ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಮಾನ ಆಧಾರಿತ ಬೆಳೆ ವಿಮೆ; ಫಲಾನುಭವಿಗಳಿಗೆ ಸೂಚನೆ

|
Google Oneindia Kannada News

ಕೊಪ್ಪಳ , ಜೂನ್ 26; ಕರ್ನಾಟಕ ಸರ್ಕಾರದ ಆದೇಶದಂತೆ ಕೊಪ್ಪಳ ಜಿಲ್ಲೆಯಲ್ಲಿ 2022ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಸಿ. ಉಕ್ಕುಂದ ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಯೋಜನೆಗೆ ರೈತರು ಅರ್ಜಿಗಳನ್ನು ಸಲ್ಲಿಕೆ ಮಾಡಲು ಜುಲೈ 31 ಕೊನೆಯ ದಿನವಾಗಿದೆ. ವಿಮಾ ಮೊತ್ತವು ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಮುಂಗಾರು ಪೂರ್ವ ಮಳೆ ನಂಬಿ ಬಿತ್ತನೆ ಮಾಡಿ ಮೋಸ ಹೋದ ರಾಯಚೂರು ರೈತರು ಮುಂಗಾರು ಪೂರ್ವ ಮಳೆ ನಂಬಿ ಬಿತ್ತನೆ ಮಾಡಿ ಮೋಸ ಹೋದ ರಾಯಚೂರು ರೈತರು

ಜಿಲ್ಲೆಯಲ್ಲಿ ಫ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿ ಮತ್ತು ತೋಟಗಾರಿಕೆ ಇಲಾಖೆ ಆದೇಶದ ಪ್ರಕಾರ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜನರಲ್ ಇನ್ಸೂರೆನ್ಸ್ ಕಂಪನಿ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ.

ಮುಂಗಾರು ಹಂಗಾಮು ಬೆಳೆಗಳಿಗೆ ವಿಮೆ; ರೈತ ಮಾಹಿತಿ ಮುಂಗಾರು ಹಂಗಾಮು ಬೆಳೆಗಳಿಗೆ ವಿಮೆ; ರೈತ ಮಾಹಿತಿ

ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗೆ ರೈತರು ಸಮೀಪದ ಹೋಬಳಿ ಮಟ್ಟದ ತೋಟಗಾರಿಕೆ ಅಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಸಮೀಪದ ಯಾವುದೇ ಬ್ಯಾಂಕುಗಳಿಗೆ ಭೇಟಿ ನೀಡಿ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮ ಪಂಚಾಯತಿ ಮತ್ತು ಬೆಳೆಗಳ ಬಗ್ಗೆ ಮಾಹಿತಿ ಪಡೆದಕೊಳ್ಳಬಹುದು.

ಹವಾಮಾನ ಆಧಾರಿತ ಬೆಳೆ ವಿಮೆ; ಹಸಿಮೆಣಸಿನಕಾಯಿ ಸೇರ್ಪಡೆ ಹವಾಮಾನ ಆಧಾರಿತ ಬೆಳೆ ವಿಮೆ; ಹಸಿಮೆಣಸಿನಕಾಯಿ ಸೇರ್ಪಡೆ

ಯಾವ, ಯಾವ ಬೆಳೆಗಳು ಒಳಪಡುತ್ತದೆ

ಯಾವ, ಯಾವ ಬೆಳೆಗಳು ಒಳಪಡುತ್ತದೆ

ಜಿಲ್ಲೆಯಲ್ಲಿ ಹವಾಮಾನಾ ಆಧಾರಿತ ಬೆಳೆ ವಿಮಾ ಯೋಜನೆ ಮತ್ತು ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕೊಪ್ಪಳ ತಾಲೂಕಿನಲ್ಲಿ ಹಸಿಮೆಣಸಿನಕಾಯಿ, ಪಪ್ಪಾಯ, ಈರುಳ್ಳಿ (ನೀರಾವರಿ), ಟೊಮ್ಯಾಟೊ ಬೆಳೆ ಆಯ್ಕೆಯಾಗಿದೆ.

ಗಂಗಾವತಿ ತಾಲೂಕಿನಲ್ಲಿ ಹಸಿಮೆಣಸಿನಕಾಯಿ, ಪಪ್ಪಾಯ, ಈರುಳ್ಳಿ (ನೀರಾವರಿ) ಬೆಳೆ. ಕುಷ್ಟಗಿ ತಾಲೂಕಿನಲ್ಲಿ ಹಸಿಮೆಣಸಿನಕಾಯಿ, ಪಪ್ಪಾಯ, ಈರುಳ್ಳಿ(ನೀರಾವರಿ), ಟೊಮ್ಯಾಟೊ ಆಯ್ಕೆ ಮಾಡಲಾಗಿದೆ.

ಎಷ್ಟು ವಿಮಾ ಕಂತು ಕಟ್ಟಬೇಕು?

ಎಷ್ಟು ವಿಮಾ ಕಂತು ಕಟ್ಟಬೇಕು?

