ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹೊಸ ಕಂತು; ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ?

|
Google Oneindia Kannada News

ಪಿಎಂ ಕಿಸಾನ್ ಯೋಜನೆ ಭಾರತೀಯ ಬಡ ಮತ್ತು ಮಧ್ಯಮ ಮಟ್ಟದ ರೈತರಿಗೆ ಬಹಳ ಉಪಯುಕ್ತವಾಗಿರುವ ಯೋಜನೆಯಾಗಿದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಈ ರೈತ ಯೋಜನೆಯಲ್ಲಿ ವರ್ಷಕ್ಕೆ 6 ಸಾವಿರ ರೂ ಹಣ ನೀಡುತ್ತದೆ. ಕರ್ನಾಟಕ ಸರಕಾರ ಕೂಡ 6 ಸಾವಿರ ರೂ ಒದಗಿಸುತ್ತದೆ.

ಎರಡೂ ಸರಕಾರ ಸೇರಿ ಕೃಷಿಕ ಕುಟುಂಬಗಳಿಗೆ ವರ್ಷಕ್ಕೆ 12 ಸಾವಿರ ರೂ ಸಹಾಯಧನ ಸಿಗುತ್ತದೆ. ಈಗ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸರಕಾರ ನೊಂದಾಯಿತ ರೈತರಿಗೆ ೨ ಸಾವಿರ ರೂ ಹಣ ಬಿಡುಗಡೆ ಮಾಡುತ್ತಿದೆ.

ಎಲ್ಲರಿಗೂ ಮನೆಭಾಗ್ಯ, ಆವಾಸ್ ಯೋಜನೆ- ನೀವು ಪಟ್ಟಿಯಲ್ಲಿದ್ದೀರಾ? ಪರಿಶೀಲಿಸುವುದು ಹೇಗೆ?ಎಲ್ಲರಿಗೂ ಮನೆಭಾಗ್ಯ, ಆವಾಸ್ ಯೋಜನೆ- ನೀವು ಪಟ್ಟಿಯಲ್ಲಿದ್ದೀರಾ? ಪರಿಶೀಲಿಸುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯಲ್ಲಿ ಕೆವೈಸಿ ಭರ್ತಿ ಮಾಡಬೇಕೆಂದು ಕೇಂದ್ರ ಸರಕಾರ ಸೂಚಿಸಿತ್ತು. ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಹೋದರೆ ಅಲ್ಲಿ ಆನ್‌ಲೈನ್‌ನಲ್ಲೇ ಕೆವೈಸಿ ಭರ್ತಿ ಮಾಡುವ ಅವಕಾಶ ಒದಗಿಸಲಾಗಿದೆ. ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಅಲ್ಲಿಯೂ ಕೆವೈಸಿ ತುಂಬಬಹುದು.

ಆದರೆ, ಕೆವೈಸಿ ತುಂಬಲು ಜುಲೈ 31ಕ್ಕೆ ಗಡುವು ನೀಡಲಾಗಿತ್ತು. ಕೆವೈಸಿ ಪರಿಷ್ಕರಿಸದಿದ್ದರೆ ಹೊಸ ಕಂತು ಬಿಡುಗಡೆ ಅಗುವುದು ಅನುಮಾನ. ಒಂದು ವೇಳೆ ನೀವು ಕೆವೈಸಿ ತುಂಬಿದ್ದರೆ ಮುಂದಿನ ತಿಂಗಳು ನಿಮ್ಮ ಖಾತೆಗೆ 2 ಸಾವಿರ ರೂ ಹಣ ಬಂದು ಬೀಳಬಹುದು.

ಪಿಎಂಕೆವೈಯಲ್ಲಿ ನಿಮ್ಮ ಹೆಸರು ಇದೆಯಾ?

ಪಿಎಂಕೆವೈಯಲ್ಲಿ ನಿಮ್ಮ ಹೆಸರು ಇದೆಯಾ?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ನೀವು ಆನ್‌ಲೈನ್‌ಲ್ಲೇ ಪರಿಶೀಲಿಸಬಹುದು. ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಹೋದರೆ ಅಲ್ಲಿ ಬೆನಿಫಿಶಿಯರಿ ಲಿಸ್ಟ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ, ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್, ಗ್ರಾಮದ ಹೆಸರು ಆಯ್ಕೆ ಮಾಡಿ ಶೋಧಿಸಿದರೆ ಫಲಾನುಭವಿ ಗ್ರಾಮಸ್ಥರ ಸಂಪೂರ್ಣ ಪಟ್ಟಿ ಸಿಗುತ್ತದೆ.

ನಿಮ್ಮ ಹಣ ದೋಚಲು ಇವೆ 600 ನಕಲಿ ಬ್ಯಾಂಕ್‌ ಲೋನ್‌ ಅಪ್ಲಿಕೇಶನ್‌ಗಳು; ಅಸಲಿ-ನಕಲಿಯೇ ತಿಳಿಯಿರಿನಿಮ್ಮ ಹಣ ದೋಚಲು ಇವೆ 600 ನಕಲಿ ಬ್ಯಾಂಕ್‌ ಲೋನ್‌ ಅಪ್ಲಿಕೇಶನ್‌ಗಳು; ಅಸಲಿ-ನಕಲಿಯೇ ತಿಳಿಯಿರಿ

ಯೋಜನೆಗೆ ಹೆಸರು ಸೇರಿಸುವುದು ಹೇಗೆ?

