ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳದಲ್ಲಿ ದ್ರಾಕ್ಷಿ, ಕಲ್ಲಂಗಡಿ ಮೇಳಕ್ಕೆ ಚಾಲನೆ

|
Google Oneindia Kannada News

ಕೊಪ್ಪಳ, ಫೆಬ್ರವರಿ 19 : ಕೊಪ್ಪಳದಲ್ಲಿ ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಕರಬೂಜ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಲಾಗಿದೆ. ಫೆಬ್ರವರಿ 21ರ ತನಕ ಮೇಳ ನಡೆಯಲಿದ್ದು, ಬಗೆ-ಬಗೆಯ ಹಣ್ಣುಗಳ ರುಚಿಯನ್ನು ಸವಿಯಬಹುದಾಗಿದೆ.

ಕೊಪ್ಪಳ ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ತೋಟಗಾರಿಕೆ ಮಾರಾಟ ಮಹಾ ಮಂಡಳಿ ಹಾಗೂ ಜಿಲ್ಲಾ ಹಾಪ್‌ ಕಾಮ್ಸ್ ಸಹಯೋಗದಲ್ಲಿ ಮೇಳವನ್ನು ಆಯೋಜನೆ ಮಾಡಲಾಗಿದೆ. ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಮೇಳಕ್ಕೆ ಚಾಲನೆ ನೀಡಿದರು.

ಹಾಪ್‌ಕಾಮ್ಸ್‌ನಲ್ಲಿ ಬಾಯಲ್ಲಿ ನೀರೂರಿಸುವ ದ್ರಾಕ್ಷಿ-ಕಲ್ಲಂಗಡಿ ಮೇಳ ಹಾಪ್‌ಕಾಮ್ಸ್‌ನಲ್ಲಿ ಬಾಯಲ್ಲಿ ನೀರೂರಿಸುವ ದ್ರಾಕ್ಷಿ-ಕಲ್ಲಂಗಡಿ ಮೇಳ

ಮೇಳವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, "ಉತ್ತಮ ಗುಣಮಟ್ಟದ ಬೆಳೆಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ತೋಟಗಾರಿಕೆ ಇಲಾಖೆಯಿಂದ ಆಯೋಜಿಸಲಾದ ಈ ಮೇಳವು ಸಹಕಾರಿಯಾಗಲಿದೆ. ಯಾವುದೇ ಮಧ್ಯವರ್ತಿಗಳಿಲ್ಲದೇ ಸೂಕ್ತ ಬೆಲೆಯೊಂದಿಗೆ ರೈತರಿಗೆ ನೇರವಾಗಿ ಲಾಭ ದೊರೆಯಲಿದೆ" ಎಂದರು.

ಚರಂಡಿ ನೀರಲ್ಲಿ ಚಿನ್ನದಂಥ ಬೆಳೆ ತೆಗೆದ ಕೋಲಾರದ ಯುವ ರೈತಚರಂಡಿ ನೀರಲ್ಲಿ ಚಿನ್ನದಂಥ ಬೆಳೆ ತೆಗೆದ ಕೋಲಾರದ ಯುವ ರೈತ

Watermelon Kharbuja And Grape Mela In Koppal

ಸೆಲ್ಫೀ ಪಾಯಿಂಟ್: ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ ಮತ್ತು ಕರಬೂಜ ಬೆಳೆಯ ಪ್ರದರ್ಶನ ಮತ್ತು ಮಾರಾಟ ಮೇಳ ಅಂಗವಾಗಿ ದ್ರಾಕ್ಷಿ, ಕಲ್ಲಂಗಡಿ ಹಾಗೂ ಕರಬೂಜ ಹಣ್ಣುಗಳ ಮಾದರಿ ವಿನ್ಯಾಸದೊಂದಿಗೆ ಫೋಟೋ ತೆಗೆದುಕೊಳ್ಳಲು ಸೆಲ್ಪೀ ಪಾಯಿಂಟ್ ಸ್ಥಾಪಿಸಲಾಗಿದೆ. ದ್ರಾಕ್ಷಿ, ಕಲ್ಲಂಗಡಿ ಹಾಗೂ ಕರಬೂಜ ಹಣ್ಣುಗಳು ಮತ್ತು ಅವುಗಳ ಬಳ್ಳಿಗಳಿಂದ ಪಾಯಿಂಟ್ ಶೃಂಗರಿಸಲಾಗಿದೆ.

