ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಏಳನೇ ಕಂತಿನ ಹಣ ಬರಲಿದೆಯೇ ಎಂದು ಚೆಕ್ ಮಾಡಿ

|
Google Oneindia Kannada News

ನವದೆಹಲಿ, ನವೆಂಬರ್ 27: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ರೈತರಿಗೆ ವಾರ್ಷಿಕವಾಗಿ 6,000 ರೂಪಾಯಿಗಳನ್ನು ನೀಡುತ್ತದೆ. ಅದನ್ನು ಕಂತುಗಳ ರೂಪದಲ್ಲಿ ಖಾತೆಗೆ 2,000 ರೂಪಾಯಿ ಪಾವತಿಸುತ್ತದೆ.

ಡಿಸೆಂಬರ್ 1 ರಿಂದ ನೋಂದಾಯಿತ ರೈತರ ಖಾತೆಗಳಿಗೆ ಏಳನೇ ಕಂತಿನ ಹಣ ಬರಲು ಪ್ರಾರಂಭವಾಗುತ್ತದೆ. ಕಳೆದ ಎರಡು ವರ್ಷಗಳಲ್ಲಿ ಮೋದಿ ಸರ್ಕಾರ ನೇರವಾಗಿ ಹಣವನ್ನು 11.17 ಕೋಟಿ ರೈತರ ಖಾತೆಗೆ ವರ್ಗಾಯಿಸಿದೆ.

PM SVANidhi: 27.34 ಲಕ್ಷ ಬೀದಿ ಬದಿ ವ್ಯಾಪಾರಿಗಳಿಂದ ಸಾಲಕ್ಕಾಗಿ ಅರ್ಜಿPM SVANidhi: 27.34 ಲಕ್ಷ ಬೀದಿ ಬದಿ ವ್ಯಾಪಾರಿಗಳಿಂದ ಸಾಲಕ್ಕಾಗಿ ಅರ್ಜಿ

ಈ ಯೋಜನೆಯಡಿ ತಮ್ಮನ್ನು ನೋಂದಾಯಿಸಿಕೊಂಡ ರೈತರು ತಮ್ಮ ಹೆಸರು ಇದೆಯೋ ಇಲ್ಲವೋ ಎಂದು ಕೂಡಲೇ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಬೇಕು.

ಪಿಎಂ ಕಿಸಾನ್ ಪಟ್ಟಿಯ ಪರೀಕ್ಷೆ ಹೇಗೆ?

ಪಿಎಂ ಕಿಸಾನ್ ಪಟ್ಟಿಯ ಪರೀಕ್ಷೆ ಹೇಗೆ?

- ಮೊದಲು ಪಿಎಂ ಕಿಸಾನ್ ಸಮ್ಮಾನ್ ಯೋಜನೆ ನಿಧಿ ಯೋಜನೆ ವೆಬ್‌ಸೈಟ್‌ಗೆ ಭೇಟಿ ನೀಡಿ https://pmkisan.gov.in/

- ಫಾರ್ಮರ್ ಕಾರ್ನರ್ ಸೆಕ್ಷನ್‌ಗೆ ಹೋಗಿ

-ಆನಂತರ, ಫಲಾನುಭವಿಗಳ ಲಿಸ್ಟ್‌ ಅನ್ನು ಕ್ಲಿಕ್ ಮಾಡಿ

- ಈಗ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್, ಗ್ರಾಮವನ್ನು ನಮೂದಿಸಿ

- ರಿಪೋರ್ಟ್‌ ಮೇಲೆ ಕ್ಲಿಕ್ ಮಾಡಿ

ಈ ಪ್ರಕ್ರಿಯೆಯನ್ನು ಮಾಡಿದ ನಂತರ, ನಿಮ್ಮ ಹೆಸರು ಪಿಎಂ ಕಿಸಾನ್ ಸರ್ಮಾನ್ ನಿಧಿಯಲ್ಲಿ ಇದೆಯೋ ಇಲ್ಲವೋ ಎಂಬುದು ನಿಮಗೆ ತಿಳಿಯುತ್ತದೆ. ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ ಖಂಡಿತವಾಗಿಯೂ ನಿಮಗೆ 2,000 ರೂಪಾಯಿ ಬರುತ್ತದೆ. ನೀವು ವೆಬ್‌ಸೈಟ್‌ನಲ್ಲಿ ಅಷ್ಟೇ ಅಲ್ಲದೆ ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಮೂಲಕವೂ ಪರಿಶೀಲಿಸಬಹುದು.

