ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್ ಯುದ್ಧ ಪರಿಣಾಮ- ಕೃಷಿ ಕ್ಷೇತ್ರಕ್ಕೆ ಅದ ನಷ್ಟ 1.8 ಲಕ್ಷಕೋಟಿ

|
Google Oneindia Kannada News

ಏಪ್ರಿಲ್ ತಿಂಗಳಲ್ಲಿ ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿದ್ದು ಇನ್ನೂ ನಿಂತಿಲ್ಲ. ಸತತವಾಗಿ ಉಕ್ರೇನ್ ಮೇಲೆ ರಷ್ಯಾ ಪ್ರಹಾರ ನಡೆಸುತ್ತಿದೆ. ಉಕ್ರೇನ್ ಬಗ್ಗುತ್ತಿಲ್ಲ, ರಷ್ಯಾ ಬಿಡುತ್ತಿಲ್ಲ ಎನ್ನುವಂತಾಗಿದೆ. ಈಗ ಬೇರೆ ದೇಶಗಳೂ ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮೂಲಕ ಬೆಂಬಲ ನೀಡುತ್ತಿವೆ. ಸದ್ಯಕ್ಕೆ ಈ ಯುದ್ಧ ಬಿಡುವ ಲಕ್ಷಣ ಕಾಣುತ್ತಿಲ್ಲ.

ಯುದ್ಧವೆಂದರೆ ಅದು ಸಾಮಾನ್ಯದ ವಿಚಾರವಲ್ಲ. ಅದೆಷ್ಟು ಸಾವು ನೋವು ನಷ್ಟಗಳು..! ಲೆಕ್ಕವೇ ಸಿಕ್ಕುವುದಿಲ್ಲ. ಒಂದು ವರದಿ ಪ್ರಕಾರ, ಉಕ್ರೇನ್ ದೇಶದ ಕೃಷಿ ಕ್ಷೇತ್ರಕ್ಕೆ ಈ ಯುದ್ಧದಿಂದಾಗಿ 23 ಬಿಲಿಯನ್ ಯುಎಸ್ ಡಾಲರ್‌ನಷ್ಟು ನಷ್ಟ ಆಗಿದೆಯಂತೆ. 23 ಬಿಲಿಯನ್ ಡಾಲರ್ ಎಂದರೆ ಸುಮಾರು 1.8 ಲಕ್ಷಕೋಟಿ ರೂಪಾಯಿ.

PM Kisan eKYC : ಇ-ಕೆವೈಸಿ ತುಂಬದಿದ್ದರೆ ಸಿಗಲ್ಲ ಹಣ, ಇದು ಹೊಸ ಡೆಡ್‌ಲೈನ್PM Kisan eKYC : ಇ-ಕೆವೈಸಿ ತುಂಬದಿದ್ದರೆ ಸಿಗಲ್ಲ ಹಣ, ಇದು ಹೊಸ ಡೆಡ್‌ಲೈನ್

ಉಕ್ರೇನ್ ಸರಕಾರದ ಸಹಭಾಗಿತ್ವದಲ್ಲಿ ನಡೆಸಲಾದ ಅಧ್ಯಯನ ವರದಿಯೊಂದರ ಪ್ರಕಾರ ಯುದ್ಧದ ಪರಿಣಾಮವಾಗಿ ಪರೋಕ್ಷವಾಗಿ ಉಂಟಾಗಿರುವ ನಷ್ಟ 23 ಬಿಲಿಯನ್ ಡಾಲರ್ ಇದೆ. ಕೃಷಿ ಉತ್ಪನ್ನ ಕುಸಿತ, ಸರಬರಾಜು ವ್ಯವಸ್ಥೆಯಲ್ಲಿನ ವ್ಯತ್ಯಯ, ಕಡಿಮೆ ಬೆಲೆಗೆ ರಫ್ತು ಇತ್ಯಾದಿ ಕಾರಣಗಳಿಂದಾಗಿ ನಷ್ಟಗಳು ಆಗಿರುವ ಅಂದಾಜು ಇದೆ.

