ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಣಿಗಳಿಗೆ ಕಾಲು ಮತ್ತು ಬಾಯಿ ಜ್ವರ; ಎಚ್ಚರ ವಹಿಸಲು ರೈತರಿಗೆ ಸಲಹೆ

|
Google Oneindia Kannada News

ಹಾಸನ, ಅಕ್ಟೋಬರ್ 01 : ಕಾಲು ಮತ್ತು ಬಾಯಿ ಜ್ವರವು ಗೊರಸುಳ್ಳ ಸಾಕು ಪ್ರಾಣಿಗಳಲ್ಲಿ ಕಂಡು ಬರುವ ರೋಗವಾಗಿದೆ. ದನ, ಎಮ್ಮೆ, ಕುರಿ, ಮೇಕೆ, ಹಂದಿಗಳಲ್ಲಿ ವೈರಸ್‍ನಿಂದ ಉಂಟಾಗುವ ಸಾಂಕ್ರಾಮಿಕ ರೋಗವಿದು. ಸಕಾಲದಲ್ಲಿ ಲಸಿಕೆ ಹಾಕಿಸಿ ರೋಗವನ್ನು ನಿಯಂತ್ರಿಸದಿದ್ದರೆ, ಜಾನುವಾರುಗಳು ಸಾವನ್ನಪ್ಪಲಿದ್ದು, ರೈತರಿಗೆ ನಷ್ಟ ಉಂಟಾಗಲಿದೆ.

ಈ ಜ್ವರ ಕಂಡುಬಂದಂತಹ ಜಾನುವಾರುಗಳಲ್ಲಿ ಹಾಲಿನ ಉತ್ಪತ್ತಿ ಕುಂಠಿತವಾಗುತ್ತದೆ. ಸಂತಾನೋತ್ಪತ್ತಿ ಕುಂಠಿತವಾಗುವ ಸಂಭವವೂ ಇರುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಣಿ ಜನ್ಯ ಉತ್ಪನ್ನಗಳನ್ನು (ಹಾಲು, ಮಾಂಸ ಇತರೆ) ರಪ್ತು ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ರೈತರು ಎಚ್ಚರಿಕೆ ವಹಿಸಬೇಕು.

 ಮಳೆ ಕೊರತೆ ಜೊತೆ ಅಂತರ್ಜಲ ಸಮಸ್ಯೆ; ಬೆಳೆಗೆ ಟ್ಯಾಂಕರ್ ನೀರು ಹಾಯಿಸಿದ ರೈತ ಮಳೆ ಕೊರತೆ ಜೊತೆ ಅಂತರ್ಜಲ ಸಮಸ್ಯೆ; ಬೆಳೆಗೆ ಟ್ಯಾಂಕರ್ ನೀರು ಹಾಯಿಸಿದ ರೈತ

ಕಾಲು ಮತ್ತು ಬಾಯಿ ಜ್ವರ ರೋಗದಿಂದ ವಯಸ್ಕ ಜಾನುವಾರುಗಳ ಸಾವು ಸಂಭವಿಸುವುದು ಕಡಿಮೆ. ಆದರೆ, ಕರುಗಳು ಯಾವುದೇ ರೋಗದ ಚಿಹ್ನೆಗಳು ಇಲ್ಲದೆ ಮರಣ ಹೊಂದುತ್ತವೆ. ವಯಸ್ಕ ಜಾನುವಾರುಗಳಲ್ಲಿ ಕಾಲು ಮತ್ತು ಬಾಯಿಯಲ್ಲಿ ಹುಣ್ಣು ಕಾಣಿಸಿಕೊಳ್ಳ್ಳುತ್ತವೆ. ಇದರಿಂದ ಜಾನುವಾರುಗಳು ಮೇವು, ನೀರು ಸೇವಿಸದೇ ಸೊರಗುತ್ತವೆ.

ಜೇನು ಕೃಷಿ; ಕಡಿಮೆ ಬಂಡವಾಳ, ಅಧಿಕ ಲಾಭಜೇನು ಕೃಷಿ; ಕಡಿಮೆ ಬಂಡವಾಳ, ಅಧಿಕ ಲಾಭ

ಈ ರೋಗ ನಿಯಂತ್ರಣ ಹಾಗೂ ರೋಗ ನಿರ್ಮೂಲನೆ ಮಾಡುವುದು ಬಹಳ ಮುಖ್ಯ. ಕೇಂದ್ರ ಸರ್ಕಾರವು ರಾಷ್ಟ್ರೀಯ ಮಟ್ಟದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಇದಕ್ಕಾಗಿ ಹಮ್ಮಿಕೊಂಡಿದೆ. ರೋಗ ನಿಯಂತ್ರಣಕ್ಕೆ ಆರ್ಥಿಕ ಸಹಾಯವನ್ನು ನೀಡುತ್ತಿದೆ. (ಮಾಹಿತಿ : ಹಾಸನ ವಾರ್ತೆ)

ಈ ಗ್ರಾಮಸ್ಥರು ಕುರಿ ಸಾಕಿದ್ದಕ್ಕೆ ದಿನಕ್ಕೆ 80 ಸಾವಿರ ರೂಪಾಯಿ ನಷ್ಟ! ಈ ಗ್ರಾಮಸ್ಥರು ಕುರಿ ಸಾಕಿದ್ದಕ್ಕೆ ದಿನಕ್ಕೆ 80 ಸಾವಿರ ರೂಪಾಯಿ ನಷ್ಟ!

