• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಸ್ಟ್ರೇಲಿಯಾದಲ್ಲಿ ಮಳೆ ಆಗೋದನ್ನು ಹೇಳುತ್ತೆ ಅದೊಂದು ರಾಡರ್!

|

ಕ್ಯಾನ್ ಬರಾ, ಮೇ.04: ನೊವೆಲ್ ಕೊರೊನಾ ವೈರಸ್ ಹಾವಳಿಯ ನಡುವೆ ಆಸ್ಟ್ರೇಲಿಯಾದಲ್ಲಿ ರೈತರಿಗೆ ಖುಷಿ ಕೊಡುವಂತಾ ಘಟನೆಯೊಂದು ನಡೆದಿದೆ. ಮಳೆಯ ಬಗ್ಗೆ ನಿರ್ದಿಷ್ಟವಾದ ಮಾಹಿತಿಯನ್ನು ನೀಡುವ ರಾಡರ್ ಕೃಷಿಗೆ ಹೆಚ್ಚು ಅನುಕೂಲವಾಗಲಿದೆ ಎನ್ನಲಾಗಿದೆ.

ಆಸ್ಟ್ರೇಲಿಯಾ ಪಶ್ಚಿಮ ವಿಕ್ಟೋರಿಯಾದ ವಿಮ್ಮೆರಾ ಪ್ರದೇಶದಲ್ಲಿ ಹವಾಮಾನ ರಾಡರ್ ನ್ನು ಅಳವಡಿಸಲಾಗಿದೆ. ಹವಾಮಾನಶಾಸ್ತ್ರ ಅಳೆಯುವ ವಿದ್ಯುತ್ಕಾಂತ ತರಂಗಗಳ ಮೂಲಕ ಚಲಿಸುವ ಕಾಯಗಳನ್ನು ಪತ್ತೆ ಹಚ್ಚುವ ಮೂಲಕ ಮಳೆ ಬೀಳುವ ಅವಧಿಯ ಬಗ್ಗೆ ಅಧಿಕೃತ ದತ್ತಾಂಶವನ್ನು ಒದಗಿಸುತ್ತದೆ. 2018ರಲ್ಲಿ ಹವಾಮಾನ ರಾಡರ್ ಅಳವಡಿಕೆ ಬಗ್ಗೆ ಕಾರ್ಯವನ್ನು ಆರಂಭಿಸಲಾಗಿತ್ತು.

ಕೃಷಿಗೆ ಚಟುವಟಿಕೆಗೆ ವಿನಾಯಿತಿ: ಗೊಬ್ಬರ ಮಾರಾಟ ಶೇ.45 ರಷ್ಟು ಹೆಚ್ಚಳ

ರೈತರಿಗೆ ಮಳೆ ಬೀಳುವ ಅವಧಿ ಮತ್ತೆ ಯಾವ ವೇಳೆಗೆ ಯಾವ ರೀತಿಯ ಬೆಳೆಗಳನ್ನು ಬೆಳೆಯಬೇಕು ಎನ್ನುವುದನ್ನು ನಿರ್ಧರಿಸಲು ಮಳೆ ಬೀಳುವ ನಿರ್ದಿಷ್ಠ ಅವಧಿಯ ಬಗ್ಗೆ ಮಾಹಿತಿ ಪಡೆಯುವ ಅಗತ್ಯವಿತ್ತು. ಇಂದು ರೈತರ ಆಶೋತ್ತರವು ಈಡೇರಿದೆ. ಹೊಸದಾಗಿ ಸ್ಥಾಪಿಸಿರುವ ರಾಡರ್ ಮಳೆ ಬೀಳುವ ಅವಧಿ ಬಗ್ಗೆ ದತ್ತಾಂಶವನ್ನು ಒದಗಿಸುತ್ತದೆ.

ಮಳೆಯ ಬಗ್ಗೆ ರೈತರಿಗೆ ಸಿಗುತ್ತಿರಲಿಲ್ಲ ಮಾಹಿತಿ:

ಆಸ್ಟ್ರೇಲಿಯಾದ ಕೆಲವು ರಾಜ್ಯಗಳಲ್ಲಿ ಕೃಷಿ ಮಾಡುವ ರೈತರಿಗೆ ಮಳೆ ಬೀಳುವ ಮುನ್ಸೂಚನೆಯನ್ನು ನೀಡುವ ಯಾವುದೇ ವ್ಯವಸ್ಥೆಗಳು ಇರಲಿಲಲ್ಲ. ಇದರಿಂದ ಮಳೆ ಬಗ್ಗೆ ಜ್ಞಾನವಿಲ್ಲದ ಕೃಷಿಕರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದರು. ಯಾವ ಸಮಯದಲ್ಲಿ ಎಂಥ ಬೆಳೆ ಬೆಳೆಯಬೇಕು ಎಂಬುದರ ಬಗ್ಗೆ ಸರಿಯಾದ ಮಾರ್ಗದರ್ಶವು ಸಿಗುತ್ತಿರಲಿಲ್ಲ.

ಆಸ್ಟ್ರೇಲಿಯನ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್ ಗೆ ಈ ಬಗ್ಗೆ ಟರನ್ಯುರ್ಕ್ ಪ್ರದೇಶದ ರೈತ ಮಾರ್ಶನ್ ರೊದ್ದಾ ಹೇಳಿಕೆ ನೀಡಿದ್ದಾರೆ. 300 ಕಿಲೋ ಮೀಟರ್ ದೂರದಲ್ಲಿದ್ದ ರಾಡರ್ ಮೂಲಕ ಮಳೆ ಬೀಳುವ ಅವಧಿ ಮತ್ತು ಕೃಷಿಗೆ ಅನುಕೂಲಕರ ವಾತಾವರಣದ ಅವಧಿಯನ್ನು ನಿರ್ದಿಷ್ಟವಾಗಿ ಹೇಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಸಾಕಷ್ಟು ರೈತರು ಮಾಹಿತಿ ಇಲ್ಲದೇ ಬೆಳೆಗಳನ್ನು ಬೆಳೆದು ನಷ್ಟು ಅನುಭವಿಸಿದ್ದಾರೆ. ಇದೀಗ ಹೊಸದಾಗಿ ಆಳವಡಿಸಿರುವ ರಾಡರ್ ನಿಂದ ಸ್ಪಷ್ಟ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.

English summary
Australia: Recently Installed Weather Radar Provide Accurate Information For Agriculture And Farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X