ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಗನಕ್ಕೇರಿದ ಗೋಧಿ ಬೆಲೆ: ಕ್ವಿಂಟಾಲ್‌ಗೆ 2,500 ರೂ!

|
Google Oneindia Kannada News

ನವದೆಹಲಿ,ಆಗಸ್ಟ್‌.8: ನಿಧಾನಗತಿಯ ಪೂರೈಕೆ ಮತ್ತು ಅಧಿಕವಾದ ಬೇಡಿಕೆಯಿಂದಾಗಿ ಗೋಧಿ ಬೆಲೆ ಕ್ವಿಂಟಲ್‌ಗೆ ದಾಖಲೆಯ ರೂ. 2,500 ರುಪಾಯಿಗಳ ಏರಿಕೆ ಕಂಡಿವೆ.

"ದೆಹಲಿಯ ವ್ಯಾಪಾರಿಗಳ ಪ್ರಕಾರ, ಅಧಿಕ ಉಷ್ಣದ ವಾತಾವರಣದ ಹಿನ್ನೆಲೆಯಲ್ಲಿ ಈ ವರ್ಷ ಗೋಧಿ ಉತ್ಪಾದನೆಯನ್ನು ಕಡಿಮೆ ಮಾಡಲು ಕಾರಣವಾಯಿತು. ಇದು ಕೃಷಿ ಉತ್ಪನ್ನಗಳ ದೇಶೀಯ ಪೂರೈಕೆಗಳ ಮೇಲೆ ಪರಿಣಾಮ ಬೀರಿತು. ಕಳೆದ ಕೆಲವು ದಿನಗಳಿಂದ ಪ್ರತಿದಿನ ಗೋಧಿಯ ಬೆಲೆ ಏರಿಕೆಯಾಗುತ್ತಿದೆ," ಎಂದು ದೆಹಲಿ ಲಾರೆನ್ಸ್ ರಸ್ತೆ ಮಂಡಿಯ ಜೈ ಪ್ರಕಾಶ್ ಜಿಂದಾಲ್ ಹೇಳಿದ್ದಾರೆ.

ಇವತ್ತು ಸಹ ಗೋಧಿ ಬೆಲೆ 30 ರೂ. ಏರಿಕೆಯಾಗಿದ್ದು, ಇದೀಗ ಇಲ್ಲಿ ಕ್ವಿಂಟಲ್‌ಗೆ 2,550 ರೂ.ಆಗಿದೆ. ಹರಿಯಾಣದಲ್ಲಿ ಕ್ವಿಂಟಲ್‌ಗೆ 2,400 ರೂ., ರಾಜಸ್ಥಾನದಲ್ಲಿ 2,370 ರೂ. ಗೋಧಿ ಬೆಲೆ ಇದೆ. ಮೇ 14, 2022 ರಂದು ಗೋಧಿ ರಫ್ತಿನ ಮೇಲೆ ನಿಷೇಧ ಹೇರಿದಾಗಿನಿಂದ ಮಂಡಿ ಬೆಲೆಗಳು ಪ್ರತಿ ಕ್ವಿಂಟಲ್‌ಗೆ ರೂ 2,150 ರಿಂದ ರೂ 2,175 ರಷ್ಟಿತ್ತು.

