ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಆಡಳಿತ ಎಮರ್ಜೆನ್ಸಿಯನ್ನು ಮೀರಿಸುವಂತಿದೆ; ಎಚ್.ಆರ್. ಬಸವರಾಜಪ್ಪ

|
Google Oneindia Kannada News

ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿಕೆಯಾಕಿ (ಜೂನ್ 26) 46 ವರ್ಷಗಳು ಮುಗಿದಿರುವ ಈ ಸಮಯದಲ್ಲಿ ಬಿಜೆಪಿ ಮತ್ತು ಆರ್‌ಎಸ್ಎಸ್‌ನವರು ಅಂದು ಎಮರ್ಜೆನ್ಸಿ ವಿರೋಧಿಸಿದ್ದವರ ಮನೆಗಳಿಗೆ ಹೋಗಿ ಅವರಿಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಯೋಜಿಸಿಕೊಂಡಿದ್ದಾರೆ. ಹಾಗೆ ತುರ್ತುಪರಿಸ್ಥಿತಿ ವಿರೋಧಿಸಿದ್ದವರು ಯಾವುದೇ ರಾಜಕೀಯ ಪಕ್ಷದಲ್ಲಿರಲಿಲ್ಲ. ಇಂದು ಎಲ್ಲ ರಾಜಕೀಯ ಪಕ್ಷಗಳಲ್ಲಿದ್ದಾರೆ. ಬಿ.ಎಲ್. ಶಂಕರ್ ಅಂಥವರು ಕಾಂಗ್ರೆಸ್‌ನಲ್ಲಿದ್ದಾರೆ, ದೇವೇಗೌಡರು ಜನತಾ ದಳದಲ್ಲಿದಾರೆ. ಹಾಗೇ ಕೆಲವರು ಬಿಜೆಪಿಯಲ್ಲೂ ಇದ್ದಾರೆ. ಅವರನ್ನೆಲ್ಲ ಸನ್ಮಾನ ಮಾಡ್ತಾರೆ ಎಂಬ ಸುದ್ದಿಯಿದೆ.

ಎಮರ್ಜೆನ್ಸಿಯಿಂದ ಏನೇನು ತೊಂದರೆ ಆಗಿತ್ತು. ಎಷ್ಟೆಷ್ಟು ಹಿಂಸೆ ಅನುಭವಿಸಿದರು. ಯಾರ್‍ಯಾರು ಏಟು ತಿಂದರು ಎಂಬುದನ್ನೆಲ್ಲಾ ಮಾತನಾಡುತ್ತಾ ಅವರೇನು ಹೇಳ್ತಾರೆ ಅಂದ್ರೆ, ಜೈಲಿನೊಳಗೆ ಯಡಿಯೂರಪ್ಪ ಇದ್ದರು. ಅಲ್ಲಿ ಜನಗಳಿಗೆ ಹಿಂಸೆ ಕೊಡುವಾಗ ಯಡಿಯೂರಪ್ಪ ಬಿಡಿಸಿದ್ದರು, ಅವೆಲ್ಲವನ್ನು ಈಗ ಜನತೆಯ ಮುಂದೆ ತರುತ್ತೇವೆ ಅಂತ ಹೇಳಿ ಮೊನ್ನೆ ಮೊನ್ನೆ ಪತ್ರಿಕಾಗೋಷ್ಟಿ ಮಾಡಿದಾರಂತೆ.

ತುರ್ತುಪರಿಸ್ಥಿತಿ ಮಾದರಿಯಲ್ಲೇ ದೇಶದ ಆಡಳಿತ ನಡೆಯುತ್ತಿದೆ; ಜನಾಂದೋಲನವೇ ಇದಕ್ಕೆ ಉತ್ತರ ತುರ್ತುಪರಿಸ್ಥಿತಿ ಮಾದರಿಯಲ್ಲೇ ದೇಶದ ಆಡಳಿತ ನಡೆಯುತ್ತಿದೆ; ಜನಾಂದೋಲನವೇ ಇದಕ್ಕೆ ಉತ್ತರ

ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ ಘೋಷಣೆಯ ಈ ಕಾರ್ಯಕ್ರಮ ಜೂನ್ 26 ರಂದೇ ಆಯೋಜನೆಗೊಂಡಿರುವುದಕ್ಕೆ ಐತಿಹಾಸಿಕ ಕಾರಣವಿದೆ. ಇದೇ ಜೂನ್ 26ಕ್ಕೆ ಭಾರತದಲ್ಲಿ ಎಮೆರ್ಜೆನ್ಸಿ ಹೇರಿ 46 ವರ್ಷವಾಯಿತು. (1975 ಜೂನ್ 25 ಮಧ್ಯರಾತ್ರಿ). ಈಗಲೂ ಅಘೋಷಿತ ತುರ್ತುಪರಿಸ್ಥಿತಿಯಲ್ಲೇ ಇದ್ದೇವೆ. ಈ ಕುರಿತು ರೈತ ಮುಖಂಡ ಎಚ್.ಆರ್. ಬಸವರಾಜಪ್ಪ ಮನದಾಳವನ್ನು ಒನ್ಇಂಡಿಯಾ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ..

ಇಂದು ಅಘೋಷಿತ ಎಮರ್ಜೆನ್ಸಿ ಇದೆ

ಇಂದು ಅಘೋಷಿತ ಎಮರ್ಜೆನ್ಸಿ ಇದೆ

ಒಂದು ಕಡೆ ಎಮರ್ಜೆನ್ಸಿ ನೆನಪು ಮಾಡಿಕೊಂಡು ಎಮರ್ಜೆನ್ಸಿಯನ್ನು ವಿರೋಧಿಸುತ್ತಾ ಇದ್ದಾರೆ. ಆದರೆ ವಾಸ್ತವವಾಗಿ ಯೋಚಿಸೋದಾದರೆ ಅಂದು ಘೋಷಿತ ಎಮರ್ಜೆನ್ಸಿ ಇತ್ತು. ಇಂದು ಅಘೋಷಿತ ಎಮರ್ಜೆನ್ಸಿ ಇದೆ. ಇಂದಿರಾ ಗಾಂಧಿ ಕೂಡಾ ಸರ್ವಾಧಿಕಾರಿನೇ. ಈ ಸರ್ವಾಧಿಕಾರಿಗಳಿರ್ತಾರಲ್ಲಾ ಅವರು ಯಾವಾಗ ಜನ ತಿರುಗಿಬೀಳ್ತಾರೋ, ಪಕ್ಷದವರೇ ತಿರುಗಿಬೀಳ್ತಾರೆ ಅಂಥಹ ಸಂದರ್ಭದಲ್ಲಿ ಈ ಆಯುಧವನ್ನು ಉಪಯೋಗಿಸುತ್ತಾರೆ. ಅವರ ಮೇಲೆ ಬಲ ಪ್ರಯೋಗಿಸ್ತಾರೆ.

