ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರಿ ಮಳೆ; ಕೊಳೆಯಿಂದ ಶುಂಠಿ ಬೆಳೆ ರಕ್ಷಣೆಗೆ ಸಲಹೆಗಳು

|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 24 : ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಸುಮಾರು 5,460 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆಯನ್ನು ಅಡಿಕೆಯ ಜೊತೆ ಅಂತರ ಬೆಳೆಯಾಗಿ ಮತ್ತು ಏಕಬೆಳೆಯಾಗಿ ಬೆಳೆಯುಲಾಗುತ್ತಿದೆ.

ಶುಂಠಿ ಅಡಿಕೆಯಷ್ಟೇ ಆದಾಯವನ್ನು ತಂದುಕೊಡುವ ಬೆಳೆಯಾಗಿದೆ. ಆದರೆ, ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ಮಳೆ ಸುರಿಯುತ್ತಲೇ ಇದ್ದು, ಶುಂಠಿ ಬೆಳೆಗೆ ಗಡ್ಡೆಕೊಳೆ ರೋಗವು ಕಂಡುಬಂದಿರುತ್ತದೆ. ಇದರಿಂದಾಗಿ ರೈತರು ಆತಂಕಗೊಂಡಿದ್ದಾರೆ.

ಕೋಲಾರದ ರೈತನಿಗೆ ಲಾಭದ ದಾರಿ ತೋರಿದ ಶುಂಠಿ ಬೆಳೆಕೋಲಾರದ ರೈತನಿಗೆ ಲಾಭದ ದಾರಿ ತೋರಿದ ಶುಂಠಿ ಬೆಳೆ

ತೋಟಗಾರಿಕಾ ಇಲಾಖೆ ಗಡ್ಡೆಕೊಳೆ ರೋಗದಿಂದ ಶುಂಠಿಯನ್ನು ಹೇಗೆ ಕಾಪಾಡುವುದು ಎಂದು ರೈತರಿಗೆ ಸಲಹೆಗಳನ್ನು ನೀಡಿದೆ. ಈ ರೋಗವು 'ಪೈಥಿಯಂ ಆಫಿನಿರ್ಡಮೆಟಂ' ಎಂಬ ಶಿಲೀಂಧ್ರದಿಂದ ಬರುತ್ತದೆ. ಬೆಳೆಯು ಈ ರೋಗಕ್ಕೆ ತುತ್ತಾದ್ದಲ್ಲಿ ಗಿಡ ಸಂಪೂರ್ಣವಾಗಿ ಒಣಗಿ ಸಾಯಿವುದರಿಂದ ಅಧಿಕ ನಷ್ಟವಾಗಲಿದೆ.

ಶುಂಠಿ ಬೆಳೆಯುವ ರೈತರಿಗೆ ವೈಜ್ಞಾನಿಕ ಸಲಹೆಗಳು ಶುಂಠಿ ಬೆಳೆಯುವ ರೈತರಿಗೆ ವೈಜ್ಞಾನಿಕ ಸಲಹೆಗಳು

ಶುಂಠಿ ಬೆಳೆ ಬೆಳೆಯುತ್ತಿರುವ ರೈತರು ಗಡ್ಡೆಕೊಳೆ ರೋಗದ ನಿಯಂತ್ರಣಕ್ಕೆ ಈ ಕೆಳಕಂಡಂತೆ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ತೊಟಗಾರಿಕೆ ಇಲಾಖೆ ಮನವಿಯನ್ನು ಮಾಡಿದೆ.

ಶಿವಮೊಗ್ಗ: ಮಲೆನಾಡಿನಲ್ಲಿ ಶುಂಠಿ ಬೆಳೆಗೆ ಬಾಧಿಸುತ್ತಿದೆ ಕೊಳೆರೋಗ ಶಿವಮೊಗ್ಗ: ಮಲೆನಾಡಿನಲ್ಲಿ ಶುಂಠಿ ಬೆಳೆಗೆ ಬಾಧಿಸುತ್ತಿದೆ ಕೊಳೆರೋಗ

ಶುಂಠಿಗೆ ಗಡ್ಡೆಕೊಳೆ ರೋಗ

ಶುಂಠಿಗೆ ಗಡ್ಡೆಕೊಳೆ ರೋಗ

ಗಡ್ಡೆಕೊಳೆ ರೋಗ ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರ ಹೊರತಾಗಿ ಬ್ಯಾಕ್ಟೀರಿಯಾದಿಂದ ಬರುವ ಗಡ್ಡೆ ಕೊಳೆ ರೋಗ ಅಥವಾ ಹಸಿರು ಕೊಳೆ ರೋಗವು ಕೆಲವು ಕಡೆ ಬೆಳೆಗಳಿಗೆ ಬಂದಿರುತ್ತದೆ. ಬಿಸಿಲು ಮತ್ತು ಮಳೆಯ ವಾತಾವರಣ ಈ ಹಸಿರು ಕೊಳೆ ರೋಗವು ಉಲ್ಬಣವಾಗಲು ಮುಖ್ಯ ಕಾರಣ.