ಪಿಎಂ ಕಿಸಾನ್‌ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರೀಕ್ಷಿಸುವುದು ಹೇಗೆ?

ಪಿಎಂ ಕಿಸಾನ್‌ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರೀಕ್ಷಿಸುವುದು ಹೇಗೆ?

- ಮೊದಲು ನೀವು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು - Pmkisan.gov.in

- ಫಾರ್ಮರ್ ಕಾರ್ನರ್ ಸೆಕ್ಷನ್‌ಗೆ ಹೋಗಿ

- ಫಲಾನುಭವಿ ಸ್ಥಿತಿ ಮೇಲೆ ಕ್ಲಿಕ್ ಮಾಡಿ

- ಈಗ ನಿಮ್ಮ ಆಧಾರ್ ಸಂಖ್ಯೆ ಅಥವಾ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಿ

- ಡೇಟಾವನ್ನು ಪಡೆಯಲು ಕ್ಲಿಕ್ ಮಾಡಿ

ಫಸಲ್ ಭೀಮಾ ಯೋಜನೆ; ಆಲೂಗಡ್ಡೆ ಬೆಳೆ ನೋಂದಣಿಗೆ ಅವಕಾಶಫಸಲ್ ಭೀಮಾ ಯೋಜನೆ; ಆಲೂಗಡ್ಡೆ ಬೆಳೆ ನೋಂದಣಿಗೆ ಅವಕಾಶ

ಪಿಎಂ ಕಿಸಾನ್ ಸಹಾಯವಾಣಿ

ಪಿಎಂ ಕಿಸಾನ್ ಸಹಾಯವಾಣಿ

ನಿಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೆ ನೀವು ಕೆಳಗೆ ನೀಡಿರುವ ಸಂಖ್ಯೆಗಳಿಗೆ ಕರೆ ಮಾಡಿ ಮತ್ತು ನಿಮ್ಮ ದೂರನ್ನು ನೋಂದಾಯಿಸಬಹುದು.

ಲ್ಯಾಂಡ್‌ಲೈನ್ ಸಂಖ್ಯೆ - 011-24300606, 23381092, 23382401

ಟೋಲ್ ಫ್ರೀ ಸಂಖ್ಯೆ - 18001155266

ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ - 155261

ಮತ್ತೊಂದು ಸಹಾಯವಾಣಿ ಸಂಖ್ಯೆ - 0120-6025109

ಇಮೇಲ್ ID - [email protected]

6ನೇ ಕಂತಿನಲ್ಲಿ 17,100 ಕೋಟಿ ರೂಪಾಯಿ ಬಿಡುಗಡೆ

6ನೇ ಕಂತಿನಲ್ಲಿ 17,100 ಕೋಟಿ ರೂಪಾಯಿ ಬಿಡುಗಡೆ

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ 6ನೇ ಕಂತಿನ ಹಣದ ಮೊತ್ತವಾದ 17,100 ಕೋಟಿ ರೂಪಾಯಿಯನ್ನು ಪ್ರಧಾನಿ ಮೋದಿ ಈ ಹಿಂದೆ ಬಿಡುಗಡೆ ಮಾಡಿದ್ದರು. ಕೃಷಿ ಜಮೀನು ಹೊಂದಿರುವ ಎಲ್ಲಾ ರೈತರು ಈ ಯೋಜನೆಯ ಫಲ ಪಡೆಯಬಹುದಾಗಿದೆ. ಫ್ರತಿ ಫಲಾನುಭವಿ ರೈತರ ಖಾತೆಗೆ ಈ ಹಣ ವರ್ಗಾವಣೆಯಾಗಿದೆ.

English summary
In this article explained how to check the beneficiary list whether their name is in it or not.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X