ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಯೂರಿಯಾ ನೀತಿ, ರೈತ ಸ್ನೇಹಿ: ಅನಂತ್ ಕುಮಾರ್

By Mahesh
|
Google Oneindia Kannada News

ನವದೆಹಲಿ, ಮೇ.14: ಹೊಸ ಯೂರಿಯಾ ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂದಿನ ನಾಲ್ಕು ಹಣಕಾಸು ವರ್ಷಗಳಿಗೆ ಅನ್ವಯವಾಗುವಂತೆ ಹೊಸ ಯೂರಿಯಾ ನೀತಿಗೆ (2015) ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಇಂಧನ ಕ್ಷಮತೆ ಹಾಗೂ ಯೂರಿಯಾ ಉತ್ಪಾದನೆ ಹೆಚ್ಚಳ ಮುಂತಾದ ಗುರಿ ಹೊಂದಲಾಗಿದೆ. ಸಂಪೂರ್ಣ ರೈತ ಸ್ನೇಹಿಯಾಗಿದೆ ಎಂದು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

ಆಂತರಿಕ ಉತ್ಪಾದನೆಯನ್ನು 2 ದಶಲಕ್ಷ ಟನ್‌ನಷ್ಟು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ವಾರ್ಷಿಕ 4,800 ಕೋಟಿ ರೂಪಾಯಿ ಮೊತ್ತದ ಸಹಾಯಧನವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.[13 ಲಕ್ಷ ಟನ್ ಗೊಬ್ಬರ ತಯಾರಿಸಲು ಯೋಜನೆ]

ಬೇವಿನ ಲೇಪನವುಳ್ಳ ಯೂರಿಯಾ: ಯೂರಿಯಾದ ಗರಿಷ್ಠ ಚಿಲ್ಲರೆ ಮಾರಾಟ ಬೆಲೆಯನ್ನು ಹೆಚ್ಚಿಸಲಾಗಿಲ್ಲ. 50 ಕೆ.ಜಿ. ತೂಕದ ಯೂರಿಯಾ ಚೀಲವು ರೈತರಿಗೆ 268 ರುಪಾಯಿಗಳಿಗೆ ಸಿಗಲಿದೆ. ಇದಕ್ಕೆ ಪ್ರಾದೇಶಿಕಗಳನ್ನು ಸೇರಿಸುವುದಿಲ್ಲ. ಕಹಿಬೇವಿನ ಲೇಪನವುಳ್ಳ ಯೂರಿಯಾ ಚೀಲವೊಂದಕ್ಕೆ 14 ರುಪಾಯಿ ಹೆಚ್ಚುವರಿ ಬೆಲೆ ತೆರಬೇಕಾಗುತ್ತದೆ.

Union Cabinet approves New Urea Policy

ಇಲಾಖೆಯ ಮುಂದಿನ ಗುರಿ: ಮುಂದಿನ ನಾಲ್ಕು ಹಣಕಾಸು ವರ್ಷಗಳಿಗೆ ಅನ್ವಯವಾಗುವಂತೆ ಹೊಸ ಯೂರಿಯಾ ನೀತಿಗೆ (2015) ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಆಂತರಿಕ ಯೂರಿಯಾ ಉತ್ಪಾದನೆಯನ್ನು ಹೆಚ್ಚಿಸುವುದು, ಯೂರಿಯಾ ಘಟಕಗಳಲ್ಲಿ ಇಂಧನ ಕ್ಷಮತೆಯನ್ನು ಹೆಚ್ಚಿಸುವುದು, ಸರಕಾರದ ಸಹಾಯಧನದ ಹೊರೆಯನ್ನು ತಗ್ಗಿಸುವುದು. [ಪ್ರಮುಖ ಸ್ಥಾನದಿಂದ ಅನಂತ್ ಕುಮಾರ್ ಹೊರಕ್ಕೆ]

ಸಹಾಯಧನದ ರೂಪದಲ್ಲಿ ನೇರವಾಗಿ 2,618 ಕೋಟಿ ರೂಪಾಯಿ ಹಾಗೂ ಇಂಧನ ಉಳಿತಾಯ ಸೇರಿದಂತೆ ಬೇರೆಬೇರೆ ಕ್ರಮಗಳಿಂದ ಪರೋಕ್ಷವಾಗಿ 2,211 ಕೋಟಿ ರೂಪಾಯಿ ಉಳಿತಾಯದ ಉದ್ದೇಶವನ್ನು ಹೊಸ ಯೂರಿಯಾ ನೀತಿಯಲ್ಲಿ ಹೊಂದಲಾಗಿದೆ. ಒಟ್ಟಾರೆಯಾಗಿ 4,829 ಕೋಟಿ ರೂಪಾಯಿ ಉಳಿತಾಯದ ಗುರಿಯನ್ನು ಹೊಂದಲಾಗಿದೆ

ಹೊಸ ನೀತಿಯಲ್ಲಿ ವಾರ್ಷಿಕ 2 ದಶಲಕ್ಷ ಟನ್ ಹೆಚ್ಚುವರಿ ಯೂರಿಯಾ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ. ದೇಶದ ಆಂತರಿಕ ಯೂರಿಯಾ ಉತ್ಪಾದನೆಯು ವಾರ್ಷಿಕ 22 ದಶಲಕ್ಷ ಟನ್‌ ನಷ್ಟಿದೆ. ಇದರಿಂದಾಗಿ ವಾರ್ಷಿಕ 8 ದಶಲಕ್ಷ ಟನ್ ಯೂರಿಯಾವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. [ರಸಗೊಬ್ಬರ ಅಮೋನಿಯಂ ನೈಟ್ರೇಟಿಗೆ ನಿಷೇಧ?]

ಭಾರತದಲ್ಲಿ ಸುಮಾರು 310 ಲಕ್ಷ ಮೆಟ್ರಿಕ್ ಟನ್ ಗಳಷ್ಟು ಪ್ರಮಾಣದ ರಸಗೊಬ್ಬರ ಬೇಡಿಕೆ ಇದ್ದು, 80 ಲಕ್ಷ ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳಲಾಗುತ್ತಿದೆ.

ಯೂರಿಯಾ ಕೊರತೆ ನಿವಾರಣೆ: ಅಗತ್ಯ ವಸ್ತು ಪೂರೈಕೆ ಕಾಯ್ದೆ 57ರ ಅನ್ವಯ ಎಲ್ಲಾ ರಸಗೊಬ್ಬರ ಪೂರೈಕೆದಾರರು ದೇಶದ ಯಾವುದೇ ಮೂಲೆಯಲ್ಲಿದ್ದರೂ ಯೂರಿಯಾ, ರಸಗೊಬ್ಬರ ಕೊರತೆ ಕಂಡು ಬಂದರೂ ತಕ್ಷಣವೇ ಪೂರೈಕೆ ಮಾಡುವಂತೆ ವ್ಯವಸ್ಥೆ ಕಲ್ಪಿಸಲಾಗುವುದು, ಗೊಬ್ಬರ ಸಾಗಾಣಿಕೆಗೆ ಸಬ್ಸಿಡಿ ಒದಗಿಸಲಾಗಿದೆ.

English summary
The Union Cabinet presided by Prime Minister Narendra Modi approved the New Urea policy which is comprehensive and has multiple objectives. The new policy promotes maximizing indigenous production of Urea and enables energy efficiency of the plants said Minister for Chemicals & Fertilizers Ananth Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X