ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತನ ವಿನೂತನ "ಗೋಟ್ ಬ್ಯಾಂಕ್"; ಒಂದು ಮೇಕೆ ಸಾಲ ತಗೊಳ್ಳಿ, 4 ಮರಿ ವಾಪಸ್ ಮಾಡಿ...

|
Google Oneindia Kannada News

ಪುಣೆ, ಫೆಬ್ರುವರಿ 04: ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಕೃಷಿ ಕ್ಷೇತ್ರವೂ ವೇಗವಾಗಿ ಬದಲಾಗುತ್ತಿದೆ. ಕೃಷಿಯಲ್ಲಿ ಹಲವು ಮಾರ್ಪಾಡುಗಳಾಗುತ್ತಿದ್ದು, ದಿನೇ ದಿನೇ ಹೊಸ ಹೊಸ ದಾರಿ, ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಕೃಷಿಗೆ ಪೂರಕವಾಗಿ ಹೈನೋದ್ಯಮದಲ್ಲಿಯೂ ಕೆಲವು ಬದಲಾವಣೆಗಳಾಗುತ್ತಿವೆ.

ಬೆಳೆಗಳನ್ನಷ್ಟೇ ನೆಚ್ಚಿಕೊಳ್ಳದೇ ಅವುಗಳೊಂದಿಗೆ ಹೈನೋದ್ಯಮವನ್ನೂ ಕೈಗೊಂಡು, ಹಸು, ಮೇಕೆ ಕುರಿ ಸಾಕಣೆ ನಡೆಸುವುದು ಆದಾಯಕ್ಕೊಂದು ದಾರಿ. ಗ್ರಾಮೀಣ ಭಾಗಗಳಲ್ಲಿ ಮೇಕೆ ಸಾಕಣೆ ಮಹಿಳಾ ಕೃಷಿಕರಿಗೂ ಹೆಚ್ಚು ಅನುಕೂಲಕರ. ಈ ಎಲ್ಲಾ ಅಂಶಗಳನ್ನು ಮನಗಂಡ ಮಹಾರಾಷ್ಟ್ರ ರೈತರೊಬ್ಬರು ತಾವು ಲಾಭ ಗಳಿಸುವ, ಜೊತೆಗೆ ಬೇರೆ ರೈತರಿಗೂ ಲಾಭಕ್ಕೆ ನೆರವಾಗಲು "ಗೋಟ್ ಬ್ಯಾಂಕ್" ಎಂಬ ವಿನೂತನ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಏನಿದು ಗೋಟ್ ಬ್ಯಾಂಕ್? ಇಲ್ಲಿದೆ ವಿವರ...

 ಮಹಾರಾಷ್ಟ್ರ ರೈತನ ವಿನೂತನ ಪ್ರಯತ್ನ

ಮಹಾರಾಷ್ಟ್ರ ರೈತನ ವಿನೂತನ ಪ್ರಯತ್ನ

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಸಾಂಘವಿ ಗ್ರಾಮದ 52 ವರ್ಷದ ರೈತ ನರೇಶ್ ದೇಶಮುಖ್ ಈ ವಿನೂತನ ಪ್ರಯತ್ನವನ್ನು ನಡೆಸಿರುವುದು. "ಗೋಟ್ ಬ್ಯಾಂಕ್ ಆಫ್ ಕಾರ್ಖೇಡಾ" ಆರಂಭಿಸಿ ಮೇಕೆಗಳನ್ನು ಸಾಲ ನೀಡುತ್ತಿದ್ದಾರೆ. ಪಂಜಾಬ್ ರಾವ್ ಕೃಷಿ ವಿದ್ಯಾಪೀಠದಿಂದ ಪದವಿ ಪಡೆದಿರುವ ನರೇಶ್ ದೇಶಮುಖ್ 2018ರ ಜುಲೈನಲ್ಲಿಯೇ ಈ ಒಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಮೇಕೆಗಳನ್ನು ಸಾಲಕ್ಕೆ ನೀಡುವ ಈ ವಿಶೇಷ ಯೋಜನೆ ಜಿಲ್ಲೆಯಾದ್ಯಂತ ಯಶಸ್ಸನ್ನೂ ಕಂಡಿದೆ.

