ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿತ್ತನೆ ಬಳಿಕ ಆಲೂಗಡ್ಡೆ ಬೆಳೆ ರಕ್ಷಣೆಗೆ ರೈತರಿಗೆ ಸಲಹೆಗಳು

|
Google Oneindia Kannada News

ಬೆಂಗಳೂರು, ನವೆಂಬರ್ 17: ಆಲೂಗಡ್ಡೆ ಬಿತ್ತಿದ 20 ರಿಂದ 25 ದಿನಗಳ ಸಮಯಕ್ಕೆ ಅವುಗಳ ರಕ್ಷಣೆಗೆ ರೈತರು ಹಲವಾರು ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತು ರೈತರಿಗೆ ಹಲವಾರು ಸಲಹೆಗಳನ್ನು ನೀಡಲಾಗಿದೆ.

20 ರಿಂದ 25 ದಿನಗಳ ಬಳಿಕ 1 ಲೀ. ನೀರಿಗೆ 3 ಗ್ರಾಂ ಮ್ಯಾಂಕೋಜೆಬ್ ದ್ರಾವಣವನ್ನು ಗಿಡದ ಎಲೆಗಳ ಮೇಲ್ಭಾಗ, ಕೆಳಭಾಗ ಹಾಗೂ ಇತರ ಎಲ್ಲಾ ಭಾಗಗಳಿಗೂ ತಲುಪುವಂತೆ ಸಿಂಪಡಿಸಬೇಕು. 35-40 ದಿನಗಳ ನಂತರ 1 ಲೀಟರ್ ನೀರಿಗೆ 3 ಗ್ರಾಂ ಮ್ಯಾಂಕೋಜೆಬ್ ಮತ್ತು 2.7 ಮಿ.ಲೀ ಡೈಕೋಫಾಲ್ ದ್ರಾವಣವನ್ನು ಗಿಡದ ಎಲೆಗಳ ಮೇಲ್ಭಾಗ, ಕೆಳಭಾಗ ಹಾಗೂ ಇತರ ಎಲ್ಲಾ ಭಾಗಗಳಿಗೂ ತಲುಪುವಂತೆ ಸಿಂಪಡಿಸಬೇಕು.

ಹವಾಮಾನ ಬದಲಾವಣೆ; ಆಲೂಗಡ್ಡೆ ಬೆಳೆಯ ರಕ್ಷಣೆ ಹೇಗೆ?ಹವಾಮಾನ ಬದಲಾವಣೆ; ಆಲೂಗಡ್ಡೆ ಬೆಳೆಯ ರಕ್ಷಣೆ ಹೇಗೆ?

ರೈತರು ಇದೇ ಸಿಂಪರಣೆಯನ್ನು 75 ರಿಂದ 80 ದಿನಗಳ ನಂತರ ಪುನರಾವರ್ತಿಸಬೇಕು. 55-60 ದಿನಗಳ ನಂತರ 1 ಲೀಟರ್ ನೀರಿಗೆ 2.5 ಗ್ರಾಂ ಸೈಮೋಕ್ಸಾನಿಲ್ ಮತ್ತು ಮ್ಯಾಂಕೋಜೆಬ್ ದ್ರಾವಣವನ್ನು ಗಿಡದ ಎಲೆಗಳ ಮೇಲ್ಭಾಗ, ಕೆಳಭಾಗ ಹಾಗೂ ಇತರ ಎಲ್ಲಾ ಭಾಗಗಳಿಗೂ ತಲುಪುವಂತೆ ಸಿಂಪಡಿಸಬೇಕು ಎಂದು ಸಲಹೆ ನೀಡಲಾಗಿದೆ.

ಅಂಗಮಾರಿ ರೋಗದಿಂದ ಆಲೂಗಡ್ಡೆ ಬೆಳೆ ಸಂರಕ್ಷಣೆ ಹೇಗೆ? ಅಂಗಮಾರಿ ರೋಗದಿಂದ ಆಲೂಗಡ್ಡೆ ಬೆಳೆ ಸಂರಕ್ಷಣೆ ಹೇಗೆ?

Tips For Farmers To Protect Potato Crop

ಯಾವುದೇ ಹಂತದಲ್ಲಾದರೂ ಅಂಗಮಾರಿ ರೋಗದ ಲಕ್ಷಣಗಳು ಕಂಡುಬಂದರೆ ಮೊದಲನೇ ಸಿಂಪರಣೆಯಾಗಿ ಕ್ಲೋರೋಥೆಲೋನಿಲ್ (ಕವಚ್) 2 ಮಿ.ಲೀ/ಲೀ. ಅಥವಾ ಮ್ಯಾಂಕೋಜೆಬ್ 3.0 ಗ್ರಾಂ/ಲೀ. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.