 ಪೂರ್ವದಲ್ಲೇ ತಪ್ಪಿದ ಆದಾಯ

ಪೂರ್ವದಲ್ಲೇ ತಪ್ಪಿದ ಆದಾಯ

ಯುದ್ಧದಿಂದ ಆಗಿರುವ ನೇರ ಪರಿಣಾಮ ಎಂದರೆ ಭೌತಿಕ ಕೃಷಿ ಬೆಳೆಗಳು ಮತ್ತು ಕೃಷಿ ಉತ್ಪನ್ನ ಸಂಗ್ರಹಗಳು ನಾಶಗೊಂಡಿರುವುದು. ಹಾಗೆಯೇ, ಆದಾಯ ಸಾಧ್ಯತೆ ಕೈತಪ್ಪಿ ಆಗಿರುವ ನಷ್ಟಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸರಿಯಾದ ಗೊಬ್ಬರದ ಸರಬರಾಜು ಮೊದಲಾದ ಸೌಕರ್ಯಗಳಿಲ್ಲದ ಕಾರಣಕ್ಕೆ ಕೃಷಿ ಉತ್ಪಾದನೆಯಲ್ಲಿ ಇಳಿಮುಖವಾಗಿರುವುದು. ರೈತರು ಅಥವಾ ಕೃಷಿ ಬೆಳೆಗಾರರು ಯುದ್ಧದಿಂದಾಗಿ ಕೃಷಿ ಉತ್ಪಾದನೆ ಕಾರ್ಯದಲ್ಲಿ ಹೆಚ್ಚುವರಿ ವೆಚ್ಚಗಳನ್ನು ಭರಿಸಬೇಕಾಗಿ ಬಂದದ್ದು ಇವೆಲ್ಲವೂ ಪರೋಕ್ಷ ನಷ್ಟ, ಅಥವಾ ಪೂರ್ವದಲ್ಲೇ ತಪ್ಪಿದ ಆದಾಯ ಎಂದು ಪರಿಭಾವಿಸಲಾಗಿದೆ.

ಈ ಬಗ್ಗೆ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ದದ ಸ್ಥಿತಿ ಇಲ್ಲದ ಸಹಜ ಸಂದರ್ಭದಲ್ಲಿ ಕೃಷಿ ಉತ್ಪಾದನೆಯಿಂದ ಎಷ್ಟು ಆದಾಯ ಬರುತ್ತಿತ್ತು, ಮತ್ತು ಈಗ ವಾಸ್ತವದಲ್ಲಿ ಎಷ್ಟು ಆದಾಯ ಸಿಗುತ್ತಿದೆ, ಇವೆರಡರ ನಡುವಿನ ವ್ಯತ್ಯಾಸವೇ ಪರೋಕ್ಷ ಆದಾಯ ನಷ್ಟ ಅಥವಾ ಫೋರ್ಗೋನ್ ರೆವೆನ್ಯೂ (Foregone Revenue) ಎನ್ನಬಹುದು.

"ನಷ್ಟ ಎಷ್ಟಾಗಿದೆ ಎಂದು ಅಂದಾಜು ಮಾಡುವುದು ಮುಖ್ಯ. ಇದರಿಂದ ಒಂದು ಕ್ಷೇತ್ರಕ್ಕೆ ಎಷ್ಟು ಹಿನ್ನಡೆಯಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ಚೇತರಿಕೆಗೆ ಏನು ಅಗತ್ಯ ಎಂಬುದನ್ನೂ ಅಂದಾಜು ಮಾಡಲು ಅನುಕೂಲವಾಗುತ್ತದೆ" ಎಂದು ಉಕ್ರೇನ್‌ನ ಕೆಎಸ್‌ಇ ಆಗ್ರೋಸೆಂಟರ್‌ನ ತಜ್ಞರೊಬ್ಬರು ಹೇಳಿದ್ದಾರೆ.

