ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಭದಾಯಕ ಆಲೂಗಡ್ಡೆ ಬೇಸಾಯಕ್ಕೆ ರೈತರಿಗೆ ಸಲಹೆಗಳು

|
Google Oneindia Kannada News

ಹಾಸನ, ಮೇ 15 : ಹಾಸನ ತಾಲೂಕಿನಲ್ಲಿ ಆಲೂಗಡ್ಡೆ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. 2020ನೇ ಸಾಲಿನ ಮುಂಗಾರು ಹಂಗಾಮಿಗೆ ಹಾಸನದ ಎಪಿಎಂಸಿ ಆವರಣದಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಪ್ರಕ್ರಿಯೆ ಆರಂಭಿಸಲಾಗಿದೆ.

ಕಳೆದ 8-10 ವರ್ಷಗಳಿಂದ ಆಲೂಗಡ್ಡೆ ಬೆಳೆಯು ಅಂಗಮಾರಿ ರೋಗಕ್ಕೆ ತುತ್ತಾಗುತ್ತಿದ್ದು ರೋಗದ ತೀವ್ರತೆಯಿಂದ ರೈತರು ಬಹಳ ನಷ್ಟ ಅನುಭವಿಸಿದ್ದಾರೆ. ರೋಗದಿಂದ ಆಗುವ ನಷ್ಟವನ್ನು ಕಡಿಮೆ ಮಾಡಲು ರೈತರು ಮುನ್ನೆಚ್ಚರಿಕೆ ವಹಿಸಬೇಕು.

ದೆಹಲಿಗೂ ಪಪ್ಪಾಯ ಕಳಿಸಿ ಮಾದರಿಯಾದ ಕೊಪ್ಪಳದ ರೈತ ದೆಹಲಿಗೂ ಪಪ್ಪಾಯ ಕಳಿಸಿ ಮಾದರಿಯಾದ ಕೊಪ್ಪಳದ ರೈತ

"ಬಿತ್ತನೆ ಗೆಡ್ಡೆಗಳು ಮೊಳಕೆ ಬರುವ ಸಮಯದಲ್ಲಿ ಕರಗುವುದನ್ನು ತಪ್ಪಿಸಲು ಆಲೂಗಡ್ಡೆ ಬೆಳೆಗಾರರು ತೋಟಗಾರಿಕಾ ಇಲಾಖೆ ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು" ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹೆಚ್.ಎಸ್. ರವಿ ಮನವಿ ಮಾಡಿದ್ದಾರೆ.

ಹೂವು ಬೆಳೆಗಾರರು 25 ಸಾವಿರ ಪರಿಹಾರ ಪಡೆಯುವುದು ಹೇಗೆ? ಹೂವು ಬೆಳೆಗಾರರು 25 ಸಾವಿರ ಪರಿಹಾರ ಪಡೆಯುವುದು ಹೇಗೆ?

ಈಗ ಆಲೂಗಡ್ಡೆ ಬಿತ್ತನೆ ಬೀಜದ ಮಾರಾಟ ಪ್ರಕ್ರಿಯೆ ಆರಂಭವಾಗಿದೆ. ಕೆಲವೇ ದಿನಗಳಲ್ಲಿ ಕೃಷಿ ಚಟುವಟಿಕೆ ಆರಂಭವಾಗಲಿದೆ. ಆದ್ದರಿಂದ, ಆಲೂಗಡ್ಡೆ ಬೆಳೆಯುವ ರೈತರಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ಇದರಿಂದ ರೈತರಿಗೆ ಸಹಾಯಕವಾಗಲಿದ್ದು, ನಷ್ಟ ಆಗದಂತೆ ನೋಡಿಕೊಳ್ಳಬಹುದು.

ವಾಟ್ಸಪ್, ಫೇಸ್ ಬುಕ್ ಮೂಲಕ ಮಾವು ಮಾರಿ ಮಾದರಿಯಾದ ರೈತ! ವಾಟ್ಸಪ್, ಫೇಸ್ ಬುಕ್ ಮೂಲಕ ಮಾವು ಮಾರಿ ಮಾದರಿಯಾದ ರೈತ!

ಪರ್ಯಾಯ ಬೆಳೆ ಪದ್ದತಿ

ಪರ್ಯಾಯ ಬೆಳೆ ಪದ್ದತಿ

ಹಿಂದಿನ ವರ್ಷಗಳಲ್ಲಿ ದುಂಡಾಣು ಸೊರಗು ರೋಗ ಕಂಡುಬಂದ ಆಲೂಗಡ್ಡೆ ತಾಕಿನಲ್ಲಿ ಆಲೂಗಡ್ಡೆ ಜಾತಿಗೆ ಸೇರಿದ ಟೊಮೋಟೋ, ಬದನೆ, ಮೆಣಸಿನಕಾಯಿ ಮತ್ತು ತಂಬಾಕು ಬೆಳೆಗಳನ್ನು ಬೆಳೆಯಬಾರದು ಎಂದು ರೈತರಿಗೆ ಸಲಹೆ ನೀಡಲಾಗಿದೆ. ಹೊಲಗಳಲ್ಲಿ ಪರ್ಯಾಯ ಬೆಳೆಯಾಗಿ ರಾಗಿ, ಮೆಕ್ಕೆಜೋಳ, ತೋಗರಿ, ಸೋಯಾ ಮತ್ತು ಅವರೆ ಮುಂತಾದ ಬೆಳೆಗಳನ್ನು ಬೆಳೆಯಬಹುದು.

