ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಣಿ- ಪಕ್ಷಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಸಂಡೂರು ರೈತನ ವಿನೂತನ ವಿಧಾನ

By ಭೀಮರಾಜ. ಯು. ವಿಜಯನಗರ
|
Google Oneindia Kannada News

ವಿಜಯನಗರ, ಸೆಪ್ಟೆಂಬರ್ 14: ಇಲ್ಲೊಬ್ಬ ರೈತ ಪ್ರಾಣಿ- ಪಕ್ಷಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳುಲು ವಿನೂತನ ವಿಧಾನವನ್ನು ಕಂಡುಕೊಂಡಿದ್ದಾರೆ. ವಿಜಯನಗರ ಜಿಲ್ಲೆ ಸಂಡೂರು ತಾಲೂಕಿನ ತಾಳೂರು ಗ್ರಾಮದ ಅಮ್ಮ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಎಂ. ರುದ್ರಗೌಡ ತಮ್ಮ ಎರಡು ಎಕರೆ ಜಮೀನಿನಲ್ಲಿ ಜೋಳದ ಬೆಳೆಯನ್ನು ಬೆಳೆದಿದ್ದಾರೆ.

ಎಂ. ರುದ್ರಗೌಡ ತಮ್ಮ ಕೃಷಿ ಚಟುವಟಿಕೆ ಜೊತೆಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ತೊಗರಿ, ಜೋಳ, ಮೆಕ್ಕೆಜೋಳ, ಸೂರ್ಯಕಾಂತಿ ಹೀಗೆ ವಿವಿಧ ಬೆಳೆಗಳನ್ನು ಪ್ರಾಣಿ- ಪಕ್ಷಿಗಳಿಂದ ರಕ್ಷಿಸಲು ಹೊಸ ಮತ್ತು ಸರಳ ವಿಧಾನವನ್ನು ಕಂಡುಕೊಂಡಿದ್ದಾರೆ.

 ಹೊಲದ ನಾಲ್ಕು ಭಾಗಗಳಲ್ಲಿ ಅಳವಡಿಕೆ

ಹೊಲದ ನಾಲ್ಕು ಭಾಗಗಳಲ್ಲಿ ಅಳವಡಿಕೆ

"ನಮ್ಮ ಜಮೀನು ಗುಡ್ಡಗಾಡು ಪ್ರದೇಶಕ್ಕೆ ಹೊಂದಿಕೊಂಡಿದ್ದು, ಜಮೀನನಲ್ಲಿ ಏನೇ ಬೆಳೆ ಹಾಕಿದರೂ ಗುಡ್ಡಗಾಡು ಪ್ರದೇಶದಲ್ಲಿ ಇರುವುದರಿಂದ ಇಲ್ಲಿ ಕರಡಿ, ನರಿ, ಮೊಲ, ಕಾಡು ಹಂದಿ, ತೋಳ, ಪಕ್ಷಿ ಮತ್ತು ಪ್ರಾಣಿಗಳ ಕಾಟದಿಂದಾಗಿ ನಾನು ಭೂಮಿಯನ್ನು ಉಳುವುದನ್ನೇ ಬಿಟ್ಟುಬಿಡಬೇಕು ಎಂದು ಎಷ್ಟೋ ಬಾರಿ‌ ಅನಿಸಿತ್ತು. ಆಗ ಈ ಪ್ರಾಣಿ ಮತ್ತು ಪಕ್ಷಿಗಳಿಂದ ರಕ್ಷಿಸಿಕೊಳ್ಳಬೇಕು ಎಂದು ಚಿಂತಿಸುತ್ತಿದ್ದಾಗ ಗಲಾಟೆ ಸದ್ದು ಮಾಡುವ ಸಾಧನ ಕಂಡು ಹಿಡಿಯಬೇಕು ಅಂತ ಯೋಚನೆ ಮಾಡಿದೆ. ಆಗ ಗಲಾಟೆ ಮಾಡುವ ಸಾಧನ ಕಂಡು ಹಿಡಿದು ಆಕೃತಿಯನ್ನು ಸಿದ್ಧಪಡಿಸಿ, ಹೊಲದ ನಾಲ್ಕು ಭಾಗಗಳಲ್ಲಿ ಅಳವಡಿಸಿದ್ದೇನೆ," ಎಂದು ರೈತ ಎಂ. ರುದ್ರಗೌಡ ಹೇಳಿದರು.

