ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಜ ಹಂಚಿಕೆಯಲ್ಲಿ ಸರ್ಕಾರಿ ಹಾಗೂ ಸಹಕಾರಿ ಸಂಸ್ಥೆಗಳಿಗೆ ಮೊದಲ ಆದ್ಯತೆ

|
Google Oneindia Kannada News

ಬೆಂಗಳೂರು, ಮೇ 30: ''ಕೃಷಿ ಇಲಾಖೆಯಿಂದ ಬೀಜ ಹಂಚಿಕೆ ಮಾಡುವಾಗ ಸರ್ಕಾರಿ ಹಾಗೂ ಸಹಕಾರಿ ಸಂಸ್ಥೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು'' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಕೃಷಿ ಸಚಿವ ಬಿ.ಸಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ಕಚೇರಿಯಲ್ಲಿ ಮುಂಗಾರು ಹಂಗಾಮಿಗೆ ಎಣ್ಣೆ ಕಾಳು ಬೀಜ ದಾಸ್ತಾನು ನೆಲಗಡಲೆ) ಹಾಗೂ ಪೂರೈಕೆ ಕುರಿತು ಸಭೆ ನಡೆಯಿತು.

ಮಿಡತೆ ದಾಳಿ ಎದುರಿಸಲು ರಾಜ್ಯ ಸಜ್ಜಾಗಿದೆ: ಸಚಿವ ಬಿ.ಸಿ ಪಾಟೀಲ್ಮಿಡತೆ ದಾಳಿ ಎದುರಿಸಲು ರಾಜ್ಯ ಸಜ್ಜಾಗಿದೆ: ಸಚಿವ ಬಿ.ಸಿ ಪಾಟೀಲ್

ಸಭೆ ಬಳಿಕ ಮಾತನಾಡಿದ ಬಿ.ಸಿ.ಪಾಟೀಲ್, ''ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಪೂರೈಸುವುದು ಕೃಷಿ ಸಚಿವನಾಗಿರುವ ನನ್ನ ಕರ್ತವ್ಯ. ರೈತರ ಬದುಕು ಸಂಪೂರ್ಣವಾಗಿ ಭೂಮಿ ಮೇಲೆ ಅವಲಂಬಿತವಾಗಿರುವುದರಿಂದ ರೈತನಿಗೆ ಯಾವುದೇ ಕಾರಣಕ್ಕೂ ನಕಲಿ, ಕಳಪೆ ಬೀಜ ವಿತರಣೆಯಾಗಬಾರದು ಎಂದು ಪಣತೊಟ್ಟಿದ್ದು, ಕೃಷಿ ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸುಮಾರು 11 ಸಾವಿರ ಕ್ವಿಂಟಲ್ ಕಳಪೆ ಮೆಕ್ಕೆಜೋಳ ಬಿತ್ತನೆ ಬೀಜವನ್ನು ಪತ್ತೆ ಹಚ್ಚಲಾಗಿದೆ'' ಎಂದರು.

ನನ್ನ ಕರ್ತವ್ಯ ಎಂದ ಬಿ.ಸಿ.ಪಾಟೀಲ್

ನನ್ನ ಕರ್ತವ್ಯ ಎಂದ ಬಿ.ಸಿ.ಪಾಟೀಲ್

''ಕೃಷಿ ಮತ್ತು ಇಲಾಖೆಗೆ ಸಂಬಂಧಪಟ್ಟ ವಿಷಯಗಳನ್ನು ತಿಳಿದುಕೊಳ್ಳುವುದು ನನ್ನ ಕರ್ತವ್ಯ. ಮುಂಗಾರು ಪ್ರಾರಂಭವಾಗುತ್ತಿದ್ದು, ರೈತರಿಗೆ ಅಗತ್ಯವಾದ ಬೀಜ ಪೂರೈಕೆ ಸಂಬಂಧ ಬೀಜ ನಿಗಮದೊಂದಿಗೆ ಚರ್ಚಿಸಲಾಗಿದೆ. ನಿಗಮದಲ್ಲಿರುವ ಸಮಸ್ಯೆಗಳೇನು ಎಂಬುದನ್ನು ಪರಿಶೀಲಿಸಲಾಗಿದೆ. ಉತ್ತಮ ಗುಣಮಟ್ಟದ ಬೀಜ ಪೂರೈಕೆಗೆ ಗಮನಹರಿಸಲಾಗಿದೆ'' ಎಂದು ಬಿ.ಸಿ.ಪಾಟೀಲ್ ಹೇಳಿದರು.