ವಾಮಮಾರ್ಗದಿಂದ ರಾಜ್ಯದಲ್ಲಿ ಅಧಿಕಾರ ಹಿಡಿದರು

ವಾಮಮಾರ್ಗದಿಂದ ರಾಜ್ಯದಲ್ಲಿ ಅಧಿಕಾರ ಹಿಡಿದರು

ಇಂದು ನರೇಂದ್ರ ಮೋದಿ ಕೂಡಾ ಸರ್ವಾಧಿಕಾರಿಯೇ. ಇವರು ಇಂದಿರಾ ಗಾಂಧಿಗೆ ಭಿನ್ನವಾಗಿಯೇನೂ ಕಾಣಿಸ್ತಾಯಿಲ್ಲ. ಇಂಥವರಿಗೆ ಯಾಕೆ ಅಂತಹ ಅಮಲು ತಲೆಗೇರುತ್ತೆ ಅಂದರೆ ಬಹುಮತದ ಸರ್ವಾಧಿಕಾರದಿಂದ. ನಮ್ಮ ಹೆಸರಿನಲ್ಲಿ ಚುನಾವಣೆ ನಡೆಯುತ್ತದೆ, ನನ್ನ ಹೆಸರಿನ ಬಲದಿಂದಲೇ ರಾಜ್ಯಗಳಲ್ಲಿ, ದೇಶದಲ್ಲಿ ಅಭ್ಯರ್ಥಿಗಳು ಚುನಾವಣೆ ಗೆಲ್ಲುತ್ತಿದ್ದಾರೆ ಅನ್ನುವ ಭ್ರಮೆಯಲ್ಲಿ ಮೋದಿಯಿದ್ದಾರೆ. ಅಂಥಹ ಭ್ರಮೆಯಿದ್ದರೆ ಪಶ್ಚಿಮ ಬಂಗಾಳ, ತಮಿಳುನಾಡು ಅಲ್ಲಿಯೂ ಗೆಲ್ಲಬೇಕಾಗಿತ್ತಲ್ಲ. ಹಿಂದೆ ಐದು ರಾಜ್ಯಗಳ ಚುನಾವಣೆಯಿದ್ದಾಗಲೂ ಬಿಜೆಪಿ ಗೆಲುವು ಸಾಧಿಸಿಲ್ಲ. ಅದರಲ್ಲೂ ವಾಮಮಾರ್ಗದಿಂದ ಒಂದು ರಾಜ್ಯವನ್ನು ಹಿಡಿದರು. ಕರ್ನಾಟಕದಲ್ಲೂ ಕೂಡಾ ಮೋದಿಯ ಆ ಮಟ್ಟಿಗಿನ ಜನಪ್ರಿಯತೆಯ ಹಿನ್ನೆಲೆಯಿದ್ದಾಗಲೂ ಸಹ ಬಹುಮತದ ಸರ್ಕಾರ ಬರಲಿಲ್ಲ. ಇಲ್ಲೂ ಕೂಡಾ ವಾಮಮಾರ್ಗವನ್ನೇ ಅನುಸರಿಸಿದರು. ಹಾಗಾಗಿ ಇವರ ಜನಪ್ರಿಯತೆ ಎಷ್ಟಿದೆ ಎನ್ನುವುದನ್ನು ಈ ಚುನಾವಣೆಗಳು ಸಾಬೀತು ಮಾಡಿದಾವೆ. ಬೈ ಎಲೆಕ್ಷನ್‌ಗಳಲ್ಲೂ ನಾವು ಫಲಿತಾಂಶವನ್ನು ನೋಡಿದರೆ ನಾಲ್ಕು ಲಕ್ಷ ಅಂತರದಲ್ಲಿ ಗೆಲ್ಲುವವರು ಈಗ ನಾಲ್ಕು ಸಾವಿರ ಅಂತರದಲ್ಲಿ ತಿಣುಕಾಡ್ತಿದ್ದಾರೆ. ಒಂದು ಕ್ಷೇತ್ರ ಸೋತಿದ್ದಾರೆ, ಇನ್ನೊಂದು ಕ್ಷೇತ್ರ ಕಳೆದುಕೊಂಡಿದ್ದಾರೆ.