 ಗಲಾಟೆ ಮಾಡುವ ಸಾಧನ

ಗಲಾಟೆ ಮಾಡುವ ಸಾಧನ

"ಬೆಳೆ ರಕ್ಷಣೆಗೆ ಸಿದ್ಧಪಡಿಸಿರುವ ಸಾಧನಕ್ಕೆ ಇವರು ಬಳಸಿರುವುದು ಬಹಳ ಸರಳ ವಿಧಾನದಲ್ಲಿ ಎರಡು ಉದ್ದನೆಯ ಬಿದಿರು ಕೋಲು, ಮೂರು ಚಿಕ್ಕ ಗಾತ್ರದ ಬಿದಿರಿನ ಕೋಲು, ಒಂದು ಬಾವುಟ ಮಾದರಿಯ ಬಟ್ಟೆ ತುಂಡು, ಮೂರ್ನಾಲ್ಕು ಬಾಟಲಿಗಳು, ಉದ್ದನೆಯ ಬಿದಿರನ್ನು ಒಂದಕ್ಕೊಂದು ಜೋಡಿಸಿ, ಒಂದು ತುದಿಯನ್ನು ನೆಲದಲ್ಲಿ ಹೂಳುವುದು. ಮತ್ತೊಂದು ತುದಿಗೆ ಬಾವುಟ ಮಾದರಿಯ ಬಟ್ಟೆಯನ್ನು ಕಟ್ಟುವುದು. ಬಿದಿರಿನ ಮಧ್ಯದಲ್ಲಿ ಅದಕ್ಕೆ ಅಡ್ಡಲಾಗಿ ತ್ರಿಕೋನಾಕಾರದಲ್ಲಿ ಚಿಕ್ಕ ಗಾತ್ರದ ಬಿದಿರಿನ ತುಂಡುಗಳನ್ನು ಕಟ್ಟಿ, ಅದರ ಮುಂದಿನ ಭಾಗಕ್ಕೆ ದಾರದಿಂದ ಮೂರ್ನಾಲ್ಕು, ಬಾಟಲಿಗಳನ್ನು ತೂಗು ಬಿಡುವುದು. ಗಾಳಿಗೆ ಬಿದಿರಿನ ತುದಿಗೆ ಕಟ್ಟಿದ ಬಾವುಟ ಹಾರಾಡಿದಂತೆ, ಅದರ ಅಡಿಯಲ್ಲಿ ಅಡ್ಡಲಾಗಿ ಕಟ್ಟಿದ ಬಿದಿರಿಗೆ ತೂಗು ಹಾಕಲಾದ ಬಾಟಲಿಗಳು ಒಂದಕ್ಕೊಂದು ಬಡಿದುಕೊಂಡು ಸದ್ದು ಮಾಡುತ್ತವೆ. ಇಂತಹ ಸದ್ದಿನಿಂದಾಗಿ ಬೆದರುವ ಪ್ರಾಣಿ- ಪಕ್ಷಿಗಳು ಹೊಲಕ್ಕೆ ಲಗ್ಗೆ ಇಡುವುದು ತಪ್ಪುತ್ತದೆ," ಎಂದು ಅವರು ತಿಳಿಸಿದರು.

