ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಬಿಕ್ಕಟ್ಟುಗಳನ್ನು ಪರಿಹರಿಸಲು ಸರ್ಕಾರ ಏನೆಲ್ಲಾ ಮಾಡಬೇಕು?

|
Google Oneindia Kannada News

ಕೊರೊನಾ ವೈರಸ್ (ಕೋವಿಡ್-19) ಸೋಂಕಿನ ಕಾರಣ ಕಳೆದ ಒಂದೂವರೆ ತಿಂಗಳಿನಿಂದ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳು ಸೊರಗಿವೆ. ಅಲ್ಪ ಸ್ವಲ್ಪ ಉಸಿರಾಡಲು ಅವಕಾಶ ಸಿಕ್ಕಿದ್ದ ಕೃಷಿ ಕ್ಷೇತ್ರದ ಮೇಲೂ ಬಹುದೊಡ್ಡ ಪೆಟ್ಟು ಬಿದ್ದಿದೆ. ಆ ಬಗ್ಗೆ ಚರ್ಚಿಸಿ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ನಿನ್ನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತ ಸಂಘಟನೆಗಳ ಮುಖಂಡರುಗಳ ಸಭೆ ಕರೆದಿದ್ದರು.

ತಿಂಗಳಿಗಾಗುವಷ್ಟು ದಿನಸಿ ಕೊಟ್ಟು- ಕೈಗೊಂದಿಷ್ಟು ಕಾಸು ಕೊಡಿ...
ಬೆಂಗಳೂರಿನಲ್ಲಿಯೇ ಇದ್ದು ಮುಖ್ಯಮಂತ್ರಿಗಳ ಗೃಹ ಕಚೇರಿ 'ಕೃಷ್ಣಾ'ಗೆ ತಲುಪಲು ಸಾಧ್ಯವಾದ ರೈತ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದರು. ಆದರೆ ಅನೇಕ ಕೃಷಿ ಚಿಂತಕರು, ರೈತ ಮುಖಂಡರು ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಅವರೆಲ್ಲರನ್ನು ಒನ್ ಇಂಡಿಯಾ ಸಂಪರ್ಕಿಸಿ ಅವರ ಸಲಹೆ ಸೂಚನೆಗಳನ್ನು ಪ್ರಕಟಿಸಲು ಮುಂದಾಗಿದೆ. ಮೊದಲನೆಯದಾಗಿ ಹಿರಿಯ ರೈತ ಮುಖಂಡರಾದ ಕೆ.ಟಿ.ಗಂಗಾಧರ್ ಒನ್ ಇಂಡಿಯಾ ಗೆ ನೀಡಿದ ಸಂದರ್ಶನದ ಸಾರಾಂಶ ಸರ್ಕಾರದ ಗಮನಕ್ಕೆ ಮತ್ತು ನಮ್ಮ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.

 ಹಿರಿಯ ರೈತ ಮುಖಂಡ ಕೆ.ಟಿ. ಗಂಗಾಧರ್ ಮಾತು

ಹಿರಿಯ ರೈತ ಮುಖಂಡ ಕೆ.ಟಿ. ಗಂಗಾಧರ್ ಮಾತು

ಇಷ್ಟು ದೀರ್ಘ ಅವಧಿಯ ಲಾಕ್ ಡೌನ್ ಎಲ್ಲ ಕ್ಷೇತ್ರಗಳನ್ನೂ ಕಂಗೆಡಿಸಿದೆ. ಬಹಳ ಮುಖ್ಯವಾಗಿ ಕೃಷಿ ಕ್ಷೇತ್ರದಲ್ಲಿ/ಗ್ರಾಮೀಣ ಪ್ರದೇಶಗಳಲ್ಲಿ ದುಡಿಮೆ ಇಲ್ಲವಾಗಿದೆ. ಮಾರುಕಟ್ಟೆ ಸರಪಳಿ ನಾಶವಾಗಿದೆ. ಪ್ರತಿ ವರ್ಷ ಯಾವ ಮುಂಗಾರು ಮಳೆಗೆ ರೈತರಿಗೆ ಹೆಚ್ಚಿನ ಹಣ ಹಾಗೂ ಸಂಪನ್ಮೂಲಗಳು ಬೇಕೋ ಅದೇ ಸಮಯಕ್ಕೆ ಅವರ ಬಳಿ ಹಣವಿಲ್ಲವಾಗಿದೆ. ಈ ಮೂರು ಅಂಶಗಳ ಬಗ್ಗೆ ಸರ್ಕಾರ ತುರ್ತಾಗಿ ಗಮನಹರಿಸಬೇಕು.

 ರೈತರಿಗೆ ಹೊಸ ಬೆಳೆ ಸಾಲ ನೀಡಬೇಕು

ರೈತರಿಗೆ ಹೊಸ ಬೆಳೆ ಸಾಲ ನೀಡಬೇಕು

ಆಹಾರ ಉತ್ಪಾದನೆ/ಆಹಾರ ಭದ್ರತೆ ದೇಶದ ಜವಾಬ್ದಾರಿ. ರೈತ ಉತ್ಪಾದಿಸುತ್ತಾನಷ್ಟೇ. ದೇಶದ ಆಹಾರ ಭದ್ರತೆ ಕಾಪಾಡಿಕೊಳ್ಳಬೇಕಾದ್ದು ಪ್ರಭುತ್ವದ ಕೆಲಸ. ಹಾಗಾಗಿ ಪ್ರತಿ ರೈತರಿಗೆ ಕೂಡಲೇ ಯಾವುದಾದರೂ ಮೂಲದಿಂದ ಬೆಳೆ ಸಾಲ ಸಿಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಹಳೆಯ ಬಾಕಿ ಎಷ್ಟೇ ಇರಲಿ, ಯಾವುದೇ ಬಾಬ್ತು ಅದಾಗಿರಲಿ. ಈ ಸಂದರ್ಭದಲ್ಲಿ ಅದ್ಯಾವುದನ್ನೂ ಲೆಕ್ಕಹಾಕದೆ ಹೊಸ ಬೆಳೆ ಸಾಲ ನೀಡಬೇಕು.