Wheat prices hit record high, Rs 2,500 per quintal in Delhi mandis

ಜಿಂದಾಲ್ ಮಾಹಿತಿ ಹಂಚಿಕೊಂಡಿದ್ದು, "ಈ ವರ್ಷ ಗೋಧಿ ಉತ್ಪಾದನೆ ಕಡಿಮೆಯಾಗಿದೆ. ಸರ್ಕಾರ ಸರಿಯಾದ ಸಮಯದಲ್ಲಿ ರಫ್ತು ನಿಲ್ಲಿಸಲಿಲ್ಲ. ಸರ್ಕಾರವು ಗೋಧಿ ರಫ್ತಿನ ಮೇಲೆ ನಿಷೇಧ ಹೇರುವ ಹೊತ್ತಿಗೆ ಈಗಾಗಲೇ ಸಾಕಷ್ಟು ಗೋಧಿ ರಫ್ತು ಮಾಡಲಾಗಿತ್ತು. ಇದನ್ನು ಮೊದಲೇ ಮಾಡಬೇಕಿತ್ತು. ಮುಂಬರುವ ಮತ್ತು ನವೆಂಬರ್ ಅಕ್ಟೋಬರ್ ತಿಂಗಳುಗಳಲ್ಲಿ ಹಬ್ಬದ ಬೇಡಿಕೆಗಳನ್ನು ಪೂರೈಸಲು ಗೋಧಿಯ ಆಮದು ಅಗತ್ಯವಿದೆ," ಎಂದು ಅವರು ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ ಗೋಧಿ ರಫ್ತು ಹೆಚ್ಚಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ. 2021-22ರಲ್ಲಿ 2,121.5 ಮಿಲಿಯನ್ ಡಾಲರ್‌ ಮೌಲ್ಯದ ಗೋಧಿಯನ್ನು ರಫ್ತು ಮಾಡಲಾಗಿದೆ. 2022-23ರ ಮೊದಲ ನಾಲ್ಕು ತಿಂಗಳುಗಳಲ್ಲಿ (ಏಪ್ರಿಲ್-ಜುಲೈ), 1,190 ಮಿಲಿಯನ್‌ ಡಾಲರ್‌ಗಿಂತಲೂ ಹೆಚ್ಚು ಮೌಲ್ಯದ ಗೋಧಿಯನ್ನು ರಫ್ತು ಮಾಡಲಾಗಿದೆ.

Wheat prices hit record high, Rs 2,500 per quintal in Delhi mandis

ಗೋಧಿಯ ಈ ಬೆಲೆ ಹೆಚ್ಚಳಕ್ಕೆ ಕಾರಣಗಳೆಂದರೆ, ಅಂತಾರಾಷ್ಟ್ರೀಯ ಬೇಡಿಕೆ- ಪೂರೈಕೆಯ ಪರಿಸ್ಥಿತಿ, ಜಾಗತಿಕ ಸರಕುಗಳ ಬೆಲೆಗಳಲ್ಲಿ ಏರಿಕೆ ಮತ್ತು ಉಕ್ರೇನ್ ಮತ್ತು ರಷ್ಯಾದಂತಹ ಪ್ರಮುಖ ಗೋಧಿ ರಫ್ತು ರಾಷ್ಟ್ರಗಳ ನಡುವಿನ ಸಂಘರ್ಷ ಇವೆ ಮೊದಲಾದವುಗಳಾಗಿವೆ. ಏತನ್ಮಧ್ಯೆ, ಬೇಡಿಕೆಯನ್ನು ಪೂರೈಸಲು ಮತ್ತು ಏರುತ್ತಿರುವ ಗೋಧಿ ಬೆಲೆಗಳನ್ನು ತಡೆಯಲು ಕೇಂದ್ರವು ಕೆಲವು ಉಪಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಅಂದರೆ ಸರ್ಕಾರ ಗೋಧಿಯ ಮೇಲಿನ 40 ಪ್ರತಿಶತ ಆಮದು ಸುಂಕವನ್ನು ರದ್ದುಗೊಳಿಸಬಹುದು. ಇದಲ್ಲದೆ, ಇದು ಗೋಧಿಯ ಮೇಲೆ ಸ್ಟಾಕ್ ಹಿಡುವಳಿ ಮಿತಿಗಳನ್ನು ವಿಧಿಸಬಹುದು. ದಾಸ್ತಾನುಗಾರರು ಮತ್ತು ವ್ಯಾಪಾರಿಗಳು ಹೊಂದಿರುವ ಗೋಧಿ ದಾಸ್ತಾನುಗಳನ್ನು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಬಹುದು.

ಚಾಲ್ತಿಯಲ್ಲಿರುವ ಅಂತಾರಾಷ್ಟ್ರೀಯ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳಿಂದ ಉತ್ಪನ್ನಗಳ ಮಾರುಕಟ್ಟೆ ಬೆಲೆ ಏರಿಕೆಯಾಗಿರುವುದರಿಂದ ವ್ಯಾಪಾರಿಗಳು ಗೋಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವುದರಿಂದ ಗೋಧಿ ಸಂಗ್ರಹಣೆ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Recommended Video

ಈದ್ಗಾ ತೀರ್ಪಿನ ಬಗ್ಗೆ ಜಮೀರ್ ಹೇಳಿದ್ದೇನು ! | Oneindia Kannada

English summary
Wheat prices have seen a significant rise to cross a record Rs 2,500 per quintal due to slower supplies and robust demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X