• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಗಾವಿಯಲ್ಲಿ ಮುಂದುವರಿದ ಧರಣಿ, ಆಮರಣಾಂತ ಉಪವಾಸ ಕೈಗೊಂಡ ಸಿದ್ದನಗೌಡ ಮೊದಗಿ

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ನವೆಂಬರ್.22: ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಧರಣಿ ಮುಂದುವರೆದಿದ್ದು, ಪ್ರತಿಭಟನಾ ಸ್ಥಳದಲ್ಲಿ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದನಗೌಡ ಮೊದಗಿ ಆಮರಣಾಂತ ಉಪವಾಸ ನಡೆಸುತ್ತಿದ್ದಾರೆ.

ಬೆಳಗಾವಿ ಡಿಸಿ ಕಚೇರಿ ಪ್ರವೇಶ ದ್ವಾರ ಸಂಪೂರ್ಣ ಬಂದ್ ಮಾಡಲಾಗಿದ್ದು, ಕಚೇರಿ ಎದುರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಕ್ಕರೆ ಕಾರ್ಖಾನೆಗಳ ಮಾಲೀಕರು ಬಾಕಿ ಕೊಡೋಕೆ ಒಪ್ತಾರಾ? ಸಭೆ ಇಂದು

ಡಿಸಿ ಗೇಟ್ ಗೆ ಹಸಿರು ಟವಲ್ ಕಟ್ಟಿ ಬಂದ್ ಮಾಡಲಾಗಿದ್ದು, ಮುಂದಿನಿಂದ ಜಿಲ್ಲಾಧಿಕಾರಿ ಕಚೇರಿ ಆವರಣ ಪ್ರವೇಶ ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಹಿಂದಿನ ದ್ವಾರದಿಂದ ಓಡಾಡುತ್ತಿದ್ದಾರೆ.

ಅಂದು ರೈತ ಮುಖಂಡ, ಇಂದು ಗೂಂಡಾ!: ಕುಮಾರಸ್ವಾಮಿ ವಿರುದ್ಧ ರೈತನ ಕೋಪ

ಡಿಸಿ ಕಚೇರಿ ಇದೀಗ ಬೀಕೋ ಎನ್ನುತ್ತಿದ್ದು, ಸಿದ್ದಗೌಡ ಮೋದಗಿ ನಡೆಸುತ್ತಿರುವ ಆಮರಣ ಉಪವಾಸ ಹೋರಾಟದಲ್ಲಿ ಚೂನಪ್ಪಾ ಪೂಜಾರಿ, ಜಯಶ್ರೀ ಗುರನ್ನವರ, ರಾಘವೇಂದ್ರ ನಾಯಕ ಭಾಗಿಯಾಗಿದ್ದಾರೆ.

ಕಬ್ಬು ಬೆಳೆಗೆ ವೈಜ್ಞಾನಿಕ ದರ ನಿಗದಿ ಮಾಡಬೇಕು, ಎಫ್ ಆರ್ ಪಿ ಪ್ರಕಾರ ಕಬ್ಬಿನ ದರ ನಿಗದಿಯಾಗಬೇಕು, ಸದ್ಯ ಎಕ್ಸ್ ಗೇಟ್ ದರ ನಿಗದಿಯಾಗಿದ್ದು, ಎಕ್ಸ್ ಫೀಲ್ಡ್ ದರ ನಿಗದಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

English summary
Sugarcane farmers continue to protest in Belgaum. Indian Agricultural Society President Siddanagowda modagi on fast-unto-death in protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X