2 ರುಪಾಯಿಗೆ ಒಂದು ಬುಟ್ಟಿ ಟೊಮೆಟೋ, ನೊಂದ ರೈತ ಮಾಡಿದ್ದೇನು? 2 ರುಪಾಯಿಗೆ ಒಂದು ಬುಟ್ಟಿ ಟೊಮೆಟೋ, ನೊಂದ ರೈತ ಮಾಡಿದ್ದೇನು?

ವಿವಿಧ ತಳಿಯ ಹಣ್ಣುಗಳು: ಮೇಳದಲ್ಲಿ ವಿವಿಧ ರೀತಿಯ ದ್ರಾಕ್ಷಿ ತಳಿಗಳಾದ ತಾಮ್ಸಾನ್ ಸೀಡ್‌ಲೆಸ್, ಕಾಜು ಸೋನಾಕಾ, ಸೋನಾಕಾ, ಸೂಪರ ಸೋನಾಕಾ, ಮಾಣಿಕ್ ಚಮನ್, ಶರತ್ ಸೀಡ್‌ಲೆಸ್ (ಕಪ್ಪು ದ್ರಾಕ್ಷಿ), ದಾಳಿಂಬೆ ಭಗವಾ (ಕೇಸರ), ಸೂಪರ್ ಭಗವಾ, ಕಲ್ಲಂಗಡಿ ತಳಿಗಳಾದ ಸರಸ್ವತಿ, ಕಿರಣ, ಕಿರಣ-2, ಅನ್ಮೋಲ, ವಸುಧಾ, ವಿಶಾಲಾ, ಜನ್ನತ್, ಆರೋಹಿ, ಭೀಮ್, ಮಧುಶ್ರೀ, ನಾಮಧಾರಿ, ಶುಗರ್ ಬೇಬಿ, ಕರಬೂಜ ತಳಿಗಳಲ್ಲಿ ಮಧುಮತಿ, ಮೃದುಲಾ, ಸೇರಿದಂತೆ ವಿವಿಧ ತಳಿಯ ಹಣ್ಣುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ.

Watermelon Kharbuja And Grape Mela In Koppal

ಮೌಲ್ಯವರ್ಧಿತ ಉತ್ಪನ್ನಗಳನ್ನು ಸಹ ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ತೋಟಗಾರಿಕೆ ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಿದ ಸಸಿ-ಕಸಿಗಳನ್ನು ಕೂಡ ಮಾರಾಟಕ್ಕೆ ಇಡಲಾಗಿದ್ದು ರೈತರು ಇದನ್ನು ವೀಕ್ಷಿಸಬಹುದು.

ದ್ರಾಕ್ಷಿ ಬೆಳೆಗಾರರಿಗೆ ಅನುಕೂಲವಾಗುವಂತೆ ಮಾದರಿ ಒಣ ದ್ರಾಕ್ಷಿ ಘಟಕವನ್ನು ಸ್ಥಾಪಿಸಲಾಗಿದೆ. ಅಲ್ಲದೇ ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ ಮತ್ತು ಕರಬೂಜ ಹಣ್ಣುಗಳನ್ನು ಸೇವಿಸುವುದರಿಂದ ನಮಗೆ ಸಿಗುವ ಲಾಭಗಳ ಕುರಿತು ಮಾಹಿತಿ ಫಲಕಗಳನ್ನು ಪ್ರದರ್ಶನದಲ್ಲಿ ಅವಳವಡಿಸಲಾಗಿದೆ.

English summary
Koppal district administration and horticulture department organized watermelon, kharbuja and grape mela. Farmers can visit mela till February 21, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X