ರೈತರ ಆದಾಯವೆಲ್ಲಾ ಬರೀ ಘೋಷಣೆಗಳಲ್ಲೇ ಉಳಿದಿದೆ

ರೈತರ ಆದಾಯವೆಲ್ಲಾ ಬರೀ ಘೋಷಣೆಗಳಲ್ಲೇ ಉಳಿದಿದೆ

ಇಂದು ಜನರು ಸಿಎಎ, ಎನ್‌ಆರ್ಎ, ಎನ್ಆರ್‌ಸಿ, 370 ಇವೆಲ್ಲಾ ಕಾಯ್ದೆಗಳಿವೆಯಲ್ಲ, ರೈತರ ಮೇಲೆ ಕಾನೂನುಗಳನ್ನು ಹೇರುತ್ತಿರುವುದು, ಕರ್ನಾಟಕದಲ್ಲಿ ಭೂಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ಮಾಡುತ್ತಿರುವುದು ಇವೆಲ್ಲವೂ ರೈತರ ಹೆಸರಿನಲ್ಲಿ, ರೈತರ ಆದಾಯ ಹೆಚ್ಚಿಸುತ್ತೇವೆ ಎನ್ನುವ ಹೆಸರಿನಲ್ಲಿ ಮಾಡುತ್ತಿರುವ ಕಾಯ್ದೆಗಳು. ಇವುಗಳ ಹಿಂದಿನ ಉದ್ದೇಶ ಕಾರ್ಪೋರೇಟ್ ಕುಳಗಳ ಆದಾಯವನ್ನು ದ್ವಿಗುಣಗೊಳಿಸುವುದು. ಅಂಬಾನಿ, ಅದಾನಿ, ಮೋದಿ ಇವರೆಲ್ಲ ಇದಾರಲ್ಲ ಮೋದಿಯ ಶಿಷ್ಯರು. ಅವರ ಆದಾಯವನ್ನು ದುಪ್ಪಟ್ಟು ಮಾಡಲು ಮಾಡಿರುವ ಹಕೀಕತ್ತೇ ಹೊರತು ರೈತರ ಆದಾಯವನ್ನು ಹೆಚ್ಚಿಸುವ ಯಾವುದೇ ಅಂಶಗಳು ಇದರಲ್ಲಿ ಇಲ್ಲ. ರೈತರ ಆದಾಯ ಡಬ್ಬಲ್ ಆಗೋದು ಹಾಗಿರಲಿ, ಯಥಾಸ್ಥಿತಿಯನ್ನೂ ಕಾಪಾಡುತ್ತಿಲ್ಲ. ಯುಪಿಎ ಸರ್ಕಾರವಿದ್ದಾಗ ಇದ್ದಷ್ಟು ಆದಾಯದ ಯಥಾಸ್ಥಿತಿಯನ್ನೂ ಕಾಪಾಡುತ್ತಿಲ್ಲ ಇವರು. ಇಂದು ರೈತರ ಆದಾಯವೆಲ್ಲಾ ಬರೀ ಘೋಷಣೆಗಳಲ್ಲೇ ಉಳಿದಿದೆ.

ರೈತರಿಗೆ ಸುಮಾರು 350 ಕೋಟಿಯಷ್ಟು ನಷ್ಟ

ರೈತರಿಗೆ ಸುಮಾರು 350 ಕೋಟಿಯಷ್ಟು ನಷ್ಟ

ಈಗ ಕರ್ನಾಟಕದಲ್ಲಿ 2020ರಲ್ಲಿ ರೈತರ ಬೆಳೆಗಳ ಮಾರುಕಟ್ಟೆ ಬೆಲೆಯನ್ನು ಗಮನಿಸಿದರೆ ಬೆಲೆ ಆಯೋಗದ ಅಂಕಿ ಅಂಶಗಳ ಪ್ರಕಾರ ಹದಿಮೂರು ಬೆಳೆಗಳಲ್ಲಿ ಒಂದು ಅವಧಿಗೆ ರೈತರಿಗೆ ಸುಮಾರು 350 ಕೋಟಿಯಷ್ಟು ನಷ್ಟವಾಗಿದೆ. ಅದೇ ಸ್ವಾಮಿನಾಥನ್ ವರದಿಯ ಅಡಿಯಲ್ಲಿ ಪರಿಶೀಲಿಸಿದರೆ ಸುಮಾರು ಎರಡು ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಒಂದು ಅವಧಿಗೇ ಎರಡು ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ಇವರು ಹೇಗೆ ಆದಾಯವನ್ನು ಡಬಲ್ ಮಾಡುತ್ತಾರೆ? ಸಂಸತ್ತಿನಲ್ಲಿ ಬಹುಮತ ಇದೆ, ಕಾಯ್ದೆಗಳನ್ನು ಮಾಡುತ್ತಿದ್ದಾರೆ, ಅದೂ ಕಾಯ್ದೆಗಳನ್ನು ಮಾಡಿರುವ ಸಂದರ್ಭ ಎಂಥದ್ದು? ಯಾವುದೇ ಸುಗ್ರೀವಾಜ್ಞೆ ಹೊರಡಿಸಬೇಕು ಎಂದರೂ ಅತೀ ತುರ್ತು ಇರಬೇಕು, ಜನ ಸಾಯ್ತಿದ್ದಾರೆ ಅನ್ನುವಾಗ, ಪ್ರಳಯವಾಗುವಂಥಹ ಬಿಕ್ಕಟ್ಟು ಇದ್ದಾಗ ಅಂಥಹ ಸುಗ್ರೀವಾಜ್ಞೆ ತರುವಂಥದ್ದು. ಅದು ಬಿಟ್ಟು ರಾಜ್ಯ ಸರ್ಕಾರದಲ್ಲಿ ಅವರ ಪಾಡಿಗೆ ಅವರು ಸುಗ್ರೀವಾಜ್ಞೆ ಮಾಡ್ತಾರೆ. ಕೇಂದ್ರ ಸರ್ಕಾರದವರು ಅವರ ಪಾಡಿಗೆ ಅವರು...! ಏನವಸರವಿತ್ತು.

