ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಅಕ್ಕಿ ಉತ್ಪಾದನೆ ಕುಂಠಿತ: ನುಚ್ಚಕ್ಕಿ ರಫ್ತು ನಿಷೇಧಿಸಿದ ಕೇಂದ್ರ

|
Google Oneindia Kannada News

ನವದೆಹಲಿ, ಸೆಪ್ಟಂಬರ್ 09: ಭಾರತದ ದೇಶದಲ್ಲಿ ಅಕ್ಕಿ ಉತ್ಪಾದನೆ 7-8 ಮಿಲಿಯನ್ ಟನ್‌ನಷ್ಟು ಕುಸಿಯಬಹುದು ಎಂದು ಭಾರತದ ಆಹಾರ ಕಾರ್ಯದರ್ಶಿ ಖಚಿತ ಪಡಿಸಿದ್ದಾರೆ. ಕಾರ್ಯದರ್ಶಿಯವರ ಈ ಹೇಳಿಕೆ ಆಹಾರ ಧಾನ್ಯದ ರಫ್ತಿನ ಮೇಲೆ ನಿರ್ಬಂಧ ವಿಧಿಸಲು ಸೂಚಿಸುವಂತಿದೆ.

ಪ್ರಸಕ್ತ 2022-2023ನೇ ಬೆಳೆ ವರ್ಷದಲ್ಲಿ ಮಳೆ ಕೊರತೆಯ ಕಾರಣಕ್ಕೆ ಭತ್ತ ಬಿತ್ತನೆ ನಿರೀಕ್ಷಿತ ಮಟ್ಟ ತಲುಪಿಲ್ಲ. ಹೀಗಾಗಿ ಅಕ್ಕಿ ಉತ್ಪಾದನೆಯು 7-8 ಮಿಲಿಯನ್ ಟನ್‌ಗಳಷ್ಟು ಕುಸಿಯಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ನಿರೀಕ್ಷೆಗಿಂತಲೂ ಕೆಟ್ಟ ಸನ್ನಿವೇಶ ಎದುರಾದರೆ ಒಟ್ಟು ಅಕ್ಕಿ ಉತ್ಪಾದನೆಯು ಸುಮಾರು 12 ಮಿಲಿಯನ್ ಟನ್‌ಗಳಷ್ಟು ಕುಸಿಯಲೂಬಹುದು ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ. ಈ ವಿಷಯ ಇದೀಗ ಚರ್ಚೆಗೆ ಕಾರಣವಾಗಿದೆ.

ಭಾರೀ ಮಳೆ ಈರುಳ್ಳಿ ಬೆಳೆ ರಕ್ಷಣೆಗೆ ರೈತರಿಗೆ ಸಲಹೆಗಳುಭಾರೀ ಮಳೆ ಈರುಳ್ಳಿ ಬೆಳೆ ರಕ್ಷಣೆಗೆ ರೈತರಿಗೆ ಸಲಹೆಗಳು

ಸುಮಾರು 25 ಲಕ್ಷ ಹೆಕ್ಟೇರ್‌ಗಳಷ್ಟು ಭತ್ತ ಬಿತ್ತುವ ನಾಲ್ಕು ರಾಜ್ಯಗಳಲ್ಲಿ ಬರಗಾಲ ಉಂಟಾಗಿದೆ. ಅಗತ್ಯದಷ್ಟು ನೀರಿನ ಅಲಭ್ಯತೆಯಿಂದಾಗಿ ಆ ರಾಜ್ಯಗಳಲ್ಲಿ ಸುಮಾರು 7 ರಿಂದ 8 ಮಿಲಿಯನ್ ಟನ್‌ಗಳಷ್ಟು ಕಡಿಮೆ ಉತ್ಪಾದನೆಯಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಈ ಬಾರಿ ದೇಶದಲ್ಲಿ ಒಟ್ಟು ಭತ್ತದ ಬಿತ್ತನೆ 38.06 ಲಕ್ಷ ಹೆಕ್ಟೇರ್‌ಗಳಷ್ಟು ಕಡಿಮೆ ಆಗಿದೆ. ಇದರ ಪರಿಣಾಮ ಅಕ್ಕಿ ಉತ್ಪಾದನೆಯ ಮೇಲಾಗಿದ್ದು, ಸರಿಸುಮಾರು 10 ಮಿಲಿಯನ್ ಟನ್‌ ಕಡಿಮೆ ಆಗಬಹುದು ಎಂದು ಅವರು ತಿಳಿಸಿದ್ದಾರೆ.

