• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈತ ಹಾಗೂ ದೇಶ ವಿರೋಧಿ ಎಲ್ಲಾ ಕೃಷಿ ಮಸೂದೆಗಳನ್ನು ತಿರಸ್ಕರಿಸಿ

|

ಕಳೆದ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರಕಾರ ದೌರ್ಜನ್ಯದಿಂದ ಮತ್ತು ಪಾರ್ಲಿಮೆಂಟ್ ನಡಾವಳಿಯ ನೀತಿನಿಯಮಗಳನ್ನು ಗಾಳಿಗೆ ತೂರಿ, ಮಾತ್ರವಲ್ಲಾ, ಬಾಧಿತ ಯಾವುದೇ ಜನ ಸಮುದಾಯದ ಜೊತೆ ಚರ್ಚಿಸದೇ, ದೇಶದ ರೈತರ ಹಾಗೂ ಶೇ.90 ರಷ್ಟು ಜನರನ್ನು ತೀವ್ರವಾಗಿ ಬಾಧಿಸುವ, ಸರ್ವನಾಶಕ್ಕೆ ಕಾರಣವಾಗುವ ಕೃಷಿ ಹಾಗೂ ಕಾರ್ಮಿಕ ವಿರೋಧಿ ಮಸೂದೆಗಳನ್ನು ಅಂಗೀಕರಿಸಿದೆ.

ಅದೇ ರೀತಿ, ಕರ್ನಾಟಕ ಸರಕಾರವು ಹಾಲಿ ವಿಧಾನ ಸಭಾ ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸದೇ, ಬಾಧಿತ ಜನರ ನಡುವೆಯು ಚರ್ಚಿಸದೇ, ಕೇಂದ್ರ ಸರಕಾರದ ಮಸೂದೆಗಳಿಗೆ ಪೂರಕವಾಗಿ, ಕಾರ್ಪೊರೇಟ್ ಕಂಪನಿಗಳ ಲೂಟಿಗೆ ನೆರವಾಗುವ ಭೂಸುಧಾರಣೆ ತಿದ್ದುಪಡಿ ಮಸೂದೆ-2020, ಎಪಿಎಂಸಿ ತಿದ್ದುಪಡಿ ಮಸೂದೆ-2020, ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆ-2020 ಮತ್ತು ವಿದ್ಯುತ್ ಚ್ಛಕ್ತಿ ತಿದ್ದುಪಡಿ ಮಸೂದೆ ಮುಂತಾಗಿ ತರಾತುರಿಯಲ್ಲಿ ಜನತೆ ಮತ್ತು ವಿರೋದ ಪಕ್ಷಗಳ ತೀವ್ರವಾದ ವಿರೋಧದ ನಡುವೆ ಅಂಗೀಕರಿಸಿದೆ. ಈ ಎರಡೂ ದೌರ್ಜನ್ಯದ ಕ್ರಮಗಳು ಜಾಗತಿಕ ಕಾರ್ಪೊರೇಟ್ ಕಂಪನಿಗಳ ಲೂಟಿಗೆ ಮಾತ್ರವೇ ಸಹಾಯಕವಾಗಲಿವೆ.

ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್; ಕೋಡಿಹಳ್ಳಿ ಚಂದ್ರಶೇಖರ್

ಈ ದುರ್ನಡೆ, ನಮ್ಮ ದೇಶದ ಸ್ವಾತಂತ್ರ್ಯ, ಸಾರ್ವ ಭೌಮತೆಗೆ, ಸ್ವಾವಲಂಬನೆಗೆ, ಆಹಾರ ಭದ್ರತೆಗಳಿಗೆ, ದೇಶೀಯ ಕೈಗಾರಿಕಾಭಿವೃದ್ಧಿಗೆ ಗಂಭೀರ ಅಪಾಯವನ್ನುಂಟು ಮಾಡಲಿವೆ.