ಬಿತ್ತನೆ ಬೀಜ ಖರೀದಿ ಮಾಡುವಾಗ ಎಚ್ಚರ

ಬಿತ್ತನೆ ಬೀಜ ಖರೀದಿ ಮಾಡುವಾಗ ಎಚ್ಚರ

ರೈತರು ಬಿತ್ತನೆಗೆ ಬಳಸುವ ಆಲೂಗಡ್ಡೆಯನ್ನು ವಿಶ್ವಾಸಾರ್ಹ ಮೂಲಗಳಿಂದಲೇ ಪಡೆಯಬೇಕು ಹಾಗೂ ಬೀಜ ಖರೀದಿಸಿದ ಬಾಬ್ತು, ತಳಿ, ದರ, ಇತ್ಯಾದಿ ವಿವರಗ, ಹಣ ಪಾವತಿಸಿದ ಬಿಲ್ಲನ್ನು ಕಡ್ಡಾಯವಾಗಿ ವ್ಯಾಪಾರಿಗಳಿಂದ ಪಡೆಯಬೇಕು. ಖರೀದಿಸುವಾಗ ಪ್ರತಿ ಚೀಲವನ್ನು ಪರೀಕ್ಷಿಸಿ ಗಡ್ಡೆಗಳು ಕೊಳೆತಿಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡು ಖರೀದಿಸಬೇಕು ಎಂದು ರೈತರಿಗೆ ಸೂಚನೆ ಕೊಡಲಾಗಿದೆ.

ಯಾವ ತಳಿ ಹೆಚ್ಚು ಸೂಕ್ತ

ಯಾವ ತಳಿ ಹೆಚ್ಚು ಸೂಕ್ತ

ಹಾಸನ ತಾಲೂಕಿನಲ್ಲಿ ಆಲೂಗಡ್ಡೆ ಬೆಳೆಯಲು ರೈತರು ಕುಫ್ರಿ ಜ್ಯೋತಿ, ಕುಫ್ರಿ ಹಿಮಾಲಿನಿ ತಳಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂದು ತೋಟಗಾರಿಕಾ ಇಲಾಖೆ ಹೇಳಿದೆ. ಆಲೂಗಡ್ಡೆ ಬಿತ್ತನೆ ಮಾಡಲು ಭೂಮಿ ಚೆನ್ನಾಗಿ ತಂಪಾಗಿರಬೇಕು ಮತ್ತು ಆಲೂಗಡ್ಡೆ ಕಣ್ಣುಗಳು ಮೊಳಕೆಯೊಡೆದು ಉಬ್ಬಿರಬೇಕು ಮತ್ತು ಪ್ರತಿ ಬಿತ್ತನೆ ಗಡ್ಡೆಯು ಕನಿಷ್ಠ 2 ರಿಂದ 3 ಕಣ್ಣುಗಳನ್ನು ಹೊಂದಿದ್ದು, 35 ರಿಂದ 40 ಗ್ರಾಂ ತೂಕ ಹೊಂದಿರಬೇಕು.

ಬೀಜೋಪಚಾರ ಹೇಗೆ?

ಬೀಜೋಪಚಾರ ಹೇಗೆ?

ಆಲೂಗಡ್ಡೆ ಬಿತ್ತನೆ ನಂತರ ನಿಯಮಿತವಾಗಿ ಸಸ್ಯ ಸಂರಕ್ಷಣಾ ಔಷಧಿ ಸಿಂಪರಣೆ ಮಾಡಬೇಕು. ಬೀಜ ಖರೀದಿಸಿದ ನಂತರ ಮಂದ ಬೆಳಕಿನಲ್ಲಿ ಸುಮಾರು 8-10 ದಿನಗಳ ಕಾಲ ತೆಳುವಾಗಿ ಹರಡಬೇಕು ಹಾಗೂ ಅದಷ್ಟು ಉಂಡೆ ಗಡ್ಡೆಗಳನ್ನು ಬಿತ್ತನೆ ಬಳಸಬೇಕು. ಕತ್ತರಿಸಿದ ಗಡ್ಡೆಗಳನ್ನು (ಮ್ಯಾಂಕೋಜೆಬ್ 4 ಗ್ರಾಂ +ಮೆಟಲಾಕ್ಸಿಲ್ 1 ಗ್ರಾಂ + ಸ್ಟ್ರೆಪಟೋಮೈಸಿನ್ ಸಲ್ಪೇಟ್ 0.5 ಗ್ರಾಂ) ಪ್ರತಿ ಲೀಟರ್ ನೀರಿನಲ್ಲಿ ಬೀಜೋಪಚಾರ ಮಾಡುವುದರಿಂದ ಮಣ್ಣಿನಿಂದ ಬರುವ ರೋಗಾಣುಗಳಿಂದ ರಕ್ಷಿಸಬಹುದು.

ನೀರು ನಿಲ್ಲದಂತೆ ನೋಡಿಕೊಳ್ಳಿ

ನೀರು ನಿಲ್ಲದಂತೆ ನೋಡಿಕೊಳ್ಳಿ

ಬಿತ್ತನೆ ಬಳಿಕ ಆಲೂಗಡ್ಡೆ ತಾಕಿನಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಹನಿ ನೀರಾವರಿ ಆಳವಡಿಸಿಕೊಂಡು ಬೆಳೆಯುವುದರಿಂದ ಹೆಚ್ಚಿನ ಇಳುವರಿ ಸಿಗಲಿದೆ. ಹೆಚ್ಚಿನ ಮಾಹಿತಿಗಳು ಅಗತ್ಯವಿದ್ದರೆ ಹಾಗೂ ತಾಂತ್ರಿಕ ಸಹಾಯಕ್ಕಾಗಿ ಈ ನಂಬರ್‌ಗೆ ಕರೆ ಮಾಡಬಹುದು. 08172-262390, 9945399414, 9844340103.

English summary
Farmers all set for potato cultivation ahead of monsoon season. Here are the tips for farmers to get good quality of crop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X