ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸಚಿವ ಸದಾನಂದಗೌಡರ ಹೇಳಿಕೆ ಖಂಡಿಸಿದ ರೈತ ಸಂಘ

|
Google Oneindia Kannada News

ಬೆಂಗಳೂರು, ಅ. 27: ''ಕೊರೊನಾ ಸೋಂಕು ಹರಡಲು ರೈತ- ಕಾರ್ಮಿಕರ ಚಳುವಳಿಗಳು ಕಾರಣವಾಗಿವೆ'' ಎಂದಿರುವ ಕೇಂದ್ರ ಸಚಿವ ಸದಾನಂದ ಗೌಡರ ಬೇಜವಾಬ್ದಾರಿಯುತ ಹಾಗೂ ಜನರನ್ನು ದಾರಿತಪ್ಪಿಸುವ ಹೇಳಿಕೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಹೇಳಿದ್ದಾರೆ.

ಇಂತಹ ಹೇಳಿಕೆಗಳ ಮೂಲಕ ಜನರನ್ನು, ಚಳುವಳಿಕಾರರನ್ನು ಮತ್ತು ರೈತ - ಕಾರ್ಮಿಕರನ್ನು ಎಂದೂ ದಾರಿ ತಪ್ಪಿಸಲಾಗದು ಎಂದು ರೈತ ಸಂಘ ಎಚ್ಚರಿಸಿದೆ.

ಇದು ಈಚೆಗೆ ಕಳೆದ ಒಂದೆರಡು ತಿಂಗಳಿಂದ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳ ವಿರುದ್ದ ನಡೆಯುತ್ತಿರುವ ಚಳುವಳಿಗಳಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮತ್ತು ಸಂಘ ಪರಿವಾರ ಬೆದರಿರುವುದನ್ನು ಮತ್ತು ಕಂಗೆಟ್ಟಿರುವುದನ್ನು ಸಚಿವರ ಈ ಹತಾಸೆಯ ಹೇಳಿಕೆಯು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತದೆ.

Raitha Sangha condemns Sadananda Gowdas statement on covid19 spreaders

ಇಂತಹ ಹೇಳಿಕೆಗಳು, ಖಂಡಿತಾ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಪೊರೇಟ್ ಕಂಪನಿಗಳ ಪರವಾದ ಮತ್ತು ರೈತ- ಕಾರ್ಮಿಕರ ಹಾಗೂ ದೇಶ ವಿರೋಧಿಯಾದ ನೀತಿಗಳನ್ನು ಎಂದಿಗೂ ಮುಚ್ಚಿಡಲಾರವು.

ಇಂತಹ ಕುತಂತ್ರದ ಹೇಳಿಕೆಗಳ ಮೂಲಕ ಒಂದೆಡೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ನೀತಿಗಳನ್ನು ಹಾಗೂ ಕರೋನಾ ನಿಯಂತ್ರಣ ಮಾಡಲಾಗದ ಅವುಗಳ ವೈಫಲ್ಯತೆಯನ್ನು ಮತ್ತು ನೀಚತನವನ್ನು ಮುಚ್ಚಿಕೊಳ್ಳಲು ಸಚಿವರು ಯತ್ನಿಸಿದ್ದಾರೆ. ದೂರದ ಚೀನಾ ದೇಶದ ಹುವಾನ್ ನಲ್ಲಿನ ಕೊರೊನಾ ಸಾಂಕ್ರಾಮಿಕ ದೇಶದಲ್ಲಿ ಒಂದು ಕೋಟಿಯಷ್ಟು ಜನರಿಗೆ ಹರಡಿದ್ದು ಹೇಗೆಂದು ಜನತೆಗೆ ಗೊತ್ತಿದೆ.

ಸರ್ಕಾರದ ಮುಂದೆ ಸರಣಿ ಪ್ರಶ್ನೆಗಳು:
ವಿದೇಶದಿಂದ ಬಂದವರನ್ನು ವಿಮಾನ ನಿಲ್ದಾಣಗಳಲ್ಲಿಯೇ ಸಮಗ್ರವಾಗಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದರೇ ಹೇಗೆ ದೇಶವನ್ನು ಪ್ರವೇಶಿಸಲು ಸಾಧ್ಯವಾಗುತ್ತಿತ್ತೆಂದು ಸಚಿವರು ಉತ್ತರಿಸಬೇಕು. ದೇಶದಾದ್ಯಂತ ಕೋಟ್ಯಾಂತರ ಸಂಖ್ಯೆಯ ವಲಸಿಗ ಕಾರ್ಮಿಕರಿಗೆ ಅಗತ್ಯ ನೆರವು ನೀಡಿ ಲಾಕ್ ಡೌನ್ ಘೋಷಿಸಿದ್ದರೇ ಅದು ಹೇಗೆ ದೇಶದಾದ್ಯಂತ ಹರಡಲು ಸಾಧ್ಯವಾಗುತ್ತಿತ್ತೆಂದು ಅವರು ಹೇಳಬೇಕು? ಜನರನ್ನು ಸಾಂಕ್ರಾಮಿಕದ ದಾಳಿಗೆ ಬಿಟ್ಟು ಖಾಸಗೀ ಆಸ್ಪತ್ರೆಗಳ ಲೂಟಿಗೆ ಜನತೆಯನ್ನು ಬಿಟ್ಟವರಾರು?