ಕೃಷಿ ಸಂಬಂಧಿ ಉಪಕಸುಬುಗಳಿಗೆ ಧಕ್ಕೆ

ಕೃಷಿ ಸಂಬಂಧಿ ಉಪಕಸುಬುಗಳಿಗೆ ಧಕ್ಕೆ

ಸಾವಿರಾರು ವರ್ಷಗಳಿಂದ ದೇಶಕ್ಕೆ ಅನ್ನ ಒದಗಿಸುತ್ತಿದ್ದ ಅನ್ನದಾತರಾದ ರೈತ ಹಾಗೂ ಕೃಷಿ ಸಂಬಂಧಿ ಉಪಕಸುಬುಗಳಲ್ಲಿ ತೊಡಗಿದ ಕುರಿ, ಕೋಳಿ, ಹಂದಿ, ಮೀನು ಸಾಕಾಣೆದಾರರು, ಮತ್ತಿತರೇ ಸಮುದಾಯಗಳ ಮತ್ತು ದಲಿತ ಸಂಕುಲಗಳು, ನಾಶವಾಗಲಿವೆ. ದೊಡ್ಡ ಸಂಖ್ಯೆಯ ಸಣ್ಣ ವ್ಯಾಪಾರಿಗಳು, ವರ್ತಕರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಕೋಟ್ಯಾಂತರ ಕಾರ್ಮಿಕರು ಬೀದಿಪಾಲಾಗಲಿದ್ದಾರೆ. ಸಹಕಾರಿ ಚಳುವಳಿಯು ನಾಶವಾಗಲಿದೆ. ದೇಶದ ಗ್ರಾಹಕ ಸಮುದಾಯ ವ್ಯಾಪಕವಾದ ಲೂಟಿಗೊಳಗಾಗಲಿದೆ.

ಇದು ಚಾರಿತ್ರಿಕ ದೌರ್ಜನ್ಯಕ್ಕೆ, ಪ್ರಮಾದ

ಇದು ಚಾರಿತ್ರಿಕ ದೌರ್ಜನ್ಯಕ್ಕೆ, ಪ್ರಮಾದ

ಇಂತಹದೊಂದು ಚಾರಿತ್ರಿಕ ದೌರ್ಜನ್ಯಕ್ಕೆ, ಪ್ರಮಾದಕ್ಕೆ ಈ ಸಂಸತ್ ಹಾಗೂ ಕರ್ನಾಟಕ ವಿಧಾನ ಸಭೆಗಳು ಸಾಕ್ಷಿಯಾಗುತ್ತಿವೆ. ಆದ್ದರಿಂದ, ಸಾಮೂಹಿಕ ವಿನಾಶಕ್ಕೆ ಕಾರಣವಾಗುತ್ತಿರುವ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳ ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ದೇಶವನ್ನು ಮತ್ತು ಜನತೆಯನ್ನು ಒತ್ತೆಯಿಟ್ಟು ಸಂಕಷ್ಟಕ್ಕೀಡು ಮಾಡಲಿರುವ ಈ ಮಸೂದೆಗಳನ್ನು ದೇಶದ ಸ್ವಾತಂತ್ರ್ಯ, ಸ್ವಾವಲಂಬನೆ, ಸಾರ್ವಭೌಮತೆ, ಪ್ರಜಾಪ್ರಭುತ್ವ ಹಾಗೂ ಆಹಾರ ಭದ್ರತೆಗಳನ್ನು ಮತ್ತು ರೈತ ಸಂಕುಲ ಸೇರಿದಂತೆ ಎಲ್ಲ ಬಾಧೆಗೊಳಗಾಗುವ ಜನ ಸಮುದಾಯಗಳನ್ನು ಸಂರಕ್ಷಿಸಲು ಸದರಿ ಮಸೂದೆಗಳನ್ನು ತಿರಸ್ಕರಿಸುವ ತಮ್ಮ ಚಾರಿತ್ರಿಕ ಕರ್ತವ್ಯ ಮೆರೆಯಲು ಮನವಿ ಮಾಡುತ್ತೇವೆ.

