ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಲ ಸಾಕಣೆ; ಹವ್ಯಾಸವನ್ನೇ ಆದಾಯವಾಗಿಸಿಕೊಂಡ ಕೋಲಾರದ ಉಪನ್ಯಾಸಕ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ನವೆಂಬರ್ 16: ಹವ್ಯಾಸವಾಗಿ ಮೊಲ ಸಾಕಲು ಆರಂಭಿಸಿದ ಉಪನ್ಯಾಸಕರೊಬ್ಬರು ನಂತರ ಅದನ್ನೇ ಆದಾಯದ ಮೂಲವನ್ನಾಗಿಯೂ ಪರಿವರ್ತಿಸಿಕೊಂಡಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ದೊಡ್ಡಕಲ್ಲಹಳ್ಳಿಯ ಉಪನ್ಯಾಸಕ ರಾಜಪ್ಪ ಮೊಲ ಸಾಕಣಿಕೆಯನ್ನು ಇದೀಗ ಆದಾಯದ ದಾರಿಯನ್ನಾಗಿ ಮಾಡಿಕೊಂಡಿದ್ದಾರೆ. ಮೊಲ ಸಾಕಣಿಕೆ ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಅದೆಷ್ಟೋ ಜನರು ಮೊಲ ಸಾಕಾಣಿಕೆ ಮಾಡಲು ಹೋಗಿ ಕೈ ಸುಟ್ಟಿಕೊಂಡಿದ್ದಾರೆ. ಆದರೆ ತಾಳ್ಮೆಯಿಂದ, ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ನಷ್ಟವನ್ನೇ ಲಾಭವನ್ನಾಗಿ ಮಾಡಿಕೊಳ್ಳಬಹುದು ಎನ್ನುತ್ತಾರೆ ರಾಜಪ್ಪ. ಮುಂದೆ ಓದಿ...

 ಹವ್ಯಾಸವಾಗಿದ್ದು, ಆದಾಯದ ದಾರಿಯಾಯಿತು

ಹವ್ಯಾಸವಾಗಿದ್ದು, ಆದಾಯದ ದಾರಿಯಾಯಿತು

ಆರೇಳು ವರ್ಷಗಳ ಹಿಂದೆ ಕೇವಲ ಹತ್ತು ಹದಿನೈದು ಮೊಲಗಳನ್ನು ಸಾಕಲು ಆರಂಭಿಸಿದರು ರಾಜಪ್ಪ. ಇದೀಗ ಮುನ್ನೂರಕ್ಕೂ ಅಧಿಕ ಮೊಲಗಳನ್ನು ಸಾಕುತ್ತಿದ್ದಾರೆ. ಇದರಿಂದ ಅಧಿಕ ಆದಾಯವನ್ನೂ ಗಳಿಸುತ್ತಿದ್ದಾರೆ. ಹವ್ಯಾಸವಾಗಿ ಆರಂಭಿಸಿದ ಕೆಲಸ ಇವರಿಗೆ ಈಗ ಆದಾಯವನ್ನೂ ತಂದುಕೊಡುತ್ತಿದೆ. ತಿಂಗಳಿಗೆ ಸುಮಾರು ಮೂವತ್ತು ಸಾವಿರ ರೂಪಾಯಿಯಷ್ಟು ಆದಾಯವನ್ನು ಪಡೆಯುತ್ತಿದ್ದಾರೆ.

ಭೂ ತಾಯಿ ಒಡಲಿಗೆ ವಿಷ ತುಂಬಲ್ಲ ಎಂದು ಆಣೆ ಮಾಡಿದಂತೆ ಬದುಕುತ್ತಿರುವ ಯುವಕರಿವರುಭೂ ತಾಯಿ ಒಡಲಿಗೆ ವಿಷ ತುಂಬಲ್ಲ ಎಂದು ಆಣೆ ಮಾಡಿದಂತೆ ಬದುಕುತ್ತಿರುವ ಯುವಕರಿವರು