ಯಲಬುರ್ಗಾ ತಾಲೂಕಿನಲ್ಲಿ ಹಸಿಮೆಣಸಿನಕಾಯಿ, ಪಪ್ಪಾಯ, ಈರುಳ್ಳಿ (ಮಳೆ ಆಶ್ರಿತ) ಬೆಳೆಗಳು. ಕನಕಗಿರಿಯಲ್ಲಿ ಹಸಿಮೆಣಸಿನಕಾಯಿ, ಪಪ್ಪಾಯ, ಈರುಳ್ಳಿ(ನೀರಾವರಿ) ಮತ್ತು ಕುಕನೂರು ತಾಲೂಕಿನಲ್ಲಿ ಹಸಿಮೆಣಸಿನಕಾಯಿ, ಪಪ್ಪಾಯ, ಈರುಳ್ಳಿ (ಮಳೆ ಆಶ್ರಿತ) ಬೆಳೆ. ಕಾರಟಗಿ ತಾಲೂಕಿನಲ್ಲಿ ಹಸಿಮೆಣಸಿನಕಾಯಿ, ಪಪ್ಪಾಯ ಬೆಳೆಗಳು ವಿಮಾ ಯೋಜನೆಗೆ ಸೇರಿವೆ.

ಬೆಳೆ ವಿಮಾ ಯೋಜನೆಯಡಿ ಹಸಿಮೆಣಸಿನಕಾಯಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. 71000 ಇದ್ದು, ರೈತರು ರೂ. 3550 ವಿಮಾ ಕಂತು ಮೊತ್ತ ಪಾವತಿಸಬೇಕು. ಪಪ್ಪಾಯ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ.1,34,000 ಇದ್ದು, ರೈತರು ರೂ. 6700 ಮೊತ್ತವನ್ನು ಪಾವತಿಸಬೇಕು.

ಈರುಳ್ಳಿ, ಟೊಮ್ಯಾಟೊ ಬೆಳೆಗೆ ಎಷ್ಟು?

ಈರುಳ್ಳಿ, ಟೊಮ್ಯಾಟೊ ಬೆಳೆಗೆ ಎಷ್ಟು?

ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಈರುಳ್ಳಿ (ಮಳೆ ಆಶ್ರಿತ) ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. 70000 ಇದ್ದು, ರೈತರು ರೂ. 3500 ಮೊತ್ತವನ್ನು ಪಾವತಿಸಬೇಕು.

ಟೊಮ್ಯಾಟೊ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ರೂ. 1,18,000 ಇದ್ದು, ರೈತರು ರೂ. 5900 ಪಾವತಿಸಬೇಕು. ಈರುಳ್ಳಿ (ನೀರಾವರಿ) ಬೆಳೆಗೆ ಮೊತ್ತ ರೂ. 75000 ಇದ್ದು, ರೈತರು ರೂ. 3750 ವಿಮಾ ಕಂತಿನ ಮೊತ್ತವನ್ನು ಪಾವತಿಸಬೇಕು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ.

ಯಾವ-ಯಾವ ದಾಖಲೆ ಬೇಕು

ಯಾವ-ಯಾವ ದಾಖಲೆ ಬೇಕು

ವಿಮಾ ಮೊತ್ತವು ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಬೆಳೆ ಸಾಲ ಪಡೆಯದ ರೈತರು ವಿಮೆ ಕಟ್ಟಲು ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ನಿಗದಿತ ಅರ್ಜಿಗಳೊಂದಿಗೆ ಭೂಮಿ ಹೊಂದಿರುವ ಕುರಿತ ದಾಖಲೆಗಳಾದ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಸಂಪರ್ಕಿಸಬೇಕು ಎಂದು ಮನವಿ ಮಾಡಲಾಗಿದೆ.

ಬೆಳೆ ವಿಮೆ ತುಂಬಲು ಅವಕಾಶ

ಬೆಳೆ ವಿಮೆ ತುಂಬಲು ಅವಕಾಶ

ಈ ಯೋಜನೆಯಡಿ ವಿಮಾ ನಷ್ಟ ಪರಿಹಾರವನ್ನು ಆಧಾರ್ ಕಾರ್ಡ್ ಆಧಾರಿತ ಆರ್‌ಟಿಜಿಎಸ್/ ನೆಫ್ಟ್ ಮೂಲಕ ಇತ್ಯರ್ಥಪಡಿಸಲಾಗುತ್ತದೆ. ಆದ್ದರಿಂದ ಯೋಜನೆಯಡಿ ಅರ್ಜಿ ಸಲ್ಲಿಕೆ ಮಾಡುವ ಎಲ್ಲಾ ರೈತರು ಆಧಾರ್ ಕಾರ್ಡ್ ಮಾಹಿತಿಯನ್ನು ಒದಗಿಸುವುದು ಕಡ್ಡಾಯವಾಗಿದೆ.

ಮಾವು, ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಳನ್ನು ಹಿಂಗಾರು ಹಂಗಾಮಿಗೆ ಅಧಿಸೂಚಿಸಲಾಗಿದೆ. ಅಕ್ಟೋಬರ್ ತಿಂಗಳಿನಿಂದ ನವೆಂಬರ್ 15ರ ತನಕ ಬೆಳೆ ವಿಮೆ ತುಂಬಲು ಅವಕಾಶ ಕಲ್ಪಿಸಿದೆ. ರೈತರು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

English summary
Directions for the Koppal farmers to enroll for the Karnataka Raitha Suraksha Pradhan Mantri Fasal Bima Yojana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X