ಜನತೆ ಒಂದೆಡೆ ಕರೋನಾ ಭಯದಿಂದ ಇನ್ನೊಂದೆಡೆ ಪರಿಹಾರ ನೀಡದ ಲಾಕ್ ಡೌನ್ ನಿಂದ ಸಂಕಷ್ಠದಲ್ಲಿರುವಾಗಲೇ, ದೇಶದ ಸಾರ್ವಜನಿಕ ಆಸ್ತಿಗಳಾದ ಬ್ಯಾಂಕ್, ವಿಮಾನ ನಿಲ್ದಾಣಗಳು, ರೈಲ್ವೇ, ವಿದ್ಯುತ್ ಮುಂತಾದ ಲಾಭದಾಯಕ ಸಾರ್ವಜನಿಕ ಉದ್ಯಮಗಳನ್ನು ಲೂಟಿಕೋರ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಮಾರಾಟ ಮಾಡುವ ಮತ್ತು ಕೃಷಿ ರಂಗವನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿಕೊಡುವ, ಕಾರ್ಮಿಕರನ್ನು ಯಥೇಚ್ಛ ಲೂಟಿಗೊಳಪಡಿಸುವ ನೀಚತನವನ್ನು ಪಾರ್ಲಿಮೆಂಟ್ ನಲ್ಲೂ ಕಾಯ್ದೆಗಳನ್ನು ಮಾಡುವ ಮೂಲಕ ಮೆರೆದವರಾರು? ಇದು ದೇಶ ಸೇವೆಯೇ ಅಥವಾ ದೇಶದ್ರೋಹವೇ? ಉತ್ತರ ಕೊಡಿ ಸಚಿವರೇ?

ಪ್ರತಿಭಟನೆ ಮಾಡುವ ದೇಶ ಪ್ರೇಮಿ ರೈತ - ಕಾರ್ಮಿಕರನ್ನು ಬಾಡಿಗೆ ಜನರೆಂದು ಮತ್ತು ಅವರನ್ನೆಲ್ಲಾ ಮತ್ಯಾರೋ ಖರೀದಿಸಿದ್ದಾರೆಂದು ಅನ್ನದಾತರನ್ನು ಅಪಮಾನಿಸಲು ಹಾಗೂ ದೇಶದಾದ್ಯಂತ ಭಾರೀ ಪ್ರತಿರೋಧವನ್ನು ಎದುರಿಸಿಯೂ ತಮ್ಮ ದೇಶ ದ್ರೋಹಕ್ಕೆ ಜನರ ಬೆಂಬಲವಿದೆಯೆಂದು ಹೇಳಿಕೊಳ್ಳಲು ನಾಚಿಕೆಯಾದರೂ ಅಗ ಬೇಕಿತ್ತಲ್ಲವಾ?

Recommended Video

Munirathna : ನಮ್ ಅಮ್ಮ ಸತ್ತು 25 ವರುಷ ಆಗಿದೆ | Oneindia Kannada

ಮೂರು ಬಿಟ್ಟವನು ಊರಿಗೆ ದೊಡ್ಡವನೆಂಬ ಗಾದೆಯಂತೆ ವರ್ತಸಿವುದನ್ನು ಬಿಟ್ಟು ಅನ್ನದಾತರಿಗೆ, ಸಂಪತ್ತಿನ ಉತ್ಪಾದಕರಿಗೆ ಇನ್ನಾದರೂ ಬೆಲೆ ನೀಡುವುದನ್ನು ಸಚಿವರು ಕಲಿಯಲಿ ಎಂದಿದ್ದಾರೆ.

English summary
Karnataka Prantha Raitha Sangha has condemned Union minister Sadananda Gowda's statement that Farmers agitation led to spread covid19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X