ಕಾರ್ಪೋರೇಟ್ ಕುಳಗಳು ಕೇಂದ್ರ ಸರ್ಕಾರ ನಡೆಸುತ್ತಿವೆ

ಕಾರ್ಪೋರೇಟ್ ಕುಳಗಳು ಕೇಂದ್ರ ಸರ್ಕಾರ ನಡೆಸುತ್ತಿವೆ

ಅಷ್ಟೊಂದು ತುರ್ತಾಗಿ ಸುಗ್ರೀವಾಜ್ಞೆ ತರಲು? ಇದ್ಯಾಕೆ ಅಂದ್ರೆ ಎರಡು ವರ್ಷಗಳಿಂದೆಯೇ ಮೋದಿ ಸ್ನೇಹಿತರು ಶೈತ್ಯಾಗಾರ ಮತ್ತು ದೊಡ್ಡ ದೊಡ್ಡ ಇನ್ಫ್ರಾಸ್ಟ್ರಕ್ಚರ್‌ಗಳನ್ನು ಆಗಲೇ ಅಭಿವೃದ್ಧಿಪಡಿಸಿದ್ದಾರೆ. ಗುಜರಾತ್ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಸಾವಿರಾರು ಕೋಟಿ ಬಂಡವಾಳ ಹೂಡಿದ್ದಾರೆ. ಹೇಗಿದ್ದರೂ ನಮ್ಮ ಪ್ರಧಾನಮಂತ್ರಿಗಳು ಈ ಕಾಯ್ದೆಗಳನ್ನು ಮಾಡಿ ನಮ್ಮನ್ನು ಕಾಯುತ್ತಾರೆ ಎನ್ನುವ ನಂಬಿಕೆಯಿಂದ. ಇಲ್ಲಿ ಪಾರ್ಲಿಮೆಂಟ್ ಸದಸ್ಯರು ಅಧಿಕಾರ ನಡೆಸ್ತಿದ್ದಾರೋ, ಚುನಾಯಿತ ಸದಸ್ಯರು ಅಧಿಕಾರ ನಡೆಸುತ್ತಿದ್ದಾರೋ ಅಥವಾ ಕಾರ್ಪೋರೇಟ್ ಕುಳಗಳು ಅಧಿಕಾರ ನಡೆಸ್ತಿದ್ದಾರೋ? ಇಂದು ಕಾರ್ಪೋರೇಟ್ ಕುಳಗಳು ಕೇಂದ್ರ ಸರ್ಕಾರ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಎರಡನೇ ಮಾತಿಲ್ಲ. ಹಾಗಾಗಿ ಅವರಿಗೆ ಅನುಕೂಲ ಮಾಡಿಕೊಡಲು ದವಸ ಧಾನ್ಯಗಳನ್ನು ಶೇಖರಿಸಲು ಒಂದು ಸುಗ್ಗಿ ಕಳೆದುಹೋಗುತ್ತೆ ಎಂಬ ಆತಂಕದಲ್ಲಿ ಅವಸರವಸರವಾಗಿ ಸುಗ್ರೀವಾಜ್ಞೆ ಮಾಡಿಕೊಟ್ಟರು.

ಇದನ್ನು ಮನಗಂಡ ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ಎಲ್ಲಾ ರೈತ ಸಂಘಟನೆಗಳು- ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಆರು ತಿಂಗಳಿಗೂ ಹೆಚ್ಚು ಕಾಲದಿಂದ ದೆಹಲಿಯಲ್ಲಿ ಚಳವಳಿ ಮಾಡುತ್ತಿದ್ದಾರೆ, ಎಲ್ಲಾ ರಾಜ್ಯಗಳಲ್ಲಿಯೂ ಅದನ್ನು ಬೆಂಬಲಿಸುತ್ತಿದ್ದಾರೆ.
ಕಾಯ್ದೆಗಳನ್ನು ಮಾಡುವ ಔಚಿತ್ಯವೇನಿತ್ತು?

ಕಾಯ್ದೆಗಳನ್ನು ಮಾಡುವ ಔಚಿತ್ಯವೇನಿತ್ತು?

