ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೊಮ್ಯಾಟೊ ಬೆಳೆ ಅಂಗಮಾರಿ ರೋಗ ನಿವಾರಣೆ ಹೇಗೆ?

|
Google Oneindia Kannada News

ಟೊಮ್ಯಾಟೊ ಬೆಳೆಗೆ ಬರುವ ರೋಗಗಳಲ್ಲಿ ಇದು ಒಂದು ಪ್ರಮುಖ ರೋಗ. ಈ ರೋಗವು ಪೈಟೋಪ್‍ಥೋರಾ ಇನ್‍ಫೆಸ್ಟಾನ್ಸ್ (Phytophthora infestans) ಎನ್ನುವ ಶಿಲೀಂದ್ರದಿಂದ ಬರುತ್ತದೆ.

Recommended Video

Sanjjanaa Galrani ಮಾಧ್ಯಮದವರ ಮೇಲೆ ಗರಂ ಆಗಿದ್ದೇಕೆ ?| Oneindia Kannada Kannada

ರೋಗದ ಚಿಹ್ನೆಗಳು: ನೀರಿನಿಂದ ಆವೃತವಾದ ಕಂದು ಮಿಶ್ರಿತ ಕಪ್ಪು ಬಣ್ಣದ ಚುಕ್ಕೆಗಳು ಎಲೆ, ಕಾಂಡ ಮತ್ತು ಹಣ್ಣಿನ ತೊಟ್ಟುಗಳಲ್ಲಿ ಕಂಡು ಬರುತ್ತದೆ. ಎಲೆಯ ಮೇಲೆ ಚುಕ್ಕೆಗಳು ಕಂದು ಬಣ್ಣದಿಂದ ಕೂಡಿರುತ್ತದೆ ನಂತರ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಎಲೆಯ ಕೆಳಗಡೆ ಅರಳೆಯಂತಹ ಬಿಳಿ ಬಣ್ಣದ ಶಿಲೀಂದ್ರದ ಬೆಳವಣಿಗೆ ಕಂಡು ಬರುತ್ತದೆ.

ಆಲೂಗೆಡ್ಡೆ ಮತ್ತು ಟೊಮ್ಯಾಟೊ ಬೆಳೆ ರಕ್ಷಣೆಗೆ ಸರಳ ಸೂತ್ರಗಳು ಆಲೂಗೆಡ್ಡೆ ಮತ್ತು ಟೊಮ್ಯಾಟೊ ಬೆಳೆ ರಕ್ಷಣೆಗೆ ಸರಳ ಸೂತ್ರಗಳು

ಹೆಚ್ಚು ಆದ್ರ್ರತೆಯುಳ್ಳ ಹವಾಗುಣ ಮತ್ತು ಮೋಡಕವಿದ ವಾತಾವರಣವಿದ್ದಲ್ಲಿ ಚುಕ್ಕೆಗಳು ಒಂದು ಗೂಡಿ ಪೂರ್ತಿ ಎಲೆಯನ್ನು ಆವರಿಸಿ ಎಲೆಯ ದೇಟು ಹಾಗೂ ಗಿಡದ ಕಾಂಡಕ್ಕೂ ಸಹ ಹಬ್ಬಿ ನಂತರ ಗಿಡವು ಒಣಗುತ್ತದೆ.

What Is The Solution For Phytophthora Infestans Bacterial Leaf Blight Of Tomato

ಮೋಡಕವಿದ ವಾತಾವರಣ, ತುಂತುರು ಮಳೆಯಾಗುವುದು, ಹೆಚ್ಚು ಆದ್ರ್ರತೆಯುಳ್ಳ ಹವಾಗುಣ ಈ ರೋಗಕ್ಕೆ ಸೂಕ್ತವಾದ ವಾತಾವರಣ. ಇಂತಹ ಸಮಯದಲ್ಲಿ ರೋಗವು ಹೆಚ್ಚು ಉಲ್ಬಣಗೊಳ್ಳುತ್ತದೆ. ಆದ್ದರಿಂದ ಟೊಮ್ಯಾಟೊ ಬೆಳೆಗಾರರು ಅಂತಹ ವಾತಾವರಣ ಇದ್ದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು.

ಅಂಗಮಾರಿ ರೋಗ ಹತೋಟಿ ಕ್ರಮಗಳು: ರೋಗದ ಪ್ರಾರಂಭಿಕ ಹಂತದಲ್ಲಿ 2.0 ಗ್ರಾಂ ಮ್ಯಾಂಕೋಜೆಬ್ ಅಥವಾ 3.0 ಗ್ರಾಂ ತಾಮ್ರದ ಆಕ್ಸಿಕ್ಲೊರೈಡ್ ಅಥವಾ 2.0 ಗ್ರಾಂ ಮೆಟಲಾಕ್ಷಿಲ್ ಮ್ಯಾಂಕೋಜೆಬ್‍ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ನಂತರದ ಹಂತಗಳಲ್ಲಿ/ ರೋಗದ ತೀವ್ರತೆ ಹೆಚ್ಚಾಗಿದ್ದಾಗ 2.0 ಗ್ರಾಂ ಫೊಸ್ಟೈಲ್-ಎಲ್ ಅಥವಾ 1.0 ಗ್ರಾಂ ಡೈಮಿಥೋಮಾರ್ಪ ಜೊತೆಗೆ 2.0 ಗ್ರಾಂ ಮೆಟಿರಾಮ ಅಥವಾ 2.0 ಗ್ರಾಂ ಸೈಮಾಕ್ಸಾನಿಲ್ + ಮ್ಯಂಕೋಜೆಬ್ ಅಥವಾ 3.0 ಗ್ರಾಂ ಫೆನಾಮಿಡೊನ್ ಮ್ಯಾಂಕೋಜೆಬ್ ಅಥವಾ 1.0 ಮಿ.ಲೀ. ಅಜೋಕ್ಸಿಸ್ಟ್ರೋಬಿನ್ ಅಥವಾ 2.0 ಗ್ರಾಂ ಪೈರಾಕ್ಲೋಸ್ಟ್ರೊಬಿನ್ ಮೆಟಿರಾಮ ಅಥವಾ 1.0 ಮಿ.ಲೀ. ಫ್ಯಾಮೊಕ್ಸಾಡೋನ್ ಸೈಮಾಕ್ಸಾನಿಲ್‍ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೆಕು.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ನಿಮ್ಮ ಜಿಲ್ಲೆಯ ಹಾರ್ಟಿಕ್ಲಿನಿಕ್ ಸಂಪರ್ಕಿಸಬಹುದು.(ಮಾಹಿತಿ ಕೃಪೆ: ವಾರ್ತಾ ಇಲಾಖೆ)

English summary
What is the solution for Phytophthora infestans bacterial leaf blight of Tomato. Phytophthora infestans is a microorganism that causes the serious tomato disease known as leaf blight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X