ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಗರು ಸಾಕಾಣಿಕೆ; ಬಾಗಲಕೋಟೆ ರೈತನ ಯಶಸ್ಸಿನ ಕಥೆ

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಜೂ21: ಆತ ಓದಿದ್ದು ಪದವಿ, ಪದವಿ ಮುಗಿದ ನಂತರ ವಿವಿಧ ನೌಕರಿಗಾಗಿ ಅರ್ಜಿ ಹಾಕಿದ್ದ, ಆದರೆ ಯಾವ ಕೆಲಸ ಸಿಕ್ಕಿರಲಿಲ್ಲ. ತನ್ನ ಇಷ್ಟದ ಪೊಲೀಸ್ ನೌಕರಿ ಕೂಡ ಸ್ವಲ್ಪದರಲ್ಲಿ ತಪ್ಪಿತು.

ಏನು ಮಾಡುವುದು ಅಂತ ಯೋಚಿಸುತ್ತಿದ್ದವನಿಗೆ ಟಗರು ಸಾಕಾಣಿಕೆಯ ಚಿಂತನೆ ಹೊಳೆಯಿತು. ಕಷ್ಟವಾದರೂ ಯುಶಸ್ಸು ಗಳಿಸಬೇಕೆಂದು ಯುವ ರೈತ ಟಗರು ಸಾಕಾಣಿಕೆ ಆರಂಭಿಸಿದ. ಮೊದಲು ನಷ್ಟವಾದರೂ ಹಠ ಬಿಡದೇ ಟಗರು ಸಾಕಾಣಿಕೆ ಮುಂದುವರೆಸಿದ. ಈಗ ತಿಂಗಳಿಗೆ ಲಕ್ಷ ಲಕ್ಷ ಆದಾಯಗಳಿಸಿ ಯಶಸ್ವಿ ರೈತನಾಗಿದ್ದಾನೆ.

ಬಾಗಲಕೋಟೆ: ಮೂಲಭೂತ ಸೌಕರ್ಯಗಳಿಲ್ಲದೇ ಸೊರಗಿದ ವಾಜಪೇಯಿ ಕಾಲೋನಿಬಾಗಲಕೋಟೆ: ಮೂಲಭೂತ ಸೌಕರ್ಯಗಳಿಲ್ಲದೇ ಸೊರಗಿದ ವಾಜಪೇಯಿ ಕಾಲೋನಿ

ಯುವ ರೈತನ ಬಳಿಯ ಕೊಬ್ಬಿದ ಟಗರುಗಳಿವೆ. ಅವುಗಳಿಗೆ ಮೇವು ಹಾಕಿ ಆರೈಕೆ ಮಾಡುತ್ತಿರುವ ಯುವಕ ಬಿಎ ಪದವೀಧರ ಸಹ ಹೌದು. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಬಾಡಗಿ ಗ್ರಾಮದ ಯುವಕ ಸಿಕಂಡರ್ ದುಂಡುವಾಲೆ ಸಾಧನೆಯ ಕಥೆ ಇದು.

Sheep Farming Success Story Of Bagalkot Farmer

ಇವರು ಓದಿದ್ದು ಬಿಎ. ವಿದ್ಯೆಗೆ ತಕ್ಕಂತೆ ನೌಕರಿ ಹುಡುಕುವುದಕ್ಕೆ ಕೆಲವು ದಿನ ಪ್ರಯತ್ನ ಮಾಡಿದರು. ತಮ್ಮಿಷ್ಟದ ಪೊಲೀಸ್ ನೌಕರಿ ಪಡೆಯಲು ಅರ್ಜಿ ಸಹ ಹಾಕಿದ್ದರು. ಆದರೆ ಸ್ವಲ್ಪದರಲ್ಲೇ ನೌಕರಿ ಕೈ ತಪ್ಪಿತು.

ಸಿಕಂದರ್ 8 ವರ್ಷದಿಂದ ಟಗರು ಸಾಕಾಣಿಕೆ ಕಸುಬು ಆರಂಭಿಸಿದರು. ನಷ್ಟವಾಯಿತು, ಆದರೆ ಛಲ ಬಿಡದೇ ಅದನ್ನೇ ಸವಾಲಾಗಿ ಸ್ವೀಕಾರ ಮಾಡಿದರು. ಈಗ ಯಾವುದೇ ಬಹುರಾಷ್ಟ್ರೀಯ ಕಂಪನಿ ನೌಕರನಿಗಿಂತ ಕಡಿಮೆ ಇಲ್ಲದಂತೆ ಆದಾಯ ಪಡೆಯುತ್ತಿದ್ದಾರೆ.

ದಂಪತಿ ಮೇಲೆ ಹಲ್ಲೆ ಮಾಡಿದ ಬಿಜೆಪಿ ಶಾಸಕ, 3 ಕೋಟಿ ಜಾಗ ಬಿಚ್ಚಿಡಲಿದೆ ಜಾತಕ! ದಂಪತಿ ಮೇಲೆ ಹಲ್ಲೆ ಮಾಡಿದ ಬಿಜೆಪಿ ಶಾಸಕ, 3 ಕೋಟಿ ಜಾಗ ಬಿಚ್ಚಿಡಲಿದೆ ಜಾತಕ!