ನೀರು ನಿಲ್ಲದಂತೆ ಎಚ್ಚರ ವಹಿಸಿ

ನೀರು ನಿಲ್ಲದಂತೆ ಎಚ್ಚರ ವಹಿಸಿ

ಶುಂಠಿ ಮಡಿಯಲ್ಲಿ ನೀರು ನಿಲ್ಲದ ಹಾಗೆ ಬಸಿಗಲುವೆಗಳನ್ನು ಸರಿಪಡಿಸಬೇಕು. ಮಣ್ಣು ಕೊಚ್ಚಿ ಹೋಗಿದ್ದರೆ ಮಣ್ಣನ್ನು ಏರಿಸಬೇಕು. ತಾಕುಗಳಲ್ಲಿ ರೋಗದ ಮುನ್ಸೂಚನೆ ಕಂಡುಬಂದಲ್ಲಿ ಶೇ. 1ರ ಬೋರ್ಡೋ ದ್ರಾವಣ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್‌ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು. ಈಗಾಗಲೇ ತೀವ್ರವಾಗಿ ರೋಗಕ್ಕೆ ತುತ್ತಾಗಿರುವ ತಾಕುಗಳಲ್ಲಿ ಭಾದಿತ ಗಿಡಗಳನ್ನು ಗಡ್ಡೆಗಳ ಸಮೇತ ತೆಗೆದು ಹಾಕಬೇಕು.

ರೋಗದ ಲಕ್ಷಣಗಳು

ರೋಗದ ಲಕ್ಷಣಗಳು

ಗೆಡ್ಡೆಗಳನ್ನು ಕಿತ್ತ ನಂತರ 1 ಗ್ರಾಂ ಮೆಟಲಾಕ್ಸಿಲ್ + 2 ಗ್ರಾಂ ಮ್ಯಾಂಕೊಜೆಬ್ ( ರೆಡೊಮಿಲ್ ಎಂ.ಝಡ್) ಅಥವಾ 2 ಗ್ರಾಂ ಸೈಮಕ್ಸಿನ್+ 2 ಗ್ರಾಂ ಮ್ಯಾಂಕೊಜೆಬ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿದ ದ್ರಾವಣವನ್ನು ರೋಗ ಬಂದಂತಹ ಮಡಿಗೆ ಹಾಗೂ ಸುತ್ತಮುತ್ತಲಿನ ಮಡಿಗಳಿಗೆ ಸಂಪೂರ್ಣವಾಗಿ ನೆನೆಯುವಂತೆ ಹಾಕಬೇಕು. ಬ್ಯಾಕ್ಟೀರಿಯಾದಿಂದ ಬರುವ ಕೊಳೆ ರೋಗಕ್ಕೆ (ಹಸಿರು ಕೊಳೆ ರೋಗ) ತುತ್ತಾದ ಗಿಡದ ಎಲೆಗಳು ಹಸಿರಿರುವಾಗಲೇ ಸುರುಳಿ ಸುತ್ತಿಕೊಂಡು ಬಾಡುತ್ತವೆ. ನಂತರ ಕೆಳಗಿನಿಂದ ಎಲೆಗಳು ಹಳದಿಯಾಗುತ್ತವೆ 4-5 ದಿನಗಳಲ್ಲೇ ಬಾಡಿ ಸಾಯುತ್ತವೆ.

ಗಿಡಗಳನ್ನು ಬದುಕಿಸುವುದು ಕಷ್ಟ

ಗಿಡಗಳನ್ನು ಬದುಕಿಸುವುದು ಕಷ್ಟ

ಒಮ್ಮೆ ರೋಗ ತಗುಲಿದ ಗಿಡಗಳನ್ನು ಬದುಕಿಸಿವುದು ಕಷ್ಟ. ಆದ್ದರಿಂದ ರೈತರು ಶುಂಠಿಯಲ್ಲಿ ಹಸಿರು ಕೊಳೆಯನ್ನು ನಿಯಂತ್ರಿಸಲು ಸ್ಟ್ರೆಪ್ಟೊಸೈಕ್ಲಿನ್ 0.5 ಗ್ರಾಂ ಮತ್ತು ಕಾಪರ್ ಆಕ್ಸಿ ಕ್ಲೋರೈಡ್ 3 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿದ ದ್ರಾವಣವನ್ನು ಗಿಡದ ಬುಡ ನೆನೆಯುವಂತೆ ಹಾಕಬೇಕು. ತೋಟದಲ್ಲಿ ರೋಗ ಪೀಡಿತ ಗಿಡಗಳನ್ನು ಕಿತ್ತು ಆ ಜಾಗಕ್ಕೆ ಸುಣ್ಣವನ್ನು ಹಾಕಬೇಕು ಮತ್ತು ಆ ಜಾಗದ ನೀರು ಉಳಿದ ಪ್ರದೇಶಕ್ಕೆ ಹರಿದು ಹೊಗದಂತೆ ಎಚ್ಚರ ವಹಿಸಬೇಕು.

English summary
Agriculture department tips to farmers to disease management in Ginger crop. Due to heavy rain Ginger crop getting several disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X