ಅಕ್ಕಿ ರಫ್ತಿನಲ್ಲಿ ಭಾರತಕ್ಕೆ ಅಗ್ರ ಸ್ಥಾನ

ಅಕ್ಕಿ ರಫ್ತಿನಲ್ಲಿ ಭಾರತಕ್ಕೆ ಅಗ್ರ ಸ್ಥಾನ

ಭಾರತವು ಆಹಾರ ಧಾನ್ಯದ ಜಗತ್ತಿನ ಬೃಹತ್ ರಫ್ತುದಾರ ದೇಶವಾಗಿದೆ. ಇತ್ತೀಚೆಗೆ ವಿವಿಧ ದರ್ಜೆಯ ಅಕ್ಕಿಯ ರಫ್ತುಗಳ ಮೇಲೆ 20% ಸುಂಕವನ್ನು ವಿಧಿಸಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ ನುಚ್ಚಕ್ಕಿ (ಬ್ರೋಕನ್ ರೈಸ್) ಸಾಗಣೆಯನ್ನು ನಿಷೇಧಿಸಿದೆ. ಏಕೆಂದರೆ ಇದು ಮುಂಗಾರಿನ ಅವಧಿಯ ನಂತರ ಸ್ಥಳೀಯ ಮಟ್ಟದಲ್ಲಿ ಬೇಡಿಕೆ ಸೃಷ್ಟಿಸುತ್ತದೆ. ಆಗ ಪೂರೈಕೆ ಕಷ್ಟ ಸಾಧ್ಯ ಎನ್ನಲಾಗಿದೆ.

ರಫ್ತು ಸಾಗಾಣೆ ವೆಚ್ಚ ಹೆಚ್ಚಳ

ರಫ್ತು ಸಾಗಾಣೆ ವೆಚ್ಚ ಹೆಚ್ಚಳ

ಕಳೆದ ಕೆಲವು ತಿಂಗಳುಗಳಲ್ಲಿ ಸಾಗಣೆ ರಫ್ತಿನ ವೆಚ್ಚ ತೀವ್ರವಾಗಿ ಏರಿಕೆಯಾದ ಹಿನ್ನೆಲೆಯಲ್ಲಿ ಭಾರತವು ಅಕ್ಕಿ ರಫ್ತುಗಳನ್ನು ನಿರ್ಬಂಧಿಸಿತು. ನಾಲ್ಕು ಪ್ರಮುಖ ಉತ್ಪಾದಕ ರಾಜ್ಯಗಳಲ್ಲಿ ಸರಾಸರಿಗಿಂತ ಕಡಿಮೆ ಮಳೆಯ ಕಾರಣಕ್ಕೆ ಬಿತ್ತನೆಗೆ ಅಡ್ಡಿ ಉಂಟಾಯಿತು. ಇದು ಕೂಡ ಉತ್ಪಾದನೆ ಕುಂಠಿತದ ಕಳವಳಕ್ಕೆ ಕಾರಣವಾಗಿದೆ ಎಂದು ಸುಧಾಂಶು ಪಾಂಡೆ ಮಾಹಿತಿ ನೀಡಿದ್ದಾರೆ.