 ಈ ಗಲಾಟೆ ಮಾಡು ಸಾಧನ ಶಬ್ದದ ವ್ಯಾಪ್ತಿ

ಈ ಗಲಾಟೆ ಮಾಡು ಸಾಧನ ಶಬ್ದದ ವ್ಯಾಪ್ತಿ

"ಈ ಸಾಧನವನ್ನು ಒಂದು ಎಕರೆಗೆ ಸುತ್ತಲೂ ನಾಲ್ಕು ಕಡೆ ಅಳವಡಿಸಿದರೆ ಸಾಕು ಅಲ್ಲಿಗೆ ಬೇಕದಾಷ್ಟು ಶಬ್ದವಾಗುತ್ತದೆ. ಒಂದು ನೂರು ಮೀಟರ್ ವ್ಯಾಪ್ತಿಯವರೆಗೂ ಶಬ್ದ ಕೇಳಿಸುತ್ತದೆ. ಇದರ ಶಬ್ದಕ್ಕೆ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳು ಬೆದರಿ ಹೋಡಿಹೊಗುತ್ತವೆ. ರೈತರು ತಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುವುದಕ್ಕೆ ಬಹಳ ಖರ್ಚು ಸಹ ಬೇಕಾಗಿಲ್ಲ. ಈ ತರಹದ ಸಾಧನಗಳನ್ನು ಬಳಸಿಕೊಂಡಾಗ ರೈತರಿಗೆ ಅನುಕೂಲವಾಗಲಿದೆ.''
"ಈ ಸಾಧನ ನನಗೆ ಪ್ರಾಣಿ- ಪಕ್ಷಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಸಹಕಾರಿಯಾಗಿದೆ. ಬೆಳೆ ರಕ್ಷಿಸಿಕೊಳ್ಳಲು ಇದನ್ನು ತಯಾರಿಸಲು ಹೆಚ್ಚಿನ ಖರ್ಚು ಬೇಕಿಲ್ಲ. ಕಡಿಮೆ ಖರ್ಚಿನಲ್ಲಿ ಇದನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಈ ಕಾರಣದಿಂದ ರೈತರಿಗೆ ಅನುಕೂಲವಾಗಲೆಂದು ನಾನು ತಯಾರಿಸಿರುವ ಮಾದರಿಯನ್ನು ವಿಡಿಯೋ ಮಾಡಿ ವಾಟ್ಸಪ್ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದೇನೆ," ಎಂದು ರೈತ ರುದ್ರಗೌಡ ಹೇಳಿದರು.

 50 ರಿಂದ 60 ರೂ. ಸಾಕು

50 ರಿಂದ 60 ರೂ. ಸಾಕು

"ನಾನು ಹೊಲದಲ್ಲಿ ಹಾಕಿದ್ದ ಜಮೀನಿನಲ್ಲಿ ಪ್ರಾಣಿ ಮತ್ತು ಪಕ್ಷಿಗಳ ಕಾಟದಿಂದ ಬೇಸತ್ತು ಹೋಗಿದ್ದೆ. ಆಗ ಪ್ರಾಣಿಗಳಿಂದ ರಕ್ಷಿಕೊಳ್ಳುವುದಕ್ಕೆ ಈ ಗಲಾಟೆ ಮಾಡುವ ಸಾಧನ ಕಂಡುಹಿಡಿದೆ ಮತ್ತು ಈ ಸಾಧನ ಮಾಡುವುದಕ್ಕೆ ಕೇವಲ 50 ರಿಂದ 60 ರೂ. ಸಾಕಾಗುತ್ತದೆ. ಬಹಳ ಹಣದ ಅವಶ್ಯಕತೆ ಇಲ್ಲ," ಎಂದು ತಾಳೂರು ಅಮ್ಮ ಸಂಸ್ಥೆಯ ಸಂಸ್ಥಾಪಕ ಎಂ. ರುದ್ರಗೌಡ ಮಾಹಿತಿ ನೀಡಿದರು.

English summary
Sandur taluk farmer M Rudragowda has found an innovative way to protect their crops from animal and birds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X