ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರ್ಯಕಾಂತಿ ಬೀಜ ಉತ್ಪಾದನೆಯ ಒಪ್ಪಂದಕ್ಕೆ ಬೆಂಗಳೂರು ಕೃಷಿ ವಿವಿ ಸಹಿ

|
Google Oneindia Kannada News

ಬೆಂಗಳೂರು ಜೂನ್ 27: ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ(ಎನ್‌ಡಿಡಿಬಿ) ಮತ್ತು ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತ (ಕೆಒಎಫ್ ಮತ್ತು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ(ಯುಎಎಸ್-ಬಿ)ಗಳು ಸನ್‌ಫ್ಲವರ್ ಹೈಬ್ರಿಡ್ ಕೆಬಿಎಸ್‌ಎಚ್-41 ವಾಣಿಜ್ಯೀಕರಣ ಒಪ್ಪಂದ ಮಾಡಿಕೊಂಡಿವೆ. ಸೋಮವಾರ(ಜೂನ್ 27)ದಿಂದ ಬೆಂಗಳೂರಿನಲ್ಲಿ ಅನುಮತಿ ನೀಡುವ ಒಪ್ಪಂದಕ್ಕೆ ಸಹಿ ಹಾಕಲಿವೆ.

ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತ(ಕೆಒಎಫ್) 1984ರಲ್ಲಿ ಹಳದಿ ಕ್ರಾಂತಿ ಅಡಿಯಲ್ಲಿ ಪ್ರಾರಂಭವಾದ ರೈತರ ಸಹಕಾರ ಸಂಸ್ಥೆಯಾಗಿದ್ದು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ(ಎನ್‌ಡಿಡಿಬಿ) ಮತ್ತು ಕರ್ನಾಟಕ ಸರ್ಕಾರದ ಬೆಂಬಲ ಪಡೆದಿದೆ.

ಕೆಒಎಫ್ ಭಾರತ ಸರ್ಕಾರದ 'ಆಪರೇಷನ್ ಗೋಲ್ಡನ್ ಫ್ಲೋ' ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಎಣ್ಣೆಬೀಜಗಳ ಬೆಳೆಯನ್ನು ಹಾಗೂ ಸಹಕಾರ ಸಂಸ್ಥೆಗಳ ಮೂಲಕ ತೈಲ ಸಂಬಂಧಿತ ಉತ್ಪನ್ನಗಳನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ.

Sunflower seed production: NDDB & KOF inks MoU with University of Agricultural Sciences, Bangalore

ಎನ್‌ಡಿಡಿಬಿ ಹಾಗೂ 3 ಪ್ರಾದೇಶಿಕ ಒಕ್ಕೂಟಗಳ(ರಾಯಚೂರು, ಚಿತ್ರದುರ್ಗ ಮತ್ತು ಹುಬ್ಬಳ್ಳಿ) ಸಹಯೋಗದಲ್ಲಿ ಕೆಒಎಫ್ ಸೂರ್ಯಕಾಂತಿ ಬೀಜಗಳ ಹೈಬ್ರಿಡ್ ವಿಧಗಳನ್ನು ಜನಪ್ರಿಯಗೊಳಿಸುತ್ತಿದೆ. ಸೂರ್ಯಕಾಂತಿ ಬೆಳೆಯ ಸರಾಸರಿ ಪ್ರದೇಶ 1990-95ರ ಅವಧಿಯಲ್ಲಿ 21 ಲಕ್ಷ ಹೆಕ್ಟೇರ್‌ಗಳಿಂದ ಪ್ರಸ್ತುತ 2.26 ಹೆಕ್ಟೇರ್‌ಗಳಿಗೆ ಕುಸಿದಿದೆ ಅದಕ್ಕೆ ಸೂರ್ಯಕಾಂತಿಗೆ ಸ್ಪರ್ಧಾತ್ಮಕವಲ್ಲದ ಬೆಳೆಗಳು ಮತ್ತು ಅಗ್ಗದ ಆಮದು ಕಾರಣವಾಗಿದೆ.