"ಕೃಷಿ ಕ್ಷೇತ್ರದಲ್ಲಿ ಕೈತಪ್ಪಿರುವ ಆದಾಯದ ಹೆಚ್ಚಿನ ಭಾಗದಷ್ಟು ಹಣವು ಮುಂದಿನ ದಿನಗಳಲ್ಲಿ ಬೆಳೆ ಬಿತ್ತನೆಗೆ ಅಥವಾ ಪಶು ಆಹಾರಕ್ಕೆ ಬಳಕೆಗೆ ಅಗತ್ಯವಿರುತ್ತದೆ. ಈ ಪ್ರದೇಶದ ಕೃಷಿಕರಿಗೆ ಆಗಿರುವ ನಷ್ಟಕ್ಕೆ ಉತ್ತಮವಾದ ಪರಿಹಾರ ಕೊಡದೇ ಹೋದರೆ ಕೃಷಿ ಚಟುವಟಿಕೆ ಮುಂದುವರಿಸುವುದು ಕಷ್ಟ ಸಾಧ್ಯವಾಗುತ್ತದೆ" ಎಂದು ಕೃಷಿ ತಜ್ಞ ರೋಮನ್ ನೇಯ್ಟರ್ ಹೇಳುತ್ತಾರೆ.

 ರಷ್ಯಾದ ಅಗ್ಗದ ತೈಲ, ಭಾರತಕ್ಕೆ ಸುಗ್ಗಿ- ಏಪ್ರಿಲ್‌ನಿಂದೀಚೆ ಖರೀದಿ ಪ್ರಮಾಣ 50 ಪಟ್ಟು ಹೆಚ್ಚು ರಷ್ಯಾದ ಅಗ್ಗದ ತೈಲ, ಭಾರತಕ್ಕೆ ಸುಗ್ಗಿ- ಏಪ್ರಿಲ್‌ನಿಂದೀಚೆ ಖರೀದಿ ಪ್ರಮಾಣ 50 ಪಟ್ಟು ಹೆಚ್ಚು

 ಪರೋಕ್ಷ ನಷ್ಟ ಹೇಗೆ?

ಪರೋಕ್ಷ ನಷ್ಟ ಹೇಗೆ?

ಪರೋಕ್ಷ ಆದಾಯನಷ್ಟ ಎಂದರೆ ಆದಾಯ ಸಾಧ್ಯತೆ ಕೈತಪ್ಪಿದ್ದೆನ್ನಬಹುದು. ಇನ್ನು ಪರೋಕ್ಷ ನಷ್ಟ ಎಂದರೆ ಕೃಷಿ ಇಳುವರಿಯಲ್ಲಿ ಕುಸಿತವಾಗಿರುವುದರಿಂದ ಉಂಟಾಗುವ ನಷ್ಟ. ಉಕ್ರೇನ್ ದೇಶದಲ್ಲಿ ಪರೊಕ್ಷ ಬೆಳೆ ನಷ್ಟದಿಂದಾಗಿ 9.6 ಬಿಲಿಯನ್ ಯುಎಸ್ ಡಾಲರ್ (ಸುಮಾರು 75 ಸಾವಿರ ಕೋಟಿ ರೂಪಾಯಿ) ಮೊತ್ತದಷ್ಟು ನಷ್ಟವಾಗಿರುವ ಅಂದಾಜು ಇದೆ.

 ಉಕ್ರೇನ್ ದೇಶದ ಕೃಷಿ:

ಉಕ್ರೇನ್ ದೇಶದ ಕೃಷಿ:

ಉಕ್ರೇನ್ ದೇಶದಲ್ಲಿ ಕೃಷಿ ಉತ್ಪಾದನೆ ಬಹಳ ನಡೆಯುತ್ತಿತ್ತು. ಗೋದಿ, ಸೂರ್ಯಕಾಂತಿ, ಬಾರ್ಲಿ, ಜೋಳ, ರೇಪ್‌ಸೀಡ್ ಅಥವಾ ಕೆನೊಲಾ (Rapeseed -ಸಾಸಿವೆ ಜಾತಿಗೆ ಸೇರಿದ ಕಾಳು) ಇತ್ಯಾದಿ ಪ್ರಮುಖ ಬೆಳೆಗಳು. ಉಕ್ರೇನ್‌ನಲ್ಲಿ ತೈಲ ಇತ್ಯಾದಿ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿದೆ. ಜೊತೆಗೆ ಕೃಷಿಯೂ ಪ್ರಮುಖ ಆದಾಯ ಮೂಲ. ಅಲ್ಲಿನ ಜಿಡಿಪಿಗೆ ಕೃಷಿಯಿಂದ ಬರುವ ಪಾಲು ಶೇ. 11ರಷ್ಟಿದೆ. ಉಕ್ರೇನ್ ದೇಶದ ಶೇ. 20ರಷ್ಟು ಕಾರ್ಮಿಕರು ಕೃಷಿ ಕ್ಷೇತ್ರದಲ್ಲಿದ್ದಾರೆ. ಉಕ್ರೇನ್ ದೇಶ ಒಟ್ಟಾರೆ ಶೇ. 40ರಷ್ಟು ರಫ್ತು ಕೃಷಿ ಉತ್ಪನ್ನಗಳದ್ದೇ ಆಗಿದೆ.

