ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರ ಸಿಎಂ ಜಗನ್ ಕನಸಿನ ಯೋಜನೆಗೆ ಯುಎನ್‌ಒ ಪ್ರಶಸ್ತಿ

|
Google Oneindia Kannada News

ಅಮರಾವತಿ, ಮೇ 05; ಆಂಧ್ರ ಪ್ರದೇಶ ಸರ್ಕಾರದ ಜನಪ್ರಿಯ ಯೋಜನೆ ವಿಶ್ವಸಂಸ್ಥೆ ನೀಡುವ ಯುಎನ್‌ಒ ಪ್ರಶಸ್ತಿಗೆ ಭಾಜನವಾಗಿದೆ. ಈ ಕುರಿತು ರಾಜ್ಯದ ಕೃಷಿ ಸಚಿವ ಕಾಕಣಿ ಗೋವರ್ಧನ ರೆಡ್ಡಿ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕನಸಿನ ಕೂಸು Rythu Bharosa Kendras (RBK) ಯೋಜನೆ. ವಿಶ್ವಸಂಸ್ಥೆಯ ಪ್ರಶಸ್ತಿ ಲಭಿಸಿರುವುದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಯೋಜನೆ ಮನ್ನಣೆ ಪಡೆಯಲು ಮತ್ತಷ್ಟು ಸಹಕಾರಿಯಾಗಿದೆ.

ಭಾರತ ದೇಶದ ಈ ಮಾದರಿ ಯೋಜನೆಯನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಗುರುತಿರುವುದು ವಿಶ್ವಮಟ್ಟದಲ್ಲೇ ಆಹಾರ ಭದ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ಕೃಷಿ ಸಚಿವರು ಹೇಳಿದ್ದಾರೆ.

UNO Award For Andhra Pradesh Jagan Mohan Reddy Dream Project

ಸಚಿವ ಕಾಕಣಿ ಗೋವರ್ಧನ ರೆಡ್ಡಿ ಪ್ರತಿಪಕ್ಷದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿ, "ಹಿಂದಿನ ಸರ್ಕಾರ ಬಾಕಿ ಉಳಿಸಿದ್ದ ಬಾಕಿ ಹಣವನ್ನು ಜಗನ್ ನೇತೃತ್ವದ ಸರ್ಕಾರ ಪಾವತಿಸಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ 23.4 ಕೋಟಿ ರೂ. ಪರಿಹಾರ, ಸುಮಾರು ರೂ. 784 ಕೋಟಿ ಬಡ್ಡಿ ರಹಿತ ಸಾಲ ಪಾವತಿಸಲಾಗಿದೆ. ಪ್ರಸ್ತುತ ಸರ್ಕಾರ ಕೃಷಿ ಕ್ಷೇತ್ರ ಮತ್ತು ರೈತರ ಕಲ್ಯಾಣಕ್ಕೆ ಬದ್ಧವಾಗಿವೆ" ಎಂದರು.

ಏನಿದು ಯೋಜನೆ?; ರೈತರಿಗೆ ವ್ಯವಸಾಯ ಅನುಕೂಲ ಆಗುವ ರೀತಿಯಲ್ಲಿ ಅವರಿಗೆ ಕಾಲ ಕಾಲಕ್ಕೆ ಬಿತ್ತನೆ ಬೀಜದಿಂದ ಹಿಡಿದು ಮಾರಾಟ, ಕೃಷಿ ಸಲಕರಣೆಗಳು, ರಸಗೊಬ್ಬರ, ವಿನಾಯ್ತಿ ನೀಡುವಂತಹ ಯೋಜನೆ ರೈತು ಭರೋಸಾ ಕೇಂದ್ರ (ಆರ್‌ಬಿಕೆ). ಯೋಜನೆ ರೈತರ ಅಗತ್ಯಗಳನ್ನು ಪೂರೈಸುವ ಮೂಲಕ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ.

UNO Award For Andhra Pradesh Jagan Mohan Reddy Dream Project

ಜಗನ್ ನೇತೃತ್ವದ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಗ್ರಾಮೀಣ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಆರ್‌ಬಿಕೆಗಳಿಗೆ ಮಾದರಿಯಾಗಿದೆ. 10,778 ಮಳಿಗೆಗಳು ಕೃಷಿ ಯಂತ್ರೋಪಕರಣಗಳ ಜೊತೆಗೆ ಗುಣಮಟ್ಟದ ಬೀಜಗಳು, ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಪೂರೈಸುವ ಜೊತೆಗೆ, ರೈತರು ಕಛೇರಿಗಳನ್ನು ಅಲೆಯು ಬದಲು ಸ್ಥಳೀಯ ಮಟ್ಟದಲ್ಲೇ ಸುಲಭ ರೀತಿಯಲ್ಲಿ ಎಲ್ಲಾ ರೀತಿಯ ಸೌಲಭ್ಯ ಒದಗಿಸಲು ಸಹಕಾರಿಯಾಗಿದೆ.