ಸೂರ್ಯಕಾಂತಿ ಬೆಳೆಗೆ ಇತ್ತೀಚೆಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತ್ತು ಸೂರ್ಯಕಾಂತಿ ಬೀಜಗಳ ಬೆಲೆ ಕೂಡಾ ಹೆಚ್ಚಾಗಿದ್ದು ಸೂರ್ಯಕಾಂತಿ ಬೀಜದ ಉತ್ಪಾದನೆಯನ್ನು ಹೆಚ್ಚಿಸಲು ರೈತರಿಗೆ ಲಾಭದಾಯಕವಾಗಿಸಿದೆ.

Sunflower seed production: NDDB & KOF inks MoU with University of Agricultural Sciences, Bangalore

ವಿಶ್ವಾಸಾರ್ಹ ಹೈಬ್ರಿಡ್ ಬೀಜಗಳ ಲಭ್ಯತೆಯ ಕೊರತೆ ನೀಗಲು ಎನ್‌ಡಿಡಿಬಿ ಮತ್ತು ಕೆಒಎಫ್ ಎರಡೂ ಜನಪ್ರಿಯ ಹೈಬ್ರಿಡ್ ಕೆಬಿಎಸ್‌ಎಚ್-41(ಬೀಜದ ವಿಧ)ರ ವಾಣಿಜ್ಯ ಉತ್ಪಾದನೆಗೆ ಯುಎಎಸ್-ಬಿಗೆ ಕೋರಿವೆ. ಈ ಬೆಳೆಯ ಅವಧಿ 90 ದಿನಗಳು. ಪ್ರತಿ ಹೆಕ್ಟೇರ್‌ಗೆ ಇಳುವರಿ 1700-2500 ಕೆಜಿಗಳು. ಈ ವೇರಿಯೆಂಟ್ ಶೇ.42ರಷ್ಟು ಎಣ್ಣೆ ಅಂಶವನ್ನು ಹೊಂದಿದೆ.

ಈ ಒಡಂಬಡಿಕೆಯನ್ನು ಎನ್‌ಡಿಡಿಬಿ ಮತ್ತು ಕೆಒಎಫ್, ಯುಎಎಸ್-ಬಿಯೊಂದಿಗೆ ಸಹಿ ಹಾಕಿವೆ ಮತ್ತು ಹೈದರಾಬಾದ್‌ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಯಿಲ್‌ಸೀಡ್ಸ್ ರೀಸರ್ಚ್ ದೊಡ್ಡ ಪ್ರಮಾಣದ ಸೂರ್ಯಕಾಂತಿ ಹೈಬ್ರಿಡ್ ಬೀಜದ ಉತ್ಪಾದನೆಯನ್ನು ಮಾಡಲಿದೆ. ಇದು ಅಂತಿಮವಾಗಿ ಸೂರ್ಯಕಾಂತಿ ಎಣ್ಣೆ ಉತ್ಪಾದನೆಗೆ ನೆರವಾಗಲಿದ್ದು ದೇಶವನ್ನು ಸೂರ್ಯಕಾಂತಿ ಎಣ್ಣೆಯಲ್ಲಿ ಆತ್ಮನಿರ್ಭರವಾಗಿಸುತ್ತದೆ.

ಈ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕರ್ನಾಟಕ ಸರ್ಕಾರದ ಕೃಷಿ ಸಚಿವ ಬಿ.ಸಿ.ಪಾಟೀಲ್, ಸಂಸದ ಹಾಗೂ ಕೆಒಎಫ್ ಅಧ್ಯಕ್ಷ ಅಣ್ಣಾಸಾಹೇಬ್ ಶಂಕರ್ ಜೊಲ್ಲೆ, ಎನ್‌ಡಿಡಿಬಿ ಅಧ್ಯಕ್ಷ ಮೀನೇಶ್ ಶಾ ಮತ್ತು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.

English summary
The National Dairy Development Board (NDDB) & Karnataka Cooperative Oilseeds Growers’ Federation Ltd (KOF) inked an MoU with University of Agricultural Sciences, Bangalore (UAS-Bangalore) and Indian Institute of Oilseeds Research, Hyderabad for large scale sunflower hybrid seed production in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X