ಕೇಂದ್ರಕ್ಕೆ ಕೋವಿಡ್ ಸಂದರ್ಭದಲ್ಲಿ ಈ ಕಾಯ್ದೆಗಳನ್ನು ಮಾಡುವ ಔಚಿತ್ಯವೇನಿತ್ತು? ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟಿಸುವ ಹಕ್ಕನ್ನು ಕಸಿದು 144 ಸೆಕ್ಷನ್ ಜಾರಿಮಾಡಿ, ನೀವು ಮನೆಯಲ್ಲೇ ಇರಿ ಮಾಸ್ಕ್ ಹಾಕ್ಕೊಳ್ಳಿ ಅಂದು ಕಾಯ್ದೆಗಳನ್ನು ತರುತ್ತಾರೆ. ಉದ್ದೇಶ ಸ್ಪಷ್ಟವಿದೆ. ಈ ದೇಶದಲ್ಲಿ ಜನರ ಪ್ರತಿಭಟನೆಯಾಯ್ತು ಅಂತ ಕಾಣಿಸಬಾರದು, ಜನರ ವಿರೋಧ ಆಯ್ತು ಅಂತ ಅನ್ನಿಸಬಾರದು. ಆ ರೀತಿ ಕಾಯ್ದೆಗಳು ಸುಲಲಿತವಾಗಿ ಜಾರಿಯಾಗಬೇಕು ಎಂಬ ಹಿನ್ನೆಲೆಯಲ್ಲಿ ಜಾರಿಮಾಡಿದರು. ಅಂಥಹ ಸಂದರ್ಭದಲ್ಲೂ ಪೊಲೀಸರು ದೆಹೆಲಿಯಲ್ಲಿ ಕೇಳ್ತಾರೆ. ಕೋವಿಡ್ ಇದೆ ದಯವಿಟ್ಟು ನಿಮ್ಮ ಚಳವಳಿ ನಿಲ್ಲಿಸಿ. ಅದಕ್ಕೆ ಪ್ರತಿಯಾಗಿ ರೈತರು, "ಕೋವಿಡ್‌ಗಿಂತ ಅಪಾಯಕಾರಿಯಾದ ಕಾಯ್ದೆಗಳು ಬರುತ್ತಿವೆ ಅದನ್ನು ನಿಲ್ಲಿಸಿ, ಕೋವಿಡ್‌ನಲ್ಲಿ ಕೆಲವರು ಸಾಯಬಹುದು ಆದರೆ ಈ ಕಾಯ್ದೆಗಳು ಜಾರಿಯಾದರೆ ನಾವು ಸಾಮೂಹಿಕವಾಗಿ ಸಾಯುವ ಪರಿಸ್ಥಿತಿಯಿದೆ. ಹಾಗಾಗಿ ನಾವು ಸತ್ತರೂ ಸರಿಯೇ, ಚಳವಳಿಯನ್ನು ನಿಲ್ಲಿಸುವುದಿಲ್ಲ,'' ಎಂದು ಚಳವಳಿಯನ್ನು ಇಲ್ಲಿಯವರೆಗೂ ಮುನ್ನಡೆಸಿದ್ದಾರೆ.