ನೂತನ ಶೇಂಗಾ ತಳಿ

ನೂತನ ಶೇಂಗಾ ತಳಿ

''ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ರೈತರು 10 ವರ್ಷದ ಹಿಂದಿನ ಶೇಂಗಾ (ನೆಲಗಡಲೆ) ಬೀಜ ಖರೀದಿಸುವಾಗ ಯಾವುದೇ ಸಬ್ಸಿಡಿ ದೊರೆಯುವುದಿಲ್ಲ. ಹೀಗಾಗಿ ನಮ್ಮ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯ ಉಪಕುಲಪತಿಗಳಿಗೆ ಉತ್ತಮ ನೂತನ ಶೇಂಗಾ ತಳಿಗಳನ್ನು ವಿಶ್ವವಿದ್ಯಾಲಯದಿಂದ ಕಂಡುಹಿಡಿಯುವಂತೆ ಸೂಚಿಸಲಾಗಿದೆ'' - ಬಿ.ಸಿ.ಪಾಟೀಲ್

ಸರ್ಕಾರ ಇಟ್ಟ ಹೆಜ್ಜೆ ಹಿಂದೆ ಇಡದು: ಕೃಷಿ ಸಚಿವ ಬಿ.ಸಿ.ಪಾಟೀಲ್ಸರ್ಕಾರ ಇಟ್ಟ ಹೆಜ್ಜೆ ಹಿಂದೆ ಇಡದು: ಕೃಷಿ ಸಚಿವ ಬಿ.ಸಿ.ಪಾಟೀಲ್

ಏಕರೂಪ ಬೆಲೆ

ಏಕರೂಪ ಬೆಲೆ

''ಮೆಕ್ಕೆಜೋಳ, ಶೇಂಗಾ ಸೇರಿದಂತೆ ಎಲ್ಲಾದಕ್ಕೂ ಮುಂದಿನ ದಿನಗಳಲ್ಲಿ ಏಕರೂಪ ಬೆಲೆ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ರಾಜ್ಯ ಸರ್ಕಾರದಿಂದ ಲಾಕ್ ಡೌನ್ ಸಮಯದಲ್ಲಿ ನಷ್ಟವಾದ ಹೂವು, ಹಣ್ಣು, ತರಕಾರಿ ಬೆಳೆಗಳಿಗೆ ಪರಿಹಾರ ಘೋಷಿಸಲಾಗಿದೆ. ಮೆಕ್ಕೆಜೋಳಕ್ಕೂ ಪರಿಹಾರ ಘೋಷಿಸಲಾಗಿದೆ. ಇದರೊಂದಿಗೆ ವಿವಿಧ ವೃತ್ತಿಪರ ಕಾರ್ಮಿಕರಿಗೆ ಸಮುದಾಯದವರಿಗೆ ಸರ್ಕಾರ ಪರಿಹಾರ ಘೋಷಿಸಿದೆ'' - ಬಿ.ಸಿ.ಪಾಟೀಲ್

ವಿವಿಧ ಉತ್ಪನ್ನ ಬಿಡುಗಡೆ

ವಿವಿಧ ಉತ್ಪನ್ನ ಬಿಡುಗಡೆ

ಇದೇ ವೇಳೆ ಕೆ.ಓ.ಎಫ್ (ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿ) ಸಂಸ್ಥೆಯಿಂದ ವಿವಿಧ ಉತ್ಪನ್ನ ಬಿಡುಗಡೆ ಮಾಡಿದರು. ಸಭೆಯಲ್ಲಿ ಮಹಾಮಂಡಳಿಯ ಅಧ್ಯಕ್ಷರೂ ಆಗಿರುವ ಸಂಸದ ಅಣ್ಣಾಸಾಹೇಬ ಶಂಕರ್ ಜೊಲ್ಲೆ, ಉಪಾಧ್ಯಕ್ಷ ಶಂಕ್ರಪ್ಪಗೌಡ, ಮಾಜಿ ಅಧ್ಯಕ್ಷರು ಹಾಗೂ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ವ್ಯವಸ್ಥಾಪಕ ನಿರ್ದೇಶಕ ಬಿ.ಸೋಮಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

English summary
Top priority for Government and Co-operatives in Seed Distribution says Minister BC Patil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X