ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಗ್ಗಿದ ಬೇಡಿಕೆ: ಭಾರತೀಯ ಅಕ್ಕಿ ರಫ್ತು ದರದಲ್ಲಿ ಇಳಿಕೆ

|
Google Oneindia Kannada News

ಬೆಂಗಳೂರು ಆಗಸ್ಟ್ 13: ಅಕ್ಕಿ ರಫ್ತುನಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ದೇಶದ ಬ್ರೋಕನ್ ಪಾರ್ಬಾಯಿಲ್ಡ್ (ನುಚ್ಚಕ್ಕಿ) ರೈಸ್‌ಗೆ ಕಳೆದ ಒಂದುವಾರದಿಂದ ರಫ್ತಿನ ದರದ ಇಳಿಕೆ ಆಗಿದೆ.

ಕೇಂದ್ರ ಸರ್ಕಾರ ಇಂಧನ ಮೇಲಿನ ಬೆಲೆ ಹೆಚ್ಚಿಸಿದ ಬಳಿಕ ದೇಶದ ಒಳಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ ಸಮಸ್ಯೆ ಉಂಟಾಯಿತಲ್ಲದೇ ಇದೀಗ ಅಕ್ಕಿ ರಫ್ತಿನ ಮೇಲೂ ಪರಿಣಾಮ ಬೀರಿದೆ. ಈ ಅರ್ಧ ಕಾಳಿನ ಅಕ್ಕಿಗೆ ಬೇಡಿಕೆ ತೀರಾ ಕಡಿಮೆ ಇತ್ತು. ಮಾರುಕಟ್ಟೆಗಳಲ್ಲಿ ಆಫ್ರಿಕನ್ ಖರೀದಿದಾರರು ಸಕ್ರಿಯವಾಗಿರಲಿಲ್ಲ. ಇದು ಸಹ ಬೇಡಿಕೆ ಇಳಿಕೆಯಾಗಲು ಕಾರಣವಾಗಿದೆ ಎಂದು ಭಾರತದ ಆಂಧ್ರ ಪ್ರದೇಶದ ಕಾಕಿನಾಡ ಮೂಲದ ಅಕ್ಕಿ ರಫ್ತುದಾರರೊಬ್ಬರು ಮಾಹಿತಿ ನೀಡಿದರು.

ಅಕ್ಕಿ ರಫ್ತುದಾರ ಅಗ್ರ ದೇಶ ಭಾರತವು ಶೇ.5ರಷ್ಟು ಬ್ರೋಕನ್ ಪಾರ್ಬಾಯಿಲ್ಡ್ ವಿಧದ ಅಕ್ಕಿ ಪ್ರತಿ ಟನ್‌ಗೆ ಪ್ರಸ್ತುತದಲ್ಲಿ 360ರಿಂದ 366 ಡಾಲರ್ ಎಂದು ಉಲ್ಲೇಖಿಸಿದ್ದು, ಇದೇ ಅಕ್ಕಿಗೆ ಒಂದು ವಾರದ ಹಿಂದೆ 364ರಿಂದ 370 ಡಾಲರ್‌ಗಿಂತ ನಷ್ಟು ಹೆಚ್ಚು ದರ ಇತ್ತು. ಈ ಮಧ್ಯೆ ಭತ್ತ ಬೆಳೆಯುವ ರಾಜ್ಯಗಳಲ್ಲಿ ಮಳೆ ಕೊರತೆಯಿಂದಾಗಿ ಉತ್ಪಾದನೆಯು ಇಳಿಕೆ ಕಂಡಿದೆ ಎಂದು ತಿಳಿದು ಬಂದಿದೆ.

The rice export rate decreased last week now expected rice export rate to increase

ಬಾಂಗ್ಲಾದೇಶವು ನಿರೀಕ್ಷಿತ ಅಕ್ಕಿಯನ್ನು ಆಮದು ಮಾಡಿಕೊಳ್ಳದೇ ಜುಲೈನಲ್ಲಿ ಕೇವಲ 15,500 ಟನ್‌ಗಳಷ್ಟು ಅಕ್ಕಿ ಖರೀದಿಸುವ ಮೂಲಕ ಆಮದಿನಲ್ಲಿ ಹಿನ್ನಡೆ ಅನುಭವಿಸಿದೆ. ಕೇಂದ್ರ ಸರ್ಕಾರವು ಖಾಸಗಿ ವ್ಯಾಪಾರಿಗಳಿಗೆ ಆಮದು ಖರೀದಿಗೆ ಶೇ.62.5% ಇದ್ದು ಸುಂಕವನ್ನು ರಿಂದ ಶೇ.25.0ಕ್ಕೆ ಇಳಿಕೆ ಮಾಡಿತು. ಈ ಸುಂಕ ಕಡಿತವು ಸುಮಾರು ಒಂದು ಮಿಲಿಯನ್ ಟನ್ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಕಾಣವಾಯಿತು. ಸುಂಕ ಕಡಿತವಾಗದಿದ್ದರೆ, ಅದು ಆಮದಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯು ಇತ್ತು.

