ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100ರ ಗಡಿಯತ್ತ ಟೊಮೆಟೊ; ಬೆಲೆ ಏರಿಕೆಗೆ ಕಾರಣಗಳೇನು?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 19: ಈ ತಿಂಗಳು ಸುರಿದ ಅಕಾಲಿಕ ಮಳೆಯಿಂದ ರಾಜ್ಯದಲ್ಲಿ ಬೆಳೆ ಹಾನಿಯ ವರದಿಗಳು ಕೇಳಿ ಬರುತ್ತಿವೆ. ಇದರ ಮಧ್ಯೆಯೂ ಮಾರುಕಟ್ಟೆಗಳಿಗೆ ಟೊಮೆಟೊ ಬಂದಿದ್ದು, ಸೋಮವಾರ ಟೊಮೆಟೊ ರೀಟೇಲ್ ಬೆಲೆ ಮೆಟ್ರೊ ನಗರಗಳಲ್ಲಿ ಪ್ರತಿ ಕೆ.ಜಿಗೆ 93 ರೂಪಾಯಿ ಇತ್ತು ಎಂದು ಸರ್ಕಾರದ ಅಂಕಿ- ಅಂಶಗಳಿಂದ ತಿಳಿದುಬಂದಿದೆ.

ಮೆಟ್ರೊ ನಗರಗಳ ಪೈಕಿ ಕೊಲ್ಕತ್ತಾದಲ್ಲಿ ಟೊಮೆಟೊ ಪ್ರತಿ ಕೆ.ಜಿಗೆ 93 ರೂ., ಚೆನ್ನೈನಲ್ಲಿ 60 ರೂ., ದೆಹಲಿಯಲ್ಲಿ 59 ರೂ. ಮತ್ತು ಚೆನ್ನೈನಲ್ಲಿ 53 ರೂ.ಎಂದು ಸೋಮವಾರದ ದತ್ತಾಂಶವು ತೋರಿಸಿದೆ. ಗ್ರಾಹಕರ ವ್ಯವಹಾರಗಳ ಸಚಿವಾಲಯವು ಟ್ರ್ಯಾಕ್ ಮಾಡಿದ 175ಕ್ಕೂ ಹೆಚ್ಚು ನಗರಗಳ ಪೈಕಿ 50ಕ್ಕೂ ಹೆಚ್ಚಿನ ಕಡೆ ಟೊಮೆಟೊ ಚಿಲ್ಲರೆ ಬೆಲೆ ಪ್ರತಿ ಕೇಜಿಗೆ 50 ರೂಪಾಯಿಗಿಂತ ಅಧಿಕವಾಗಿದೆ.

ಸಗಟು ಮಾರುಕಟ್ಟೆಗಳಲ್ಲಿ ಕೂಡ ಟೊಮೆಟೊವನ್ನು ಕೋಲ್ಕತ್ತಾದಲ್ಲಿ ಪ್ರತಿ ಕೆಜಿಗೆ 84 ರೂಪಾಯಿ, ಚೆನ್ನೈನಲ್ಲಿ 52 ರೂಪಾಯಿ, ಮುಂಬೈನಲ್ಲಿ 30 ರೂಪಾಯಿ ಮತ್ತು ದೆಹಲಿಯಲ್ಲಿ ಪ್ರತಿ ಕೆ.ಜಿಗೆ 29.50 ರೂಪಾಯಿಯಂತೆ ಮಾರಾಟ ಮಾಡಲಾಗಿದೆ. ಪ್ರಮುಖವಾಗಿ ಟೊಮೆಟೊ ಬೆಳೆಯುತ್ತಿರುವ ರಾಜ್ಯಗಳಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯ ಮಧ್ಯೆ ಕಳಪೆ ಟೊಮೆಟೊ ಆಗಮನದಿಂದಾಗಿಯೂ ಬೆಲೆಗಳು ಹೆಚ್ಚಳವಾಗಿವೆ.

The Tomato Rate Nearing to Rs 100; What Are The Reasons For The Price Increase?

ಬೆಲೆ ಹೆಚ್ಚಲು ಕಾರಣ
ಒಂದು ಕಡೆ ಕೆಲವು ರಾಜ್ಯಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ನಾಶವಾಗಿ ಟೊಮೆಟೊ ದರ ಹೆಚ್ಚಳವಾಗಿದ್ದರೆ, ಮತ್ತೊಂದೆಡೆ ಸಾಲು ಸಾಲು ಹಬ್ಬಗಳು ಬರುತ್ತಿವೆ. ಬೇಡಿಕೆ ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕಂತೆ ಪೂರೈಕೆ ಇಲ್ಲವಾಗಿದೆ. ಇದರಿಂದ ದರ ಹೆಚ್ಚಳವಾಗಲು ಕಾರಣವಾಗಿದೆ.

