರಮಾನ ಇಲ್ಲ

ಉತ್ಪಾದನೆಗೆ ತಕ್ಕ ವರಮಾನ ಇಲ್ಲ

ಬೆಳಗಾವಿ, 21 ಕಾರ್ಖಾನೆಗಳನ್ನು ಹೊಂದಿದೆ. ಬಾಗಲಕೋಟೆಯಲ್ಲಿ 9 ಕಾರ್ಖಾನೆ ಜತೆಗೆ ಬೀದರ್ ನಲ್ಲಿ ನಾಲ್ಕು, ಬಿಜಾಪುರ, ಗುಲ್ಬರ್ಗಾ ಹಾಗೂ ದಾವಣಗೆರೆಯಲ್ಲಿ ತಲಾ ಮೂರು ಕಾರ್ಖಾನೆಗಳಿವೆ. ಕಳೆದ ವರ್ಷ 33 ಮಿಲಿಯನ್ ಟನ್ ಕಬ್ಬು ಬೆಳೆದಿದ್ದ ಕರ್ನಾಟಕ ಈ ವರ್ಷ ಇಲ್ಲಿ ತನಕ 28.8 ಮಿಲಿಯನ್ ಟನ್ ಮಾತ್ರ ಉತ್ಪಾದಿಸಿದೆ. 2014 ರಲ್ಲಿ 37.0 ಮಿಲಿಯನ್ ಟನ್ ಉತ್ಪಾದನೆಯಾಗಿದೆ. ಆದರೆ, ಸಕ್ಕರೆ ಕಾರ್ಖಾನೆಗಳಲ್ಲಿ ಸ್ಟಾಕ್ ಇನ್ನೂ ಕ್ಲಿಯರ್ ಆಗಿಲ್ಲ. ಸಕ್ಕರೆ ಆಮದು ನಿಲ್ಲಿಸಿಲ್ಲ. ಇದು ವ್ಯವಸ್ಥೆಯ ಲೋಪ ಹಾಗೂ ರೈತರ ನೋವಿಗೆ ಮೂಲ.

English summary
Why sugarcane farmers in Karnataka committing suicide. The price for sugarcane produce has fallen drastically in the market and therefore are unable to repay the loans. government fix a better base price or Fair and Remunerative Price (FRP) for sugarcane growers. Managements of sugar factories have not paid the farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X