ಅಕ್ಕಿ ಆಮದು ಸುಂಕವನ್ನು ಸರ್ಕಾರ ಸಂಪೂರ್ಣ ಕಡಿತಗೊಳಿಸಬೇಕಿದೆ. ಇಲ್ಲವಾದರೆ ಆಮದುಗಾರನಿಗೆ ಲಾಭವಾಗದೇ ಆತ ಖರೀದಿಗೆ ಹಿಂದೇಟು ಹಾಕಬಹುದು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

The rice export rate decreased last week now expected rice export rate to increase

ವಿಯೆಟ್ನಾಂ ಶೇ. 5ರಷ್ಟು ಅರ್ಧಕಾಳಿನ ಅಕ್ಕಿಯ ಪ್ರತಿ ಟನ್‌ಗೆ 390ರಿಂದ ಶೇ.393ರಷ್ಟು ಡಾಲರ್‌ಗೆ ನೀಡಿದೆ. ಈ ಬೆಲೆ ತುಸು ಉತ್ತಮವಾದ ಬೆಲೆ ಎನ್ನಬಹುದಾಗಿದೆ. ಖಾರೀಫ್ ಋತುವಿನಲ್ಲಿ ಗುಣಮಟ್ಟದ ಕೊರತೆ ಹಿನ್ನೆಲೆ ದರಗಳು ಕಡಿಮೆಯಾಗಿರುತ್ತವೆ. ಹೀಗಿದ್ದರೂ ಜಾಗತಿಕವಾಗಿ ಅಕ್ಕಿಗೆ ಬೇಡಿಕೆ ಪ್ರಬಲವಾಗಿರುವುದರಿಂದ ಆಮದಿನ ಬೆಲೆಗಳು ಇದೇ ರೀತಿ ಸ್ಥಿರವಾಗಿ ನಿಲ್ಲುವ ಸಾಧ್ಯತೆ ಹೆಚ್ಚಿದೆ. ದರದಲ್ಲಿ ಇನ್ನಷ್ಟು ಇಳಿಕೆ ಅನುಮಾನ ಎನ್ನಲಾಗಿದೆ. ಮುಂದಿನ ಬೇಸಿಗೆಗೆ ಅಕ್ಕಿ ಪೂರೈಕೆಯಲ್ಲಿ ಕುಸಿತ ಕಂಡು ಬಂದರೆ ಆಗ ಅವುಗಳ ಬೆಲೆಯಲ್ಲಿ ಬದಲಾವಣೆಗಳು ಆಗಬಹುದು ಎನ್ನಲಾಗಿದೆ.

ಭಾರತದಿಂದ ಆಗಸ್ಟ್1ರಿಂದ 17 ರ ಅವಧಿಯಲ್ಲಿ ವಿಯೇಟ್ನಾಂನ ಹೂ ಚಿ ಮಿನ್ಹ್ ಬಂದರು ಮೂಲಕ ಫಿಲಿಫೈನ್ಸ್ ಹಾಗೂ ಆಫ್ರಿಕಾಕ್ಕೆ 318,750 ಟನ್ ಅಕ್ಕಿಯನ್ನು ರಫ್ತಾಗಲಿದೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಪ್ರಮುಖ ವ್ಯವಹಾರ ನಡೆಯದಿದ್ದರೂ ಅಂತಾರಾಷ್ಟ್ರೀಯ ಮತ್ತು ದೇಶೀಯವಾಗಿ ಅಕ್ಕಿ ಬೇಡಿಕೆ ಕ್ರಮೇಣ ಹೆಚ್ಚಳವಾಗಿ ರಫ್ತು ದರಗಳು ಹೆಚ್ಚುವ ಸಾಧ್ಯತೆ ಇದೆ.

English summary
The rice export rate decreased last week now expected rice export rate to increase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X