ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂ ಕುಸುಮ ಯೋಜನೆ ಫಲಾನುಭವಿಗಳಾಗಲು ಇಲ್ಲಿದೆ ಮಾಹಿತಿ..

|
Google Oneindia Kannada News

ಬೆಂಗಳೂರು ಜೂ. 17: ಕೃಷಿ ವಲಯದ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಇದೀಗ 'ಪಿಎಂ ಕುಸುಮ ಯೋಜನೆ' ಅಡಿಯಲ್ಲಿ ಜಮೀನಿನಲ್ಲಿ ಸೋಲಾರ್ ಪಂಪ್ ಅಳವಡಿಸುವ ರೈತರಿಗೆ ಶೇ. 90ರಷ್ಟು ಸಹಾಯಧನ ದೊರೆಯಲಿದೆ.

ರೈತರ ಆದಾಯ ಹೆಚ್ಚಿಸಲು ಹಾಗೂ ವ್ಯವಸಾಯದ ವೆಚ್ಚ ತಗ್ಗಿಸಲು ಸರ್ಕಾರಗಳು ಅನೇಕ ಯೋಜನೆ ರೂಪಿಸಿವೆ. ಇದರಲ್ಲಿ ರೈತರಿಗೆ ವಿದ್ಯುತ್ ಮತ್ತು ನೀರಿನ ಪೂರೈಕೆ ಒದಗಿಸುವ ಉದ್ದೇಶದಿಂದ 2019ರಲ್ಲಿ ಜಾರಿಗೆ ಬಂದ 'ಪಿಎಂ ಕುಸುಮ ಯೋಜನೆ'ಯು ಒಂದಾಗಿದೆ.

ಈ ಯೋಜನೆಯಡಿ ಕೃಷಿಕರು ಸೋಲಾರ್ ಪಂಪ್ ಅಳವಡಿಸಿಕೊಂಡು ವಿದ್ಯುತ್ ಮತ್ತು ಕಾರ್ಮಿಕರಿಗೆ ತಗುಲುವ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು. ಜತೆಗೆ ಕಡಿಮೆ ಖರ್ಚಿನಲ್ಲಿ ನೀರಾವರಿ ಕೃಷಿ ಮಾಡಬಹುದಾಗಿದೆ. ಸೋಲಾರ್ ಪಂಪ್ ಅಳವಡಿಕೆಗೆ ಸರ್ಕಾರ ಶೇ. 90ರಷ್ಟು ಆರ್ಥಿಕ ನೆರವು ನೀಡುವುದಾಗಿ ತಿಳಿಸಿದೆ.

PM KUSUM Scheme: Objectives, Features, Benefits, Eligibility & How to Apply in Kannada

ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತೆಗಳೇನು?

ಸಣ್ಣ ಹಾಗೂ ಬೃಹತ್ ಮಟ್ಟದಲ್ಲಿ ವ್ಯವಸಾಯ ಮಾಡುವ ರೈತರಿಗೆ ಆದಾಯ ತರುವ ನಿಟ್ಟಿನಲ್ಲಿ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಈ ಎರಡು ವರ್ಗದ ರೈತರು ಸಹಾಯಧನ ಪಡೆಯಲು ಕೆಲವು ಮಾನದಂಡಗಳನ್ನು ಸೂಚಿಸಲಾಗಿದೆ.

ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು. ಅರ್ಜಿ ಸಲ್ಲಿಕೆಗೆ ಬೇಕಾದ ಎಲ್ ಅಗತ್ಯ ದಾಖಲೆಗಳನ್ನು ಹೊಂದಿರಬೇಕಿದ್ದು, ಇಂತವರು ಯೋಜನೆಯ ಅರ್ಜಿ ಹಾಕಬಹುದು. ಪುರಸ್ಕೃತ ಅರ್ಜಿದಾರರಿಗೆ ಸರ್ಕಾರ 0.5mw ನಿಂದ 2mw ಸಾಮರ್ಥ್ಯದ ವಿದ್ಯುತ್ ಸ್ಥಾವರ ಖರೀದಿಸಲು ಸರ್ಕಾರ ನೆರವು ಒದಗಿಸುತ್ತದೆ.

ರೈತರ ತಮ್ಮ ಕೃಷಿ ಅಗತ್ಯತೆಗಳು ಎಷ್ಟಿದೆ ಎಂಬುದು ಹಾಗೂ ವಿತರಣಾ ನಿಗಮ ತಿಳಿಸಿದ ಸಾಮರ್ಥ್ಯದ ಆಧಾರದಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಜತೆಗೆ ರೈತರು ತಮ್ಮ ಆಧಾರ್, ಪಡಿತರ ಚೀಟಿ ನಕಲು ಪ್ರತಿ ಸಹಿತ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

PM KUSUM Scheme: Objectives, Features, Benefits, Eligibility & How to Apply in Kannada

'ಪಿಎಂ ಕುಸುಮ ಯೋಜನೆ' ಲಾಭಗಳೇನು:

* ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಯಡಿ ಸೋಲಾರ್ ಪಂಪ್ ಸ್ಥಾಪಿಸಲು ರೈತರಿಗೆ 30-30% ದರದಲ್ಲಿ ಸಹಾಯಧನ ನೀಡುತ್ತವೆ.

* ಸರ್ಕಾರಗಳು ನೀಡುವ ಸಹಾಯಧನ ಪೈಕಿ 40%ರಷ್ಟು ಹಣದಲ್ಲಿ ಸೋಲಾರ್ ಪವರ್ ಪಂಪ್ ನಿರ್ಮಿಸಿಕೊಳ್ಳಬಹುದು.

* ರೈತರಿಗೆ ಬಾಕಿ ಮೊತ್ತ ಭರಿಸಲು ಸಾಧ್ಯವಾಗದಿದ್ದರೆ ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳೂ ಮತ್ತು ನಬಾರ್ಡನಿಂದ 30 % ಸಾಲ ಪಡೆಯಲು ಅವಕಾಶ ವಿದೆ. ಬಾಕಿ 10%ರಷ್ಟು ಹಣ ರೈತನೆ ಪಾವತಿಸಬೇಕಾಗುತ್ತದೆ.

* ನೀರಾವರಿಗಾಗಿ ಖರ್ಚಾಗುತ್ತಿದ್ದ ವಿದ್ಯುತ್ ಉಳಿತಾಯವಾಗಲಿದೆ.

* ಒಮ್ಮೆ ಸೋಲಾರ್ ಪವರ್ ಪಂಪ್ ಅಳವಡಿಸಿಕೊಂಡರೆ ಸುಮಾರು ಭವಿಷ್ಯ 25ವರ್ಷ ನಿಶ್ಚಿಂತೆಯಿಂದ ರೈತರು ಕೃಷಿಯಲ್ಲಿ ತೊಡಗಿಕೊಳ್ಳಬಹುದು.

English summary
PM KUSUM Scheme: Know more about what is KUSUM scheme, its benefits, objectives, features, eligibility criteria, documents required, how to apply, application process and other important details in Kannada. Read on,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X