ಟಗರು ಸಾಕಾಣಿಕೆ ಮೂಲಕ ಸಿಕಂಡರ್ ದುಂಡುವಾಲೆ ತಿಂಗಳಿಗೆ 1 ಲಕ್ಷದ 20ಸಾವಿರದಷ್ಟು ಆದಾಯ ಪಡೆಯುತ್ತಿದ್ದಾರೆ. ಈ ಮೂಲಕ ಗ್ರಾಮದ ಮತ್ತು ಇತರ ರೈತರಿಗೆ ಮಾದರಿಯಾಗಿದ್ದಾರೆ.

Sheep Farming Success Story Of Bagalkot Farmer

ದೇಶಿ ತಳಿಯ ಟಗರು ಸಾಕಾಣಿಕೆ; ಸಿಕಂಡರ್ ದುಂಡುವಾಲೆಗೆ ಇರುವುದು 10 ಗುಂಟೆಯಷ್ಟು ಜಾಗ. ಆದರೆ ಇರುವ ತುಂಡು ಜಾಗದಲ್ಲಿಯೇ ಇವರು ಟಗರು ಫಾರ್ಮ್​ ಮಾಡಿದ್ದಾರೆ. ಟಗರು ಫಾರ್ಮ್‌ನಲ್ಲಿ ಈಗ ಬರೋಬ್ಬರಿ 85 ಟಗರುಗಳಿದ್ದು, ಒಂದಕ್ಕಿಂತ ಒಂದು ಕೊಬ್ಬಿ ಬೆಳೆದು ನಿಂತಿವೆ.

ಇವರು ಸಾಕಿದ್ದು ಪಕ್ಕಾ ದೇಶಿ ತಳಿಯ ಟಗರುಗಳು. ಬಾಗಲಕೋಟೆ ಜಿಲ್ಲೆಯ 'ಅಮೀನಗಢ ಎಳಗ'ಎಂಬ ತಳಿಯ ಟಗರುಗಳನ್ನು ಸಾಕಿದ್ದು, ಒಂದು ಶಿರೋಹಿ, ಒಂದು ಬೀಟೆಲ್ ಜಾತಿಯ ಮೇಕೆ ಇದೆ.

Sheep Farming Success Story Of Bagalkot Farmer

ಇವುಗಳನ್ನು ಹೊರತುಪಡಿಸಿ ಎಲ್ಲವೂ 'ಅಮೀನಗಢ ಎಳಗ' ತಳಿಯ ಟಗರುಗಳಿವೆ. ಸಿಕಂದರ್ ಪ್ರತಿ 9 ತಿಂಗಳಿಗೆ ಮೂರುವರೆ ಲಕ್ಷದಷ್ಟು ಹಣವನ್ನು ಇವುಗಳ ಮೇವಿಗೆ ಖರ್ಚು ಮಾಡುತ್ತಾರೆ.

ಇನ್ನು ಮೇವು ನಿರ್ವಹಣೆ ಎಲ್ಲ ಖರ್ಚುವೆಚ್ಚ ತೆಗೆದು ಒಂಬತ್ತು ತಿಂಗಳಿಗೆ ಇವರಿಗೆ 11 ಲಕ್ಷ ಆದಾಯ ಬರುತ್ತಿದೆ. ದಿನಾಲೂ ಫಾರ್ಮ್‌ನಲ್ಲಿ ಟಗರುಗಳಿಗೆ ಮೇವು ಹಾಕಿ ಆರೈಕೆ ಮಾಡುವ ಸಿಕಂದರ್ ಹಬ್ಬ ಹರಿದಿನ ಸಂದರ್ಭದಲ್ಲಿ ಇವುಗಳನ್ನು ಮಾರಾಟ ಮಾಡುತ್ತಿದ್ದು, ಹೆಚ್ಚು ಬೆಲೆ ಸಿಗುತ್ತದೆ.

ಮುಂದಿನ ತಿಂಗಳು ಬಕ್ರೀದ್ ಹಬ್ಬ ಇದ್ದು, ಇವರು ಲಕ್ಷ ಲಕ್ಷ ಎಣಿಸೋಕೆ ಸಿದ್ದರಾಗಿದ್ದಾರೆ. ಯೋಜನೆಯಂತೆ ಟಗರು ಸಾಕಾಣಿಕೆ ಉಪಕಸುಬು ಮಾಡುತ್ತಿರುವ ಸಿಕಂದರ್ ಈಗ ಎಲ್ಲರಿಗೂ ಮಾದರಿಯಾಗಿದ್ದಾರೆ.

Recommended Video

ಎಲ್ಲರ ಮುಂದೆಯೇ ಪ್ರಿನ್ಸಿಪಾಲ್ ಗೆ ಕಪಾಳಮೋಕ್ಷ ಮಾಡಿದ ಮಂಡ್ಯ ಶಾಸಕ ಎಂ ಶ್ರೀನಿವಾಸ್ | Oneindia Kannada

English summary
Sikander Roundwale farmer from Bagalkot district successful in Sheep farming. Farmer also BA graduate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X