 ಹೆಚ್ಚೇನು ಶ್ರಮ ಬೇಡದ ಮೊಲ ಸಾಕಣೆ

ಹೆಚ್ಚೇನು ಶ್ರಮ ಬೇಡದ ಮೊಲ ಸಾಕಣೆ

ಮೊಲ ಸಾಕಣಿಕೆಯನ್ನು ದೊಡ್ಡ ಮಟ್ಟದಲ್ಲಿ ಕೈಗೊಳ್ಳಲು ರಾಜಪ್ಪ ಅವರಿಗೆ ಬೆನ್ನೆಲುಬಾಗಿ ನಿಂತಿದ್ದು ಪತ್ನಿ ವಿನುತಾ. ದಿನ್ಕಕೆ ಎರಡರಿಂದ ಮೂರು ಗಂಟೆಗಳ ಕಾಲ ಸಮಯವನ್ನು ಮೀಸಲಿಟ್ಟು ಸಾಕಣಿಕೆ ಮಾಡುತ್ತಿದ್ದಾರೆ. ರಾಜಪ್ಪ ತಮ್ಮ ಬಿಡುವಿನ ಸಮಯದಲ್ಲಿ ಮಾತ್ರ ಮೊಲ ಸಾಕಣಿಕೆ ಕೆಲಸದಲ್ಲಿ ತೊಡಗುತ್ತಾರೆ.

 ಮೊಲಗಳಿಗೆ ರೋಗ ರುಜಿನಗಳೂ ಕಡಿಮೆ

ಮೊಲಗಳಿಗೆ ರೋಗ ರುಜಿನಗಳೂ ಕಡಿಮೆ

ಒಂದು ಮೊಲ ಒಂದು ವರ್ಷದಲ್ಲಿ ನಾಲ್ಕರಿಂದ ಐದು ಬಾರಿ ಮರಿ ಹಾಕುತ್ತದೆ. ಒಮ್ಮೆಗೆ ಏಳರಿಂದ ಹತ್ತು ಮರಿಗಳನ್ನು ಹಾಕುತ್ತದೆ. ಸರಿಯಾಗಿ ಪೋಷಣೆ ಮಾಡಿದರೆ ಮರಿಗಳು ಸಹ ಬೇಗನೆ ಬೆಳೆಯುತ್ತವೆ. ಇವುಗಳಿಗೆ ರೋಗ ರುಜಿನಗಳೂ ಕಡಿಮೆಯೇ. ಮೊಲಗಳಿಗೆ ಬರುವ ಕಜ್ಜಿ ರೋಗದೆಡೆಗೆ ಗಮನ ವಹಿಸಿದರೆ ಸಾಕು, ಮತ್ಯಾವುದೇ ರೋಗಗಳು ತಗಲುವುದಿಲ್ಲ.

ಕೊಪ್ಪಳ ರೈತನ ಸಾಧನೆ; ಪಪ್ಪಾಯ ಬೆಳೆದು ಒಳ್ಳೆಯ ಆದಾಯ!ಕೊಪ್ಪಳ ರೈತನ ಸಾಧನೆ; ಪಪ್ಪಾಯ ಬೆಳೆದು ಒಳ್ಳೆಯ ಆದಾಯ!

 ಉಪಕಸುಬಾಗಿ ತೆಗೆದುಕೊಳ್ಳಲು ಕಿವಿಮಾತು

ಉಪಕಸುಬಾಗಿ ತೆಗೆದುಕೊಳ್ಳಲು ಕಿವಿಮಾತು

ಮೊಲ ಸಾಕಣೆ ಲಾಭದಾಯಕ ಕಸುಬು ಎಂದು ರಾಜಪ್ಪ ತೋರಿಸಿಕೊಟ್ಟಿದ್ದಾರೆ. ಮೊಲಗಳಿಗೆ ಬೇಡಿಕೆಯೂ ಹೆಚ್ಚಿರುವುದರಿಂದ ಆದಾಯವೂ ನಿರ್ದಿಷ್ಟವಾಗಿದೆ. ಹೀಗಾಗಿ ಮೊಲ ಸಾಕಾಣಿಕೆಯನ್ನು ಉಪಕಸುಬಾಗಿ ತೆಗೆದುಕೊಳ್ಳಲು ರಾಜಪ್ಪ ಯುವ ಪೀಳಿಗೆಗೆ ಕಿವಿಮಾತು ಹೇಳುತ್ತಾರೆ.

English summary
Lecturer Rajappa and his wife vinutha are getting good income by rabbit farming in kolar district. Here is a success story of rabbit farming
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X