ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್: ಭತ್ತ ನಾಟಿ ಮಾಡಿದ ಕಾಂಗ್ರೆಸ್ ಮಾಜಿ ಶಾಸಕರು!

|
Google Oneindia Kannada News

ಬೆಂಗಳೂರು, ಜು. 16: ಕೊರೊನಾ ವೈರಸ್‌ ಜೀವನದ ರೀತಿಯನ್ನು ಬದಲಾಯಿಸಿದೆ. ಲಾಕ್‌ಡೌನ್‌ನಿಂದಾಗಿ ಬಹುತೇಕರು ಮನೆ ಸೇರಿದ್ದಾರೆ. ಆತಂಕದ ಮಧ್ಯೆಯೂ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿವೆ.

Recommended Video

Plasma ದಾನ ಮಾಡಿದರೆ 5000 ಕೊಡ್ತೀವಿ - Karnataka Government | Oneindia Kannada

ರಾಜಕಾರಣಿಗಳು ಕೂಡ ಗೆಟಪ್ ಬದಲಿಸಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ. ಪುತ್ತೂರಿನ ಕಾಂಗ್ರೆಸ್ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಕೂಡ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಶಾಸಕಿ ಶಕುಂತಲಾ ಶೆಟ್ಟಿ ಅವರ ತವರು ಮನೆಯಾದ ಮಂಗಳೂರು ಹೊರವಲಯದ ಕುತ್ತಾರಿನ ಬೋಳ್ಯಗುತ್ತುನಲ್ಲಿ ಬತ್ತದ ನಾಟಿ ಮಾಡುವ ಮೂಲಕ ಇತರರಿಗೂ ಪ್ರೇರಣೆಯಾಗಿದ್ದಾರೆ.

ASSOCHAM ವೆಬಿನಾರ್; ಕರ್ನಾಟಕದ ಕೃಷಿ ಬಗ್ಗೆ ಬಿ.ಸಿ.ಪಾಟೀಲ್ ಮಾಹಿತಿASSOCHAM ವೆಬಿನಾರ್; ಕರ್ನಾಟಕದ ಕೃಷಿ ಬಗ್ಗೆ ಬಿ.ಸಿ.ಪಾಟೀಲ್ ಮಾಹಿತಿ

ಮುಂಬೈ ಸೇರಿದಂತೆ ಇತರ ಮಹಾನಗರಗಳಲ್ಲಿ ವಾಸವಿದ್ದ ಮಂಗಳೂರಿನ ಜನರು ಊರು ಸೇರಿದ್ದಾರೆ. ಐಟಿ, ಬಿಟಿ ಕ್ಷೇತ್ರದಲ್ಲಿ ಬ್ಯೂಸಿಯಾಗಿದ್ದವರು ಕೂಡ ಇದೀಗ ಕೃಷಿಯತ್ತ ಒಲವು ತೀರಿಸುತ್ತಿದ್ದಾರೆ. ಅನಿವಾರ್ಯವಾಗಿ ಎದುರಾಗಿರುವ ಪರಿಸ್ಥಿತಿ ಈಗ ಸಂತೋಷವನ್ನೂ ಕೊಡುತ್ತಿದೆ. ಹೀಗೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರ ತವರು ಮನೆಗೆ ಬಂದವರು ಕೂಡ ಕೃಷಿಯತ್ತ ವಾಲಿದ್ದಾರೆ.

Shakuntala Shetty, Former Congress Mla From Puttur Involved Farming Activities Due To Lockdown

ಕಳೆದ 15 ವರ್ಷಗಳಿಂದ ಕೃಷಿ ಚಟುವಟಿಕೆ ಮಾಡದೇ ಪಾಳು ಬಿದ್ದಿದ್ದ ಜಮೀನಿನಲ್ಲಿ ಈ ಬಾರಿ ಭರ್ಜರಿ ಬತ್ತದ ನಾಟಿ ಮಾಡಲಾಗಿದೆ. ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಾ, ಉಳಿದವರನ್ನೂ ಪ್ರೋತ್ಸಾಹಿಸುವ ಕಾರ್ಯದಲ್ಲಿ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಕೂಡ ನಿರತರಾಗಿರುವುದು ಜನರ ಗಮನ ಸೆಳೆದಿದೆ.

English summary
Shakuntala Shetty, former Congress MLA from Puttur is also involved in farming activities. Shakuntala Shetty has inspired others by planting paddy in Bolliyaguttu outskirts of Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X