ಹೋರಾಟ ಕೇವಲ ಕಾಯ್ದೆಗಳಿಗಷ್ಟೇ ಸೀಮಿತವಾಗಿಲ್ಲ

ಹೋರಾಟ ಕೇವಲ ಕಾಯ್ದೆಗಳಿಗಷ್ಟೇ ಸೀಮಿತವಾಗಿಲ್ಲ

ಆದರೆ ಮೋದಿಗೇನು ಬುದ್ಧಿ ಬರುವ ಹಾಗಿಲ್ಲ. ಅವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ. ಇದರ ಫಲಿತಾಂಶ 2024ಕ್ಕೆ ಸಿಗುವುದು ಎನಿಸುತ್ತಿದೆ. ಮತ್ತೇನು ಮೋಡಿ ಮಾಡ್ತಾರೋ ಗೊತ್ತಿಲ್ಲ. ಪಾರ್ಲಿಮೆಂಟ್ ಚುನಾವಣೆ ಹತ್ತಿರ ಬಂದಾಗ 6 ತಿಂಗಳು ಇವನ್ನು ಹಿಂಪಡೆಯಬಹುದೇನೋ! ಆದರೆ, ಈ ಹೋರಾಟ ಕೇವಲ ಕಾಯ್ದೆಗಳಿಗಷ್ಟೇ ಸೀಮಿತವಾಗಿಲ್ಲ. ಇಂದು ರೈತರನ್ನು, ಬಡವರನ್ನು, ಶ್ರಮಿಕ ವರ್ಗದವರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿ, ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಿದ್ದಾರೆ. ಇಂದು ನಮ್ಮ ದೇಶ ಒಕ್ಕೂಟ ವ್ಯವಸ್ಥೆಯಾಗಿ ಉಳಿದಿಲ್ಲ. ತಮಿಳುನಾಡು ಮುಖ್ಯಮಂತ್ರಿ ಸರಿಯಾಗಿ ಹೇಳಿದ್ದಾರೆ, "ನಾವು ಒಕ್ಕೂಟ ಸರ್ಕಾರ ಅಂತ ಕರೆಯುತ್ತೇವೆ, ಕೇಂದ್ರ ಸರ್ಕಾರ ಎನ್ನುವುದಿಲ್ಲ. ನಾನು ಅವರ ನಿಲುವನ್ನು ಸ್ವಾಗತಿಸುತ್ತೇನೆ.

ಮೋದಿಯನ್ನು ಮನೆಗೆ ಕಳುಹಿಸುವವರೆಗೂ ಈ ಚಳವಳಿ

ಮೋದಿಯನ್ನು ಮನೆಗೆ ಕಳುಹಿಸುವವರೆಗೂ ಈ ಚಳವಳಿ

ನಮ್ಮ ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ ಹೇಳಿದ್ದೂ ಇದೇ. ಇವರುಗಳು ರಾಜ್ಯ ಸರ್ಕಾರಗಳನ್ನು ಪರಿಗಣಿಸದ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಈಗ ಪ್ರತಿಯೊಂದಕ್ಕೂ ಕೋರ್ಟ್ ಮೊರೆ ಹೋಗುವ ಸಂದರ್ಭ ಸೃಷ್ಟಿಯಾಗಿದೆ. ಒಂದು ಚಿಕಿತ್ಸೆ ಬೇಕು ಎಂದರೂ ಕೋರ್ಟಿಗೆ ಹೋಗಬೇಕು, ಶಾಲೆ ನಡೆಸೋಕೆ, ಪರಿಹಾರ ಕೇಳೋಕೆ ಎಲ್ಲದಕ್ಕೂ ಕೋರ್ಟಿಗೆ ಹೋಗಬೇಕು. ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಅಂತ ಪ್ರಣಾಳಿಕೆಯಲ್ಲಿ ಹಾಕಿಕೊಂಡರು. ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದರೆ ಕೊಡೋಕಾಗಲ್ಲ ಅಂದರು. ಇವರದ್ದೆಲ್ಲಾ ಬರೀ ಮೋಸ. ಚನಾವಣೆಯಲ್ಲಿ ಬರೀ ಸುಳ್ಳು, ಮೋಸ, ದಗಾ.. ಇಂಥವುಗಳಿಂದಲೇ ಚುನಾವಣೆ ಗೆದ್ದದ್ದು. ಇನ್ನು ಮುಂದಿನ ಚುನಾವಣೆಯಲ್ಲಿ ಇದು ಸಾಧ್ಯವಿಲ್ಲ. ಬರುವ ಚುನಾವಣೆಗೆ ಅವರನ್ನು ಮನೆಗೆ ಕಳುಸುತ್ತೇವೆ. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಕರ್ನಾಟಕದಲ್ಲೂ 3 ಮಹಾ ಪಂಚಾಯತ್‌ಗಳನ್ನು ಯಶಸ್ವಿಯಾಗಿ ಮಾಡಿದ್ದೇವೆ. ಒಳ್ಳೆಯ ಪ್ರತಿಕ್ರಿಯೆಯೂ ಬಂದಿದೆ. ನರೇಂದ್ರ ಮೋದಿಯನ್ನು ಮನೆಗೆ ಕಳುಹಿಸುವವರೆಗೂ ಈ ಚಳವಳಿ ಮುಂದುವರೆಯುತ್ತದೆ.

English summary
The BJP and the RSS are planned a program to visit the homes of those who were opposed to the Emergency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X