ಕರ್ನಾಟಕ ಬಂದ್; ಸಂಘಟನೆಗಳ ಪ್ರಮುಖ ಬೇಡಿಕೆಗಳು

ಬಂದ್ ಆಚರಣೆಗೆ ಕರೆ ನೀಡಿದ ಸಂಘಟನೆ ಹಾಗೂ ಮುಖಂಡರು

ಬಂದ್ ಆಚರಣೆಗೆ ಕರೆ ನೀಡಿದ ಸಂಘಟನೆ ಹಾಗೂ ಮುಖಂಡರು

ಯು. ಬಸವರಾಜ

KPRS ಪ್ರಧಾನ ಕಾರ್ಯದರ್ಶಿ

ಕೋಡಿಹಳ್ಳಿ ಚಂದ್ರಶೇಖರ್

KRRS ರಾಜ್ಯ ಅಧ್ಯಕ್ಷರು

AIKSCC ಕೇಂದ್ರ ಸಮಿತಿ ಸದಸ್ಯರು

ಕವಿತಾ ಕುರುಗಂಟಿ

AIKSCC ಕೇಂದ್ರ ಸಮಿತಿ ಸದಸ್ಯರು

ಪಿ.ವಿ. ಲೋಕೇಶ್

AIKS ರಾಜ್ಯ ನಾಯಕರು

AIKSCC ರಾಜ್ಯ ನಾಯಕರು

ಚಂದ್ರಪ್ಪ ಹೊಸ್ಕೇರಾ

AIAWU ರಾಜ್ಯ ಪ್ರಧಾನ ಕಾರ್ಯದರ್ಶಿ

AIKSCCರಾಜ್ಯ ನಾಯಕರು

ಹೆಚ್.ವಿ. ದಿವಾಕರ್

RKS ರಾಜ್ಯ ಪ್ರಧಾನ ಕಾರ್ಯದರ್ಶಿ

AIKSCC ರಾಜ್ಯ ನಾಯಕರು

ಕುಮಾರ್ ಸಮತಲ

KJS ರಾಜ್ಯ ನಾಯಕರು

AIKSCC ರಾಜ್ಯ ನಾಯಕರು

ಬಡಗಲಪುರ ನಾಗೇಂದ್ರ

KRRS ರಾಜ್ಯ ಅಧ್ಯಕ್ಷರು

AIKSCC ರಾಜ್ಯ ನಾಯಕರು

ಚಾಮರಸ ಮಾಲಿ ಪಾಟೀಲ್

KRRS ರಾಜ್ಯ ಗೌರವ ಅಧ್ಯಕ್ಷರು

AIKSCC ರಾಜ್ಯ ನಾಯಕರು

ಡಾ| ಜರ್ನಾಧನ

AIKMS ರಾಜ್ಯ ನಾಯಕರು

AIKSCC ರಾಜ್ಯ ನಾಯಕರು

ಜಿ.ಸಿ. ಬಯ್ಯಾರೆಡ್ಡಿ

KPRS ರಾಜ್ಯ ಅಧ್ಯಕ್ಷರು

AIKSCC ಸಂಚಾಲಕರು

  ಈವತ್ತಿನ ಪ್ರತಿಭಟನೆಗೆ ಕಾರಣವಾಯಿತಾ BJP government !! | Oneindia Kannada
  ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೃಷಿ ವಿರೋಧಿ ನೀತಿ

  ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೃಷಿ ವಿರೋಧಿ ನೀತಿ

  ಕರ್ನಾಟಕ ಸರಕಾರ ಈಚೆಗೆ ಘೋಷಿಸಿರುವ ಕೃಷಿ ವಿರೋಧಿ ಭೂಸುಧಾರಣೆ ತಿದ್ದುಪಡಿ ಕಾಯ್ದೆ- 2020 ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ-2020, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ-2020 ಹಾಗೂ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ-2020 ಹಾಗೂ ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆ ಮುಂತಾದ ಸುಗ್ರೀವಾಜ್ಞೆಗಳನ್ನು ವಾಪಾಸು ಪಡೆಯಬೇಕು ಹಾಗೂ ಅವುಗಳನ್ನು ಶಾಸನಗಳನ್ನಾಗಿ ರೂಪಿಸುವ ಪ್ರಯತ್ನಗಳನ್ನು ತಕ್ಷಣ ಕೈಬಿಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸಲಾಗಿದೆ.

  ಸೋಮವಾರ ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ?

  ಈ ಕಾಯ್ದೆಗಳಿಂದ ಬಾಧಿತರಾಗಲಿರುವ ಎಲ್ಲಾ ರೈತರು, ಕೃಷಿಕೂಲಿಕಾರರು, ಕಸುಬುದಾರರು, ಕೃಷಿ ಮಾರುಕಟ್ಟೆ ವರ್ತಕರು, ನೌಕರರು, ಹಾಲು ಉತ್ಪಾದಕರು, ಸಹಕಾರ ಸಂಘಗಳು, ಕೋಳಿ ಕುರಿ ಸಾಕಾಣೆದಾರರು, ಮಾಂಸ ವ್ಯಾಪಾರಿಗಳು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಮಾಲೀಕರು, ಕಾರ್ಮಿಕರು ಹಾಗೂ ಸಮಸ್ತ ಗ್ರಾಹಕ ಸಮುದಾಯ ಈ ಚಳವಳಿಯಲ್ಲಿ ಭಾಗಿಯಾಗಲು ಮನವಿ ಮಾಡಲಾಗಿದೆ.

  English summary
  Various Farmers association KRRS, AIAWU, AIKSCC, AIKS call for Total Bandh and oppose Farm bill which is gainst interest of the nation and farmers.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X