ಮುಂಬೈನಲ್ಲಿ ಅಕ್ಟೋಬರ್ 16ರಂದು 241 ಟನ್‌ಗಳಷ್ಟು ಟೊಮೆಟೊ ಆಗಮನವಾಗಿತ್ತು. ಅದಕ್ಕೆ ಕೇವಲ ಒಂದು ವಾರದ ಹಿಂದೆ 290 ಟನ್‌ಗಳಿದ್ದವು. ಆದರೆ ಅದೇ ದಿನದಂದು ದೆಹಲಿಯಲ್ಲಿ 528.9 ಟನ್‌ಗಳು ಮತ್ತು ಕೋಲ್ಕತ್ತಾದಲ್ಲಿ 545 ಟನ್‌ಗಳಷ್ಟು ಟೊಮೆಟೊ ಆಗಮನವಾಗಿದೆ ಎಂದು ಸರ್ಕಾರದ ಮಾಹಿತಿ ತಿಳಿಸಿದೆ.

ಆದರೆ, ಈ ಮೂರು ಮೆಟ್ರೊಗಳಿಗೆ ಹೋಲಿಕೆ ಮಾಡುವಂಥ ಡೇಟಾ ಲಭ್ಯ ಇಲ್ಲ. "ಮಳೆಯಿಂದಾಗಿ ನಮಗೆ ಮಂಡಿಯಿಂದಲೇ ಉತ್ತಮ ಗುಣಮಟ್ಟದ ಟೊಮೆಟೊಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಗ್ರಾಹಕರು ಒಳ್ಳೆಯದನ್ನು ಆರಿಸುತ್ತಾರೆ ಮತ್ತು ಕೊಳೆತವುಗಳು ಹಾಗೆಯೇ ಉಳಿದು, ನಮಗೆ ನಷ್ಟವಾಗಿದೆ. ಆದ್ದರಿಂದ ನಷ್ಟವನ್ನು ಸರಿದೂಗಿಸಲು ನಾವು ದರಗಳನ್ನು ಇರಿಸುತ್ತೇವೆ," ಎಂದು ದೆಹಲಿಯ ಕರೋಲ್ ಬಾಗ್ ಕಾಲೊನಿಯಲ್ಲಿ ಮಾರಾಟ ಮಾಡುವ ತರಕಾರಿ ವ್ಯಾಪಾರಿಯೊಬ್ಬರು ಹೇಳಿದ್ದಾರೆ.

The Tomato Rate Nearing to Rs 100; What Are The Reasons For The Price Increase?

ಸದ್ಯಕ್ಕೆ ಆಂಧ್ರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ಪ್ರಮುಖ ಬೆಳೆಯುತ್ತಿರುವ ರಾಜ್ಯಗಳಲ್ಲಿ ಟೊಮೆಟೊ ಕಟಾವು ನಡೆಯುತ್ತಿದೆ. ಅಜಾದ್‌ಪುರ್ ಟೊಮೆಟೊ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಕೌಶಿಕ್ ಮಾತನಾಡಿ, "ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಅಕಾಲಿಕ ಮಳೆಯಿಂದ ಬೆಳೆ ಹಾನಿಗೊಳಗಾಯಿತು. ಇದರಿಂದಾಗಿ ದೆಹಲಿಯಂತಹ ಗ್ರಾಹಕ ಮಾರುಕಟ್ಟೆಗಳಿಗೆ ಪೂರೈಕೆಯು ಪರಿಣಾಮ ಬೀರಿದೆ. ಇದು ಸಗಟು ಮತ್ತು ಚಿಲ್ಲರೆ ಮಾರುಕಟ್ಟೆ ಎರಡೂ ಕಡೆ ಬೆಲೆಗಳ ಏರಿಕೆಗೆ ಕಾರಣವಾಗಿದೆ," ಎಂದಿದ್ದಾರೆ.

ಟೊಮೆಟೊ ಬೆಳೆ ನೆಟ್ಟ ಸುಮಾರು 2-3 ತಿಂಗಳಲ್ಲಿ ಕೊಯ್ಲಿಗೆ ಸಿದ್ಧವಾಗುತ್ತದೆ. ಮಾರುಕಟ್ಟೆಯ ಅಗತ್ಯಕ್ಕೆ ಅನುಗುಣವಾಗಿ ಕಟಾವು ಮಾಡಲಾಗುತ್ತದೆ. ನ್ಯಾಷನಲ್ ಹಾರ್ಟಿಕಲ್ಚರಲ್ ರಿಸರ್ಚ್ ಅಂಡ್ ಡೆವಲಪ್​ಮೆಂಟ್​ ಫೌಂಡೇಷನ್ ಪ್ರಕಾರ, ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಟೊಮೆಟೊ ಉತ್ಪಾದಕ ಭಾರತವು 7.89 ಲಕ್ಷ ಹೆಕ್ಟೇರ್ ಪ್ರದೇಶದಿಂದ ಸುಮಾರು 19.75 ಮಿಲಿಯನ್ ಟನ್ ಉತ್ಪಾದಿಸುತ್ತದೆ.

ಕರ್ನಾಟಕದ ಕೋಲಾರ ಟೊಮೆಟೊ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿಂದಲೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೆ ಹೋಗುತ್ತಿದೆ.

Recommended Video

ವಿದೇಶದಿಂದ ಸಿಕ್ಕ ಗಿಫ್ಟ್ ಗಳನ್ನೇ ಮಾರಿಕೊಳ್ಳೋ ದುಸ್ಥಿತಿ ಬಂತು ಪಾಕಿಸ್ತಾನಕ್ಕೆ | Oneindia Kannada

English summary
Tomato retail prices on Monday averaged Rs 93 per kg in metro cities, according to government figures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X