ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಕೈಗೆ ಕೋಳ, ನಾಯಕ್ ಕಿಡಿಕಿಡಿ

By Staff
|
Google Oneindia Kannada News

Uncivilised government handcuffs farmers
ಬೆಂಗಳೂರು, ಜ. 8 : ಧಾರವಾಡ ಕಾರಾಗೃಹದಲ್ಲಿ ರೈತರ ಕೈಗೆ ಕೋಳ ತೊಡಿಸಿದ ಕ್ರಮವನ್ನು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಸ್ ಆರ್ ನಾಯಕ್ ತೀವ್ರವಾಗಿ ಖಂಡಿಸಿದ್ದಾರೆ.

ನಗರದ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ನೆರೆ ಸಂತ್ರಸ್ಥರ ಬದುಕು ಬವಣೆಗಳನ್ನು ಸೆರೆ ಹಿಡಿದಿರುವ ಛಾಯಾಗ್ರಾಹಕ ಈಶ ಅವರ ಛಾಯಾಚಿತ್ರಗಳ ಪ್ರದರ್ಶನವನ್ನು ವೀಕ್ಷಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಇದೊಂದು ಅತ್ಯಂತ ಕೆಟ್ಟ, ಹೀನ ಕೆಲಸ. ಇದಕ್ಕೆ ಕಾರಣರಾದವರನ್ನು ಕೇವಲ ಸೇವೆಯಿಂದ ಅಮಾನತು ಮಾಡಿದರೆ ಸಾಲದು. ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭದ್ರತೆಗೆ ನಿಯೋಜಿಸಲಾಗಿರುವ ಪೊಲೀಸರಿಗೇ ಜೀವ ಬೆದರಿಕೆ ಇರುವಂತಹ ಅಪರಾಧಿಗಳಿಗೆ ಮಾತ್ರ ಕೈಕೋಳ ತೊಡಿಸಲು ಕಾನೂನಿನಲ್ಲಿ ಅವಕಾಶವಿದೆ. ಅನ್ಯಾಯದ ವಿರುದ್ಧ ಸ್ವಯಂ ಬಂಧನಕ್ಕೊಳಗಾಗಿ ಉಪವಾಸ ಮಾಡಿ ಅಸ್ವಸ್ಥರಾದ ರೈತರನ್ನು ಆಸ್ಪತ್ರೆಗೆ ಕರೆದೊಯ್ಯಲು ಬೇಡಿ ತೊಡಿಸಿದ್ದು ಅಮಾನವೀಯ. ಸರಕಾರದ ಈ ಧೋರಣೆ ಅಮಾನುಷವಾದುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X