• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಂಡು ಜಮೀನು, ವಿವಿಧ ಬೆಳೆ; ಮಾದರಿಯಾದ ಕೋಲಾರದ ರೈತ

By ಕೋಲಾರ ಪ್ರತಿನಿಧಿ
|

ಕೋಲಾರ, ಜನವರಿ 10: ಇವರೊಬ್ಬ ಸಾಮಾನ್ಯ ಕೃಷಿಕ. ಆದರೆ, ಇವರ ಯೋಜನೆ ಮಾತ್ರ ಅಸಾಧ್ಯವಾದದ್ದು. ಇರುವ ತುಂಡುಭೂಮಿಯನ್ನು ಸದುಪಯೋಗ ಮಾಡಿಕೊಂಡು ವಿವಿಧ ಗಿಡ-ಮರಗಳನ್ನು ಬೆಳೆಸಿದ್ದಾರೆ. ಮಳೆ ಕಡಿಮೆ ಇರುವ ಪ್ರದೇಶವನ್ನು ಮಲೆನಾಡಾಗಿ ಪರಿವರ್ತನೆ ಮಾಡಿದ್ದಾರೆ.

ಕೋಲಾರದ ಸುಗಟೂರು ಗ್ರಾಮದ ಮುರುಳೀಧರ್ ಇತರ ರೈತರಿಗೆ ಮಾದರಿಯಾಗಿದ್ದಾರೆ. ವ್ಯವಸಾಯದ ಜೊತೆಗೆ ಮೇಕೆಗಳನ್ನು ಸಾಕುತ್ತಿರುವ ರೈತರು, ಲಾಕ್ ಡೌನ್ ಸಮಯದಲ್ಲಿ ಮೇಕೆಗಳಿಂದಲೇ ಲಕ್ಷ-ಲಕ್ಷ ರೂಪಾಯಿ ಸಂಪಾದನೆಯನ್ನು ಮಾಡಿದ್ದಾರೆ.

ಕಾಫಿ ಬೆಳೆಗಾರರಿಗೆ ಸಂಕಟ ತಂದಿಟ್ಟ ಅಕಾಲಿಕ ಮಳೆ

ಇರುವುದು ಸ್ವಲ್ಪ ಜಮೀನು ಎಂದು ಮುರುಳೀಧರ್ ಸುಮ್ಮನೆ ಕೂತಿಲ್ಲ. ಇರುವ ಜಮೀನನ್ನೇ ವಿಭಿನ್ನವಾಗಿ ಬಳಸಿಕೊಂಡಿದ್ದಾರೆ. ತರಹೇವಾರಿ ಮರಗಳನ್ನು ತೋಟದ ತುಂಬಾ ಹಾಕಿದ್ದಾರೆ. ಇದರ ಜೊತೆ ಮೇಕೆಗಳ ಸಾಕಣೆಯಿಂದಾಗಿ ಕೈತುಂಬಾವನ್ನು ಪಡೆಯುತ್ತಿದ್ದಾರೆ.

ಕೊಪ್ಪಳ ರೈತನ ಸಾಧನೆ; ಪಪ್ಪಾಯ ಬೆಳೆದು ಒಳ್ಳೆಯ ಆದಾಯ!

ವ್ಯವಸಾಯದ ಜೊತೆಗೆ ಮುರುಳೀಧರ್ ತಮಿಳುನಾಡಿನ ವಿಶೇಷ ತಳಿಯ ಹುಂಜಗಳು, ಗಿರ್ ಹಸು, ಮಲೆನಾಡು ತಳಿಯ ನಾಟಿ ಹಸುಗಳನ್ನು ಸಾಕಿದ್ದಾರೆ. ಚಿಕ್ಕ ಜಮೀನನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಇವರು ಮಾದರಿಯಾಗಿದ್ದಾರೆ.

ಕಲ್ಲಂಗಡಿ ಬೆಳೆದು ಲಕ್ಷ-ಲಕ್ಷ ಸಂಪಾದಿಸಿದ ಕೊಪ್ಫಳ ರೈತ

ಜಮುನಾಪುರಿ ಮೇಕೆಗಳ ಸಾಕಣೆ

ಜಮುನಾಪುರಿ ಮೇಕೆಗಳ ಸಾಕಣೆ

ನೆಲಕ್ಕೆ ತಾಕುವಂತಿರೋ ಕಿವಿ, ಮುಖದೊಳಗೆ ಮುದುಡಿಕೊಂಡಿರೋ ಬಾಯಿ, ಪಿಳಿ ಪಿಳಿ ಕಣ್ಣು ಬಿಡುತ್ತಾ ಸಿಕ್ಕಿದ್ದನೆಲ್ಲ ಮೇಕೆಗಳು ಸ್ವಾಹ ಮಾಡುತ್ತಿವೆ. ಅಷ್ಟೇ ಅಲ್ಲ ಕೊರಳಲ್ಲಿ ಚಿನ್ನದ ಚೈನ್ ಹಾಕಿರೋ ಈ ಮೇಕೆ ಕೂಡ ಬಂಗಾರವಿದ್ದಂತೆ. ಯಾಕೆಂದರೆ ಕ್ವಿಂಟಾಲ್ ಗಟ್ಟಲೇ ತೂಕವಿರುವ ಇವು ಜಮುನಾಪುರಿ ಮೇಕೆಗಳು.