ನುಚ್ಚಕ್ಕಿ (ಬ್ರೋಕನ್ ರೈಸ್) ಬೆಲೆ ಶೇ.38ರಷ್ಟು ಏರಿಕೆ

ನುಚ್ಚಕ್ಕಿ (ಬ್ರೋಕನ್ ರೈಸ್) ಬೆಲೆ ಶೇ.38ರಷ್ಟು ಏರಿಕೆ

ನುಚ್ಚಕ್ಕಿ (ಬ್ರೋಕನ್ ರೈಸ್) ಬೆಲೆಗಳು ಇದೇ 2022ರಲ್ಲಿ ಇಲ್ಲಿಯವರೆಗೆ ಶೇ. 38ರಷ್ಟು ಏರಿಕೆ ಆಗಿದೆ. ಆದರೆ ಏಪ್ರಿಲ್-ಆಗಸ್ಟ್ ಸಮಯದಲ್ಲಿ ರಫ್ತು ಪ್ರಮಾಣ ಹಿಂದಿನ ವರ್ಷದ ಅದೇ ಸಮಯಲ್ಲಿದ್ದ 1.58 ಮಿಲಿಯನ್ ಟನ್‌ಗಳಿಂದ 2.13 ಮಿಲಿಯನ್ ಟನ್‌ಗಳಿಗೆ ಹೆಚ್ಚಾಗಿದೆ ಎಂದು ವಿವರಿಸಿದ್ದಾರೆ. ಭಾರತವು ಜಾಗತಿಕ ಅಕ್ಕಿ ಸಾಗಣೆಯಲ್ಲಿ ಶೇ. 40ರಷ್ಟು ಸ್ಥಾನವನ್ನು ಹೊಂದಿದೆ. ಈ ಮೂಲಕ ವಿಶ್ವ ಮಾರುಕಟ್ಟೆಗೆ ರಫ್ತು ಮಾಡುವ ಥೈಲ್ಯಾಂಡ್, ವಿಯೆಟ್ನಾಂ, ಪಾಕಿಸ್ತಾನ ಮತ್ತು ಮ್ಯಾನ್ಮಾರ್‌ ದೇಶಗಳ ಜತೆ ಭಾರತಕ್ಕೆ ಸ್ಪಧೆ ಏರ್ಪಡುತ್ತದೆ.

ನುಚ್ಚಿಕ್ಕಿ ರಫ್ತಿನ ಮೇಲೆ ನಿರ್ಬಂಧ ವಿಧಿಸಿ ಅಧಿಸೂಚನೆ

ನುಚ್ಚಿಕ್ಕಿ ರಫ್ತಿನ ಮೇಲೆ ನಿರ್ಬಂಧ ವಿಧಿಸಿ ಅಧಿಸೂಚನೆ

ಇನ್ನು ಬಾಸ್ಮತಿ ಅಲ್ಲದ ಅಕ್ಕಿಗೆ ಶೇ. 20ರಷ್ಟು ರಫ್ತು ಸುಂಕವನ್ನು ವಿಧಿಸಿದ ನಂತರ ಕೇಂದ್ರ ಸರ್ಕಾರ ದೇಶಿ ಮಟ್ಟದಲ್ಲಿ ಅಕ್ಕಿ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ನುಚ್ಚಕ್ಕಿಯ (ಬ್ರೋಕನ್ ರೈಸ್) ಮುರಿದ ರಫ್ತು ಮಾಡುವುದರ ಮೇಲೆ ನಿರ್ಬಂಧ ಹೇರಿ ಶುಕ್ರವಾರ ಅಧಿಸೂಚನೆ ಹೊರಡಿಸಿ ನಿರ್ಬಂಧ ವಿಚಾರವನ್ನು ಅಧಿಕೃತಗೊಳಿಸಿದೆ.

ಈ ಅಧಿಸೂಚನೆಯು ವಿದೇಶಿ ವ್ಯಾಪಾರ ನೀತಿ 2015-2020ರ ಅಡಿಯಲ್ಲಿ ಕೆಲವು ನಿಬಂಧನೆಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ. ಪ್ರಸಕ್ತ ಖಾರಿಫ್ ಋತುವಿನಲ್ಲಿ ಭತ್ತದ ಬೆಳೆಯುವ ಪ್ರದೇಶದಲ್ಲಿ ಉತ್ಪಾನದನೆ ಕುಸಿದಿದ್ದರಿಂದ ದೇಶೀಯ ಪೂರೈಕೆ ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಬಾಸುಮತಿ ಅಲ್ಲದ ಅಕ್ಕಿಗೆ ಶೇ.20 ರಫ್ತು ಸುಂಕವನ್ನು ವಿಧಿಸಿದೆ.

English summary
Rice production downfalls 2023-23 year in India. India bans broken to rice export
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X