 ಮೇಕೆ ಸಾಲ ಪಡೆಯಲು ಇದೇ ಷರತ್ತು

ಮೇಕೆ ಸಾಲ ಪಡೆಯಲು ಇದೇ ಷರತ್ತು

ಮೇಕೆಗಳನ್ನು ಸಾಲದಂತೆ ಪಡೆದುಕೊಳ್ಳಲು ಆಸಕ್ತಿಯಿರುವ ರೈತರು ಮೊದಲು 1200 ರೂಪಾಯಿ ನೀಡಿ ಸಾಲದ ಒಪ್ಪಂದ ಮಾಡಿಕೊಳ್ಳಬೇಕು. ಈ ಸಾಲದ ಒಪ್ಪಂದದಂತೆ, ಒಂದು ಮೇಕೆಯನ್ನು ಪಡೆದುಕೊಂಡ ವ್ಯಕ್ತಿಯು ನಲವತ್ತು ತಿಂಗಳ ಅವಧಿಯಲ್ಲಿ ನಾಲ್ಕು ಮರಿಗಳನ್ನು ಹಿಂದಿರುಗಿಸಬೇಕು ಎಂಬ ಶರತ್ತಿನೊಂದಿಗೆ ಈ ಸಾಲವನ್ನು ನೀಡಲಾಗುತ್ತದೆ.

 ಈ ಬ್ಯಾಂಕ್ ಆರಂಭಿಸಲು ಪ್ರೇರಣೆ ಏನು?

ಈ ಬ್ಯಾಂಕ್ ಆರಂಭಿಸಲು ಪ್ರೇರಣೆ ಏನು?

ಸಾಮಾನ್ಯವಾಗಿ ಹಲವು ಗ್ರಾಮಗಳಲ್ಲಿ ಓಡಾಡುತ್ತಿದ್ದ ದೇಶಮುಖ್, ಮಹಿಳಾ ಕೃಷಿಕರು ಮೇಕೆ ಸಾಕಾಣಿಕೆಯಲ್ಲಿ ತೊಡಗಿಕೊಂಡು ಆರ್ಥಿಕ ಪ್ರಗತಿ ಸಾಧಿಸಿದ್ದನ್ನು ಕಂಡಿದ್ದರು. ಮೇಕೆ ಸಾಕಣೆ ಮೂಲಕ ಸಣ್ಣ ಜಾಗವನ್ನು ತೆಗೆದುಕೊಂಡಿದ್ದನ್ನು, ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿದ್ದನ್ನು, ಅಷ್ಟೇ ಏಕೆ ಆ ದುಡ್ಡಿನಲ್ಲಿಯೇ ಮದುವೆ ಕಾರ್ಯವನ್ನು ಮಾಡಿಮುಗಿಸಿದ್ದನ್ನೂ ಕಂಡಿದ್ದರು. ಇವೆಲ್ಲವನ್ನೂ ನೋಡಿದ್ದ ದೇಶಮುಖ್ ಅವರಲ್ಲಿ ಈ ಗೋಟ್ ಬ್ಯಾಂಕ್ ತೆರೆಯುವ ಆಲೋಚನೆ ಹೊಳೆಯಿತು.

 ನಲವತ್ತು ಲಕ್ಷ ರೂಪಾಯಿಗೆ ಮೇಕೆಗಳ ಖರೀದಿ

ನಲವತ್ತು ಲಕ್ಷ ರೂಪಾಯಿಗೆ ಮೇಕೆಗಳ ಖರೀದಿ

ಈ ಬ್ಯಾಂಕ್ ಸ್ಥಾಪಿಸುವುದರಿಂದ ರೈತರಿಗೂ ಲಾಭ ಬರುತ್ತದೆ. ಜೊತೆಗೆ ತಮಗೂ ಲಾಭ ಗ್ಯಾರಂಟಿ ಎಂಬ ಆಲೋಚನೆಯೊಂದಿಗೆ ವಿನೂತನ ಪ್ರಯೋಗಕ್ಕೆ ಮುಂದಾದರು. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ಬಂದಿದೆ. ತಮ್ಮ ಉಳಿತಾಯದ ನಲವತ್ತು ಲಕ್ಷ ರೂಪಾಯಿಯಿಂದ 340 ಮೇಕೆಗಳನ್ನು ಖರೀದಿಸಿ ತಂದು ಮೇಕೆಗಳನ್ನು ಸಾಲಕ್ಕೆ ನೀಡಲು ಆರಂಭಿಸಿದರು. ಈ ಎರಡು ವರ್ಷಗಳಲ್ಲಿ ಈ ಬ್ಯಾಂಕ್ ನಿಂದ ಅವರಿಗೂ ಲಾಭವಾಗಿದ್ದು, ಖರೀದಿಸಿದ ರೈತರಿಗೂ ಒಂದು ಮೇಕೆಯಿಂದ ಗರಿಷ್ಠ 2.5 ಲಕ್ಷ ರೂಪಾಯಿ ಲಾಭ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

English summary
Naresh Deshmukh, a farmer in Maharashtra's Akola district has started unique 'Goat Bank' to fight against agriculture crisis,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X