ಕೇಂದ್ರ ಸರ್ಕಾರದಿಂದ ವೆಚ್ಚ

ಕೇಂದ್ರ ಸರ್ಕಾರದಿಂದ ವೆಚ್ಚ

ಪ್ರತಿ 6 ತಿಂಗಳಿಗೊಮ್ಮೆ 8 ವರ್ಷಗಳಿಂದ ದನ, ಎಮ್ಮೆ ಮತ್ತು ಹಂದಿಗಳಿಗೆ ಸಾಮೂಹಿಕವಾಗಿ ಕಾಲು ಬಾಯಿ ಜ್ವರ ರೋಗದ ವಿರುದ್ಧ ಲಸಿಕೆ ಹಾಕಲಾಗುತ್ತಿದೆ. ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದ ಜಂಟಿಯಾಗಿ ಲಸಿಕಾ ಕಾರ್ಯಕ್ರಮದ ವೆಚ್ಚ ಭರಿಸಲಾಗುತ್ತಿತ್ತು. ಸೆಪ್ಟೆಂಬರ್ 2019ರಲ್ಲಿ ಪ್ರಧಾನಮಂತ್ರಿಗಳು ಈ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ ಸರ್ಕಾರದಿಂದಲೇ ಭರಿಸುವುದಾಗಿ ಘೋಷಣೆ ಮಾಡಿದ್ದಾರೆ.

ಲಸಿಕಾ ಕಾರ್ಯಕ್ರಮ ನಡೆಯಲಿದೆ

ಲಸಿಕಾ ಕಾರ್ಯಕ್ರಮ ನಡೆಯಲಿದೆ

ಅಕ್ಟೋಬರ್ 2 ರಿಂದ ನವೆಂಬರ್ 15 ರವರೆಗೆ 45 ದಿನಗಳ ಕಾಲ ಈ ಬಾರಿ ಲಸಿಕಾ ಕಾರ್ಯಕ್ರಮ ನಡೆಸಲಾಗುತ್ತದೆ. ಪ್ರತಿ ಹಳ್ಳಿಗಳಲ್ಲಿ ಮೈಕ್ರೋ ಮ್ಯಾಪಿಂಗ್ ಕೈಗೊಳ್ಳಲಾಗಿದ್ದು, ಬಯಲು ಪ್ರದೇಶದಲ್ಲಿ 100 ರಿಂದ 120 ರಾಸುಗಳಿಗೆ ಒಂದು ಬ್ಲಾಕ್‍ನಂತೆ, ಮಲೆನಾಡು ಪ್ರದೇಶದಲ್ಲಿ 60 ರಿಂದ 70 ರಾಸುಗಳಿಗೆ ಒಂದು ಬ್ಲಾಕ್‍ನಂತೆ ಪಟ್ಟಿ ಮಾಡಲಾಗಿದೆ. ಪಟ್ಟಿಯನ್ನು ಅಗತ್ಯಾನುಸಾರ ಪರಿಷ್ಕರಿಸಿ ಲಸಿಕಾ ಕಾರ್ಯಕ್ರಮ ಕೈಗೊಳ್ಳಲಾಗುತ್ತದೆ.

ಯಾವುದಕ್ಕೆ ಲಸಿಕೆ ಹಾಕಿಸಬಹುದು

ಯಾವುದಕ್ಕೆ ಲಸಿಕೆ ಹಾಕಿಸಬಹುದು

ಎಲ್ಲಾ ದನ, ಎಮ್ಮೆಗಳಿಗೆ ಕಡ್ಡಾಯವಾಗಿ ಕಾಲು ಮತ್ತು ಬಾಯಿ ಜ್ವರ ರೋಗದ ಲಸಿಕೆ ಹಾಕಲಾಗುತ್ತದೆ. 3 ತಿಂಗಳಿಗಿಂತ ಕಡಿಮೆ ವಯಸ್ಸಿನ ಕರುಗಳು, ಅನಾರೋಗ್ಯದಿಂದ ಬಳಲುತ್ತಿರುವ ರಾಸುಗಳು ಮತ್ತು ತುಂಬು ಗರ್ಭಾವಸ್ಥೆಯಲ್ಲಿರುವ ಪ್ರಾಣಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರಾಸುಗಳಿಗೂ ಲಸಿಕೆ ಹಾಕಿಸಬಹುದು.

48 ತಂಡಗಳ ರಚನೆ

48 ತಂಡಗಳ ರಚನೆ

ಹಾಸನ ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮಕ್ಕಾಗಿ 48 ತಂಡಗಳನ್ನು ರಚನೆ ಮಾಡಲಾಗಿದೆ. ಪಶುವೈದ್ಯಾಧಿಕಾರಿಗಳು ತಂಡದ ಮುಖ್ಯಸ್ಥರಾಗಿರುತ್ತಾರೆ. ಲಸಿಕಾ ತಂಡಗಳಿಗಾಗಿ ಹಾಸನ ಹಾಲು ಒಕ್ಕೂಟದಿಂದ 43 ವಾಹನಗಳನ್ನು ಒದಗಿಸಲು ಕೋರಲಾಗಿದೆ. ಲಸಿಕಾ ಕಾರ್ಯಕ್ರಮವು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅಕ್ಟೋಬರ್ 2 ರಿಂದ ನವೆಂಬರ್ 15 ರವರೆಗೆ 45 ದಿನಗಳು ಕಾಲ ನಡೆಯಲಿದೆ.

English summary
Tips to farmers to take care of animals from foot and mouth disease (FMD). It is a viral disease affects cattle, swine, sheep, goats and other cloven-hoofed ruminants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X