ಲಾಭದಾಯಕ ಆಲೂಗಡ್ಡೆ ಬೇಸಾಯಕ್ಕೆ ರೈತರಿಗೆ ಸಲಹೆಗಳು ಲಾಭದಾಯಕ ಆಲೂಗಡ್ಡೆ ಬೇಸಾಯಕ್ಕೆ ರೈತರಿಗೆ ಸಲಹೆಗಳು

ಎರಡನೇ ಸಿಂಪರಣೆಯಾಗಿ ಸೈಮೋಕ್ಸಾನಿಲ್ + ಮ್ಯಾಂಕೋಜೆಬ್ (ಮ್ಯಾಕ್ಸಿಮೇಟ್/ಕರ್ಜೇಟ್) 2.5 ಗ್ರಾಂ/ಲೀ. ಅಥವಾ ಡೈಮೀಥೋಮಾರ್ಫ್ (ಅಕ್ರೋಬ್ಯಾಟ್) 1 ಗ್ರಾಂ/ಲೀ. ಅನ್ನು ಪ್ರತಿ ಲೀಟರ್ ಬೆರೆಸಿ, ಆ ದ್ರಾವಣವನ್ನು ಪ್ರತಿ 7 ದಿನಗಳ ಅಂತರದಲ್ಲಿ ರೋಗ ಹತೋಟಿಯಾಗುವವರೆಗೆ ಒಂದೇ ಔಷಧವನ್ನು ಪದೇ ಪದೇ ಬಳಸದೆ ಔಷಧಿಗಳನ್ನು ಬದಲಾಯಿಸಿ ಸಿಂಪರಣೆಯನ್ನು ಕಡ್ಡಾಯವಾಗಿ ಮಾಡಬೇಕು.

ರೋಗದ ತೀವ್ರತೆ ಜಾಸ್ತಿಯಾದಲ್ಲಿ ಮೂರನೇ ಸಿಂಪರಣೆಯಾಗಿ ಸೆಕ್ಟಿನ್ 2-3 ಗ್ರಾಂ ಅಥವಾ ರಿಡೋಮಿಲ್ ಎಂ.45 2 ಗ್ರಾ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಆಲೂಗಡ್ಡೆಯಲ್ಲಿ ನುಸಿ (ಕೆಂಪುಹೇನು) ಬಾಧೆ ನಿರ್ವಹಣೆಗೆ ಡೈಕೋಫಾಲ್ 1 ಮಿ.ಲೀ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ. ಒಂದು ವಾರದ ನಂತರ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕದ ಪುಡಿಯನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಎಲೆಗಳ ಹಿಂಭಾಗಕ್ಕೆ ಸಿಂಪಡಿಸಬೇಕು. ಪ್ರತಿ ಸಿಂಪರಣೆಯಲ್ಲಿ ಔಷಧಿಗಳ ಜೊತೆಗೆ ಗಮ್/ಅಂಟನ್ನು 0.5 ಮಿ.ಲೀ/ 1ಲೀ. ನೀರಿನಲ್ಲಿ ಬೆರೆಸಿ ಕಡ್ಡಾಯವಾಗಿ ಸಿಂಪರಣೆ ಮಾಡುವುದು.

ಆಲೂಗಡ್ಡೆ ಬೆಳೆಗೆ ತಗಲುವ ಕೊನೆ ಅಂಗಮಾರಿ ರೋಗದ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆ / ತೋಟಗಾರಿಕೆ ವಿಶ್ವವಿದ್ಯಾನಿಲಯ ಹಾಗೂ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರ, ಕೋಲಾರ ರವರು ನೀಡಿರುವ ಹತೋಟಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ತಾಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ಜಿಲ್ಲಾ ಮಟ್ಟದಲ್ಲಿ ತೋಟಗಾರಿಕೆ ಉಪ ನಿರ್ದೇಶಕರು ಹಾಗೂ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರವನ್ನು ಸಂಪರ್ಕಿಸಬುದಾಗಿದೆ.

English summary
Horticulture department tips to farmers to protect potato crop. Farmers to take care of crop after the 20 to 25 days of harvest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X