ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಧಾರಿತ ಬೇಸಾಯ ಪದ್ಧತಿಯಿಂದ ಸೋಯಾ ಅವರೆ ಅಧಿಕ ಉತ್ಪಾದನೆ!

|
Google Oneindia Kannada News

ಸೋಯಾ ಅವರೆ ಮುಖ್ಯವಾದ ಎಣ್ಣೆಕಾಳು ಹಾಗೂ ದ್ವಿದಳ ಧಾನ್ಯದ ಬೆಳೆಯಾಗಿದೆ. ಶೇ.40ರಷ್ಟು ಸಸಾರಜನಕ ಮತ್ತು ಶೇ.20ರಷ್ಟು ಎಣ್ಣೆಯನ್ನು ಹೊಂದಿದೆ. ಇದರ ಬೇರುಗಳಲ್ಲಿ ವಾತಾವರಣದಲ್ಲಿರುವ ಸಾರಜನಕ ಸ್ಥಿರೀಕರಿಸುವ ಗಂಟುಗಳಿರುವುದರಿಂದ ಬೆಳೆಯು ಕಟಾವಿನ ನಂತರ ಬೇರಿನ ಭಾಗ ಮತ್ತು ಅದರಿಂದ ಉದುರುವ ಎಲೆಗಳನ್ನು ಭೂಮಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಇದು ಮಿಶ್ರ ಬೆಳೆಗೆ ಅಥವಾ ಬೆಳೆಯ ಪರಿವರ್ತನೆಗೆ ಸೂಕ್ತವಾದ ಬೆಳೆಯಾಗಿದೆ.

ಸೋಯಾ ಅವರೆ ತಳಿಗಳು ಮತ್ತು ವಿಶೇಷ ಗುಣಗಳು: ಎಂ.ಎ.ಯು.ಎಸ್-2, ತಳಿಯನ್ನು ನೀರಾವರಿ ಇದ್ದರೆ ಮುಂಗಾರು, ಹಿಂಗಾರು ಮತ್ತು ಬೇಸಿಗೆಯ ಸಮಯದಲ್ಲಿ ಬಿತ್ತನೆ ಮಾಡಬಹುದು ಖುಷ್ಕಿ ಜಮೀನು ಆದರೆ ಜುಲೈ ತಿಂಗಳ ಮೊದಲ ವಾರದಲ್ಲಿ ಬಿತ್ತನೆ ಮಾಡಬಹುದು. ಸುಮಾರು 105 ರಿಂದ 110 ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಎಕರೆಗೆ ಸುಮಾರು 4 ರಿಂದ 6 ಕ್ವಿಂಟಲ್ ಖುಷ್ಕಿ ಜಮೀನು, 8 ರಿಂದ 10 ಕ್ವಿಂಟಲ್ ನೀರಾವರಿ ಜಮೀನುಗಳಲ್ಲಿ ಇಳುವರಿ ಕೊಡುತ್ತದೆ. ಎಲ್ಲಾ ಕಾಲಗಳಲ್ಲಿ ಬಿತ್ತನೆ ಮಾಡಬಹುದು.

ಕೆ.ಬಿ.ಎಸ್.-23, ತಳಿಯನ್ನು ನೀರಾವರಿ ಇದ್ದರೆ ಮುಂಗಾರು, ಹಿಂಗಾರು ಮತ್ತು ಬೇಸಿಗೆಯ ಸಮಯದಲ್ಲಿ ಬಿತ್ತನೆ ಮಾಡಬಹುದು ಖುಷ್ಕಿ ಜಮೀನು ಆದರೆ ಜುಲೈ ತಿಂಗಳ ಮೊದಲ ವಾರದಲ್ಲಿ ಬಿತ್ತನೆ ಮಾಡಬಹುದು. ಸುಮಾರು 90 ರಿಂದ 95 ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಎಕರೆಗೆ ಸುಮಾರು 8 ರಿಂದ 10 ಕ್ವಿಂಟಲ್ ಖುಷ್ಕಿ ಜಮೀನು, 10 ರಿಂದ 12 ಕ್ವಿಂಟಲ್ ನೀರಾವರಿ ಜಮೀನುಗಳಲ್ಲಿ ಇಳುವರಿ ಕೊಡುತ್ತದೆ. ಅಧಿಕ ಇಳುವರಿ ಕೊಡುವ ಅಲ್ಪಾವಧಿ ತಳಿಯಾಗಿದೆ.