ಯೋಜನೆಗೆ ಹೆಸರು ಸೇರಿಸುವುದು ಹೇಗೆ?

ಎರಡು ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಇರದ ಕುಟುಂಬಗಳು ಈ ಯೋಜನೆಯ ಫಲ ಪಡೆಯಲು ಅರ್ಹವಾಗಿರುತ್ತವೆ. ಒಂದು ವೇಳೆ ನೀವು ಈ ಯೋಜನೆಗೆ ಅರ್ಹರಿದ್ದು ಇನ್ನೂ ಅದರಲ್ಲಿ ಸೇರ್ಪಡೆಯಾಗಿಲ್ಲವೆಂದರೆ ಈಗಲೇ ತ್ವರೆ ಮಾಡಿ.

ನಿಮ್ಮ ಗ್ರಾಮದ ರೈತ ಸಂಪರ್ಕ ಕೇಂದ್ರವಾಗಲೀ, ಬಾಪೂಜಿ ಸೇವಾ ಕೇಂದ್ರ, ಅಟಲ್‌ಜಿ ಜನಸ್ನೇಹಿ ಕೇಂದ್ರವಾಗಲೀ ಅಲ್ಲಿಗೆ ಹೋಗಿ ನೀವು ಪಿಎಂಕೆವೈ ಯೋಜನೆಗೆ ನೊಂದಾಯಿಸಬಹುದು. ಕರ್ನಾಟಕದಲ್ಲಿ ನೀವು ಗ್ರಾಮ ಲೆಕ್ಕಿಗರ ಬಳಿ ನೀವು ಅರ್ಜಿ ಪಡೆದು ತುಂಬಬಹುದು.

ಬೇಕಾಗುವ ದಾಖಲೆಗಳು

ಬೇಕಾಗುವ ದಾಖಲೆಗಳು

* ನಿಮ್ಮ ಜಮೀನಿನ ಖಾತೆ
* ಬ್ಯಾಂಕ್ ಖಾತೆ
* ಆಧಾರ್ ಕಾರ್ಡ್

ಈ ದಾಖಲೆಗಳನ್ನು ನೀವು ಕೊಡಬೇಕಾಗುತ್ತದೆ. ಹಾಗೆಯೇ, ಈ ಯೋಜನೆಯ ಫಲಾನುಭವಿಯ ಮನೆಯಲ್ಲಿ ಯಾರೂ ಕೂಡ ಶಾಸಕ, ಸಂಸದ, ಮೇಯರ್, ಜಿಪಂ ಅಧ್ಯಕ್ಷ ಹೀಗೆ ಸ್ಥಾನಮಾನ ಹೊಂದಿದವರಾಗಿರಬಾರದು. ಯಾರೂ ಕೂಡ ಸಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿದ್ದಿರಬಾರದು. ಸರಕಾರಿ ಅಧಿಕಾರಿಗಳು, ವೈದ್ಯರು, ಎಂಜಿನಿಯರ್, ವಕೀಲರು, ಸಿಎ ಇತ್ಯಾದಿ ವೃತ್ತಿಪರರಾಗಿರಬಾರದು. ಕಳೆದ ವರ್ಷ ಐಟಿ ಫೈಲ್ ಮಾಡಿದವರೂ ಕೂಡ ಫಲಾನುಭವಿಯಾಗಲು ಅರ್ಹತೆ ಹೊಂದಿರುವುದಿಲ್ಲ.

ನೀವು ಸ್ವ ಘೋಷಣಾ ಪತ್ರ

ನೀವು ಸ್ವ ಘೋಷಣಾ ಪತ್ರ

ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಫಲಾನುಭವಿಗಳ ಪಟ್ಟಿ ಮಾಡಲಾಗುತ್ತದೆ. ನೀವು ಸ್ವ ಘೋಷಣಾ ಪತ್ರದ ಮೂಲಕ ಯೋಜನೆಗೆ ನೊಂದಾಯಿಸಲು ಅವಕಾಶ ಇರುತ್ತದೆ. ಆನ್‌ಲೈನ್ ಮೂಲಕವೂ ನೀವು ಇದನ್ನು ಮಾಡಬಹುದು. ಅಥವಾ ಗ್ರಾಮ ಲೆಕ್ಕಿಗರ ಕೈಗೆ ಇದನ್ನು ತಲುಪಿಸಬಹುದು.

ಈ ಘೋಷಣಾ ಪತ್ರದಲ್ಲಿ ಅರ್ಜಿದಾರರ ಹೆಸರು, ವಯಸ್ಸು, ಆಧಾರ್ ನಂಬರ್, ಮೊಬೈಲ್ ನಂಬರ್, ವಿಳಾಸ, ವಿಭಾಗ, ಜಮೀನು ಆರ್‌ಟಿಸಿಯ ವಿವರ ಭರ್ತಿ ಮಾಡಬೇಕು. ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲಿ ಸೆಲ್ಫ್ ಡಿಕ್ಲರೇಶನ್ ಫಾರ್ಮ್ ಲಭ್ಯ ಇರುತ್ತದೆ.

(ಒನ್ಇಂಡಿಯಾ ಸುದ್ದಿ)

English summary
PM Kisan Scheme has become beneficial to lakhs of farmer families countrywide. Check whether you are eligible, or your name is in the beneficiaries list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X