ಅತಿ ಹೆಚ್ಚು ಗೋಧಿ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಉಕ್ರೇನ್ ಐದನೇ ಸ್ಥಾನ ಒಂದಿದೆ. ರೇಪ್‌ಸೀಡ್ ರಫ್ತು ಮತ್ತು ಜೋಳ ರಫ್ತಿನಲ್ಲಿ ಉಕ್ರೇನ್ ಅಗ್ರ ದೇಶಗಳ ಸಾಲಿನಲ್ಲಿದೆ.

 ಯುದ್ಧದಿಂದ ಯಾವ ಬೆಳೆಗಳಿಗೆ ನಷ್ಟ?

ಯುದ್ಧದಿಂದ ಯಾವ ಬೆಳೆಗಳಿಗೆ ನಷ್ಟ?

2022ರಲ್ಲಿ ಉಕ್ರೇನ್ ದೇಶದಲ್ಲಿ ಗೋದಿ ಬೆಳೆಯ ಉತ್ಪಾದನೆ ಶೇ. 33ರಷ್ಟು ಇಳಿಕೆಯಾಗಿದೆ. ಸೂರ್ಯಕಾಂತಿ ಶೇ. 32 ಮತ್ತು ಬಾರ್ಲಿ ಶೇ. 31ರಷ್ಟು ಇಳುವರಿ ಕಡಿಮೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಈ ಬೆಳೆಗಳು ಬೆಳೆಯಲಾಗುವ ಪ್ರದೇಶಗಳು ಬಹುತೇಕ ಯುದ್ಧದಿಂದ ನೇರವಾಗಿ ಪರಿಣಾಮ ಅನುಭವಿಸಿರುವಂಥವೇ.

 ಪಶುಸಂಗೋಪನೆಗೆ ನಷ್ಟ

ಪಶುಸಂಗೋಪನೆಗೆ ನಷ್ಟ

ಯುದ್ಧದ ಪರಿಣಾಮವಾಗಿ ಉಕ್ರೇನ್ ದೇಶದ ಪಶುಸಂಗೋಪನೆ ಕ್ಷೇತ್ರಕ್ಕೆ 682 ಮಿಲಿಯನ್ ಯುಎಸ್ ಡಾಲರ್ (ಸುಮಾರು 5300 ಕೋಟಿ ರೂಪಾಯಿ) ಹಣ ನಷ್ಟವಾಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಇಲ್ಲಿ ಬೆಳೆ ನಷ್ಟಕ್ಕೂ ಪಶುಸಂಗೋಪನೆ ಆದಾಯ ನಷ್ಟಕ್ಕೂ ವ್ಯತ್ಯಾಸ ಇದೆ. ಬೆಳೆಯಲ್ಲಿ ಕುಂಠಿತವಾದರೆ ಒಂದು ವರ್ಷದ ಅವಧಿಗೆ ನಮ್ಮ ಆದಾಯ ಕಡಿಮೆಯಾಗುತ್ತದೆ. ಮುಂದಿನ ಸೀಸನ್‌ನಲ್ಲಿ ಪುನಃ ಬೆಳೆದು ಅದಾಯ ಮರುಗಳಿಸಬಹುದು. ಆದರೆ, ಪಶುಗಳನ್ನು ಕಳೆದುಕೊಂಡರೆ ಅವುಗಳನ್ನು ಪೋಷಿಸಿ ಬೆಳೆಸಿ ಮತ್ತೆ ಆದಾಯದ ಸ್ಥಿತಿಗೆ ಬರಲು ಕೆಲ ವರ್ಷಗಳೇ ಬೇಕಾಗುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Loss due to war in Ukraine is estimated to be 1.8 Lakh Crore Rupee. It is indirect losses due to production decreases, logistics disruptions, and lower prices for exports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X