Soybean Cultivation Guide: How Advanced Farming Method Helps Karnataka Farmers

ಡಿ.ಎಸ್.ಪಿ-21, ತಳಿಯನ್ನು ನೀರಾವರಿ ಇದ್ದರೆ ಮುಂಗಾರು, ಹಿಂಗಾರು ಮತ್ತು ಬೇಸಿಗೆಯ ಸಮಯದಲ್ಲಿ ಬಿತ್ತನೆ ಮಾಡಬಹುದು ಖುಷ್ಕಿ ಜಮೀನು ಆದರೆ ಜುಲೈ ತಿಂಗಳ ಮೊದಲ ವಾರದಲ್ಲಿ ಬಿತ್ತನೆ ಮಾಡಬಹುದು. ಸುಮಾರು 105 ರಿಂದ 110 ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಎಕರೆಗೆ ಸುಮಾರು 4 ರಿಂದ 6 ಕ್ವಿಂಟಲ್ ಖುಷ್ಕಿ ಜಮೀನು, 8 ರಿಂದ 10 ಕ್ವಿಂಟಲ್ ನೀರಾವರಿ ಜಮೀನುಗಳಲ್ಲಿ ಇಳುವರಿ ಕೊಡುತ್ತದೆ. ಎಲ್ಲಾ ಕಾಲಗಳಲ್ಲೂ ಬಿತ್ತನೆ ಮಾಡಬಹುದಾದ ತಳಿಯಾಗಿದೆ.

Soybean Cultivation Guide: How Advanced Farming Method Helps Karnataka Farmers

ಬಿತ್ತನೆ ಮಾಡುವುದಕ್ಕಿಂತ ಮುಂಚೆ ರೈತರು ಅನುಸರಿಸಬೇಕಾದ ಕ್ರಮಗಳು: ರೈತರು ನೀರಾವರಿ ಇದ್ದರೆ ವರ್ಷದ ಎಲ್ಲಾ ಕಾಲಗಳಲ್ಲಿಯೂ ಬಿತ್ತಬಹುದು ಕುಷ್ಕಿ ಬೆಳೆಯನ್ನು ಆಗಸ್ಟ್ ಮೊದಲನೇ ವಾರದಲ್ಲಿ ಬಿತ್ತಬಹುದು ಬಿತ್ತನೆಗೆ ಭೂಮಿ ಸಿದ್ಧವಾದ ಕೂಡಲೇ ಶಿಫಾರಸ್ಸು ಮಾಡಿದ ಪ್ರಮಾಣದ ಕೊಟ್ಟಿಗೆ ಮತ್ತು ಕಾಂಪೋಸ್ಟ್ ಗೊಬ್ಬರ, ರಾಸಾಯನಿಕ ಗೊಬ್ಬರವನ್ನು ಮೂರರಿಂದ ನಾಲ್ಕು ವಾರಗಳ ಮೊದಲು ಮಣ್ಣಿನಲ್ಲಿ ಬೆರೆಸುವುದು.

Soybean Cultivation Guide: How Advanced Farming Method Helps Karnataka Farmers

ಬೀಜವನ್ನು ಮೊದಲು 50 ಗ್ರಾಂ ಥೈರಾಮ್ ಮತ್ತು 25 ಗ್ರಾಂ ಕಾರ್ಬೆಡೈಜಿಂ ಶಿಲೀಂಧ್ರನಾಶಕ ಹಾಗೂ 200 ಗ್ರಾಂ ರೈಸೋಬಿಯಂ, ರಂಜಕ ರಾಸಾಯನಿಕಗಳಿಂದ ಉಪಚರಿಸಬೇಕು. ಮಿಶ್ರ ಬೆಳೆಯಾಗಿ ಸೋಯಾ ಅವರೆಯನ್ನು ತೊಗರಿ ಮತ್ತು ರಾಗಿಯ ಜೊತೆಯಲ್ಲಿ ಬಿತ್ತನೆ ಮಾಡಬಹುದು (ಮಾಹಿತಿ ಕೃಪೆ: ಕೃಷಿ ಇಲಾಖೆ)

English summary
Soybean Crop Cultivation guide: How advanced farming method helps Karnataka Farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X