ಪ್ರಶಸ್ತಿ ಪ್ರಶಸ್ತಿ ನೀಡುವ ಉದ್ದೇಶ?; ಯುಎನ್‌ಒಅನ್ನು 1945 ರಲ್ಲಿ ಎರಡನೇ ಮಹಾಯುದ್ಧದ ನಂತರ 51 ದೇಶಗಳು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು, ರಾಷ್ಟ್ರಗಳ ನಡುವೆ ಸೌಹಾರ್ದ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಮತ್ತು ಸಾಮಾಜಿಕ ಪ್ರಗತಿ, ಉತ್ತಮ ಜೀವನ ಮಟ್ಟ ಮತ್ತು ಮಾನವ ಹಕ್ಕುಗಳನ್ನು ಉತ್ತೇಜಿಸಲು ಸ್ಥಾಪಿಸಲಾಯಿತು.

UNO Award For Andhra Pradesh Jagan Mohan Reddy Dream Project

193 ಸದಸ್ಯ ರಾಷ್ಟ್ರಗಳೊಂದಿಗೆ, ವಿಶ್ವಸಂಸ್ಥೆಯು ವ್ಯಾಪಕ ಶ್ರೇಣಿಯ ಸಮಸ್ಯೆಗಳ ಮೇಲೆ ಕ್ರಮ ಕೈಗೊಳ್ಳುವ ಏಕೈಕ ಸಂಸ್ಥೆಯಾಗಿರುತ್ತದೆ. ಈ ಸಂಸ್ಥೆಯ ಅಂಗ ಸಂಸ್ಥೆಗಳಲ್ಲಿ ಒಂದಾದ ವಿಶ್ವ ಆಹಾರ ಸಂಸ್ಥೆಯು ರೋಮ್‌ನಲ್ಲಿ ತಮ್ಮ ಪ್ರಧಾನ ಕಛೇರಿಯನ್ನು ಹೊಂದಿದೆ. ಈ ಸಂಸ್ಥೆಯು ಇಂಟರ್ನ್ಯಾಷನಲ್ ಫೌಂಡೇಶನ್ ಫಾರ್ ಅಗ್ರಿಕಲ್ಚರಲ್ ಡೆವಲಪ್ಮೆಂಟ್ (IFAD) ಸೇರಿದಂತೆ ವಿವಿಧ ಕಾರ್ಯಗಳನ್ನು ಸಾಧಿಸಲು ವಿಶ್ವಸಂಸ್ಥೆಯು ಉಪಕ್ರಮಗಳನ್ನು ರಚಿಸಿದೆ.

UNO Award For Andhra Pradesh Jagan Mohan Reddy Dream Project

ವಿಶ್ವಾದ್ಯಂತ ಹಸಿವು ಮತ್ತು ಬಡತನದ ವಿರುದ್ಧದ ಹೋರಾಟಕ್ಕೆ ಮತ್ತು ಕೃಷಿಯೊಳಗಿನ ನೈಸರ್ಗಿಕ ಸಂಪನ್ಮೂಲಗಳ ಸಮರ್ಥನೀಯ ಮತ್ತು ಸಮರ್ಥ ಬಳಕೆಯನ್ನು ಉತ್ತೇಜಿಸುವುದು ಈ ಸಂಸ್ಥೆಯ ಮಹತ್ತರ ಗುರಿಯಾಗಿರುತ್ತದೆ.

ತಮ್ಮ ಜನರಿಗೆ ಸುಧಾರಿತ ಆಹಾರದ ಗುಣಮಟ್ಟ ಮತ್ತು ಸುರಕ್ಷತೆ ಮತ್ತು ಸಂಪೂರ್ಣ ಆಹಾರ ಮೌಲ್ಯ ಸರಪಳಿಯ ಸುಸ್ಥಿರತೆಗಾಗಿ ಕೃಷಿಕರಿಗೆ ಸರ್ಕಾರಗಳು ತೆಗೆದುಕೊಳ್ಳು ಉಪಕ್ರಮಗಳನ್ನು ಮತ್ತು ಅದರ ಜನಪ್ರಿಯತೆಯನ್ನು ಮನಗೊಂಡು ಪ್ರಶಸ್ತಿ ನೀಡಲಾಗುತ್ತದೆ.

English summary
UNO award for Andhra Pradesh chief minister Jagan Mohan Reddy dream project. The Rythu Bharosa Kendras (RBK) nominated for the UN0 award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X