ಲಕ್ಷಾಂತರ ರೂಪಾಯಿ ಸಂಪಾದನೆ

ಲಕ್ಷಾಂತರ ರೂಪಾಯಿ ಸಂಪಾದನೆ

ಕಾಶ್ಮೀರ ತಳಿಯ ಜಮುನಾಪುರಿ ಮೇಕೆಗಳ ಸಾಕಣೆಯಲ್ಲಿ ರೈತ ಮುರುಳೀಧರ್ ಯಶಸ್ಸುಗಳಿಸಿದ್ದಾರೆ. ಈ ಮಾದರಿಯ ಮೇಕೆಗಳು ಇತ್ತೀಚಿಗೆ ರಾಜ್ಯದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಕೋಲಾರದ ಸುಗಟೂರು ಗ್ರಾಮದ ಮುರುಳೀಧರ್ ಈ ಮೇಕೆಗಳಿಂದಲೇ ಜೀವನ ಕಟ್ಟಿಕೊಂಡಿದ್ದಾರೆ.ಲಾಕ್ ಡೌನ್ ಸಮಯದಲ್ಲಿಯೂ ಲಕ್ಷ ಲಕ್ಷ ಸಂಪಾದನೆ ಮಾಡಿದ್ದಾರೆ.

9 ಲಕ್ಷದ ತನಕ ಬೆಲೆ ಇದೆ

9 ಲಕ್ಷದ ತನಕ ಬೆಲೆ ಇದೆ

ರೈತ ಮುರಳೀಧರ್ ಅವರು ಹೈದರಾಬಾದ್‌ನಿಂದ ಜಮುನಾಪುರಿ ಮೇಕೆಗಳನ್ನು ತಂದು ಸಾಕಿದ್ದಾರೆ. 120 ರಿಂದ 150 ಕೆಜಿ ತೂಕ ಬರುವ ಇವುಗಳಿಗೆ ಕನಿಷ್ಟ 2 ಲಕ್ಷದಿಂದ 9 ಲಕ್ಷದ ವರೆಗೂ ಬೆಲೆ ಇದೆ. ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಂದ ಮೇಕೆಗಳನ್ನು ಖರೀದಿಸಲು ಜನರು ಬರ್ತಿದ್ದಾರೆ. ಕೇಳಿದಷ್ಟು ಹಣ ಕೊಟ್ಟು ವ್ಯಾಪರ ಮಾಡುತ್ತಾರೆ. ಮಾಂಸಕ್ಕಾಗಿ ಇವುಗಳನ್ನು ಖರೀದಿ ಮಾಡಲಾಗುತ್ತದೆ. ಗಂಡು ಬಂದು 110 ರಿಂದ 150 ವರೆಗೂ ತೂಕ ಬರುತ್ತದೆ, ಹೆಣ್ಣು 80 ರಿಂದ 100 ಕೆಜಿ ತೂಗುತ್ತದೆ. ಇವುಗಳಿಗೆ ಖಾಯಿಲೆ ಬರೋದಿಲ್ಲ, ಕನಿಷ್ಠ ಮೂರು ಲೀಟರ್ ಹಾಲು ಸಿಗುತ್ತದೆ.

ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ

ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ

ರೈತ ಮುರುಳೀಧರ್ ಅವರು ತಮ್ಮ ಜಮೀನಿನಲ್ಲಿ ಮಾವು, ತೆಂಗು, ದಾಳಿಂಬೆ, ಲಿಂಬೆ, ಸಪೋಟ, ಜಂಬೂ ನೇರಳೆ, ರಾಮಪಾಲ, ಅಂಜೂರ, ಲಕ್ಷಣಫಲ, ಕಿತ್ತಳೆ, ಹಲಸು, ಗೋಡಂಬಿ ಸೇರಿದಂತೆ ಋತುಮಾನಕ್ಕೆ ತಕ್ಕಂತೆ ಫಸಲು ನೀಡುವ ಮರಗಳನ್ನ ಬೆಳೆಸಿದ್ದಾರೆ.

ಸ್ಥಳೀಯರಿಗೆ ಮಾದರಿಯಾದ ರೈತ

ಸ್ಥಳೀಯರಿಗೆ ಮಾದರಿಯಾದ ರೈತ

ಮುರುಳೀಧರ್ ತಮಿಳುನಾಡಿನಿಂದ ವಿಶೇಷ ತಳಿಯ ಹುಂಜಗಳು, ಗಿರ್ ಹಸು, ಮಲೆನಾಡು ತಳಿಯ ನಾಟಿ ಹಸುಗಳನ್ನ ಸಹ ಸಾಕಿದ್ದಾರೆ. ವಿಭಿನ್ನವಾಗಿ ಆಲೋಚಿಸಿದರೆ ಕೃಷಿಯಲ್ಲಿಯೂ ಯಶಸ್ಸುಗಳಿಸಬಹುದು ಎಂಬುದಕ್ಕೆ ಮುರುಳೀಧರ್ ಮಾದರಿಯಾಗಿದ್ದಾರೆ.

English summary
Success story of an farmer of Kolar district Sugaturu village. Farmer Muralidhar owned just small piece of land but model for other farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X