ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಳ ತಂತ್ರಜ್ಞಾನ ರೈತರಿಗೆ ತಲುಪಬೇಕು; ಕೃಷಿ ಇಲಾಖೆ ನಿರ್ದೇಶಕಿ

|
Google Oneindia Kannada News

2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2022ರಲ್ಲಿ ಎಪ್ಪತ್ತೈದನೆಯ ಸ್ವಾತಂತ್ರೋತ್ಸವ ಆಚರಿಸುವ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಆಗಿನಿಂದ ದೇಶದಾದ್ಯಂತ ಅನೇಕ ಸೆಮಿನಾರುಗಳು, ಕಮ್ಮಟಗಳು, ಕಾರ್ಯಾಗಾರಗಳು ನಡೆಯುತ್ತಲೇ ಇವೆ.

ರೈತರ ಆದಾಯ ದ್ವಿಗುಣಗೊಳಿಸುವ ಉದ್ದಿಶ್ಯದಿಂದ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಸೆಕೆಂಡರಿ ಕೃಷಿ ನಿರ್ದೇಶನಾಲಯವನ್ನು ಸ್ಥಾಪಿಸಿರುವುದಲ್ಲದೆ ತಮ್ಮ ಬಜೆಟ್‌ನಲ್ಲಿಯೂ ಸೆಕೆಂಡರಿ ಕೃಷಿ ನಿರ್ದೇಶನಾಲಯದಿಂದ ಜಾರಿ ಮಾಡಲಿರುವ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.

ಒಂದು ತಿಂಗಳು ತಡವಾಗಿ ಮಾರುಕಟ್ಟೆಗೆ ಬಂದ ರಾಮನಗರ ಮಾವುಒಂದು ತಿಂಗಳು ತಡವಾಗಿ ಮಾರುಕಟ್ಟೆಗೆ ಬಂದ ರಾಮನಗರ ಮಾವು

ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸೇರಿದಂತೆ ಹಲವು ಸಂಸ್ಥೆಗಳ ಸಹಯೋಗದೊಂದಿಗೆ ಇದೀಗ 2022ರ ಮಾರ್ಚ್ ಮಾಹೆಯ ಐದನೆಯ ತೇದಿಯಂದು "ರೈತರ ಆದಾಯ ದ್ವಿಗುಣಗೊಳಿಸಲು ದ್ವಿತೀಯ ಕೃಷಿ" ವಿಚಾರ ಸಂಕಿರಣವನ್ನು ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಏರ್ಪಡಿಸಿತ್ತು.

Simple Technology Should Reach Out to Farmers Says Agriculture Department Director

ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಿದ ಕೃಷಿ ಇಲಾಖೆಯ ನಿರ್ದೇಶಕಿ ನಂದಿನಿ ಕುಮಾರಿ ಅವರು ಮಾತನಾಡಿ, "ರೈತರ ಆದಾಯ ದ್ವಿಗುಣಗೊಳಿಸುವ ಸಲುವಾಗಿ ಮುಖ್ಯಮಂತ್ರಿಗಳ ಸೂಚನೆಯಂತೆ ಸೆಕೆಂಡರಿ ನಿರ್ದೇಶನಾಲಯದ ಕೆಲಸಗಳು ಚಾಲನೆಯಲ್ಲಿವೆ. ಇಂದಿನ ಕಾರ್ಯಕ್ರಮದಲ್ಲಿ ಬಹಳಷ್ಟು ಇನ್‌ಪುಟ್ ಸಿಗಬಹುದೆಂಬ ನಿರೀಕ್ಷೆ ಇದೆ," ಎಂದು ಹೇಳಿದರು.

"ಡ್ರೋನ್ ಟೆಕ್ನಾಲಜಿ ಬಗ್ಗೆ ಒಂದು ಸೆಮಿನಾರ್ ಮಾಡುವ ಅನಿವಾರ್ಯತೆಯ ಬಗ್ಗೆ ಗಮನ ಸೆಳೆದರು. ಡ್ರೋನ್ ತಂತ್ರಜ್ಞಾನಕ್ಕೊಂದು ಎಸ್.ಒ.ಪಿ (ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಇನ್ನೂ ಲಭ್ಯವಿಲ್ಲ. ಹಾಗಾಗಿ ಯಾವೆಲ್ಲಾ ಪರಿಕರಗಳನ್ನು ಡ್ರೋನ್ ಮೂಲಕ ಸಿಂಪಡಣೆ ಕೊಡಬೇಕು, ನಾಜಲ್ಸ್ ಹೇಗಿರಬೇಕು ಇತ್ಯಾದಿಗಳ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿದೆ ಅಂತೆಯೇ, ಆರ್ಗ್ಯಾನಿಕ್ ಅಗ್ರಿಕಲ್ಚರ್ ಸರ್ಟಿಫಿಕೇಶನ್ ಬಗ್ಗೆಯೂ ಸಹ ಚರ್ಚೆ ಅಗತ್ಯವಿದೆ," ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಬಜೆಟ್ 2022: ಕೃಷಿ ಕ್ಷೇತ್ರಕ್ಕೆ ದೊರಕ್ಕಿದ್ದು ಏನು?ಕರ್ನಾಟಕ ಬಜೆಟ್ 2022: ಕೃಷಿ ಕ್ಷೇತ್ರಕ್ಕೆ ದೊರಕ್ಕಿದ್ದು ಏನು?

"ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಬಗೆಗೆ ಹೆಚ್ಚಿನ ಒತ್ತು ಕೊಡಬೇಕಿದೆ. ಸೆಕೆಂಡರಿ ಅಗ್ರಿಕಲ್ಚರ್‌ನಲ್ಲಿ ಯೋಚನೆ ಮಾಡಲು ಮತ್ತು ಹೊಸ ಸಾಧ್ಯತೆಗಳನ್ನು ಆವಿಷ್ಕರಿಸಲು SKY IS THE LIMIT- ಹಾಗಾಗಿ ಎಲ್ಲಾ ಇಲಾಖೆಯವರು ತಂತಮ್ಮ ಕ್ಷೇತ್ರದಲ್ಲಿ ಏನೆಲ್ಲಾ ಮೌಲ್ಯವರ್ಧನೆ ಮಾಡಬಹುದೆಂದು ಪಟ್ಟಿ ಮಾಡಿದರೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ," ಎಂದು ಸೂಚಿಸಿದರು.

ಮುಂದಿನ ದಿನಗಳಲ್ಲಿ ಏನೆಲ್ಲಾ ಚಟುವಟಿಕೆ ಆಗಬೇಕೆಂಬುದರ ಬಗ್ಗೆ ACTION PLAN ತಯಾರಿಯಲ್ಲಿದೆ. ಎಫ್‌ಪಿಒಗಳಿಗೆ (ಫಾರ್ಮರ್ಸ್ ಪ್ರೊಡ್ಯೂಸರ್ಸ್ ಆರ್ಗನೈಜೇಶನ್) ತಂತ್ರಜ್ಞಾನ ತಲುಪಬೇಕು. ಏಕವ್ಯಕ್ತಿ ಸಾಧನೆ ಮಾಡಲಾಗದ್ದನ್ನು ಒಂದು ಗುಂಪಾಗಿ ಮಾಡಬಹುದಾಗಿದೆ.

"ಕುಟುಂಬದ ಮಟ್ಟಿಗೆ, ಅತ್ಯಂತ ಕಡಿಮೆ ಹೂಡಿಕೆಯಲ್ಲಿ ಮೌಲ್ಯವರ್ಧನೆ ಮಾಡುವಂತಹ ತಂತ್ರಜ್ಞಾನ ರೈತರಿಗೆ ತಲುಪಬೇಕು. ರೈತರಿಗೆ ಹೊರೆಯಾಗಬಾರರು. ಕುಟುಂಬದ ಮಟ್ಟದಲ್ಲೇ ಮಾಡುವಂತಹ ಸರಳ ತಂತ್ರಜ್ಞಾನಗಳ ಅವಶ್ಯಕತೆ ಇದೆ. ಸಿಎಫ್‌ಟಿ ಆರ್ಐ ನಿರ್ದೇಶಕಿ ಇಲ್ಲಿದ್ದಾರೆ. ಆ ಸಂಸ್ಥೆಯೊಂದು ತಂತ್ರಜ್ಞಾನಗಳ ಸಾಗರದಂತಿದೆ. ಅಲ್ಲಿಂದಲೂ ಹೆಚ್ಚಿನದ್ದು ರೈತರಿಗೆ ತಲುಪಬೇಕಿದೆ," ಎಂದರು.

ಒಂದು ಉದಾಹರಣೆ ಹೇಳುವುದಾದರೆ ಸಿರಿಧಾನ್ಯಗಳ ಮಹತ್ವ ಅರ್ಥವಾಗಿ ಇದೀಗ ಬಳಕೆ ಹೆಚ್ಚಾಗಿದೆ. ಮೌಲ್ಯವರ್ಧನೆ ಮಾಡಲಾಗುತ್ತಿದೆ. ಇದೆಲ್ಲವೂ ಸೆಕೆಂಡರಿ ಅಗ್ರಿಕಲ್ಚರ್ ಅಡಿಯಲ್ಲಿಯೇ ಬರುವಂತದ್ದು. ಇನ್ನೂ ಹೆಚ್ಚಿನ ಕೆಲಸಗಳು ನಡೆಯಲಿ ಎಂದು ಕೃಷಿ ಇಲಾಖೆಯ ನಿರ್ದೇಶಕಿ ನಂದಿನಿ ಕುಮಾರಿ ಆಶಿಸಿದರು.

English summary
Agriculture Department Director Nandini Kumari said that the work of the Secondary Directorate was being run on the instructions of the Chief Ministers to double the income of the farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X