'ರಾಜ್ಯದ 30 ಜಿಲ್ಲೆಗಳ ಕೃಷಿ ಪರಿಸ್ಥಿತಿಯ ಸಮಗ್ರ ವರದಿ ತಯಾರು''ರಾಜ್ಯದ 30 ಜಿಲ್ಲೆಗಳ ಕೃಷಿ ಪರಿಸ್ಥಿತಿಯ ಸಮಗ್ರ ವರದಿ ತಯಾರು'

 ಯುವಕರಿಗೆ ಇದ್ದೂರಿನಲ್ಲೇ ಕೆಲಸ ಸಿಗಲಿ

ಯುವಕರಿಗೆ ಇದ್ದೂರಿನಲ್ಲೇ ಕೆಲಸ ಸಿಗಲಿ

ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದ ಅನೇಕ ಯುವಕರು ನನ್ನೂರು, ತನ್ನೂರು ಎಂಬ ಭಾವನೆಯಿಂದ ಮತ್ತೆ ಹಳ್ಳಿಗಳನ್ನು ಸೇರಿದ್ದಾರೆ. ಅವರಿಗೂ ಇದ್ದೂರಿನಲ್ಲಿಯೇ ಕೈತುಂಬಾ ಕೆಲಸ ಸಿಗುವಂತಾಗಬೇಕು. ಇದಕ್ಕೆ ಸರಳ ಮಾರ್ಗವೊಂದನ್ನು ಸೂಚಿಸುತ್ತೇನೆ. ಸರ್ಕಾರ ಇದನ್ನು ಗಂಭಿರವಾಗಿ ಪರಿಗಣಿಸಿದಲ್ಲಿ ಗ್ರಾಮೀಣ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಲ್ಲಿ ಸಂದೇಹವಿಲ್ಲ.

 ಉದ್ಯೋಗ ಖಾತ್ರಿ ಯೋಜನೆಯಡಿ ದಿನಗೂಲಿ ಸಿಗಲಿ

ಉದ್ಯೋಗ ಖಾತ್ರಿ ಯೋಜನೆಯಡಿ ದಿನಗೂಲಿ ಸಿಗಲಿ

ರೈತ ಸಮುದಾಯದ ಪ್ರತಿ ಕೆಲಸ- ಉಳುಮೆ, ಬಿತ್ತನೆ, ಕಳೆ ತೆಗೆಯುವುದು, ಔಷಧ-ಪೋಷಕಾಂಶಗಳ ಸಿಂಪರಣೆ, ಕೊಯಿಲು, ಒಕ್ಕಣೆ ಹೀಗೆ ಎಲ್ಲಾ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಮಂದಿಗೆ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ದಿನದ ಕೂಲಿ ಒದಗಿಸಬೇಕು. ಈಗಿನ ಸಂದರ್ಭದಲ್ಲಿ ಉದ್ಯೋಗ ಖಾತ್ರಿಯ ಮುಖಾಂತರವಾದರೂ ರೈತರ ಕೈಗೆ ಒಂದಿಷ್ಟು ಹಣ ಸೇರಿದರೆ ಅವರಿಗೆ ಕೊಳ್ಳುವ ಸಾಮರ್ಥ್ಯ ಬರುತ್ತದೆ.

 ಕೃಷಿ ಕ್ಷೇತ್ರ ಕಡೆಗಣಿಸಿದಿರೀ ಜೋಕೆ...

ಕೃಷಿ ಕ್ಷೇತ್ರ ಕಡೆಗಣಿಸಿದಿರೀ ಜೋಕೆ...

ಕೊಳ್ಳುವ ಸಾಮರ್ಥ್ಯ ಬರುತ್ತಿದ್ದಂತೆ, ನಿಧಾನವಾಗಿ ಲಾಕ್ ಡೌನ್ ಹೊಡೆತದಿಂದ ಚೇತರಿಸಿಕೊಳ್ಳುತ್ತಾರೆ. ನೀವು ಸದಾ ನೆನಪಿಟ್ಟುಕೊಳ್ಳಬೇಕಾದ ಸಂಗತಿ ಏನಪ್ಪಾ ಅಂದ್ರೆ, "ಕೃಷಿ ಕ್ಷೇತ್ರ ದೇಶದ ಜನರಿಗೆ ಎಂಪ್ಲಾಯ್ಮೆಂಟ್ ಗ್ಯಾರಂಟಿ ಮತ್ತು ಫುಡ್ ಗ್ಯಾರಂಟಿ" ಕೊಡಬಲ್ಲದು. ಆ ಕ್ಷೇತ್ರವನ್ನು ಕಡೆಗಣಿಸಿದರೆ ದೇಶ ಆಹಾರ ಇಲ್ಲದೆ ನರಳಬೇಕಾದ ಪರಿಸ್ಥಿತಿ ಎದುರಾದೀತು, ಜೋಕೆ...
(ರೈತ ಮುಖಂಡರ ಮತ್ತು ಕೃಷಿ ಚಿಂತಕರ ಸಲಹೆ ಸೂಚನೆಗಳ - ಸರಣಿ)
ಸರಣಿ ಮುಂದುವರೆಯುವುದು

English summary
Farmers Senior leader KT Gangadhar has expressed his views on what government should do to address the agriculture crisis now,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X